twitter
    For Quick Alerts
    ALLOW NOTIFICATIONS  
    For Daily Alerts

    ಉದ್ದಿಶ್ಯ ವಿಮರ್ಶೆ: ವಾಮಾಚಾರದ ನೆರಳಲ್ಲಿ ಸಾಗುವ ಕೌತುಕದ ಕಥೆ

    By Abhimani
    |

    Rating:
    3.0/5
    Star Cast: ಹೇಮಂತ್ ಕೃಷ್ಣಪ್ಪ, ಅರ್ಚನಾ ಗಾಯಕ್ವಾಡ್, ಅಕ್ಷತಾ, ಇಚ್ಚ ಡಾಲ್, ಅನಂತವೇಲು, ಅಶ್ವತ್ ನಾರಾಯಣ್, ವಿಜಯ್ ಕೌಂಡಿನ್ಯ,
    Director: ಹೇಮಂತ್ ಕೃಷ್ಣಪ್ಪ

    ಇದು ಬರಿ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲ. ಚಿತ್ರದಲ್ಲೊಂದು ಹಾರರ್ ಶೋ ಕೂಡ ಇದೆ. ದೆವ್ವ, ಆತ್ಮ, ವಾಮಾಚಾರ, ದೈವಶಕ್ತಿ ಹೀಗೆ ವಿಶೇಷವಾದ ಚಿತ್ರಕಥೆಯಿಂದ ಗಮನ ಸೆಳೆಯುತ್ತೆ. ಹೊಸಬರ ಸಿನಿಮಾ ಎಂದು ತೋರಿಸುತ್ತಲೇ ಪ್ರೇಕ್ಷಕರನ್ನ ರಂಜಿಸುವ ಒಳ್ಳೆಯ ಪ್ರಯತ್ನ ಆಗಿದೆ.

    ಹೇಮಂತ್ ಕೃಷ್ಣಪ್ಪ ಅವರ ನಟಿಸಿ, ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಅರ್ಚನಾ ಗಾಯಕ್ವಾಡ್, ಅಕ್ಷತಾ, ಇಚ್ಚ ಡಾಲ್, ಅನಂತವೇಲು, ಅಶ್ವತ್ ನಾರಾಯಣ್, ವಿಜಯ್ ಕೌಂಡಿನ್ಯ, ಮುಂತಾದವರು ನಟಿಸಿದ್ದಾರೆ. ಪೂರ್ತಿ ವಿಮರ್ಶೆ ಮುಂದೆ ಓದಿ....

    ರೆಗ್ಯೂಲರ್ ಸಿನಿಮಾ

    ರೆಗ್ಯೂಲರ್ ಸಿನಿಮಾ

    ಯಾವುದೋ ಅಗೋಚರ ಶಕ್ತಿಯಿಂದ ಮೃಗಾಲಯದಲ್ಲಿ ಪ್ರಾಣಿಗಳು ಮತ್ತು ಕೆಲವು ವ್ಯಕ್ತಿಗಳು ಕೊಲೆಯಾಗುತ್ತಾರೆ. ಇದನ್ನ ತನಿಖೆ ಮಾಡಲು ಬರುವ ಸಿಓಡಿ ಅಧಿಕಾರಿ ಆದಿತ್ಯ (ಹೇಮಂತ್) ಅವರಿಗೆ ತನಿಖೆ ಮಧ್ಯೆ ವಿಚಿತ್ರವಾದ ಅನುಭವ ಎದುರಾಗುತ್ತೆ. ಅದನ್ನ ಮತ್ತಷ್ಟು ಆಳವಾಗಿ ಅಧ್ಯಯನ ಮಾಡಿದಾಗ ಅಲ್ಲಿ ಮೂರು ಹುಡುಗಿಯರು ಮತ್ತು ಒಬ್ಬ ವಾಮಾಚಾರಿಯ ರೋಚಕ ಕಥೆ ತೆರೆದುಕೊಳ್ಳುತ್ತೆ. ಈ ಕೊಲೆಗಳಿಗೂ, ಆ ಮೂರು ಹುಡುಗಿಯರ ಮತ್ತು ವಾಮಾಚಾರಿಗೂ ಏನ್ ಸಂಬಂಧ ಎಂಬ ಥ್ರಿಲ್ಲಿಂಗ್ ಕಥೇಯೇ ಉದ್ದಿಶ್ಯ.

    ರೋಚಕತೆ ಹೆಚ್ಚು ಮಾಡಬಹುದಿತ್ತು

    ರೋಚಕತೆ ಹೆಚ್ಚು ಮಾಡಬಹುದಿತ್ತು

    ಆರಂಭದಲ್ಲಿ ರೋಚಕವಾಗಿ ಶುರುವಾಗುವ ಸಿನಿಮಾ, ಮಧ್ಯೆದಲ್ಲಿ ಸ್ವಲ್ಪ ಹಿಡಿತು ತಪ್ಪುತ್ತೆ. ವಾಮಾಚಾರಿ ಮತ್ತು ಮೂರು ಹುಡುಗಿಯರ ಸನ್ನಿವೇಶಗಳು ಅಷ್ಟಾಗಿ ಮಜಾ ಕೊಡಲ್ಲ. ವಾಮಾಚಾರಿಯನ್ನ ಇನ್ನು ಭಯಾನಕವಾಗಿ ತೋರಿಸಬಹುದಿತ್ತು. ಕ್ಲೈಮ್ಯಾಕ್ಸ್ ಗೆ ಬಂದಾಗ ಸಿನಿಮಾ ಮತ್ತೆ ಮತ್ತಷ್ಟು ರೋಚಕತೆ ಪಡೆಯುತ್ತೆ. ಆದ್ರೆ, ಅಷ್ಟೇ ಸರಳವಾಗಿ ಸಿನಿಮಾ ಮುಗಿಸಿಬಡುತ್ತಾರೆ ನಿರ್ದೇಶಕರು. ನಿರ್ದೇಶಕರ ಚೊಚ್ಚಲ ಪ್ರಯತ್ನವನ್ನ ಮೆಚ್ಚಿಕೊಂಡರು ಸಿನಿಮಾಗೆ ಮತ್ತಷ್ಟು ರೋಚಕತೆ ಬೇಕಿತ್ತು ಎನಿಸುತ್ತೆ.

    ಹಾಲಿವುಡ್ ಶೈಲಿಯ 'ಉದ್ದಿಶ್ಯ' ಚಿತ್ರ ಇದೇ ವಾರ ರಿಲೀಸ್ಹಾಲಿವುಡ್ ಶೈಲಿಯ 'ಉದ್ದಿಶ್ಯ' ಚಿತ್ರ ಇದೇ ವಾರ ರಿಲೀಸ್

    ತಾಂತ್ರಿಕವಾಗಿ ಹೆಚ್ಚು ಅಂಕಗಳು

    ತಾಂತ್ರಿಕವಾಗಿ ಹೆಚ್ಚು ಅಂಕಗಳು

    ಅಂದ್ಹಾಗೆ, ಇದು ಹಾರರ್ ಟಚ್ ಇರುವ ಸಸ್ಪೆನ್ಸ್ ಥ್ರಿಲ್ಲಿಂಗ ಸಿನಿಮಾ. ಕಥೆ ಸಾಮಾನ್ಯವೆನಿಸಿದರು, ಅದನ್ನ ಪ್ರೆಸೆಂಟ್ ಮಾಡುವಲ್ಲಿ ಸ್ವಲ್ಪ ವಿಭಿನ್ನತೆ ಕಾಣುತ್ತೆ. ಅಂದ್ರೆ, ರೆಗ್ಯೂಲರ್ ಕನ್ನಡ ಸಿನಿಮಾಗಳ ಶೈಲಿಯಿಂದ ಸ್ವಲ್ಪ ಹೊರತಾಗಿದೆ. ಮೇಕಿಂಗ್ ನಲ್ಲಿ ಸಿನಿಮಾಗೆ ಹೆಚ್ಚು ಅಂಕಗಳು ನೀಡಬಹುದು. ಕ್ಯಾಮೆರಾ ವರ್ಕ್, ಹಿನ್ನೆಲೆ ಸಂಗೀತಕ್ಕೆ ಚಿತ್ರಕ್ಕೆ ಶಕ್ತಿ ತುಂಬಿದೆ. ಯಾಕಂದ್ರೆ ಹಾಲಿವುಡ್ ಕಥೆಗಾರ ಬರೆದಿರುವ ಸ್ಕ್ರಿಪ್ಟ್ ನ್ನ ಕನ್ನಡಕ್ಕೆ ತಕ್ಕಂತೆ ಬದಲಾಯಿಸಿದ್ದಾರೆ. ಇನ್ನು ಗ್ರಾಫಿಕ್ಸ್ ತಂತ್ರಜ್ಞಾನವನ್ನ ಉತ್ತಮ ಬಳಕೆ ಮಾಡಿದ್ದಾರೆ. ಇನ್ನು ಸಮರ್ಪಕವಾಗಿ ಬಳಸಬಹುದಿತ್ತು.

    ಎಲ್ಲರೂ ಹೊಸ ಕಲಾವಿದರೇ

    ಎಲ್ಲರೂ ಹೊಸ ಕಲಾವಿದರೇ

    ಇಡೀ ಸಿನಿಮಾವನ್ನ ಕರೆದುಕೊಂಡು ಹೋಗುವ ಸಿಓಡಿ ಅಧಿಕಾರಿ ಪಾತ್ರದಲ್ಲಿ ಹೇಮಂತ್ (ಈ ಚಿತ್ರದ ನಾಯಕ-ನಿರ್ದೇಶಕ-ನಿರ್ಮಾಪಕ) ಚೆನ್ನಾಗಿ ಅಭಿನಯಿಸಿದ್ದಾರೆ. ಹೀರೋಯಿಸಂ ಪಾತ್ರವಾಗಿದ್ದರಿಂದ ತಮ್ಮ ಅಭಿನಯದಲ್ಲಿ ಇನ್ನು ಸ್ವಲ್ಪ ಗತ್ತು ಹೆಚ್ಚಿಸಬಹುದಿತ್ತು. ಪೊಲೀಸ್ ಪಾತ್ರದಲ್ಲಿ ಅರ್ಚನಾ ಅವರ ಮುಗ್ದ ಅಭಿನಯ ಉತ್ತಮವಾಗಿದೆ. ಇನ್ನುಳಿದಂತೆ ಇಚ್ಚ ಡಾಲ್, ಅಕ್ಷತಾ, ಅನಂತ್ ವೇಲು, ಅಶ್ವತ್ಥ್ ನಾರಾಯಣ ತಮ್ಮ ಪಾತ್ರಗಳಿಗೆ ಜೀವ ನೀಡಿದ್ದಾರೆ.

    'ಉದ್ದಿಶ್ಯ' ಸಿನಿಮಾ ನೋಡೋದಕ್ಕೆ ಈ ಒಂದು ಕಾರಣ ಸಾಕು'ಉದ್ದಿಶ್ಯ' ಸಿನಿಮಾ ನೋಡೋದಕ್ಕೆ ಈ ಒಂದು ಕಾರಣ ಸಾಕು

    ಹೊಸ ಪ್ರಯತ್ನ ನೋಡಲು ಅಡ್ಡಿಯಿಲ್ಲ

    ಹೊಸ ಪ್ರಯತ್ನ ನೋಡಲು ಅಡ್ಡಿಯಿಲ್ಲ

    ಸಸ್ಪೆನ್ಸ್ ಥ್ರಿಲ್ಲರ್ ಇಷ್ಟ ಪಡುವ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟವಾಗುತ್ತೆ. ಮುಂದೇನಾಗುತ್ತೆ ಎಂದು ಅತಿ ಉತ್ಸಾಹದಿಂದ ನೋಡಿದ್ರೆ ಸ್ವಲ್ಪ ನಿರಾಸೆಯಾಗುತ್ತೆ. ಉದ್ದಿಶ್ಯ ಸಿನಿಮಾವನ್ನ ಎಲ್ಲ ವರ್ಗದ ಪ್ರೇಕ್ಷಕರು ನೋಡಲು ಅಡ್ಡಿಯಿಲ್ಲ. ರೆಗ್ಯೂಲರ್ ಹಾರರ್ ಕಥೆಯನ್ನ ಸ್ವಲ್ಪ ವಿಭಿನ್ನವಾಗಿ ತೋರಿಸಿದ್ದಾರೆ.

    English summary
    kannada movie uddishya has released today (august 31st). the movie directed by hemanth gowda k. here is the review of uddishya.
    Friday, September 21, 2018, 18:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X