For Quick Alerts
  ALLOW NOTIFICATIONS  
  For Daily Alerts

  'ಸರ್ಕಾರಿ ಕೆಲಸ ದೇವರ ಕೆಲಸ'ಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?

  By Suneel
  |

  ಪ್ರಸ್ತುತ ಸಮಾಜದಲ್ಲಿ ಜನರು ಸರ್ಕಾರದ ಯಾವುದೇ ಸೇವೆ ಪಡೆಯಲು ಕಚೇರಿಗಳಿಗೆ ಅಲೆದು ಅಲೆದು ಸುಸ್ತಾಗುವುದು. ಅಥವಾ ಬಹುಬೇಗ ಕೆಲಸ ಆಗಬೇಕೆಂದರೆ ಲಂಚ ಕೊಡುವುದು ಸಾಮಾನ್ಯವಾಗಿಬಿಟ್ಟಿದೆ. ಈ ವ್ಯವಸ್ಥೆಯ ಪ್ರತಿಬಿಂಬದ ಚಿತ್ರಕಥೆ ಹೊಂದಿರುವ 'ಸರ್ಕಾರಿ ಕೆಲಸ ದೇವರ ಕೆಲಸ' ಚಿತ್ರ ರಾಜ್ಯಾದ್ಯಂತ ತೆರೆಕಂಡಿದೆ.

  ಲಂಚ ಕೊಡುವ ಮತ್ತು ಸ್ವೀಕರಿಸುವ ಎರಡು ಚಟುವಟಿಕೆಯನ್ನು ವಿರೋಧಿಸುವ ದೇಶಭಕ್ತ ಭ್ರಷ್ಟ ಅಧಿಕಾರಿಗಳಿಗೆ ಅವರದೇ ಹಾದಿಯಲ್ಲಿ ಹೋಗಿ ಬುದ್ಧಿಯನ್ನು ಹೇಗೆ ಕಲಿಸುತ್ತಾನೆ ಎಂಬ ಅಂಶವನ್ನು ಚಿತ್ರ ನೋಡಿದ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಆದರೆ ಈ ಮಾರ್ಗ ಮತ್ತು ಚಿತ್ರದ ನಿರೂಪಣೆ ಶೈಲಿ ಸಾಮಾನ್ಯರಿಗೆ ಇಷ್ಟವಾದಂತೆ ವಿಮರ್ಶಕರಿಗೂ ಇಷ್ಟವಾಗಿದೆಯೇ? ಚಿತ್ರದ ಬಗ್ಗೆ ಅವರ ಅಭಿಪ್ರಾಯ ಏನು? ಅದಕ್ಕೆ ಉತ್ತರ ಇಲ್ಲಿದೆ.[ವಿಮರ್ಶೆ: ಲಂಚದ ಮುಂದೆ ಬೆತ್ತಲಾದ 'ಸರ್ಕಾರಿ' ಕೆಲಸ]

  ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿದ 'ಸರ್ಕಾರಿ ಕೆಲಸ ದೇವರ ಕೆಲಸ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ಓದಿರಿ..

  ಲಂಚಾವತಾರದ ವಿರಾಟ್ ರೂಪ: ವಿಜಯ ಕರ್ನಾಟಕ

  ಲಂಚಾವತಾರದ ವಿರಾಟ್ ರೂಪ: ವಿಜಯ ಕರ್ನಾಟಕ

  ಸಾಮಾನ್ಯವಾಗಿ ಎಲ್ಲರ ಅನುಭವಕ್ಕೆ ಬಂದಿರುವ ಭ್ರಷ್ಟಾಚಾರವನ್ನು ವಿಡಂಬನಾತ್ಮಕವಾಗಿ ಹೇಳಿರುವ ಚಿತ್ರ. ರಿಯಾಲಿಸ್ಟಿಕ್ ಆಗಿ ಮೂಡಿ ಬಂದಿರುವುದರಿಂದ ನಾಟಕವೊಂದನ್ನು ನೋಡಿದ ಅನುಭವ ಕೊಡುತ್ತದೆ. ಮನರಂಜನೆ ಬಗ್ಗೆ ನಿರ್ದೇಶಕರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. 70ರ ದಶಕದ ಭ್ರಷ್ಟಾಚಾರದ ಮಾದರಿಯ ಕತೆ ಮತ್ತು ಸಾಮಾನ್ಯ ರಂಗ ನಿರೂಪಣೆಯ ಶೈಲಿಯಲ್ಲೇ ಚಿತ್ರವಿದೆ. ಸರ್ಕಾರಿ ಕಚೇರಿ ಮತ್ತು ಬ್ರೋಕರ್‌ಗಳಷ್ಟೇ ಸೀಮಿತಗೊಂಡಿರುವ ಕತೆ ಅಚ್ಚುಕಟ್ಟಾಗಿ ತೆರೆಗೆ ತಂದಿದ್ದರೂ ವಿಶೇಷ ಎನಿಸುವುದಿಲ್ಲ. ಗುರು ಪ್ರಸಾದ್ ಸಂಭಾಷಣೆ ಬಿಗಿಯಾಗಿದೆ. ಛಾಯಾಗ್ರಹಣ ಸಪ್ಪೆ -ಪದ್ಮಾ ಶಿವಮೊಗ್ಗ

  ಮಾತೇ-ಕತೆ, ಸಿನಿಮೀಯತೆ ನಾಪತ್ತೆ!: ಪ್ರಜಾವಾಣಿ

  ಮಾತೇ-ಕತೆ, ಸಿನಿಮೀಯತೆ ನಾಪತ್ತೆ!: ಪ್ರಜಾವಾಣಿ

  ಅಧಿಕಾರಿಗಳು ಜನಸಾಮಾನ್ಯರನ್ನು ಎಷ್ಟೆಲ್ಲ ಬಗೆಯಲ್ಲಿ ಸುಲಿಗೆ ಮಾಡುತ್ತಾರೆ ಎಂದು ತೋರಿಸುವ ಚಿತ್ರಕ್ಕೆ ನಾಟಕ ಲಕ್ಷಣಗಳೇ ಹೆಚ್ಚಾಗಿವೆ. ಶೀರ್ಷಿಕೆ ಮಾತ್ರ 'ಸರ್ಕಾರಿ ಕೆಲಸ ದೇವರ ಕೆಲಸ'. ಆದರೆ ಚಿತ್ರದಲ್ಲಿ ಆ ರೀತಿ ನಂಬಿಕೊಂಡ ಒಬ್ಬನೇ ಒಬ್ಬ ಅಧಿಕಾರಿಯೂ ಇಲ್ಲ. ಎಲ್ಲರೂ ಭ್ರಷ್ಟ ವ್ಯವಸ್ಥೆಯನ್ನು ಪ್ರತಿನಿಧಿಸುವವರೇ. ಸಂಭಾಷಣೆಗಳಲ್ಲಿ ಚುರುಕು ಮುಟ್ಟುಸುವಂತಿದೆ. ಚಿತ್ರಕಥೆಯಲ್ಲಿ ಗಟ್ಟತನವಿಲ್ಲದ್ದರಿಂದ ಬಾಯಿಗೆ ಮಾತುಗಳನ್ನು ಇಡುವ ಅನಿವಾರ್ಯದಲ್ಲಿ ಗುರುಪ್ರಸಾದ್ ಸೋತಿದ್ದಾರೆ. ಸಂಗೀತ ಸಹನೀಯ. ರವಿಶಂಕರ್ 'ಸಿಲ್ಲಿ ಲಲ್ಲಿ' ಪಾತ್ರದಿಂದ ಹೊರಬಂದಿಲ್ಲ. ಛಾಯಾಗ್ರಹಣದಲ್ಲಿ ವಿಶೇಷ ಇಲ್ಲ. ಒಟ್ಟಾಗಿ ಸಿನಿಮೀಯ ಗುಣವೇ ಕಳೆದಿದೆ -ಗಣೇಶ ವೈದ್ಯ

  ಸರ್ಕಾರದ ವಿರುದ್ಧ ಬಾವಿ ಸಮರ: ಉದಯವಾಣಿ

  ಸರ್ಕಾರದ ವಿರುದ್ಧ ಬಾವಿ ಸಮರ: ಉದಯವಾಣಿ

  ಕಥೆ ಹೊಸದೇನಲ್ಲ. ಆದರೆ ಇನ್ನಷ್ಟು ಸಮರ್ಥವಾಗಿ ಕಥೆಯನ್ನು ತೆರೆಮೇಲೆ ತಂದಿದ್ದರೇ ಅದ್ಭುತ ವಿಡಂಬನಾತ್ಮಕ ಚಿತ್ರವಾಗುವ ಸಾಧ್ಯತೆ ಇತ್ತು. ನಿಧಾನವಾದ ನಿರೂಪಣೆಯಿಂದ ಕೆಲಸ ಕೆಟ್ಟಂತಿದೆ. ಹಾಗಂತ ಚಿತ್ರದಲ್ಲಿ ಬೇಡದ್ದನ್ನು ನಿರ್ದೇಶಕ ತೋರಿಸಿಲ್ಲ. ಚಿತ್ರದ ಲೆಂಥ್ ಕಡಿಮೆ ಇದ್ದರೂ ನಿರೂಪಣೆ ಜಾಳುಜಾಳೆನಿಸುತ್ತದೆ. ಉದ್ದೇಶ ಚೆನ್ನಾಗಿದ್ದರೂ ಎಲ್ಲೋ ಮಿಸ್ ಹೊಡೆದ ಅನುಭವ ಕಾಡುತ್ತದೆ. ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತದ ಎರಡು ಹಾಡುಗಳು ಕಾಡುತ್ತವೆ -ಚೇತನ್ ನಾಡಿಗೇರ್

  A Mediocre Rehash: Bangalore Mirror

  A Mediocre Rehash: Bangalore Mirror

  Sarkari Kelasa Devara Kelasa suffers from the lack of a gripping narrative. For those who know the original story, the suspense vanishes just 15 minutes into the movie. Unnecessary songs also hamper the show. It is an average film produced with an average amount of effort. Guruprasad's dialogues barely provoke the much-needed satire. While Arjun Janya's music is good, there is hardly a place for songs to fit well in this film. The story has been made as simplistic as possible and there is nothing challenging for anyone, including the actors.

  English summary
  Kannada Actor Ravi shanker Gowda Starrer 'Sarkari Kelasa Devara Kelasa' has Received positive response from the critics. Here is the collection of 'Sarkari Kelasa Devara Kelasa' reviews by Top News Papers of Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X