'Kannappa' Movie X Review; 'ಕಣ್ಣಪ್ಪ' ಫಸ್ಟ್ ಹಾಫ್ ಚೆನ್ನಾಗಿಲ್ಲ; ಸೆಕೆಂಡ್ ಆಫ್ ಓಕೆ
ಮಂಚು ವಿಷ್ಣು ನಟನೆಯ 'ಕಣ್ಣಪ್ಪ' ಸಿನಿಮಾ ತೆರೆಗೆ ಬಂದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡಕ್ಕೂ ಡಬ್ ಆಗಿ ಸಿನಿಮಾ ಬಿಡುಗಡೆಯಾಗಿದೆ. ಈಗಾಗಲೇ ಬೆಳ್ಳಂ ಬೆಳಗ್ಗೆ ಕೆಲವರು ಸಿನಿಮಾ ನೋಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಪ್ರಭಾಸ್, ಅಕ್ಷಯ್ ಕುಮಾರ್ ಹಾಗೂ ಮೋಹಲ್ ಲಾಲ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದು ಚಿತ್ರದ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿತ್ತು. ಪ್ರಭಾಸ್ ಕಾರಣಕ್ಕೆ ಸಿನಿಮಾ ನೋಡುತ್ತೇವೆ ಎಂದು ಹೇಳಿದವರು ಇದ್ದಾರೆ. ಮೋಹನ್ ಬಾಬು ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅಂತೂ ಇಂತೂ ಸಿನಿಮಾ ತೆರೆಗೆ ಬಂದಿದೆ.

'ಬೇಡರ ಕಣ್ಣಪ್ಪ' ಕಥೆ ಆಧರಿಸಿ ಈ ಸಿನಿಮಾ ಬಂದಿದೆ. ಬೇಡನಾಗಿದ್ದ ದಿಣ್ಣ ಬಳಿಕ ಶಿವನ ಪರಮಭಕ್ತ ಕಣ್ಣಪ್ಪನಾಗುವ ಕಥೆ ಚಿತ್ರದಲ್ಲಿದೆ. ಪೌರಾಣಿಕ ಕತೆ ಆಧರಿಸಿದ ಸಿನಿಮಾ ಹೇಗಿದೆ? ಸಿನಿರಸಿಕರು ಏನಂದ್ರು? ಟ್ವಿಟ್ಟರ್ ರಿವ್ಯೂ ಮುಂದೆ ಓದಿ.
ಆವರೇಜ್ ಸಿನಿಮಾ
"ಮೊದಲಾರ್ಧ ಚೆನ್ನಾಗಿದೆ, ಸೆಕೆಂಡ್ ಹಾಫ್‌ನಲ್ಲಿ ಸಾಕಷ್ಟು ಎಮೋಷನಲ್ ಅಂಶಗಳು ಇದ್ದರೂ ಆವರೇಜ್ ಎನಿಸುತ್ತದೆ. ಪ್ರಭಾಸ್ ಅತಿಥಿ ಪಾತ್ರ ಪ್ರಭಾವ ಬೀರುತ್ತದೆ. ಗಟ್ಟಿ ವಿಷಯದೊಂದಿಗೆ ಕ್ಲೈಮ್ಯಾಕ್ಸ್ ಕೊನೆಗೊಳ್ಳುತ್ತದೆ. ಎಮೋಷನ್ ಅಲ್ಲಲ್ಲಿ ವರ್ಕ್ ಆದರೂ ಇನ್ನುಳಿದಂತೆ ಪೇಲವ ಎನಿಸಿಬಿಡುತ್ತದೆ" ಎಂದು ಸಿನಿರಸಿಕರೊಬ್ಬರು ಟ್ವೀಟ್ ಮಾಡಿದ್ದಾರೆ.
ವಿಷ್ಣು ನಟನೆ ಸೂಪರ್
ಮತ್ತೊಬ್ಬರು ಟ್ವೀಟ್ ಮಾಡಿ "ಮೊದಲಾರ್ಧ ಆವರೇಜ್..ದ್ವಿತಿಯಾರ್ಧ ಬ್ಲಾಕ್‌ಬಸ್ಟರ್.. ಕೊನೆಯ 20 ನಿಮಿಷಗಳಲ್ಲಿ ವಿಷ್ಣು ಅಭಿನಯ ಚೆನ್ನಾಗಿದೆ. ಬಿಜಿಎಂ ಕೂಡ ಸೂಪರ್. ಪ್ರಭಾಸ್ ರುದ್ರನಾಗಿ ಕಾಣಿಸಿಕೊಂಡಿದ್ದು, ಚಿತ್ರವು ಭಕ್ತಿಯ ಸನ್ನಿವೇಶದಿಂದ ತುಂಬಿದೆ, ಹೃದಯಸ್ಪರ್ಶಿ ಪರಾಕಾಷ್ಠೆಯಲ್ಲಿ ಕೊನೆಗೊಳ್ಳುತ್ತದೆ.
"ಶಿವಭಕ್ತರು ನೋಡ್ಲೇಬೇಕು
'ಕಣ್ಣಪ್ಪ' ಒಂದು ದಿವ್ಯ ಸಿನಿಮಾ ಪ್ರಯಾಣ. ವಿಷ್ಣು ಎಮೋಷನಲ್ ಪಾತ್ರ ಚೆನ್ನಾಗಿದೆ. ಶಿವನಾಗಿ ಅಕ್ಷಯ್‌ಕುಮಾರ್ ಕಮಾಲ್ ಮಾಡಿದ್ದಾರೆ. ಪ್ರಭಾಸ್ ಹಾಗೂ ಮೋಹನ್ ಲಾಲ್ ಅತಿಥಿ ಪಾತ್ರಗಳಲ್ಲಿ ಗಮನ ಸೆಳೆಯುತ್ತಾರೆ. ಕೊನೆಯ 40 ನಿಮಿಷ ಶುದ್ಧ ಭಕ್ತಿ ಮತ್ತು ಮನೋಲ್ಲಾಸ. ಶಿವಭಕ್ತರು ಸಿನಿಮಾ ನೋಡಲೇಬೇಕು ಎನ್ನುವುದು ಮತ್ತೊಬ್ಬರ ಅಭಿಪ್ರಾಯ.
ಬೇಸರ ತರಿಸುವಂತಿದೆ
"ಕಣ್ಣಪ್ಪ' ಒಂದು ಪೌರಾಣಿಕ ನಾಟಕವಾಗಿದ್ದು, ಹಳೆಯ ಹಾಗೂ ನೀರಸ ಚಿತ್ರಕಥೆಯಿಂದಾಗಿ ಆರಂಭದಿಂದ ಕೊನೆಯವರೆಗೆ ಬೇಸರ ತರಿಸುತ್ತದೆ. ಕಥಾಹಂದರದ ಕಲ್ಪನೆ ಪುಸ್ತಕದಲ್ಲಿ ಭಾವನಾತ್ಮಕವಾಗಿರಬಹುದು. ಆದರೆ ಪರದೆ ಮೇಲೆ ತಂದಾಗ ಅದು ನಿರ್ಜೀವ ಮತ್ತು ಸಿಲ್ಲಿ ಎನಿಸುತ್ತದೆ" ಎಂದು ನೆಟ್ಟಿಗರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ನ್ಯೂಜಿಲೆಂಡ್‌ನಲ್ಲಿ ಚಿತ್ರೀಕರಣ ತಪ್ಪಾಯ್ತು
ಮೊದಲಾರ್ಧ ಬಹಳ ಕೆಟ್ಟದಾಗಿದೆ. ಕೊನೆಯ 20 ನಿಮಿಷ ಪರವಾಗಿಲ್ಲ. 'ಕಣ್ಣಪ್ಪ'ನ ಕಥೆಯನ್ನು 3 ಗಂಟೆಗಳವರೆಗೆ ವಿಸ್ತರಿಸುವ ಪ್ರಯತ್ನದಲ್ಲಿ, ಮೇಕರ್ಸ್ ಚಿತ್ರಕಥೆಯನ್ನು ಅನಗತ್ಯ ಹಾಡುಗಳು ಮತ್ತು ದೃಶ್ಯಗಳಿಂದ ತುಂಬಿಸಿದ್ದಾರೆ. ಅಷ್ಟೇನು ಚೆನ್ನಾಗಿ ಸಿನಿಮಾ ಇಲ್ಲ. ವಿಷ್ಣು ಮಂಚು ಪ್ರಾಮಾಣಿಕರು. ಪ್ರಭಾಸ್ ಎಂಟ್ರಿ ಬಳಿಕ ಮಜಾ ಇದೆ. ಆದರೆ ಸಿನಿಮಾ ಬೇಸರ ಮೂಡಿಸುತ್ತದೆ. ಇಡೀ ಟಿವಿ ಧಾರಾವಾಹಿಯಂತೆಯೇ ಭಾಸವಾಗುತ್ತದೆ. ಕೆಲ ಒಳ್ಳೆ ಅಂಶಗಳಿದ್ದರೂ ಅದು ಪ್ರಯೋಜನವಾಗುವುದಿಲ್ಲ. ನ್ಯೂಜಿಲೆಂಡ್‌ನಲ್ಲಿ ಚಿತ್ರೀಕರಣ ದೊಡ್ಡ ತಪ್ಪು" ಎಂದು ಇನ್ನೊಬ್ಬರು ಅಸಮಾಧಾನ ಹೊರ ಹಾಕಿದ್ದಾರೆ.
ನಿರೀಕ್ಷೆ ತಲುಪಲಿಲ್ಲ
"ಸಿನಿಮಾ ನಿರೀಕ್ಷೆಯನ್ನು ತಲುಪಲು ವಿಫಲವಾದರೂ, ವಾರಾಂತ್ಯದಲ್ಲಿ ಫ್ಯಾಮಿಲಿ ಆಡಿಯನ್ಸ್‌ಗೆ ಒಳ್ಳೆ ಸಿನಿಮಾ ಆಗುತ್ತದೆ. ಕೆಲವು ಭಾಗಗಳಲ್ಲಿ VFX ಕೆಟ್ಟದಾಗಿದೆ. ಮೊದಲಾರ್ಧ ಕೆಟ್ಟದಾಗಿದೆ.. ಆದರೆ ಕ್ಲೈಮ್ಯಾಕ್ಸ್‌ನಿಂದ ಸಾಧಾರಣ ಸಿನಿಮಾ ಎನಿಸಿಕೊಳ್ಳುತ್ತದೆ" ಎಂದು ಮಗದೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.


Click it and Unblock the Notifications











