twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರ ವಿಮರ್ಶೆ: 'ಸಚಿನ್' ಕೇವಲ ಮಕ್ಕಳಿಗಷ್ಟೇ ಅಲ್ಲ

    By ಉದಯರವಿ
    |

    ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ಒಂದು ಹೊಸ ಟ್ರೆಂಡ್ ಶುರುವಾಗಿದೆ. ಅದೇನೆಂದರೆ ಮಕ್ಕಳ ಚಿತ್ರ ಎಂದು ಹೇಳಿಕೊಂಡು ಸಾಕಷ್ಟು ಚಿತ್ರಗಳು ಬರುತ್ತಿವೆ. ಆದರೆ ಅವುಗಳಲ್ಲಿ ಮಕ್ಕಳಿರುತ್ತಾರೆ, ಆದರೆ ಅವರಿಗೆ ಬೇಕಾದ ಅಂಶಗಳು ಇರುವುದಿಲ್ಲ.

    ಮೇಲ್ಮೋಟಕ್ಕೆ ಮಕ್ಕಳ ಚಿತ್ರದಂತೆ ಕಂಡರೂ ಉದ್ದೇಶ ಮಾತ್ರ ಸರ್ಕಾರದ ರು.25 ಲಕ್ಷ ಸಬ್ಸಿಡಿಗಾಗಿ ಮಾಡಿದ ಚಿತ್ರಗಳೇ ಆಗಿರುತ್ತವೆ. ಆದರೆ ಸಚಿನ್, ತೆಂಡೂಲ್ಕರ್ ಅಲ್ಲ ಚಿತ್ರ ಮಾತ್ರ ಈ ಕ್ಯಾಟಗರಿಗೆ ಸೇರುವುದಿಲ್ಲ. ಆಟಿಸಂ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಗೂ ಅದರ ಪೋಷಕರಿಗೆ ಹೊಸ ಉತ್ಸಾಹ ತುಂಬುತ್ತದೆ.

    ಈ ಚಿತ್ರದಲ್ಲಿ ಮಾಸ್ಟರ್ ಸ್ನೇಹಿತ್ ಅವರು ಶೀರ್ಷಿಕೆ ಪಾತ್ರ ಪೋಷಿಸಿದ್ದಾರೆ. ಆಟಿಸಂ ಎಂದರೆ ಮಗು ಸಾಮಾಜಿಕ ಸಂಬಂಧಗಳಲ್ಲಿ ಇತರರೊಡನೆ ಪ್ರೀತಿ ಸ್ನೇಹದಿಂದ ವರ್ತಿಸುವುದನ್ನು ಬಿಟ್ಟು ಒಂಟಿಯಾಗಿರುವುದು, ಮಾತನಾಡುವುದನ್ನು ನಿಲ್ಲಿಸಿ ಇತರರೊಡನೆ ಯಾವುದೇ ರೀತಿಯ ಸಂಪರ್ಕ ಸಂವಹನೆಯನ್ನು ನಿಲ್ಲಿಸುವುದು, ತನ್ನದೇ ಲೋಕದಲ್ಲಿದ್ದು, ಮಾನಸಿಕ, ಬೌದ್ಧಿಕ ಬೆಳವಣಿಗೆ-ವಿಕಾಸವನ್ನು ಪ್ರಕಟಿಸದಿರುವುದು 'ಆಟಿಸಮ್' ಎಂಬ ವಿಶಿಷ್ಟ ಕಾಯಿಲೆಯ ಲಕ್ಷಣಗಳು.

    Rating:
    3.5/5

    ಚಿತ್ರ: ಸಚಿನ್, ತೆಂಡೂಲ್ಕರ್ ಅಲ್ಲ
    ನಿರ್ಮಾಪಕರು: ಬಿ.ಎನ್.ಗಂಗಾಧರ್
    ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ: ಎಸ್.ಮೋಹನ್
    ಸಂಕಲನ: ಶಿವು
    ಸಂಗೀತ: ರಾಜೇಶ್ ರಾಮನಾಥ್
    ತಾರಾಗಣ: ಮಾ.ಸ್ನೇಹಿತ್, ಸುಹಾಸಿನಿ, ವೆಂಕಟೇಶ್ ಪ್ರಸಾದ್, ಸುಧಾರಾಣಿ, ಪದ್ಮಾವಾಸಂತಿ, ಶ್ರೀನಿವಾಸ ಪ್ರಭು ಮುಂತಾದವರು.

    ಆಟಿಸಂ ಕಾಯಿಲೆಯಿಂದ ಬಳಲುವ ಸಚಿನ್

    ಆಟಿಸಂ ಕಾಯಿಲೆಯಿಂದ ಬಳಲುವ ಸಚಿನ್

    ಈ ರೀತಿಯ ಕಾಯಿಲೆಯಿಂದ ಬಳಲುವ ಸಚಿನ್ ಗೆ ಕ್ರಿಕೆಟ್ ಎಂದರೆ ಬಲು ಪ್ರೀತಿ. ಆಟಿಸಂ ಕಾಯಿಲೆ ಪ್ರಾಣಾಂತಕವೇನು ಅಲ್ಲ. ಆದರೆ ಸಚಿನ್ ಗೆ ಬ್ರೈನ್ ಟ್ಯೂಮರ್ ಸಮಸ್ಯೆಯೂ ಜೊತೆಯಾಗಿ ವೈದ್ಯರು ಕೈಚೆಲ್ಲಿರುತ್ತಾರೆ. ಆತನ ಕೊನೆಯ ದಿನಗಳನ್ನು ವೈದ್ಯರು ನಿರ್ಧರಿಸಿಯಾಗಿರುತ್ತದೆ.

    ಚಿತ್ರಕ್ಕೆ ಹೊಸ ಆಯಾಮ ಕೊಡುವ ಮೋಹನ್

    ಚಿತ್ರಕ್ಕೆ ಹೊಸ ಆಯಾಮ ಕೊಡುವ ಮೋಹನ್

    ಇಂತಹ ಒಂದು ಭಾವುಕ ಸನ್ನಿವೇಶವೊಂದನ್ನು ಸೃಷ್ಟಿಸುವ ಮೂಲಕ ನಿರ್ದೇಶಕರು ಚಿತ್ರಕ್ಕೆ ಮತ್ತೊಂದು ಆಯಾಮವನ್ನು ಕೊಟ್ಟು ಪ್ರೇಕ್ಷಕರನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಅವರು ತಮ್ಮ ಪ್ರಯತ್ನದಲ್ಲಿ ಬಹುತೇಕ ಗೆದ್ದಿದ್ದಾರೆ.

    ಎರಡು ಹನಿ ಮುತ್ತಿನ ಹನಿಗಳು

    ಎರಡು ಹನಿ ಮುತ್ತಿನ ಹನಿಗಳು

    ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎದುರಾಳಿ ಸ್ಪರ್ಧಿಗಳು ಗೆಲ್ಲುವ ಅವಕಾಶವಿದ್ದರೂ ಸಚಿನ್ ಮೇಲಿನ ಪ್ರೀತಿಗೆ ಸೋಲುತ್ತಾರೆ. ವಿಶೇಷ ಕಾಳಜಿಯುಳ್ಳ ಮಕ್ಕಳ ಬಗ್ಗೆ ಸಮಾಜ ತೋರುವ ಪ್ರೀತಿಗೆ ಚಿತ್ರ ಮಾದರಿಯಾಗುತ್ತದೆ. ಪ್ರೇಕ್ಷಕರ ಕಣ್ಣಲ್ಲೂ ಎರಡು ಮುತ್ತಿನ ಹನಿಗಳು ಉದುರುವಂತೆ ಮಾಡುತ್ತದೆ.

    ದಿನೇಶ್ ಪಾತ್ರದಲ್ಲಿ ವೆಂಕಟೇಶ್ ಪ್ರಸಾದ್

    ದಿನೇಶ್ ಪಾತ್ರದಲ್ಲಿ ವೆಂಕಟೇಶ್ ಪ್ರಸಾದ್

    ಎಸ್. ಮೋಹನ್ ಅವರು ಕೇವಲ ಮಕ್ಕಳಿಗಷ್ಟೇ ಅಲ್ಲದೆ ದೊಡ್ಡವರನ್ನೂ, ಅವರ ಸಾಮಾಜಿಕ ಕಾಳಜಿಯನ್ನೂ ಈ ಚಿತ್ರದ ಮೂಲಕ ನೆನಪಿಸುತ್ತಾರೆ. ಈ ಚಿತ್ರದ ಪ್ರಮುಖ ಆಕರ್ಷಣೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್. ಕ್ರಿಕೆಟ್ ಕೋಚ್ ಆಗಿ ದಿನೇಶ್ ಪಾತ್ರದಲ್ಲಿ ಅವರು ತಮ್ಮ ಪಾತ್ರಕ್ಕೆ ಬಹುತೇಕ ನ್ಯಾಯ ಸಲ್ಲಿಸಿದ್ದಾರೆ.

    ಲವಲವಿಕೆಯಿಂದ ಸಾಗುವ ನಿರೂಪಣೆ

    ಲವಲವಿಕೆಯಿಂದ ಸಾಗುವ ನಿರೂಪಣೆ

    ಇನ್ನು ಕಾಲೇಜಿನ ಪ್ರಿನ್ಸಿಪಾಲ್ ಆಗಿ ಸುಧಾರಾಣಿ, ಸಚಿನ್ ಅಕ್ಕನಾಗಿ ಸುಹಾಸಿನಿ ಅವರದು ಮನೋಜ್ಞ ಅಭಿನಯ. ಲವಲವಿಕೆಯಿಂದ ಸಾಗುವ ಚಿತ್ರದ ನಿರೂಪಣೆ ಪ್ರೇಕ್ಷಕರನ್ನು ಸೀಟಿಗೆ ಅಂಟಿ ಕೂರುವಂತೆ ಮಾಡುತ್ತದೆ.

    ಮಕ್ಕಳ ಜೊತೆ ಹೋಗಿ ನೋಡಿ

    ಮಕ್ಕಳ ಜೊತೆ ಹೋಗಿ ನೋಡಿ

    ಜೀವನ ಪ್ರೀತಿಯುಳ್ಳ ಪ್ರತಿಯೊಬ್ಬರೂ ನೋಡಬೇಕಾದ ಚಿತ್ರ ಸಚಿನ್. ಜೀವನ ಎಂಬುದು ಯುದ್ಧ ಅಲ್ಲ ಅದೊಂದು ಸಂಭಾವಿತರ ಆಟ ಎಂಬುದನ್ನು ಈ ಚಿತ್ರ ತೋರಿಸುತ್ತದೆ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಜೊತೆಗೆ ಹೋಗಿ ನೋಡಿ ಆನಂದಿಸಬಹುದಾದ ಚಿತ್ರ.

    ಸಚಿನ್ ಬಗೆಗೆ ಕೊನೆಯ ಮಾತು

    ಸಚಿನ್ ಬಗೆಗೆ ಕೊನೆಯ ಮಾತು

    ಮಕ್ಕಳ ಚಿತ್ರ ಎಂದರೆ ಸರ್ಕಾರದ ಸಬ್ಸಿಡಿಗಾಗಿಯೇ ಮಾಡುವ ಚಿತ್ರ ಎಂಬ ಧೋರಣೆ ಇದೆ. ಆದರೆ 'ಸಚಿನ್' ಆ ಮಾತಿಗೆ ಅಪವಾದ. ಗಂಗಾಧರ್ ಅವರು ಈ ಚಿತ್ರಕ್ಕೆ ಸಾಕಷ್ಟು ದುಡ್ಡ ಖರ್ಚು ಮಾಡಿರುವುದನ್ನು ತೆರೆಯ ಮೇಲೆ ನೋಡಬಹುದು.

    English summary
    Kannada movie Sachin - Tendulkar Alla review. Master Snehit plays Sachin, an autistic child in the movie. It is a beautiful film that every parent should take his kid too. 
    Saturday, July 12, 2014, 14:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X