twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ: ಸಸ್ಪೆನ್ಸ್ ಬಿಡದ ದೇಸಾಯಿ 'ಉದ್ಘರ್ಷ'ದಲ್ಲಿ ಆಕ್ಷನ್ ಅಬ್ಬರ

    |

    ಸುನೀಲ್ ಕುಮಾರ್ ದೇಸಾಯಿ ಅವರ ಈ ಹಿಂದಿನ ಸಿನಿಮಾಗಳಂತೆ ಉದ್ಘರ್ಷ ಚಿತ್ರವೂ ಸಸ್ಪೆನ್ಸ್ ಭರಿತವಾಗಿದೆ. ಚಿತ್ರದ ಕೊನೆಯವರೆಗೂ ಆ ಜೋಶ್ ಕಾಪಾಡಿಕೊಂಡು ಹೋಗುತ್ತೆ. ಸಿನಿಮಾ ಪೂರ್ತಿ ಖ್ಯಾತ ಖಳನಟರೇ ತುಂಬಿದ್ದು, ಒಬ್ಬೊಬ್ಬರ ಪಾತ್ರವು ಥ್ರಿಲ್ಲಿಂಗ್ ಆಗಿ ಮೂಡಿಬಂದಿದೆ. ಅದಕ್ಕೆ ಬ್ಯಾಗ್ರೌಂಡ್ ಮ್ಯೂಸಿಕ್ ಪ್ರೇಕ್ಷಕರಿಗೆ ಮಜಾ ನೀಡುತ್ತೆ.

    Rating:
    3.5/5
    Star Cast: ಠಾಕೂರ್ ಅನೂಪ್ ಸಿಂಗ್, ಸಾಯಿ ಧನ್ಸಿಕಾ, ಕಬೀರ್ ದುಹಾನ್ ಸಿಂಗ್
    Director: ಸುನೀಲ್ ಕುಮಾರ್ ದೇಸಾಯಿ

    ಒಂದು ಕೊಲೆ ಮತ್ತು ನಾಯಕ, ನಾಯಕಿ

    ಒಂದು ಕೊಲೆ ಮತ್ತು ನಾಯಕ, ನಾಯಕಿ

    ಉದ್ಘರ್ಷ ಒಂದು ಕೊಲೆಯ ಸುತ್ತಾ ಸುತ್ತುವ ಸಿನಿಮಾ. ಚಿತ್ರ ಶುರುವಾಗಿ ಕೆಲವೇ ನಿಮಿಷದಲ್ಲಿ ನಡೆಯುವ ಕೊಲೆ ಚಿತ್ರದ ಕುತೂಹಲವನ್ನು ಆರಂಭದಲ್ಲೇ ಹೆಚ್ಚಿಸುತ್ತೆ. ತಮಗೆ ಸಂಬಂಧವೇ ಇಲ್ಲದ ಕೊಲೆಯ ಪ್ರಕರಣದಲ್ಲಿ ನಾಯಕ ಠಾಕೂರ್ ಅನೂಪ್ ಸಿಂಗ್ ಮತ್ತು ಧನ್ಸಿಕಾ ಸಿಲುಕಿಕೊಳ್ಳುತ್ತಾರೆ. ಅಲ್ಲಿಂದ ಶುರುವಾದ ಇಬ್ಬರ ಓಟ ಚಿತ್ರದ ಕೊನೆಯವರೆಗೂ ಸಾಗುತ್ತೆ. ಆ ಕೊಲೆ ಯಾರು ಮಾಡಿದ್ದು, ಯಾಕೆ ಮಾಡಿದ್ದು ಎನ್ನುವುದು ಚಿತ್ರದ ಮೊದಲಾರ್ಧ.

    ಸಂದರ್ಶನ: 'ದೇಸಾಯಿ ಈಸ್ ಬ್ಯಾಕ್' ಎನ್ನುತ್ತಿದೆ 'ಉದ್ಘರ್ಷಸಂದರ್ಶನ: 'ದೇಸಾಯಿ ಈಸ್ ಬ್ಯಾಕ್' ಎನ್ನುತ್ತಿದೆ 'ಉದ್ಘರ್ಷ

    ಕುತೂಹಲಕ್ಕೆ ಬ್ರೇಕ್ ಹಾಕುತ್ತೆ ಮೊದಲಾರ್ಧ

    ಕುತೂಹಲಕ್ಕೆ ಬ್ರೇಕ್ ಹಾಕುತ್ತೆ ಮೊದಲಾರ್ಧ

    ಸಾಮಾನ್ಯವಾಗಿ ಸಸ್ಪೆನ್ಸ್, ಥ್ರಿಲ್ಲಿಂಗ್ ಸಿನಿಮಾ ಅಂದರೆ ಕೊಲೆಯ ರಹಸ್ಯೆ ಕೊನೆಯವರೆಗೂ ಬಯಲಾಗುವುದಿಲ್ಲ. ಆದರೆ ಇಲ್ಲಿ ಮೊದಲಾರ್ಧದಲ್ಲೇ ಕೊಲೆಯ ರಹಸ್ಯ ತೆರೆದಿಡುವ ಮೂಲಕ ಪ್ರೇಕ್ಷಕರ ಕುತೂಹಲಕ್ಕೆ ಬ್ರೇಕ್ ಹಾಕ್ತಾರೆ ನಿರ್ದೇಶಕರು. ಜೊತೆಗೆ ಕೊಲೆಯ ಉದ್ದೇಶ ಕೂಡ ಪ್ರೇಕ್ಷಕರ ಮುಂದೆ ಬಿಚ್ಚಿಡುತ್ತಾರೆ.

    ನಿರಾಸೆಗೊಳಿಸುವ ಸೆಕೆಂಡ್ ಹಾಫ್

    ನಿರಾಸೆಗೊಳಿಸುವ ಸೆಕೆಂಡ್ ಹಾಫ್

    ಮೊದಲಾರ್ಧದಲ್ಲೇ ಕೊಲೆಯ ರಹಸ್ಯ ಮತ್ತು ಉದ್ದೇಶ ಬಿಟ್ಟುಕೊಟ್ಟ ನಿರ್ದೇಶಕರು ಸೆಕೆಂಡ್ ಹಾಫ್ ಏನಾದರೂ ಮ್ಯಾಜಿಕ್ ಮಾಡ್ತಾರಾ ಎಂಬ ನಿರೀಕ್ಷೆ ಪ್ರೇಕ್ಷಕರನ್ನ ಕಾಡಿದರೂ, ಅದೂ ಹೆಚ್ಚು ಹೊತ್ತು ಇರುವುದಿಲ್ಲ. ಸೆಕೆಂಡ್ ಹಾಫ್ ನಲ್ಲಿ ಇನ್ನೊಂದು ರೀತಿಯ ಕಥೆ ತೆರೆದುಕೊಳ್ಳುತ್ತೆ. ಕೊಲೆ ಪ್ರಕರಣದಿಂದ ನಾಯಕ ಆದಿತ್ಯ (ಠಾಕೂರ್ ಅನೂಪ್) ಮತ್ತು ನಾಯಕಿ ರಶ್ಮಿ (ಸಾಯಿ ಧನ್ಸಿಕಾ) ಹೊರಬರ್ತಾರಾ? ಇವರನ್ನ ಧರ್ಮೇಂದ್ರ (ಕಬೀರ್ ದುಹಾನ್ ಸಿಂಗ್) ಹೇಗೆ ಕಾಡ್ತಾನೆ ಎಂಬುದು ಸಿನಿಮಾದಲ್ಲೇ ನೋಡಬೇಕು. ಆದ್ರೆ, ಮೊದಲಾರ್ಧ ಸಿಗುವಷ್ಟು ಮಜಾ ಎರಡನೇ ಭಾಗದಲ್ಲಿ ಸಿಗುವುದಿಲ್ಲ ಎಂಬುದು ಕೊಂಚ ನಿರಾಸೆ ಮೂಡಿಸುತ್ತೆ.

    ದರ್ಶನ್ ಭಾಗಿಯಾಗಿದ್ದ 'ಉದ್ಘರ್ಷ' ಕಾರ್ಯಕ್ರಮಕ್ಕೆ ಸುದೀಪ್ ಬಂದಿಲ್ಲ ಯಾಕೆ?ದರ್ಶನ್ ಭಾಗಿಯಾಗಿದ್ದ 'ಉದ್ಘರ್ಷ' ಕಾರ್ಯಕ್ರಮಕ್ಕೆ ಸುದೀಪ್ ಬಂದಿಲ್ಲ ಯಾಕೆ?

    ಅಕ್ಷನ್ ದೃಶ್ಯಗಳದ್ದೇ ಅಬ್ಬರ

    ಅಕ್ಷನ್ ದೃಶ್ಯಗಳದ್ದೇ ಅಬ್ಬರ

    ಈ ಸಿನಿಮಾದಲ್ಲಿ ಆಕ್ಷನ್ ದೃಶ್ಯಗಳ ಅಬ್ಬರ ಹೆಚ್ಚಾಗಿದೆ. ನಾಯಕ ಠಾಕೂರ್ ಅನೂಪ್ ಸಿಂಗ್, ವಿಲನ್ ಗಳಾದ ಕಬೀರ್ ದುಹಾನ್ ಸಿಂಗ್, ಡ್ಯಾನಿಶ್ ಅಖ್ತರ್ ಅಂತಹ ಘಟಾನುಘಟಿಗಳು ಮದಗಜಗಳಂತೆ ಕಾದಾಡುವುದು ಅತಿ ಎನಿಸುತ್ತೆ. ಇವರ ಜೊತೆ ಜಿಮ್ ರವಿ, ಶ್ರವಣ್ ರಾಘವೇಂದ್ರ ಮತ್ತು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಂಶಿ ಕೃಷ್ಣ ಅವರ ಫೈಟ್ ದೃಶ್ಯಗಳು ಆಕ್ಷನ್ ಪ್ರಿಯರಿಗೆ ಇಷ್ಟವಾದ್ರು ಸಿನಿಮಾಗೆ ಇದು ಹೆಚ್ಚಾಯಿತು ಅನಿಸುತ್ತೆ.

    ಪಾತ್ರಗಳ ಆಯ್ಕೆಯಲ್ಲಿ ದೇಸಾಯಿ ಕೈಚಳಕ

    ಪಾತ್ರಗಳ ಆಯ್ಕೆಯಲ್ಲಿ ದೇಸಾಯಿ ಕೈಚಳಕ

    ಸಿನಿಮಾದಲ್ಲಿರುವ ನಾಲ್ಕು ಜನ ನಾಯಕಿಯರು ಇಷ್ಟವಾಗ್ತಾರೆ. ರಶ್ಮಿ ಪಾತ್ರದಲ್ಲಿ ಧನ್ಸಿಕಾ ಪ್ರೇಕ್ಷಕರನ್ನು ಮೋಡಿ ಮಾಡ್ತಾರೆ. ಕೊನೆಯವರೆಗೂ ಥ್ರಿಲ್ ನೀಡುವ ಧನ್ಸಿಕಾ ಪಾತ್ರ ಉದ್ಘರ್ಷದ ಮತ್ತೊಂದು ಹೈಲೆಟ್. ನಾಯಕನಿಗೆ ಆಕಸ್ಮಿಕವಾಗಿ ಸಿಗುವ ಕರೀಷ್ಮಾ (ತಾನ್ಯ ಹೋಪ್) ಪಾತ್ರ ಇಂಟ್ರಸ್ಟಿಂಗ್ ಆಗಿದೆ. ಪ್ರಮುಖವಾದ ಪಾತ್ರವೊಂದರಲ್ಲಿ ನಟಿಸಿರುವ ಶ್ರದ್ದಾ ದಾಸ್ ಚಿತ್ರಕ್ಕೆ ಟರ್ನಿಂಗ್ ಪಾಯಿಂಟ್. ಹೀಗೆ ಬಂದು ಹಾಗೆ ಹೋಗುವ ಹರ್ಷಿಕಾ ಕೂಡ ತಮ್ಮ ಪಾತ್ರವನ್ನ ಚೆನ್ನಾಗಿ ನಿಭಾಯಿಸಿದ್ದಾರೆ. ಹಾಗ್ನೋಡಿದ್ರೆ, ನಾಯಕಿಯರಿಗೆ ಫುಲ್ ಮಾರ್ಕ್ಸ್.

    ಗುರುಗಳ ಚಿತ್ರಕ್ಕೆ ಪವರ್ ತುಂಬಿದ ಕಿಚ್ಚ ಸುದೀಪ್ಗುರುಗಳ ಚಿತ್ರಕ್ಕೆ ಪವರ್ ತುಂಬಿದ ಕಿಚ್ಚ ಸುದೀಪ್

    ಘಟಾನುಘಟಿ ಖಳನಟರ ಸಂಘರ್ಷ

    ಘಟಾನುಘಟಿ ಖಳನಟರ ಸಂಘರ್ಷ

    ಘಟಾನುಘಟಿ ಖಳನಟರ ಸಂಘರ್ಷವೇ ಉದ್ಘರ್ಷ ಅಂದರೆ ತಪ್ಪಾಗಲ್ಲ. ವಿಲನ್ ಆಗಿ ಕಬೀರ್ ದುಹಾನ್ ಸಿಂಗ್ ಅಬ್ಬರಿಸಿದ್ದಾರೆ. ಉದ್ಯಮಿ ಮೆನನ್ ಪಾತ್ರದಾರಿ ಕಿಶೋರ್, ಸಪೋರ್ಟಿಂಗ್ ಪಾತ್ರದಲ್ಲಿ ಜಿಮ್ ರವಿ ಗಮನ ಸೆಳೆಯುತ್ತಾರೆ. ಡ್ಯಾನಿಶ್ ಅಖ್ತರ್ ಪಾತ್ರಕ್ಕೆ ಮಹತ್ವವಿಲ್ಲದಿದ್ದರೂ, ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪೊಲೀಸ್ ಆಗಿ ಎಂಟ್ರಿ ಕೊಡುವ ವಂಶಿ ಕೃಷ್ಣ ಸೇರಿದಂತೆ ಎಲ್ಲರೂ ತಮ್ಮ ಪಾತ್ರವನ್ನ ಅಚ್ಚುಕಚ್ಚಾಗಿ ನಿಭಾಯಿಸಿದ್ದಾರೆ.

    ಟೆಕ್ನಿಕಲಿ ಸಿನಿಮಾ ಆಕರ್ಷಣೆ

    ಟೆಕ್ನಿಕಲಿ ಸಿನಿಮಾ ಆಕರ್ಷಣೆ

    ಉದ್ಘರ್ಷ ಚಿತ್ರಕ್ಕೆ ಅತಿ ದೊಡ್ಡ ಶಕ್ತಿ ಅಂದ್ರೆ ತಾಂತ್ರಿಕ ವರ್ಗ. ದೇಸಾಯಿ ಅವರ ಸ್ಕ್ರೀನ್ ಪ್ಲೇ, ಬಾಲಿವುಡ್ ಸಂಗೀತ ನಿರ್ದೇಶಕ ಸಂಜಯ್ ಚೌಧರಿ ಅವರ ಹಿನ್ನೆಲೆ ಸಂಗೀತ, ಕ್ಯಾಮೆರ ವರ್ಕ್ ಅದ್ಭುತವಾಗಿ ಮೂಡಿಬಂದಿದೆ. ಚಿತ್ರದ ಲೊಕೇಶನ್ ಕೂಡ ನೋಡಗರ ಮನಸೆಳೆಯುವಂತಿದೆ. ಬಹುತೇಕ ಭಾಗ ಮಡಿಕೇರಿ ಸುತ್ತಮುತ್ತಾ ಚಿತ್ರೀಕರಣ ಆಗಿದೆ. ಕ್ರೈಂ ಮತ್ತು ಆಕ್ಷನ್ ಗಳ ನಡುವೆಯೂ ಅದ್ಭುತವಾದ ಲೊಕೇಶನ್ ಕಣ್ಮನ ಸೆಳೆಯುವಂತಿದೆ. ಒಟ್ಟಾರೇ, ಹೇಳುವುದಾರೇ ಉದ್ಘರ್ಷ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳನ್ನ ಇಷ್ಟ ಪಡುವರಿಗೆ ಇದು ಒಳ್ಳೆಯ ಪ್ಯಾಕೇಜ್. ಆದ್ರೆ, ರೆಗ್ಯುಲರ್ ಆಡಿಯೆನ್ಸ್ ಗೆ ಇದು ಓಕೆ ನೋಡಬಹುದು ಎನ್ನುವಂತಹ ಚಿತ್ರ.

    English summary
    Sunil kumar desai directional Udgarsha movie has released all over india in four language today (march 22nd). the movie get mixed response.
    Friday, March 22, 2019, 18:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X