twitter
    For Quick Alerts
    ALLOW NOTIFICATIONS  
    For Daily Alerts

    'ರುಸ್ತುಂ' ಚಿತ್ರದ ಬಗ್ಗೆ ಕರ್ನಾಟಕ ಪತ್ರಿಕೆಗಳಲ್ಲಿ ಬಂದಿರುವ ವಿಮರ್ಶೆಗಳು

    |

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಸಿನಿಮಾ ನಿನ್ನೆ ತೆರೆಕಂಡಿದೆ. ಕಂಪ್ಲಿಟ್ ಆಕ್ಷನ್ ಮಸಾಲೆ, ಮಾಸ್ ಪ್ರಿಯರಿಗೆ ಹೇಳಿ ಮಾಡಿಸಿದ ಚಿತ್ರ, ಶಿವಣ್ಣ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ ಎಂಬುದು ಸಿನಿಮಾ ನೋಡಿ ಬಂದ ಪ್ರೇಕ್ಷಕರ ಅಭಿಪ್ರಾಯ.

    ಫಿಲ್ಮಿಬೀಟ್ ಕನ್ನಡದಲ್ಲೂ ರುಸ್ತುಂ ಚಿತ್ರದ ವಿಮರ್ಶೆ ಮಾಡಲಾಗಿದೆ. ಚಿತ್ರದ ಬಗ್ಗೆ ಇಟ್ಟುಕೊಂಡಿದ್ದ ನಿರೀಕ್ಷೆಯನ್ನ ಹುಸಿಮಾಡದ ನಿರ್ದೇಶಕ ರವಿವರ್ಮ, ಒಂದೊಳ್ಳೆ ಮನರಂಜನಾತ್ಮಕ ಚಿತ್ರ ಮಾಡಿ ಪ್ರೇಕ್ಷಕರನ್ನ ಖುಷಿ ಪಡಿಸಿದ್ದಾರೆ ಅಂದ್ರೆ ತಪ್ಪಾಗಲ್ಲ.

    Rustum Review: ಆಕ್ಷನ್ ಗೆ ದೊಡ್ಡಪ್ಪ ಈ ರುಸ್ತುಂ Rustum Review: ಆಕ್ಷನ್ ಗೆ ದೊಡ್ಡಪ್ಪ ಈ ರುಸ್ತುಂ

    ಆಡಿಯೆನ್ಸ್ ಏನೋ ಖುಷಿ ಆದರು. ಸಿನಿಮಾ ಪತ್ರಕರ್ತರಿಗೆ ಈ ಚಿತ್ರ ಇಷ್ಟ ಆಯ್ತಾ? ಸಿನಿಮಾದಲ್ಲಿ ಯಾವುದು ಹೆಚ್ಚು ಇಷ್ಟ ಆಯ್ತು, ಯಾವುದು ಇಷ್ಟ ಆಗಿಲ್ಲ. ನಿರ್ದೇಶಕರ ಕೆಲಸ ಹೇಗಿದೆ, ಒಟ್ಟಾರೆ ರುಸ್ತುಂ ಚಿತ್ರವನ್ನ ಜನರು ನೋಡಬಹುದಾ ಎಂಬ ಒಂದಿಷ್ಟು ವಿಷ್ಯಗಳ ಮೇಲೆ ವಿಮರ್ಶೆ ಮಾಡಿದ್ದಾರೆ. ಯಾವ ಪತ್ರಿಕೆಯಲ್ಲಿ ಹೇಗಿದೆ ಪ್ರತಿಕ್ರಿಯೆ? ಕರ್ನಾಟಕ ಜನಪ್ರಿಯ ಪತ್ರಗಳಲ್ಲಿ ಪ್ರಕಟವಾಗಿರುವ ರುಸ್ತುಂ ಸಿನಿಮಾದ ವಿಮರ್ಶೆಯ ಕಲೆಕ್ಷನ್ ಇಲ್ಲಿದೆ. ಮುಂದೆ ಓದಿ.....

    ಆಕ್ಷನ್ ಹೂರಣ ಕಥೆಗಳ ಮಿಶ್ರಣ

    ಆಕ್ಷನ್ ಹೂರಣ ಕಥೆಗಳ ಮಿಶ್ರಣ

    ''ಇಷ್ಟು ದಿನ ಸ್ಟಂಟ್ ಮಾಸ್ಟರ್ ಆಗಿ ಗುರುತಿಸಿಕೊಂಡ ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದು, ಒಂದು ಮಾಸ್ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ಮಸಾಲೆ ಅಂಶಗಳನ್ನು ಮಿಶ್ರಣ ಮಾಡಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತದೆ. ಒಟ್ಟಾರೆ ಸಿನಿಮಾದಲ್ಲಿ ಫ್ರೆಷ್ ಎನಿಸುವಂತಹ ವಿಚಾರಗಳಿಲ್ಲ! ಹಾಗಿದ್ದರೂ ಮಾಸ್ ಪ್ರೇಕ್ಷಕರಿಗೆ ಇಷ್ಟವಾಗಬಹುದಾದ ರೀತಿಯಲ್ಲಿ ಸಿನಿಮಾ ಮಾಡಿ ಮುಗಿಸಿದ್ದಾರೆ ರವಿವರ್ವ. ಎರಡು ಶೇಡ್​ನ ಪಾತ್ರದಲ್ಲಿ ಶಿವರಾಜ್​ಕುಮಾರ್ ಗಮನ ಸೆಳೆಯುತ್ತಾರೆ. ಒಂದರಲ್ಲಿ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿದ್ದರೆ, ಮತ್ತೊಂದರಲ್ಲಿ ಖಡಕ್ ಪೊಲೀಸ್ ಆಫೀಸರ್. ನಟಿಯರಾದ ಶ್ರದ್ಧಾ ಶ್ರೀನಾಥ್, ರಚಿತಾ ರಾಮ್ ಪಾತ್ರಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ'' - ವಿಜಯವಾಣಿ

    'ರುಸ್ತುಂ' ಮೊದಲಾರ್ಧ ಅಷ್ಟಕ್ಕಷ್ಟೆ, ಎರಡನೇ ಭಾಗ ಸೂಪರ್
    ಆಕ್ಷನ್ ಪ್ರಿಯರಿಗೆ ಹಬ್ಬದೂಟ

    ಆಕ್ಷನ್ ಪ್ರಿಯರಿಗೆ ಹಬ್ಬದೂಟ

    ''ಸಾಹಸ ನಿರ್ದೇಶಕರು ಡೈರೆಕ್ಟರ್‌ ಕ್ಯಾಪ್‌ ತೊಟ್ಟರೆ ಅವರ ಸಿನಿಮಾಗಳಲ್ಲಿ ಭರ್ಜರಿ ಆಕ್ಷನ್ ನಿರೀಕ್ಷೆ ಮಾಡಬಹುದು. ರುಸ್ತುಂ ಸಿನಿಮಾದಲ್ಲಿಯೂ ಭರ್ಜರಿ ಆಕ್ಷನ್, ಸೆಂಟಿಮೆಂಟ್, ಅಭಿಮಾನಿಗಳ ಶಿಳ್ಳೆ ಗಿಟ್ಟಿಸುವಂಥ ಮಾಸ್‌ ಸೀನ್‌ಗಳು ಹೇರಳವಾಗಿವೆ. ರುಸ್ತುಂ ಕಂಪ್ಲೀಟ್ ಮಾಸ್‌ ಸಿನಿಮಾ. ಹಾಗಾಗಿ ಇದರಲ್ಲಿ ಲಾಜಿಕ್‌ ಹುಡುಕುವ ಹಾಗಿಲ್ಲ. ಎಮೋಷನ್ಸ್‌, ಪ್ರತೀಕಾರ, ಪೊಲೀಸ್‌ ಅಧಿಕಾರಿಗಳ ಫ್ಯಾಮಿಲಿ ಪ್ರೀತಿ, ಪ್ರಸ್ತುತ ಇರುವ ಪೊಲಿಟಿಕಲ್ ಪವರ್‌, ಅದರಿಂದ ಪ್ರಾಮಾಣಿಕ ಅಧಿಕಾರಿಗಳಿಗೆ ತೊಂದರೆ, ಹೀಗೆ ಒಂದು ಕಮರ್ಷಿಯಲ್ ಸಿನಿಮಾದಲ್ಲಿ ಇರುವ ಎಲ್ಲ ಅಂಶಗಳು ರುಸ್ತುಂನಲ್ಲಿವೆ. ಹೀಗಾಗಿ ಇದನ್ನು ಒಂದು ಸಾಮಾನ್ಯ ಕಥೆ ಎನ್ನಬಹುದು. ಸಾಮಾನ್ಯ ಕಥೆಯಾದರೂ ನಿರ್ದೇಶಕ ರವಿವರ್ಮ ಚಿತ್ರಕಥೆಯನ್ನು ಚೆನ್ನಾಗಿ ಬರೆದುಕೊಂಡು ಪ್ರೇಕ್ಷಕರಿಗೆ ಬೋರ್‌ ಆಗದಂತೆ ನೋಡಿಕೊಂಡಿದ್ದಾರೆ'' - ವಿಜಯ ಕರ್ನಾಟಕ

    ಸ್ನೇಹದ ನೆಪದಲ್ಲಿ ಆಕ್ಷನ್ ಜಪ

    ಸ್ನೇಹದ ನೆಪದಲ್ಲಿ ಆಕ್ಷನ್ ಜಪ

    ''ಯಾವುದೇ ಕನ್‌ಫ್ಯೂಶನ್‌ ಆಗಲೀ, ಅನಾವಶ್ಯಕ ಅಂಶಗಳನ್ನಾಗಲೀ ಸೇರಿಸದೇ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಕಥೆಗೆ ವೇದಿಕೆ ಕಲ್ಪಿಸುವ ಚಿತ್ರದ ಮೊದಲರ್ಧ ಸ್ವಲ್ಪ ನಿಧಾನಗತಿಯಲ್ಲಿ ಸಾಗುತ್ತದೆ. ಆದರೆ, ಚಿತ್ರದ ದ್ವಿತೀಯಾರ್ಧ ವೇಗ ಪಡೆದುಕೊಳ್ಳುವ ಸಿನಿಮಾದಲ್ಲಿ ರವಿವರ್ಮ, ತಮ್ಮ ಮೂಲವೃತ್ತಿಯ ಸಾಮರ್ಥ್ಯವನ್ನು ತೋರಿಸಿದ್ದಾರೆ. ಆ ಮೂಲಕ ದ್ವಿತೀಯಾರ್ಧ ಆಕ್ಷನ್ ಮಯವಾಗಿದೆ. ಚಿತ್ರ ಮುಖ್ಯವಾಗಿ ಕರ್ನಾಟಕ ಹಾಗೂ ಬಿಹಾರದಲ್ಲಿ ನಡೆಯುತ್ತದೆ. ಬಿಹಾರ ದೃಶ್ಯಗಳನ್ನು ಅಲ್ಲಿನ ನೇಟಿವಿಟಿಗೆ ತಕ್ಕಂತೆ ಚಿತ್ರೀಕರಿಸಲಾಗಿದೆ. ಈ ಸಿನಿಮಾದ ಮುಖ್ಯ ಶಕ್ತಿ ಎಂದರೆ ಅದು ಶಿವರಾಜಕುಮಾರ್‌. ಅದು ಫ್ಯಾಮಿಲಿ ಮ್ಯಾನ್‌ ಆಗಿ, ಫ್ರೆಂಡ್‌ ಆಗಿ, ಖಡಕ್ ಪೊಲೀಸ್‌ ಆಫೀಸರ್ ಆಗಿ ಶಿವಣ್ಣ ಇಷ್ಟವಾಗುತ್ತಾರೆ'' - ಉದಯವಾಣಿ ವಿಮರ್ಶೆ

    ಆಕ್ರೋಶದ ಸೂಜಿಗಲ್ಲು

    ಆಕ್ರೋಶದ ಸೂಜಿಗಲ್ಲು

    ''ನೇರ ನಿರೂಪಣಾ ಶೈಲಿ ಅನುಸರಿಸಿರುವ ಚಿತ್ರ ಇದು. ಕಥೆಗೆ ಅಗತ್ಯವಿಲ್ಲದ ದೃಶ್ಯಗಳು ಇದರಲ್ಲಿ ನಗಣ್ಯ. ಶಿವರಾಜ್ ಕುಮಾರ್ ಅವರ ಆಕ್ಷನ್ ದೃಶ್ಯಗಳು, ಪೊಲೀಸ್ ಅಧಿಕಾರಿಯಾಗಿ ಅವರು ಬಳಸಿರುವ ಡೈಲಾಗ್ ಗಳು ಚಿತ್ರದ ಜೋಶ್ ಗೆ ಇನ್ನಷ್ಟು ಬಲ ತಂದುಕೊಟ್ಟಿವೆ. ಈ ಚಿತ್ರದಲ್ಲಿ ಆಕ್ರೋಶದ ಮೂಲವೇ ಶಿವಣ್ಣ ಮಾತಾಗಿದ್ದಾರೆ. ಆಕ್ರೋಶವೇ ಚಿತ್ರದ ಸ್ಥಾಯಿ ಬಿಂದು, ಶಿವರಾಜ್ ಕುಮಾರ್ ಅಭಿಮಾನಿಗಳನ್ನು ಆಕರ್ಷಿಸುವ ಸೂಜಿಗಲ್ಲು'' - ಪ್ರಜಾವಾಣಿ

    Greatest Bhojpuri film ever made in Kannada

    Greatest Bhojpuri film ever made in Kannada

    ''Rustum's biggest strength is its screenplay. It is a straightforward story which you would 'encounter' in any decent cop film. The screenplay gives it the ammunition necessary to keep the narration engaging. The dialogues are witty and there are ample one-liners to remember. Some of the scenes are brilliantly conceptualised. Though not exactly the kind of cop movies Saikumar made popular, Rustum is the kind that a stunt master would dream of. It is Ravi Varma's dream come true. For an action film, it has the barest minimum of really violent scenes'' - Bangalore mirror review

    English summary
    Kannada actor Shiva rajkumar starrer Rustum movie released yesterday all over karnataka. Rustum got good response from audience. and also recived positive review from karnataka news papers.
    Saturday, June 29, 2019, 11:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X