twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ: ಥ್ರಿಲ್ಲಿಂಗ್ ಎಂಬ ಟಾನಿಕ್ ತುಂಬಿದ 'ಟ್ರಂಕ್'

    By Bharath Kumar
    |

    ಕನ್ನಡದ ಖ್ಯಾತ ನಿರ್ದೇಶಕ ಜಿವಿ ಅಯ್ಯರ್ ಅವರ ಮೊಮ್ಮಗಳು ರಿಷಿಕಾ ಶರ್ಮಾ ನಿರ್ದೇಶನ ಮಾಡಿರುವ ಚೊಚ್ಚಲ ಸಿನಿಮಾ 'ಟ್ರಂಕ್' ಬಿಡುಗಡೆಯಾಗಿದೆ. 'ಟ್ರಂಕ್' ಕಂಪ್ಲಿಟ್ ಹಾರರ್ ಶೋ, ಥ್ರಿಲ್ ಜಾಸ್ತಿ ಇದೆ, ಅದರ 'ಹವಾ' ಸ್ವಲ್ಪ ಕಮ್ಮಿ ಇದೆ. ಪೂರ್ತಿ ವಿಮರ್ಶೆ ಮುಂದೆ ಓದಿರಿ...

    Rating:
    3.0/5

    ಚಿತ್ರ: ಟ್ರಂಕ್
    ನಿರ್ದೇಶನ: ರಿಷಿಕಾ ಶರ್ಮಾ
    ನಿರ್ಮಾಪಕ: ರಾಜೇಶ್ ಭಟ್
    ನಟನೆ: ವೈಶಾಲಿ ದೀಪಕ್, ನಿಹಾಲ್, ಅರುಣಾ ಬಾಲರಾಜ್ ಮತ್ತು ಇತರರು
    ಹಿನ್ನಲೆ ಸಂಗೀತ: ಆಲ್ಬಿನ್
    ಸಂಗೀತ: ಕಾರ್ತಿಕ್, ಪ್ರದೀಪ್ ಗಣೇಶನ್
    ಛಾಯಾಗ್ರಹಣ: ಭಜರಂಗ್ ಕೊಂಥಮ್ ಮತ್ತು ಸುದೀಪ್ ಅಲುರಿ

    'ಟ್ರಂಕ್' ಸುತ್ತ ಕಥೆ

    'ಟ್ರಂಕ್' ಸುತ್ತ ಕಥೆ

    ಒಂಟಿ ಮನೆಯ ಎಸ್ಟೇಟ್ ನಲ್ಲಿರುವ ಕುಟುಂಬಕ್ಕೆ ಮದುವೆ ಆಗಿ ಬರುವ ಹುಡುಗಿ, ಜೊತೆಯಲ್ಲಿ ಹಳೆ 'ಟ್ರಂಕ್'ನ್ನ ತೆಗೆದುಕೊಂಡು ಬರ್ತಾಳೆ. ಆ ಟ್ರಂಕ್ ಮನೆಗೆ ಬಂದ್ಮೇಲೆ ವಿಚಿತ್ರ ಘಟನೆಗಳು ನಡೆಯುತ್ತೆ. ಯಾರೋ ತೊಂದರೆ ಕೊಡ್ತಿದ್ದಾರೆ ಎಂಬ ಭಯಾನಕ ಘಟನೆಗಳು ಸಂಭವಿಸುತ್ತೆ. ಇದನ್ನ ಗಮನಿಸಿದ ನಾಯಕ ಅದು ಯಾರು, ಯಾಕೆ ಎಂಬುದನ್ನ ತಿಳಿಯುವ ಸಾಹಸಕ್ಕೆ ಮುಂದಾಗ್ತಾನೆ. ಈ ಮಧ್ಯೆ ಗೋಸ್ಟ್ ಹಂಟರ್, ಚರ್ಚ್ ಫಾದರ್ ಎಲ್ಲರೂ ಬರ್ತಾರೆ. ಆ ಆತ್ಮ ಯಾರು, ಯಾಕೆ ಸಮಸ್ಯೆ ಮಾಡ್ತಿದೆ ಎಂಬುದನ್ನ ಭೇದಿಸುವ ರೋಚಕ ಕಥೆಯೇ 'ಟ್ರಂಕ್'.

    'ಟ್ರಂಕ್'ನಲ್ಲಿ ಏನಿದೆ, ಏನಿಲ್ಲಾ.?

    'ಟ್ರಂಕ್'ನಲ್ಲಿ ಏನಿದೆ, ಏನಿಲ್ಲಾ.?

    ಇದು ಪಕ್ಕಾ ಹಾರರ್ ಶೋ. ಸಿನಿಮಾದಲ್ಲಿ ಹೆಚ್ಚಾಗಿ ಕಾಮಿಡಿ ಇಲ್ಲ. ಆದ್ರೆ, ಕೆಲವೊಂದು ದೃಶ್ಯಗಳು ನಗು ತರಿಸುತ್ತೆ. ಇದರ ಜೊತೆಗೆ ರೊಮ್ಯಾನ್ಸ್, ಸೆಂಟಿಮೆಂಟ್, ಹಾಡುಗಳು ಚಿತ್ರದಲ್ಲಿದೆ. ಅತೃಪ್ತರು ಸತ್ತಾಗ ಹೇಗೆ ಪ್ರೇತಾತ್ಮಮವಾಗಿ ಕಾಡ್ತಾರೆ, ಗೋಸ್ಟ್ ಹಂಟರ್‌ಗಳು ಹೇಗೆ ಕೆಲಸ ಮಾಡುತ್ತಾರೆ, ಸೈಕಲಾಜಿಕಲಿ ಇದನ್ನ ಹೇಗೆ ಪರಿಗಣಿಸ್ತಾರೆ ಎಂಬ ಥ್ರಿಲ್ಲಿಂಗ್ ಅಂಶಗಳನ್ನ ನಿರ್ದೇಶಕಿ ರಿಷಿಕಾ ಶರ್ಮಾ ಇಂಟ್ರೆಸ್ಟಿಂಗ್ ಆಗಿ ತೋರಿಸಿದ್ದಾರೆ. ಸಿನಿಮಾದ ಮೇಕಿಂಗ್ ನಿಂದ ಮಾರ್ಕ್ಸ್ ಗಿಟ್ಟಿಸಿಕೊಳ್ತಾರೆ.

    ಟೆಕ್ನಿಕಲ್ ಸಿನಿಮಾ ಸ್ಟ್ರಾಂಗ್

    ಟೆಕ್ನಿಕಲ್ ಸಿನಿಮಾ ಸ್ಟ್ರಾಂಗ್

    'ಟ್ರಂಕ್' ಚಿತ್ರದಲ್ಲಿ ಅತ್ಯಂತ ಹೆಚ್ಚು ಪರಿಣಾಕಾರಿಯಾಗಿ ಕಾಣುವುದು ಭಜರಂಗ್ ಕೊಂಥಮ್ ಹಾಗೂ ಸುದೀಪ್ ಅಲುರಿ ಅವರ ಕ್ಯಾಮೆರಾ ವರ್ಕ್. ಇಡೀ ಸಿನಿಮಾ ಬೆಳಕಿಲ್ಲದೇ ಕತ್ತಲೇಯಲ್ಲೇ ಸಾಗುತ್ತೆ. ಬೆಳಗಿನ ದೃಶ್ಯಗಳು ಕೂಡ ಕತ್ತಲ ಅನುಭವ ನೀಡುತ್ತೆ. ಹೀಗಾಗಿ, ಚಿತ್ರದ ಬಹುತೇಕ ಆಟ ಕ್ಯಾಮೆರಾ ಕೈಚಳಕದಲ್ಲೇ ಥ್ರಿಲ್ಲ ನೀಡುತ್ತೆ. ಅದಕ್ಕೆ ಹಿನ್ನೆಲೆ ಸಂಗೀತವೂ ಪೂರಕವಾಗಿದೆ.

    ಸಿನಿಮಾ 'ದೊಡ್ಡದು' ಎಲ್ಲದಕ್ಕೂ ಕಾರಣ

    ಸಿನಿಮಾ 'ದೊಡ್ಡದು' ಎಲ್ಲದಕ್ಕೂ ಕಾರಣ

    ಎರಡೂವರೆ ಗಂಟೆ ಎಂಬ ಸೂತ್ರದ ಮೊರೆಹೋಗಿರುವ ನಿರ್ದೇಶಕರು ಕಥೆಯನ್ನ ಎಳೆದಂತಿದೆ. ಆರಂಭ ನಿಧಾನವೆನಿಸಿದರೂ ಮುಂದೆ ಸಾಗುತ್ತೆ ರೋಚಕತೆಯಿಂದ ಪ್ರೇಕ್ಷಕರನ್ನ ಹಿಡಿದಿಡುತ್ತೆ. ಆದ್ರೆ, ಸೆಕೆಂಡ್ ಹಾಫ್ ನಲ್ಲಿ ಬರುವ ಫ್ಲ್ಯಾಶ್ ಬ್ಯಾಕ್ ಸಿನಿಮಾ ದೊಡ್ಡದು ಎಂಬ ಅನುಭವ ನೀಡುತ್ತೆ. (ಸಣ್ಣದಾಗಿ ಮುಗಿಸಬಹುದಿತ್ತು) ಇನ್ನು ಹಾರರ್ ಚಿತ್ರದಲ್ಲಿ ಸೆಂಟಿಮೆಂಟ್, ನಾಲ್ಕು ಸಾಂಗ್ಸ್ ಸೇರಿಸಿರುವುದು ಇದಕ್ಕೆ ಕಾರಣವಿರಬಹುದು. ಅನೇಕ ಕಡೆ ಪಾತ್ರಗಳ ಸಂಭಾಷಣೆ ಕೇಳಿಸಲ್ಲ, ಅದಕ್ಕೆ ಬೇರೆಯೇ ತಾಂತ್ರಿಕ ಕಾರಣವಿರಬಹುದು. ಆದ್ರೆ, ಕೇಳಿಸಿದ್ರೆ ಚೆನ್ನಾಗಿತ್ತು. ಇನ್ನು ದೃಶ್ಯಗಳಲ್ಲಿ ಭಯ ಪಡಿಸುವಷ್ಟು, 'ದೆವ್ವ' ಭಯಪಡಿಸದೆ ಇರುವುದು ಟ್ರಂಕ್ ಗೆ ಕೊಂಚ ಮಟ್ಟದ ಹಿನ್ನಡೆ ಎನ್ನಬಹುದು.

    ಅಭಿನಯದ ಹೇಗಿದೆ.?

    ಅಭಿನಯದ ಹೇಗಿದೆ.?

    ಉಪನ್ಯಾಸಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾಯಕ ನಿಹಾಲ್ ಅಭಿನಯದ ಚೆನ್ನಾಗಿದೆ. ನಾಯಕಿಯಾಗಿ ವೈಶಾಲಿ ದೀಪಕ್ ಕೂಡ ವಿಭಿನ್ನ ಪಾತ್ರದ ಮೂಲಕ ಕೇಂದ್ರಬಿಂದು ಆಗ್ತಾರೆ. ಇನ್ನುಳಿದಂತೆ ಅರುಣಾ ಬಾಲರಾಜ್, ಸುಂದರಶ್ರೀ ಅವರು ಕೂಡ ಉತ್ತಮ ಸಾಥ್ ನೀಡಿದ್ದಾರೆ. ಚಿತ್ರದಲ್ಲಿ ಅಭಿನಯಿಸಿರುವ ರಿಯಲ್ ಗೋಸ್ಟ್ ಗಳು ಕೂಡ ವಿಶೇಷವಾಗಿ ಗಮನ ಸೆಳೆಯುತ್ತಾರೆ.

    ನೋಡಬಹುದಾದ ಹಾರರ್ ಶೋ

    ನೋಡಬಹುದಾದ ಹಾರರ್ ಶೋ

    'ಟ್ರಂಕ್' ಸಿನಿಮಾ ನೋಡುತ್ತಿದ್ದರೇ ಇದು ಹಾಲಿವುಡ್ ಅಥವಾ ಬಾಲಿವುಡ್ ಶೈಲಿಯ ಸಿನಿಮಾ ಎಂಬ ಭಾವನೆ ಬರುತ್ತೆ. ಯಾಕಂದ್ರೆ ಇದು ಟೆಕ್ನಿಕಲಿ ಸ್ಟ್ರಾಂಗ್ ಇರುವ ಸಿನಿಮಾ. ಆದ್ರೆ, ಕಥೆ-ಚಿತ್ರಕಥೆ ಪಕ್ಕಾ ಕನ್ನಡ ಸೊಗಡು. ಕನ್ನಡದಲ್ಲಿ ಇಂತಹ ಸಿನಿಮಾಗಳು ಕಡಿಮೆ. ಹಾಗಾಗಿ, ನೋಡಲು ಯಾವುದೇ ಅಭ್ಯಂತರವಿಲ್ಲ. ಮೇಕಿಂಗ್ ನಿಂದ ಇಷ್ಟವಾಗುತ್ತೆ.

    English summary
    kannada legend director gv iyer's granddaughter rishika sharma directional 'trunk' movie has released today (july 13th). here is the review of this horror movie.
    Tuesday, July 17, 2018, 11:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X