For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ: 'ಗಯ್ಯಾಳಿಗಳ ದರ್ಬಾರ್' ನೀವು ನೋಡ್ಲೇಬೇಕು

  |

  ಒಂದು ಚಿಕ್ಕ ಹಳ್ಳಿಯಲ್ಲಿ ಹೆಣ್ಣು ಮಕ್ಕಳದೇ ಕಾರುಬಾರು, ಗಂಡಸರು ಇದ್ದರೂ ಕೂಡ ಅಲ್ಲಿ ಹೆಣ್ಣುಮಕ್ಕಳದೇ ಮೇಲುಗೈ. ಒಟ್ನಲ್ಲಿ ಆ ಹೆಂಗಸರಿಗೆಲ್ಲಾ ಆ ಊರಿನ ಗಂಡಸರು ಪ್ರೀತಿಯಿಂದ ಇಟ್ಟಿರೋ ಹೆಸರು 'ಗಯ್ಯಾಳಿಗಳು' ಅಂತ.

  ಗಂಡಸರು ಮಾಡುವ ಕೆಲಸವನ್ನು ಹೆಂಗಸರು ಮಾಡುತ್ತಾ, ಗಂಡಸರಿಗಿಂತ ಯಾವುದರಲ್ಲೂ ನಾವೇನು ಕಡಿಮೆ ಇಲ್ಲ ಅಂತ ಬಾಯಲ್ಲೂ ಬಿಡದೆ, ಕೈಯಲ್ಲೂ ಬಿಡದೆ ಗುಂಪು ಕಟ್ಟಿಕೊಂಡು ಅನ್ಯೋನ್ಯವಾಗಿರುವ ಹೆಂಗಸರು ಇರೋದು 'ಕಿರಗೂರು' ಎಂಬ ಚಿಕ್ಕ ಹಳ್ಳಿಯಲ್ಲಿ.[ಗಾಂಧಿನಗರಕ್ಕೆ ಕಾಲಿಟ್ಟ 'ಕಿರಗೂರಿನ ಗಯ್ಯಾಳಿಗಳು'!]

  ಖ್ಯಾತ ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ 'ಕಿರಗೂರಿನ ಗಯ್ಯಾಳಿಗಳು' ಮೂಲ ಕಥೆಯನ್ನು ಆಯ್ದು ಸಿನಿಮಾ ಮಾಡುವಲ್ಲಿ ಖ್ಯಾತ ನಿರ್ದೇಶಕಿ ಡಿ.ಸುಮನ್ ಕಿತ್ತೂರು ಯಶಸ್ವಿಯಾಗಿದ್ದಾರೆ.

  ಪುಸ್ತಕದಲ್ಲಿರುವ ಕಾದಂಬರಿ ತೆರೆ ಮೇಲೆ ಸಿನಿಮಾವಾಗಿ ಬಂದಿದ್ದು, ಪ್ರೇಕ್ಷಕರನ್ನು ಎಂಗೇಜ್ ಮಾಡುತ್ತದೆ. ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....

  Rating:
  3.0/5
  Star Cast: ಶ್ವೇತ ಶ್ರೀವಾತ್ಸವ್, ಕಿಶೋರ್, ಯೋಗೇಶ್, ಸುಕೃತಾ ವಾಗ್ಲೆ, ಅಚ್ಯುತ್ ಕುಮಾರ್
  Director: ಡಿ.ಸುಮನ ಕಿತ್ತೂರ್

  ಗಯ್ಯಾಳಿಗಳ ಕಥೆ

  ಗಯ್ಯಾಳಿಗಳ ಕಥೆ

  ಕಿರಗೂರು ಎಂಬ ಚಿಕ್ಕ ಹಳ್ಳಿಯಲ್ಲಿ ಮೇಲು-ಕೀಳು ಎಂಬ ಜಾತಿ ಬೇದ-ಭಾವ ಇಲ್ಲದೆ ಬದುಕುತ್ತಿರುವ ಗಂಡಸರು-ಹೆಂಗಸರು. ಅದರಲ್ಲೂ ದಾನಮ್ಮ(ಶ್ವೇತಾ ಶ್ರೀವಾತ್ಸವ್) ಎಂಬ ಕೊಂಚ ತಿಳುವಳಿಕೆ ಇರೋ ಹೆಣ್ಣುಮಗಳು ಅಲ್ಲಿನ ಹೆಂಗಸರಿಗೆ ಬುದ್ದಿ ಮಾತು ಹೇಳುತ್ತಾ, 'ಕೂಡಿ ಬಾಳಿದರೆ ಸ್ವರ್ಗ ಸುಖ' ಅಂತ ಎಲ್ಲರೂ ಒಟ್ಟಾಗಿ ಅಕ್ಕ-ತಂಗಿಯರಂತೆ ಬದುಕುತ್ತಿರುತ್ತಾರೆ.['ಕಿರಗೂರಿನ ಗಯ್ಯಾಳಿಗಳು' ನನಗೆ ಚೊಚ್ಚಲ ಚಿತ್ರ ಎಂದ ನಟಿ ಯಾರು?]

  ಗಯ್ಯಾಳಿಗಳ ವ್ಯಥೆ

  ಗಯ್ಯಾಳಿಗಳ ವ್ಯಥೆ

  ಹಳ್ಳಿಯ ಹೆಂಗಸರಾದ ದಾನಮ್ಮ, ಕಾಳಿ, (ಸುಕೃತ ವಾಗ್ಲೆ) ರುದ್ರಿ, (ಮಾನಸ ಜೋಷಿ) ನಾಗಮ್ಮ (ಸೋನು ಗೌಡ) ಮುಂತಾದವರು ತಮ್ಮ ತಮ್ಮ ಗಂಡ-ಮಕ್ಕಳೊಂದಿಗೆ ಹಳ್ಳಿಯಲ್ಲಿ ಸುಖ ಸಂಸಾರ ನಡೆಸುತ್ತಿರುತ್ತಾರೆ. ಆದರೆ ಅವರಿಗೆಲ್ಲಾ ಒಂದೇ ದುಃಖ ಎಂದರೆ ಅವರವರ ಗಂಡಂದಿರು ಸೇಂದಿ ಅಂಗಡಿಯಲ್ಲಿ ಗಂಟೆಗಟ್ಟಲೆ ಕುಳಿತು ಸಮಯ ಕಳೆಯುವುದು ಹಾಗೂ ಕುಡಿದು ಹಾಳಾಗುತ್ತಾ ಕೆಲಸ ಮಾಡದೆ ಸುಮ್ಮನೆ ಕುಳಿತಿರುತ್ತಾರೆ, ಅನ್ನೋದು ಅವರ ದುಃಖ.

  ಜಾತಿಗಳ ನಡುವೆ ಹುಳಿ ಹಿಂಡುವ ಕಿರಾತಕರು

  ಜಾತಿಗಳ ನಡುವೆ ಹುಳಿ ಹಿಂಡುವ ಕಿರಾತಕರು

  ಈ ನಡುವೆ ಒಂದೇ ಮನೆಯಲ್ಲಿರುವ ಮಕ್ಕಳಂತೆ ಬೆಳೆದಿರುವ ಹಳ್ಳಿ ಜನಗಳ ಮಧ್ಯೆ ಮೇಲು ಜಾತಿ, ಕೀಳು ಜಾತಿ ಅಂತ ಅವರವರ ನಡುವೆಯೇ ಕೊಳ್ಳಿ ಇಡಲು ಕಾಯುತ್ತಿರುವ 'ಗ್ರಾಮ ಸೇವಕ' ಶಂಕ್ರ (ಅಚ್ಯುತ್ ಕುಮಾರ್) ಹಾಗೂ ದೆವ್ವ ಬಿಡಿಸುವ ಮಂತ್ರವಾದಿ (ಶರತ್ ಲೋಹಿತಾಶ್ವ). ಇವರಿಬ್ಬರ ಕುತಂತ್ರದಿಂದ ಶಾಂತವಾಗಿ ಲಕ-ಲಕ ಅಂತ ಹೊಳೆಯುತ್ತಿರುವ ಇಡೀ ಹಳ್ಳಿ ಬಣಗುಟ್ಟಲಾರಂಭಿಸುತ್ತದೆ. ಮುಂದೇನಾಗುತ್ತದೆ? ಈ ಸಮಸ್ಯೆಯನ್ನು ಗಯ್ಯಾಳಿ ಹೆಂಗಸರು ಹೇಗೆ ಸರಿ ಪಡಿಸುತ್ತಾರೆ ಅನ್ನೋದನ್ನು ನೀವು ಚಿತ್ರಮಂದಿರದಲ್ಲಿ ನೋಡಿದರೆ ಚೆಂದ.

  ಶ್ವೇತಾ ಶ್ರೀವಾತ್ಸವ್ ನಟನೆ

  ಶ್ವೇತಾ ಶ್ರೀವಾತ್ಸವ್ ನಟನೆ

  ಚಿತ್ರದಲ್ಲಿ ಪ್ರಮುಖವಾಗಿ ದಾನಮ್ಮನ ಪಾತ್ರ ವಹಿಸಿರುವ ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್ ಅವರು ಎಲ್ಲಾ ಪಾತ್ರಗಳಿಗೂ ಸಲ್ಲುತ್ತಾರೆ ಅನ್ನೋದಕ್ಕೆ ಈ ಚಿತ್ರದ ದಾನಮ್ಮನ ಪಾತ್ರವೇ ಸಾಕ್ಷಿ. 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡರೆ, 'ಕಿರಗೂರಿನ ಗಯ್ಯಾಳಿಗಳು' ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಯಾರಿಗೂ ಕ್ಯಾರೆ ಅನ್ನೋಲ್ಲ ಅಂತಹ ಪಾತ್ರದಲ್ಲಿ ಮಿಂಚಿದ್ದಾರೆ.

  ಸುಕೃತಾ ವಾಗ್ಲೆ ಹಾಗೂ ಮಾನಸ ಜೋಷಿ ನಟನೆ

  ಸುಕೃತಾ ವಾಗ್ಲೆ ಹಾಗೂ ಮಾನಸ ಜೋಷಿ ನಟನೆ

  'ಜಟ್ಟ' ಖ್ಯಾತಿಯ ನಾಯಕಿ ಸುಕೃತಾ ವಾಗ್ಲೆ ಅವರು ಕಾಳಿಯ ಪಾತ್ರ ಮಾಡಿದರೆ, ರುದ್ರಿಯ ಪಾತ್ರದಲ್ಲಿ ಮಾನಸ ಜೋಷಿ ಅವರು ಕಾಣಿಸಿಕೊಂಡು ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡಿದ್ದಾರೆ. ಇವರಿಬ್ಬರು ಜುಟ್ಟು ಹಿಡಿದುಕೊಂಡು, ಮೈಮೇಲೆ ಬಿದ್ದು, ನೆಲದಲ್ಲಿ ಸೀರೆ ಬಿಚ್ಚಿಕೊಂಡು ಹೊರಳಾಡುತ್ತಾ ಕಾದಾಡುತ್ತಿದ್ದರೆ, ಪ್ರೇಕ್ಷಕರು ಬಾಯ್ ಬಾಯ್ ಬಿಟ್ಟು ನೋಡೋದು ಗ್ಯಾರಂಟಿ. ಅಷ್ಟರಮಟ್ಟಿಗೆ ಸಹಜ ನಟನೆಯನ್ನು ನೀಡಿ ಭೇಷ್ ಅನಿಸಿಕೊಳ್ಳುತ್ತಾರೆ.

  ಸೋನು ಗೌಡ, ಕಾರುಣ್ಯ ರಾಮ್ ನಟನೆ ಹೇಗಿತ್ತು?

  ಸೋನು ಗೌಡ, ಕಾರುಣ್ಯ ರಾಮ್ ನಟನೆ ಹೇಗಿತ್ತು?

  ನಾಗಮ್ಮನ ಪಾತ್ರ ವಹಿಸಿರುವ 'ಇಂತಿ ನಿನ್ನ ಪ್ರೀತಿಯ' ಖ್ಯಾತಿಯ ನಟಿ ಸೋನು ಗೌಡ ಅವರು ಕಾಳೇಗೌಡ (ಕಿಶೋರ್) ನ ಹೆಂಡತಿಯ ಪಾತ್ರದಲ್ಲಿ ಸಿಂಪಲ್ ಆಗಿ ಸೈಲೆಂಟ್ ಆಗಿ ಕಾಣಿಸಿಕೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಾರೆ. ನಟಿ ಕಾರುಣ್ಯ ರಾಮ್ ಅವರು ಕಾಳೇಗೌಡ್ರ ಪ್ರೇಯಸಿಯ ಪಾತ್ರದಲ್ಲಿ ಮಿಂಚಿದ್ದು ಆಗಾಗ ತೆರೆಯ ಮೇಲೆ ಹೀಗೆ ಬಂದು ಹಾಗೆ ಹೋಗುತ್ತಾರೆ.

  ಕಿಶೋರ್, ಸುಂದರ್, ರಾಹುಲ್ ಮಾಧವ್ ನಟನೆ

  ಕಿಶೋರ್, ಸುಂದರ್, ರಾಹುಲ್ ಮಾಧವ್ ನಟನೆ

  ಕಾಳೇಗೌಡನ ಪಾತ್ರದಲ್ಲಿ ಕಿಶೋರ್ ಅವರು ಅದ್ಭುತ ನಟನೆ ತೋರಿದ್ದಾರೆ. ಒಟ್ನಲ್ಲಿ ಕಿಶೋರ್ ಹಾಗೂ ಸುಂದರ್ ಅವರ ಕಾಂಬಿನೇಷನ್ ನಲ್ಲಿ ಕಾಮಿಡಿ ಮಾತ್ರ ಸೂಪರ್. ದಾನಮ್ಮನ ಹೆದ್ರುಪುಕ್ಕಲ ಗಂಡ ಸುಬ್ಬಯ್ಯನಾಗಿ ಕಾಣಿಸಿಕೊಂಡಿರುವ ನಟ ರಾಹುಲ್ ಮಾಧವ್ ಅವರು ತಮ್ಮ ಮುಗ್ದ ನಟನೆಯ ಮೂಲಕ ಮೆಚ್ಚುಗೆ ಪಡೆಯುತ್ತಾರೆ.

  ಶರತ್ ಲೋಹಿತಾಶ್ವ-ಅಚ್ಯುತ್ ಕುಮಾರ್ ಜುಗಲ್ ಬಂದಿ

  ಶರತ್ ಲೋಹಿತಾಶ್ವ-ಅಚ್ಯುತ್ ಕುಮಾರ್ ಜುಗಲ್ ಬಂದಿ

  ದೆವ್ವ ಬಿಡಿಸುವ ಮಂತ್ರವಾದಿ ಪಾತ್ರದಲ್ಲಿ ಶರತ್ ಲೋಹಿತಾಶ್ವ ಹಾಗು ಗ್ರಾಮ ಸೇವಕ ಶಂಕ್ರನ ಪಾತ್ರ ವಹಿಸಿರುವ ಅಚ್ಯುತ್ ಕುಮಾರ್ ಅವರ ಕಾಂಬಿನೇಷನ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಶಾಂತವಾದ ಗ್ರಾಮದಲ್ಲಿ ಹುಳಿ ಹಿಂಡುವ ಪಾತ್ರ ವಹಿಸಿರುವ ಇವರಿಬ್ಬರು ತಮ್ಮ ನಟನೆಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ.

  ನಟ ಯೋಗೇಶ್

  ನಟ ಯೋಗೇಶ್

  ಮರ ಕಡಿಯುವ ಸೋನ್ಸ್ ಪಾತ್ರ ವಹಿಸಿರುವ ಲೂಸ್ ಮಾದ ಯೋಗೇಶ್ ಅವರು ತೆರೆ ಮೇಲೆ ಕೊಂಚ ಹೊತ್ತು ಇದ್ದರೂ ಅವರ ನಟನೆ ಮಾತ್ರ ಪ್ರೇಕ್ಷಕರ ಮುಖದಲ್ಲಿ ಸಣ್ಣ ನಗು ಮೂಡಿಸುತ್ತದೆ. ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದರೂ ಚಿತ್ರಕ್ಕೆ ಕೊಂಚ ಕಾಮಿಡಿ ಟಚ್ ನೀಡುವಲ್ಲಿ ಲೂಸ್ ಮಾದ ಯೋಗಿ ಅವರು ಯಶಸ್ವಿಯಾಗಿದ್ದಾರೆ.

  ಇನ್ನುಳಿದವರು?

  ಇನ್ನುಳಿದವರು?

  ಇನ್ನುಳಿದಂತೆ ಮಾರನ ಪಾತ್ರ ವಹಿಸಿದ್ದ ನಿಖಿಲ್ ಮಂಜು ಹಾಗು ಕರಿಯನ ಪಾತ್ರ ವಹಿಸಿದ್ದ ಸಂಪತ್ ಕುಮಾರ್ ಇವರು ತಮ್ಮ ಉತ್ತಮ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಇಡೀ ಚಿತ್ರದಲ್ಲಿ ಇವರಿಬ್ಬರು ಮುಖ್ಯ ಪಾತ್ರ ವಹಿಸುತ್ತಾರೆ. ಜೊತೆಗೆ ಗಿರಿಜಾ ಲೋಕೇಶ್, ಡಾ.ಅಪ್ಪಣ್ಣನ ಪಾತ್ರದಲ್ಲಿ ಎಸ್.ನಾರಾಯಣ್, ಪೊಲೀಸ್ ಪೇದೆ ನಾರಾಯಣನ ಪಾತ್ರದಲ್ಲಿ ಮಂಡ್ಯ ರಮೇಶ್, ಎಸ್.ಐ ಪಾತ್ರದಲ್ಲಿ ಶೋಭರಾಜ್, ಬಿ.ಜಯಶ್ರಿ, ತಹಶೀಲ್ದಾರ ಪಾತ್ರದಲ್ಲಿ ಪ್ರಕಾಶ್ ಬೆಳವಾಡಿ ಮುಂತಾದವರು ತಮ್ಮ ತಮ್ಮ ಪಾತ್ರವನ್ನು ಬಹಳ ನೀಟಾಗಿ ಹಾಗೂ ಸಹಜವಾದ ಅಭಿನಯದ ಮೂಲಕ ಮಾಡಿರುವುದರಿಂದ ಪ್ರೇಕ್ಷಕರಿಗೆ ಕಿರಿಕಿರಿ ಮಾಡದೇ, ಮೆಚ್ಚುಗೆ ಗಳಿಸುತ್ತಾರೆ.

  ಸುಮನ್ ಅವರ ನಿರೂಪಣೆ

  ಸುಮನ್ ಅವರ ನಿರೂಪಣೆ

  ಕಾದಂಬರಿ ಓದುವ ಜನ ಕಥೆಯನ್ನು ಹೀಗೆ ಇರಬಹುದು ಎಂಬುದಾಗಿ ಕಲ್ಪನೆ ಮಾಡಿಕೊಂಡಿರುವುದ್ದಕ್ಕಿಂತಲೂ ಅದ್ಭುತವಾಗಿ ಸಿನಿಮಾ ಮಾಡುವಲ್ಲಿ ಸುಮನ್ ಕಿತ್ತೂರ್ ಅವರು ಯಶಸ್ವಿಯಾಗಿದ್ದಾರೆ. ಒಂದು ಹಳ್ಳಿಯ ಚಿತ್ರಣ, ಅಲ್ಲಿನ ಹೆಂಗಸರ ಮೇಲೆ ಅವರವರ ಗಂಡಂದಿರು ಹೇಗೆ ಅವಲಂಬಿತರಾಗಿರುತ್ತಾರೆ ಹಾಗೂ ಹಳ್ಳಿಯ ಇಡೀ ಚಿತ್ರಣವನ್ನು ಬಹಳ ಚೆನ್ನಾಗಿ 2.20 ಘಂಟೆಗಳ ಕಾಲ ತೆರೆಮೇಲೆ ತಂದಿರುವ ಸುಮನ್ ಅವರು ನಿರೂಪಣೆ ಬಹಳ ಚೆನ್ನಾಗಿ ಮೂಡಿಬಂದಿದೆ

  ಸಂಗೀತ

  ಸಂಗೀತ

  ಇಡೀ ಚಿತ್ರದಲ್ಲಿ ನಿಮಗೆ ಎಲ್ಲೂ ಕಿರಿಕಿರಿ ಎನಿಸುವಂತಹ ಸೌಂಡ್ ಅಥವಾ ಸಂಗೀತ ಕಾಣ ಸಿಗುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಮ್ಯೂಸಿಕ್ ಹಾಕಲಾಗಿರುವುದರಿಂದ ಸಾಧು ಕೋಕಿಲ ಅವರ ಸಂಗೀತ ನಿರ್ದೇಶನ ನಿಮಗೆ ಖಂಡಿತ ಇಷ್ಟವಾಗುತ್ತದೆ.

  ಹೇಗೆ ಗಯ್ಯಾಳಿಗಳನ್ನು ನೋಡಬಹುದಾ?

  ಹೇಗೆ ಗಯ್ಯಾಳಿಗಳನ್ನು ನೋಡಬಹುದಾ?

  ಯಾರೆಲ್ಲಾ ಪೂರ್ಣಚಂದ್ರ ತೇಜಸ್ವಿ ಅವರ ಕಿರಗೂರಿನ ಗಯ್ಯಾಳಿಗಳು ಓದಿದ್ದೀರೋ, ಖಂಡಿತ ನೀವು ಸಿನಿಮಾ ನೋಡಲೇಬೇಕು. ಸತತ 3 ಗಂಟೆಗಳ ಕಾಲ ಪ್ರೇಕ್ಷಕರನ್ನು ಎಂಗೇಜ್ ಮಾಡುವಲ್ಲಿ ಗಯ್ಯಾಳಿಗಳು ಯಶಸ್ವಿಯಾಗಿದ್ದು, ಒಂದು ಬಾರಿ ಖಂಡಿತ ಸಿನಿಮಾ ನೋಡಬಹುದು.

  'ಗಯ್ಯಾಳಿಗಳ ದರ್ಬಾರ್' ನೀವು ನೋಡ್ಲೇಬೇಕು

  'ಗಯ್ಯಾಳಿಗಳ ದರ್ಬಾರ್' ನೀವು ನೋಡ್ಲೇಬೇಕು

  'ಗಯ್ಯಾಳಿಗಳ ದರ್ಬಾರ್' ನೀವು ನೋಡ್ಲೇಬೇಕು

  'ಗಯ್ಯಾಳಿಗಳ ದರ್ಬಾರ್' ನೀವು ನೋಡ್ಲೇಬೇಕು

  English summary
  Kiragoorina Gayyaligalu - Kannada movie review. A Kannada Film produced and directed by Suman Kittur based on short story by novelist Poornachandra Tejaswi. Shwetha Srivatsa, Karunya Ram, Sukrutha Wagle are in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X