twitter
    For Quick Alerts
    ALLOW NOTIFICATIONS  
    For Daily Alerts

    'ವಾಸ್ತುಪ್ರಕಾರ' ಪತ್ರಿಕೆಗಳ ವಿಮರ್ಶಾ ನೋಟ

    By Harshitha
    |

    ಯೋಗರಾಜ್ ಭಟ್ ನಿರ್ದೇಶನದ 'ವಾಸ್ತುಪ್ರಕಾರ' ರಿಲೀಸ್ ಆಗಿದೆ. ವಾಸ್ತು ಶಾಸ್ತ್ರವನ್ನ ನಂಬುವವರು, ನಂಬದೇ ಇರುವವರು, ಎಲ್ಲರೂ ಚಿತ್ರವನ್ನ ನೋಡಲೇಬೇಕು ಅಂತ ಭಟ್ರು ಪರಿಪರಿಯಾಗಿ ಕೇಳಿಕೊಂಡಿದ್ದರು.

    ನಿನ್ನೆಯಷ್ಟೇ ರಿಲೀಸ್ ಆಗಿರುವ 'ವಾಸ್ತುಪ್ರಕಾರ' ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಕೆಲವರಿಗೆ ಸಿನಿಮಾ ಇಷ್ಟವಾಗಿದ್ದರೆ, ಇನ್ನೂ ಕೆಲವರಿಗೆ 'ವಾಸ್ತು'ವಿನಲ್ಲಿ ದೋಷವೇ ಹೆಚ್ಚಾಗಿ ಕಾಣುತ್ತಿದೆ. [ಚಿತ್ರ ವಿಮರ್ಶೆ: ಯೋಗರಾಜ್ ಭಟ್ ರ 'ಸರಳ' ವಾಸ್ತು]

    ಕಥೆಗಿಂತ ಸಂಭಾಷಣೆಗೆ ಹೆಚ್ಚು ಒತ್ತು ಕೊಡುವ ಭಟ್ರು, ತಮ್ಮ ಹಳೇ ಸ್ಟೈಲ್ ನಲ್ಲೇ ಸಿನಿಮಾ ಮಾಡಿದ್ದಾರಾ..? ವಿಮರ್ಶಕರು 'ವಾಸ್ತುಪ್ರಕಾರ' ಚಿತ್ರದ ಬಗ್ಗೆ ಹೇಳುವುದೇನು? 'ವಾಸ್ತುಪ್ರಕಾರ' ಚಿತ್ರದ ಬಗ್ಗೆ ಪ್ರಸಿದ್ಧ ದಿನಪತ್ರಿಕೆಗಳು ನೀಡಿರುವ ವಿಮರ್ಶೆಗಳು ಇಲ್ಲಿದೆ. ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

     ವಾಸ್ತವಕ್ಕೆ ಹತ್ತಿರ ವಾಸ್ತು ಪ್ರಕಾರ - ವಿಜಯ ಕರ್ನಾಟಕ

    ವಾಸ್ತವಕ್ಕೆ ಹತ್ತಿರ ವಾಸ್ತು ಪ್ರಕಾರ - ವಿಜಯ ಕರ್ನಾಟಕ

    ಪ್ರೇಮ ಕತೆಗಳ ಸುತ್ತಲೇ ಸಿನಿಮಾಗಳು ಗಿರಕಿ ಹೊಡೆಯುತ್ತಿರುವ ಈ ದಿನಗಳಲ್ಲಿ 'ವಾಸ್ತು'ವನ್ನು ಮುಖ್ಯ ವಿಷಯವಾಗಿಟ್ಟುಕೊಂಡು, ವಾಸ್ತವಕ್ಕೆ ಹತ್ತಿರವಾದ ಚಿತ್ರ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಯೋಗರಾಜ್ ಭಟ್. ಜಗ್ಗೇಶ್-ರಕ್ಷಿತ್ ಜುಗಲ್ಬಂದಿ ಸಮಪ್ರಮಾಣದಲ್ಲಿ ಇಲ್ಲ. ಜಗ್ಗೇಶ್ ಹಾಸ್ಯ ಪರವಾಗಿಲ್ಲ. ಆದರೆ, ರಕ್ಷಿತ್ ಅಲ್ಲಲ್ಲಿ ಮಂಕಾಗಿ ನಟಿಸಿದ್ದಾರೆ. ಅರ್ಥವಾಗದ ಭಾಷೆಯಲ್ಲಿ ಜಗ್ಗೇಶ್ ಮತ್ತು ಪ್ರಶಾಂತ್ ಸಿದ್ಧಿ ಸಂಭಾಷಣೆ ಸೂಪರ್. ರಕ್ಷಿತ್ ಮುಂದೆ ನಾಯಕಿ ಐಶಾನಿ ತೀರಾ ಚಿಕ್ಕ ಹುಡುಗಿಯಂತೆ ಕಾಣಿಸುತ್ತಾರೆ. - ಪ್ರವೀಣ್ ಚಂದ್ರ (ಮುಂದೆ ಓದಿ)

    ವಾಸ್ತುಗಳು, ಮಾತುಗಳು, ತಲೆಚಿಟ್ಟು ಹಿಡಿಸುವ ಚಿತ್ರಗಳು - ಕನ್ನಡಪ್ರಭ

    ವಾಸ್ತುಗಳು, ಮಾತುಗಳು, ತಲೆಚಿಟ್ಟು ಹಿಡಿಸುವ ಚಿತ್ರಗಳು - ಕನ್ನಡಪ್ರಭ

    ಸಿನಿಮಾದಲ್ಲಿ ಕಥೆ ಹೇಳುವ ಅವಶ್ಯಕತೆ ಇಲ್ಲ ಎನ್ನುವ ಒಂದು ವಿಚಿತ್ರ ಪರಿಕಲ್ಪನೆ ಹೊಂದಿರುವ ನಿರ್ದೇಶಕ ಯೋಗರಾಜ್ ಭಟ್ ಮತ್ತೆ ಯಾವುದೇ ಕಥೆ ಇಲ್ಲದೆ, 'ವಾಸ್ತು' ಎಂಬ ಪದದ ಹಿಂದೆ ಬಿದ್ದು, ವಿದೇಶದಲ್ಲಿ ಚಿತ್ರೀಕರಣ ನಡೆಸಿ ಹತ್ತು ಹಲವು ಸತ್ವವಿಲ್ಲದ ಘಟನೆಗಳನ್ನು ಸೇರಿಸಿ ವಾಸ್ತುಪ್ರಕಾರ ಹೆಣೆದಿದ್ದಾರೆ. ಜಗ್ಗೇಶ್ ಅವರ ವಿಪರೀತ ಮಾತು, ಅವವೇ ಹಳಸು ಜೋಕುಗಳು ಬೇಸರ ತರಿಸುತ್ತವೆ. ರಕ್ಷಿತ್ ಶೆಟ್ಟಿ ಅವರ ನಟನೆ ಎಲ್ಲೂ ರುಚಿಸುವುದಿಲ್ಲ. ಮುಖ ಭಾವನೆಯೇ ಬದಲಾಗದೆ, ಈ ಹಿಂದೆ ಯೋಗರಾಜ್ ಭಟ್ ಸಿನೆಮಾಗಳಲ್ಲಿ ದಿಗಂತ್ ನಟಿಸುತ್ತಿದ್ದ ಪಾತ್ರವನ್ನು ನಟಿಸಲು ಪ್ರಯತ್ನಿಸಿ ದಯನೀಯವಾಗಿ ಸೋತಿದ್ದಾರೆ. - ಗುರುಪ್ರಸಾದ್ (ಮುಂದೆ ಓದಿ)

    'But' confused priciples - Deccan Chronicle

    'But' confused priciples - Deccan Chronicle

    Though the credit goes to the director for picking up a sensitive issue such as vaastu, but the outcome of it as an entertaining package is disappointing and is certainly not his best ever! Vaastu Prakara lacks Yogaraj's usual magic. - Shashiprasad.S.M (ಮುಂದೆ ಓದಿ)

    Vaastu Prakaara - Bangalore Mirror

    Vaastu Prakaara - Bangalore Mirror

    With Vaastu Prakara, Bhat breaks his style of film-making that focused excessively on characterisation and hardly on the story. The film keeps a steady pace without trying anything specific. The middle portion of the film could have done with the introduction of a couple of new characters. It is dialogue-heavy like any other Bhat film. - Shyam Prasad S (ಮುಂದೆ ಓದಿ)

    English summary
    Yogaraj Bhat directorial Jaggesh and Rakshit Shetty starrer Kannada movie 'Vaastu Prakaara' has received mixed reviews from the critics. Here is the collection of reviews by Top News Papers of Karnataka.
    Friday, April 3, 2015, 13:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X