twitter
    For Quick Alerts
    ALLOW NOTIFICATIONS  
    For Daily Alerts

    ಹೊಸಬರ 'ರಂಗ್ ಬಿರಂಗಿ' ಯಾಕೆ ನೋಡ್ಬೇಕು.?

    By ನಾಗರಾಜ ಶಂಕರ್
    |

    ಮೊದಲಿಗೆ ಟ್ಯಾಗ್ ಲೈನ್ ಹೇಳುವಂತೆ ಮನಸ್ಸೆಂಬ "ಹುಚ್ಚು ಕುದುರೆಯ ಬೆನ್ನೇರಿ" ಹೊರಟ ಹುಡುಗರ ಟೀನೆಜ್ ಲವ್ ಸ್ಟೋರಿ. ಬರಿ ಈಗಿನ ಕಾಲಕ್ಕೆ ಸೀಮಿತವಾಗಿಲ್ಲ. ಇದು ಆ ಒಂದು ವಯಸ್ಸಿನಲ್ಲಿ ಎಲ್ಲರಲ್ಲಾಗುವ ಒಂದು ರೀತಿಯ ರೋಮಾಂಚನ .

    ಇದರಿಂದಾಗುವ ಪ್ಲಸ್ ಮೈನಸ್ ಗಳನ್ನು ಹಾಗೂ "ಹುಚ್ಚು ಕುದುರೆ ಬೆನ್ನೇರಿದಾಗ "ಮೆರೆ"ಯುವ ಹಾಗು "ಮರೆ"ಯುವ ಜವಾಬ್ದಾರಿಗಳನ್ನು ನಿಟಾಗಿ ಎತ್ತಿಕಟ್ಟಿದ್ದಾರೆ ನಿರ್ದೆಶಕ ಮಲ್ಲಿಕಾರ್ಜುರವರು. ಇದು ಬರಿ ಒಂದು ವರ್ಗಕ್ಕೆ ಸೀಮಿತವಾಗಿಲ್ಲ.ಎಲ್ಲಾ ವರ್ಗದ ಪ್ರೇಕ್ಷಕರನ್ನ ಇಟ್ಟುಕೊಂಡು ಮಾಡಿರುವ ಸಿನಿಮಾ.

    ಫ್ಯಾಮಿಲಿ ಸಮೇತ ಯಾವುದೇ ಮುಜುಗರವಿಲ್ಲದೆ ಎಲ್ಲರೊಂದಿಗೆ ನೋಡಬಹುದಾದ ಚಿತ್ರ. ಸಿಂಗಲ್, ಡಬಲ್, ಟ್ರಯಾಂಗಲ್ ಲವ್ ಸ್ಟೋರಿಗಳನ್ನೊಳಗೊಂಡ ಸಿನಿಮಾ ಇದು.

    kannada movie rang birangi review by reader

    ಚಿತ್ರದಲ್ಲಿರುವ ನಾಲ್ಕು ಹುಡುಗರು ಶ್ರೀಜಿತ್, ಪಂಚು, ಚರಣ್, ಶ್ರೇಯಸ್ ಮತ್ತು ನಾಯಕಿ ತನ್ವಿ ಎಲ್ಲೂ ಹೊಸಬರಂತೆ ಕಾಣುವುದಿಲ್ಲ. ಒಬ್ಬರಿಗಿಂತ ಒಬ್ಬರು ಪೈಪೋಟಿಗೆ ಬಿದ್ದು ನಟಿಸಿ, ಅಪಾರ ಶ್ರಮ ಹಾಕಿ "ಹುಚ್ಚುಕುದುರೆ" ಬೆನ್ನೇರಿದ್ದಾರೆ.

    ಚಿತ್ರ ಎಲ್ಲೂ ಬೊರ್ ಹೊಡಿಯದಂತೆ ಅಚ್ಚುಕಟ್ಟಾದ ನಿರ್ದೆಶನ ಮಾಡಿದ್ದಾರೆ. ಮನರಂಜನೆ ಕೇವಲ ಚಿತ್ರಕಥೆಗಷ್ಟೇ ಸೀಮಿತವಾಗದೆ ಇಂಪಾದ ಹಾಡುಗಳು ಮಣಿಕಾಂತ್ ಕದ್ರಿ ನಿರ್ದೇಶನದಲ್ಲಿ ಈಗಾಲೇ ಹಿಟ್ ಆಗಿವೆ. ಈ ಚಿತ್ರವು ಯಶಸ್ವಿಯಾಗಲೆಂದು ಹಾರೈಸುತ್ತ. ಚಿತಮಂದಿರಕ್ಕೆ ಹೋಗಿ ಪ್ರೊತ್ಸಾಹಿಸಿ.

    English summary
    kannada movie rang birangi has released on february 23rd. the movie positive response from audience.
    Saturday, February 24, 2018, 9:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X