twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ : ಪಕ್ಕಾ ಕಮರ್ಷಿಯಲ್ ಪ್ರೀತಿ ಪಾಠ ಹೇಳಿದ ವಾಸು

    By Pavithra
    |

    ಕಮರ್ಷಿಯಲ್ ಸಿನಿಮಾ ಇರುತ್ತೆ. ಅದೇ ರೀತಿ ಕಮರ್ಷಿಯಲ್ ಹಾಡು ಇರುತ್ತೆ. ಫುಲ್ ಕಮರ್ಷಿಯಲ್ ಆಗಿಯೇ ಯೋಚನೆ ಮಾಡುವವರು ಇರ್ತಾರೆ. ಆದರೆ ಕಮರ್ಷಿಯಲ್ ಆಗಿ ಪ್ರೀತಿ ಮಾಡೋರು ಇರ್ತಾರಾ? ಕಮರ್ಷಿಯಲ್ ಆಗಿ ಫ್ಯಾಮಿಲಿಯನ್ನ ಪ್ರೀತಿಸುವವರು ಇರ್ತಾರಾ? ಅವಳು ಪಕ್ಕಾ ಕಮರ್ಷಿಯಲ್, ಇವನು ಪಕ್ಕಾ ಮಾಸ್..ಇವರಿಬ್ಬರ ಸ್ಟೋರಿ ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾ..ಪೂರ್ತಿ ವಿಮರ್ಶೆ ಇಲ್ಲಿದೆ ಮುಂದೆ ಓದಿ

    Rating:
    3.5/5
    Star Cast: ಅನಿಶ್, ನಿಶ್ವಿಕಾ ನಾಯ್ಡು, ಅರುಣಾ ಬಾಲರಾಜ್, ಮಂಜುನಾಥ್ ಹೆಗ್ಡೆ, ಜೀವನ್
    Director: ಅಜಿತ್ ವಾಸನ್ ಉಗ್ಗೀನ

    ಸಿಂಪಲ್ ಕಥೆ, ಕಮರ್ಷಿಯಲ್ ಟಚ್

    ಸಿಂಪಲ್ ಕಥೆ, ಕಮರ್ಷಿಯಲ್ ಟಚ್

    ನಾಯಕ ವಾಸು ಪಕ್ಕಾ ಮಾಸ್, ಬಾಕ್ಸರ್ ಆಗಿರೋ ವಾಸು ಇದ್ದ ಕಡೆ ಎಲ್ಲರೂ ಸೇಫ್ ಅನ್ನೋದು ಹೀರೋ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ. ಮಗನಿಗೆ ಯಾವುದೇ ಸಮಸ್ಯೆ ಇಲ್ಲದೆ ಸಾಕುವ ಅಪ್ಪ, ಮುದ್ದು ಮಾಡೋ ಅಮ್ಮ. ತಮ್ಮ ಮಾಡಿದ್ದೇ ಸರಿ ಎನ್ನುವ ಅಕ್ಕ. ಇವರೆಲ್ಲರ ಜೊತೆಗೆ ಸದಾ ಎಲ್ಲಾ ಕೆಲಸದಲ್ಲಿಯೂ ಸಾಥ್ ಕೊಡುವ ಸ್ನೇಹಿತರು. ಕಷ್ಟಕ್ಕೆ ವಿರುದ್ಧವಾಗಿ ಬದುಕುತ್ತಿದ್ದ ವಾಸು ಲೈಫ್ ನಲ್ಲಿ ನಾಯಕಿ ಮಹಾಲಕ್ಷ್ಮಿ ಆಗಮನ ಸಿನಿಮಾದ ಸ್ಟೋರಿಗೆ ಫುಲ್ ಟ್ವಿಸ್ಟ್ ಕೊಡುತ್ತೆ. ಇದು 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾ ಕಥಾಹಂದರ.

    ನ್ಯಾಚುರಲ್ ಆಗಿದೆ ಅಭಿನಯ

    ನ್ಯಾಚುರಲ್ ಆಗಿದೆ ಅಭಿನಯ

    ನಾಯಕ ನಟ ಅನಿಶ್ ತೇಜೇಶ್ವರ್ ಅಭಿನಯ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈಗಾಗಲೇ ಸಾಮಾನ್ಯರ ಜೀವನಕ್ಕೆ ಹತ್ತಿರ ಎನ್ನಿಸುವ ಕಥೆಗಳಲ್ಲಿ ನಟಿಸಿ ಅಭ್ಯಾಸ ಇರುವ ಅನಿಶ್, ವಾಸು ಪಾತ್ರವನ್ನು ಸುಲಭವಾಗಿ ನಿಭಾಯಿಸಿದ್ದಾರೆ. ಇನ್ನು ನಾಯಕಿಯಾಗಿ ಕಾಣಿಸಿಕೊಂಡಿರುವ ನಿಶ್ವಿಕಾ ನಾಯ್ಡು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

    ಖಳನಾಯಕರ ಅಭಿನಯಕ್ಕೆ ಮೆಚ್ಚುಗೆ

    ಖಳನಾಯಕರ ಅಭಿನಯಕ್ಕೆ ಮೆಚ್ಚುಗೆ

    ಚಿತ್ರದಲ್ಲಿ ನಾಯಕಿ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ದೀಪಕ್ ಶೆಟ್ಟಿ ಅಭಿನಯ ಚೆನ್ನಾಗಿದೆ. ನಾಯಕನನ್ನು ಒಂದು ಬಾರಿ ಆದರೂ ಸೋಲಿಸಬೇಕು ಎನ್ನು ಹಠ ಮಾಡುವ ಪಾತ್ರದಲ್ಲಿ ನಿರಂಜನ್ ಅಭಿನಯ ಚೆನ್ನಾಗಿದ್ದು ಅಭಿನಯಕ್ಕೂ ಅವಕಾಶ ಸಿಕ್ಕಿದೆ.

    ಮನಮುಟ್ಟುತ್ತೆ ಪೋಷಕರ ಅಭಿನಯ

    ಮನಮುಟ್ಟುತ್ತೆ ಪೋಷಕರ ಅಭಿನಯ

    ಇನ್ನು ಪೋಷಕರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅರುಣಾ ಬಾಲ ರಾಜ್, ಮಂಜುನಾಥ್ ಹೆಗ್ಡೆ ಅಭಿನಯ ವೀಕ್ಷಕರಿಗೆ ಇಷ್ಟವಾಗುತ್ತೆ, ಅನಿಶ್ ಮತ್ತು ಮಂಜುನಾಥ್ ಹೆಗ್ಡೆ ನಡೆಯುವ ಸಂಭಾಷಣೆಗಳು ನೋಡುಗರ ಕಣ್ಣಲ್ಲಿ ನೀರು ತರಿಸುತ್ತೆ.

    ಇನ್ನು ಬೇಕಿತ್ತು ಹೊಸತನ

    ಇನ್ನು ಬೇಕಿತ್ತು ಹೊಸತನ

    'ಅಕಿರ' ಸಿನಿಮಾ ನಂತರ ಅನಿಶ್ ಅಭಿನಯ ಮಾಡುತ್ತಿರುವ ಚಿತ್ರ 'ವಾಸು ನಾನ್ ಪಕ್ಕಾ ಕಮರ್ಷಿಯಲ್'. ಕಮರ್ಷಿಯಲ್ ಆಗಿ ಚಿತ್ರ ಚೆನ್ನಾಗಿದ್ದು ಕ್ಯಾಮೆರಾ ಮತ್ತು ಸಂಗೀತ ವಿಭಾಗಕ್ಕೆ ಚಿತ್ರತಂಡ ಮತ್ತಷ್ಟು ಗಮನ ಕೊಡಬೇಕಿತ್ತು ಎನ್ನಿಸುತ್ತದೆ. ಕೆಲ ಹಾಡುಗಳು ಚಿತ್ರಮಂದಿರದಿಂದ ಹೊರ ಬರುವ ಮುಂಚೆಯೇ ಮರೆತು ಹೋಗುತ್ತೆ.

    ಸಿನಿಮಾ ಬಗೆಗಿನ ಅಭಿಪ್ರಾಯ

    ಸಿನಿಮಾ ಬಗೆಗಿನ ಅಭಿಪ್ರಾಯ

    ಟೀಸರ್ ಮತ್ತು ಹಾಡುಗಳಿಂದ ಸುದ್ದಿ ಮಾಡಿದ್ದ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾ ನಿಜಕ್ಕೂ ಕಮರ್ಷಿಯಲ್ ಸಿನಿಮಾ. ಒಂದಿಷ್ಟು ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಕಂಪ್ಲೀಟ್ ಕಮರ್ಷಿಯಲ್ ಆಗಿರುವ ಸಿನಿಮಾ ಬೇಕು ಎನ್ನುವವರಿಗೆ ವಾಸು ಹೇಳಿ ಮಾಡಿಸಿದ ಚಿತ್ರ.

    English summary
    Read about Kannada actor Anish Tejeshwar 'Vasu Nan Pakka commercial' film review .
    Friday, August 3, 2018, 16:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X