twitter
    For Quick Alerts
    ALLOW NOTIFICATIONS  
    For Daily Alerts

    "ಟಕ್ ಟಕ್ ಟಕ್ ಸಸ್ಪೆನ್ಸ್ ಥ್ರಿಲ್ಲರ್ ತಪ್ಪದೇ ನೋಡಿ

    By ಅಮರನಾಥ್ ವಿ.ಬಿ
    |

    "ಟಕ್ ಟಕ್ ಟಕ್" ಒಂದು ಅದ್ಭುತ ಸಸ್ಪೆನ್ಸ್, ಥ್ರಿಲ್ಲರ್ ಕಿರುಚಿತ್ರವು ಆರಂಭದಿಂದ ಕೊನೆಯವರೆಗೂ ಕೂತೂಹಲ ಕೆರಳಿಸುತ್ತೆ. ಅಲ್ಲಲ್ಲಿ "ಪೇದೆಯ" ಹುಬ್ಬಳ್ಳಿ ಸೊಗಡಿನ ಭಾಷೆಯ ಪಂಚಿಂಗ್ ಡೈಲಾಗ್ ಗಳು ನೋಡುಗರನ್ನ ನಗೆಗಡಲಲ್ಲಿ ತೇಲಿಸುತ್ತವೆ. ಹಾಗೆಯೆ ಕ್ಲೈಮಾಕ್ಸ್ ತುಂಬಾ ಭಯಗೊಳಿಸುತ್ತೆ. ಚಿತ್ರದ ಹಿನ್ನಲೆ ಸಂಗೀತ ಹಾಗೂ ಛಾಯಾಗ್ರಹಣ ತುಂಬಾ ಚೆನ್ನಾಗಿದೆ. ಚಿತ್ರದಲ್ಲಿಯ ಎಲ್ಲಾ ಪಾತ್ರಧಾರಿಗಳು ಅದ್ಭುತವಾಗಿ ನಟಿಸಿದ್ದಾರೆ.

    "ಭರತ್ ಬಾಳೆಮನೆ ಅವರೆ ತುಂಬಾ ಚೆನ್ನಾಗಿ ನಿರ್ದೇಶಿಸಿದ್ದೀರಿ. ನೀವು ಕಥೆ ಹೇಳುವ ರೀತಿ ಹಾಗೂ ಸೃಜನಶೀಲತೆ ತುಂಬಾ ಇಷ್ಟವಾಯಿತು. ನಮ್ಮ ಕನ್ನಡ ಚಿತ್ರರಂಗಕ್ಕೆ ನಿಮ್ಮಂತಹ ಪ್ರತಿಭಾವಂತ ನಿರ್ದೇಶಕರ ಅವಶ್ಯಕತೆ ಇದೆ. ಮತ್ತೊಮ್ಮೆ ನಿಮ್ಮೆಲ್ಲಾ ಚಿತ್ರ ತಂಡಕ್ಕೆ ಶುಭವಾಗಲಿ." [ವಿಭಿನ್ನ ಕಿರುಚಿತ್ರದ ಟೀಸರ್ ಔಟ್]

    ಹೀಗೆ ಹೇಳಿದವರು "ಟಕ್ ಟಕ್ ಟಕ್" ಚಿತ್ರತಂಡದವರಲ್ಲ! ಅದನ್ನೋಡಿದ ಪ್ರೇಕ್ಷಕ ಖುಷಿಯಿಂದ ತಂಡಕ್ಕೆ ಹೇಳಿದ್ದು. ಪಾತ್ರವರ್ಗ ಹಾಗೂ ಸಿಬ್ಬಂದಿಯೇ ದುಡ್ಡುಹಾಕಿ ಮಾಡಿರುವ ಈ ಕಿರುಚಿತ್ರಕ್ಕೆ ಇಂತಹದೊಂದು ಮಾತು ಇಡೀ ತಂಡಕ್ಕೆ ಮತ್ತಷ್ಟು ಇಂತಹ ಪ್ರಯತ್ನ ಮಾಡಲು ಉತ್ತೇಜನೀಯ. [ಆಸರೆ ಕನ್ನಡ ಕಿರು ಚಿತ್ರ ನೋಡಿ]

    ಇಪ್ಪತ್ಮೂರು ನಿಮಿಷಗಳ ಹೊಸ ಕನ್ನಡ ಹಾರರ್/ಥ್ರಿಲ್ಲರ್ ಈ ಕಿರುಚಿತ್ರ. ಪ್ರತಿಷ್ಠಿತ ಐಟಿ ಕಂಪೆನಿಗಳ ಉದ್ಯೋಗಿಗಳಿಂದ ಮೂಡಿಬಂದಿರುವ ಈ ಕಿರುಚಿತ್ರ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡುವುದು ಖಂಡಿತ. ಇಲ್ಲಿ ಬಂದಿರುವ ಪರಿಕಲ್ಪನೆ ಹೊಸರೀತಿಯದು.

    ಶಿವು ಎಂಬ ಹುಡುಗನ ಬರ್ಥ್ ಡೇ ಪಾರ್ಟಿ ದಿನ

    ಶಿವು ಎಂಬ ಹುಡುಗನ ಬರ್ಥ್ ಡೇ ಪಾರ್ಟಿ ದಿನ

    ಈ ಕಥೆ ತನ್ನ ಹುಟ್ಟುಹಬ್ಬದ ಪಾರ್ಟಿನಂತರ ಕಾಣೆಯಾದ ಶಿವು ಎಂಬ ಹುಡುಗನ ಬಗ್ಗೆ. ಅವನ ಕೊಲೆಯಾಯ್ತೋ? ಕಿಡ್ನಾಪ್ ಆಯ್ತೋ? ಗೊತ್ತಿಲ್ಲ. ಈ ಕೇಸಿನಲ್ಲಿ ಅವನ ಸ್ನೇಹಿತರೆಲ್ಲಾ ಶಂಕಿತರು...ಹಾಗಾದ್ರೆ ಅಪರಾಧಿ ಯಾರು? ನಿಗೂಢ ಶಬ್ದಗಳನ್ನು ಕೇಳಿಸಿಕೊಳ್ಳುತ್ತಿದ್ದ ಅವನ ಒಬ್ಬ ಸ್ನೇಹಿತ ಗಣಿಯಿಂದ ಶಿವು ಕಳೆದುಹೋದ ಬಗ್ಗೆ ಸುಳಿವು ಸಿಗಬಹುದೆ? ಇವೆಲ್ಲಾ ಗೊತ್ತಾಗಬೇಕೆಂದರೆ ಚಿತ್ರವನ್ನು ತಪ್ಪದೇ ನೋಡಿ

    ಸಸ್ಪೆನ್ಸ್ ದೃಶ್ಯಗಳನ್ನು ಚೆನ್ನಾಗಿ ಸೆರೆಹಿಡಿಯಲಾಗಿದೆ

    ಸಸ್ಪೆನ್ಸ್ ದೃಶ್ಯಗಳನ್ನು ಚೆನ್ನಾಗಿ ಸೆರೆಹಿಡಿಯಲಾಗಿದೆ

    ಈ ಕಿರುಚಿತ್ರ ನೋಡುಗರನ್ನು ಶುರುವಿನಿಂದ ಕೊನೆತನಕ ಸೀಟಿನ ತುದಿಯಲ್ಲಿ ಕೂರಿಸುವುರಲ್ಲಿ ಸಂದೇಹವಿಲ್ಲ. ಸಸ್ಪೆನ್ಸ್ ದೃಶ್ಯಗಳನ್ನು ಚೆನ್ನಾಗಿ ಸೆರೆಹಿಡಿಯಲಾಗಿದ್ದು, ಜೊತೆಗೆ ಭಾವಕ್ಕೆ ತಕ್ಕಂತೆ ಸಂಗೀತ ಉತ್ತಮವಾಗಿದೆ. ಈ ಚಿತ್ರ ನಿಮ್ಮ ಎದೆಬಡಿತ ಜಾಸ್ತಿ ಮಾಡುವುದು ಖಂಡಿತ. ಪಾತ್ರಕ್ಕೆ ತಕ್ಕಂತೆ ಭಾಷೆ ಬಳಕೆ ಹಾಗೂ ವಸ್ತ್ರ ವಿನ್ಯಾಸದತ್ತ ಕೂಡಾ ಗಮನ ಹರಿಸಿದ್ದಾರೆ. ಬೆಳಕು ವಿನ್ಯಾಸ ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಿ ಬರಬಹುದಿತ್ತು.

    ನಿರ್ದೇಶನ: ಭರತ್ ಬಾಳೆಮನೆ

    ನಿರ್ದೇಶನ: ಭರತ್ ಬಾಳೆಮನೆ

    ನಿರ್ದೇಶನ: ಭರತ್ ಬಾಳೆಮನೆ, ಛಾಯಾಗ್ರಹಣ: ಗುರುರಾಜ್ ಬಾಗ್ಲಿ, ಕಾರ್ಯಕಾರಿ ನಿರ್ಮಾಪಕ: ದೀಪಿತ್ ಬಿ.ಆರ್,
    ಕಲೆ: ಅನುಪಮ ಎಂ,
    ಪಾತ್ರ ಪೋಷಣೆ: ರತ್ನದೀಪ್ ರಾಯ್, ಸಂಕಲನ: ರಾಘವೇಂದ್ರ ಮತ್ತು ಭರತ್ ಬಾಳೆಮನೆ,
    ಪ್ರೊಡಕ್ಷನ್ ಮ್ಯಾನೇಜರ್ಸ್: ಅಮರನಾಥ್ ವಿ.ಬಿ, ದೀಪಿತ್ ಬಿ.ಆರ್,
    ವಿ.ಎಫ್.ಎಕ್ಸ್ (ದೃಶ್ಯ ವೈಭವಗಳು):ಸಂದೀಪ್ ಕೆ.ಎಸ್,
    ಸಂಗೀತ: ಅಜಿತ್ ಪದ್ಮನಾಭನ್

    ಉತ್ಸಾಹ ತೋರುವ ಟೆಕ್ಕಿಗಳೇ ಪಾತ್ರಧಾರಿಗಳು

    ಉತ್ಸಾಹ ತೋರುವ ಟೆಕ್ಕಿಗಳೇ ಪಾತ್ರಧಾರಿಗಳು

    ಪಾತ್ರವರ್ಗ: ಪ್ರಜ್ವಲ್, ಅನುಷಾ ಮೂರ್ತಿ, ಆಶಾ ಸಿ, ರಾಜ, ಪವನ ದೀಕ್ಷಿತ್, ಅರ್ಜುನ್ ಮತ್ತು ಪ್ರಶಾಂತ್ - ಎಲ್ಲಾ ಸಿನಿಮಾ ಎಂದರೆ ಉತ್ಸಾಹ ತೋರುವ ಟೆಕ್ಕಿಗಳು. ಬಿಡುಗಡೆಯಾದ ಒಂದೇ ವಾರದ ಒಳಗೆ 5500 ವೀಕ್ಷಣೆಗಳನ್ನು ಯೂಟ್ಯೂಬ್ ನಲ್ಲಿ ಕಂಡಿದೆ.

    ಸತತ ಮೂವತ್ತಾರು ಘಂಟೆಗಳ ಶೂಟಿಂಗ್

    ಸತತ ಮೂವತ್ತಾರು ಘಂಟೆಗಳ ಶೂಟಿಂಗ್

    "ಡಾಟ್ ಮೂವೀ ಟಾಕೀಸ್'ನ ವಾರ್ಷಿಕ ಕಾರ್ಯಾಗಾರದಲ್ಲಿ ಬೈಟೂ ಕಾಫೀ ಫಿಲ್ಮ್ಸ್'ನ ಜೊತೆ ಸೇರಿ. 20 ಜನರ ತಂಡ ರಚಿಸಿ. ಒಂದೇ ಸಾಲಿನ ಕಥೆಯಿಂದ 25 ನಿಮಿಷಗಳ ಚಿತ್ರಕಥೆಯನ್ನ ಸಿದ್ಧ ಪಡಿಸಿ. ಆಡಿಷನ್ಸ್ ಮಾಡಿ, ಮೂರು ವಾರಗಳ ಕಠಿಣ ಪೂರ್ವಾಭ್ಯಾಸ, ಸತತ ಮೂವತ್ತಾರು ಘಂಟೆಗಳ ಶೂಟಿಂಗ್ ಮತ್ತು ನಾಲ್ಕು ತಿಂಗಳುಗಳ ಪೋಸ್ಟ್-ಪ್ರೊಡಕ್ಷನ್. ಈ ಕಿರುಚಿತ್ರ ಟೀಮ್ ವರ್ಕ್ ಮತ್ತು ಸಿನಿಮಾ ಪ್ಯಾಶನ್'ಗೆ ಒಂದು ಉತ್ತಮ ಉದಾಹರಣೆ ಎನ್ನಬಹುದು

    ಟಕ್ ಟಕ್ ಟಕ್ ನೋಡಿ

    ಇತ್ತೀಚಿಗೆ ಏಪ್ರಿಲ್-12ರಂದು ಕೆ.ವಿ ಸುಬ್ಬಣ್ಣ ಆಪ್ತಸಮೂಹದಲ್ಲಿ ಪ್ರದರ್ಶನಗೊಂಡಿತು. ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಕೂಡ ಪಡೆದಿದೆ.
    http://www.by2coffeefilms.com/
    https://www.facebook.com/ByTwoCoffeeFilms

    English summary
    Here is a review on Kannada Short Film 'Tak Tak Tak' made as part of Dot Mov Talkies Cinema Workshop 2014 in association with by2coffeefilms. Tak Tak Tak is suspense thriller film
    Friday, April 24, 2015, 17:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X