Kantara- 1 Twitter Review: ಪಕ್ಕಾ ಬ್ಲಾಕ್‌ಬಸ್ಟರ್; ರಿಷಬ್ ಶೆಟ್ಟಿಗೆ ಮತ್ತೆ ರಾಷ್ಟ್ರಪ್ರಶಸ್ತಿ
ರಿಷಬ್ ಶೆಟ್ಟಿ ಮತ್ತವರ ತಂಡ ಮತ್ತೊಮ್ಮೆ ಗೆದ್ದಿದೆ. 'ಕಾಂತಾರ- 1' ಸಿನಿಮಾ ದೊಡ್ಡಮಟ್ಟದಲ್ಲಿ ಗೆಲುವು ಸುಳಿವು ಸಿಕ್ಕಿದೆ. ಪ್ರೀಮಿಯರ್ ಶೋಗಳಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಸಿನಿರಸಿಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಒಟ್ಟಾರೆ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ.
'ಕಾಂತಾರ- 1' ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇತ್ತು. ಅದನ್ನು ಉಳಿಸಿಕೊಂಡಿದ್ದಾರೆ ರಿಷಬ್ ಶೆಟ್ಟಿ. ನಿರ್ದೇಶನ, ನಟನೆ ಎರಡರಲ್ಲೂ ಮತ್ತೊಮ್ಮೆ ಗೆದ್ದಿದ್ದಾರೆ. ಮತ್ತೊಂದು ರಾಷ್ಟ್ರಪ್ರಶಸ್ತಿ ಗ್ಯಾರಂಟಿ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ದಸರಾ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬಂದಿದ್ದು 1000 ಕೋಟಿ ರೂ. ಕಲೆಕ್ಷನ್ ಮಾಡುವ ಲೆಕ್ಕಾಚಾರ ಶುರುವಾಗಿದೆ.

ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮಹತ್ವಾಕಾಂಕ್ಷೆಯ ಸಿನಿಮಾ ಇದು. ಹಾಗಾಗಿ ಯಾವುದಕ್ಕೂ ರಾಜಿಯಾಗದೇ ಸಿನಿಮಾ ಕಟ್ಟಿಕೊಡುವ ಪ್ರಯತ್ನ ನಡೆದಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಕಥೆ, ಚಿತ್ರಕಥೆ ಹೇಗಿರುತ್ತದೆ? ಎನ್ನುವ ಕುತೂಹಲ ಇತ್ತು. ಎಲ್ಲದಕ್ಕೂ ಈಗ ಉತ್ತರ ಸಿಕ್ಕಿದೆ. ತೆರೆಮೇಲೆ ಸಿನಿಮಾ ಮ್ಯಾಜಿಕ್ ಕ್ರಿಯೇಟ್ ಮಾಡಿದೆ. ಸಿನಿಮಾ ನೋಡಿದವರು ಏನಂತಾರೆ ಮುಂದೆ ಓದಿ.
ಅಭಿಮಾನಿಗಳು ನೋಡ್ಲೇಬೇಕು
"ಕಾಂತಾರ ಅಧ್ಯಾಯ- 1 ಮೂಲಕ ರಿಷಬ್ ಶೆಟ್ಟಿ ಮತ್ತೊಂದು ಜಾನಪದ ಕಲಾಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. ಭೂತ ಕೋಲ, ಅದ್ಭುತ ದೃಶ್ಯಗಳು, ಮೈ ರೋಮಾಂಚನಗೊಳಿಸುವ ಹಿನ್ನೆಲೆ ಸಂಗೀತ, ಜಬರ್ಸಸ್ತ್ ಕ್ಲೈಮ್ಯಾಕ್ಸ್. ನಿಧಾನವಾಗಿ ಶುರುವಾಗುವ ಸಿನಿಮಾ ಕೊನೆಗೆ ಬೆಂಕಿ.. ರೇಟಿಂಗ್ 3.5/5..ಅಭಿಮಾನಿಗಳು ನೋಡಲೇಬೇಕು" ಎಂದು ಪವನ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಕೊನೆ 30 ನಿಮಿಷ ಅದ್ಭುತ
ಫಸ್ಟ್ ಹಾಫ್ ಹಾಗೂ ಇಂಟರ್‌ವಲ್ ಬ್ಲಾಕ್ ಚೆನ್ನಾಗಿದೆ. ರಿಷಬ್ ಶೆಟ್ಟಿಯನ್ನು ಹುಲಿ ಉಳಿಸುವ ಸನ್ನಿವೇಶ ಸೊಗಸಾಗಿದೆ. ಅಲ್ಲಿ ಇಲ್ಲಿ ಹಾಸ್ಯದ ಸನ್ನಿವೇಶಗಳ ನಗಿಸುತ್ತವೆ. ಕೆಲವೆಡೆ ಸಿನಿಮಾ ಸ್ಲೋ ಅನ್ನಿಸುತ್ತದೆ. ಸೆಕೆಂಡ್ ಹಾಫ್ ಬ್ಲಾಕ್‌ಬಸ್ಟರ್. ಕೊನೆಯ 30 ನಿಮಿಷ ಅದ್ಭುತ. ರಿಷಬ್ ಶೆಟ್ಟಿ ಶಿವನಾಗಿ ಬದಲಾಗುವ ದೃಶ್ಯ ಸೂಪರ್. ರುಕ್ಮಿಣಿ ವಸಂತ್ ಬೆಂಕಿ ನಟನೆ. ಒಟ್ಟಾರೆ ಬ್ಲಾಕ್‌ಬಸ್ಟರ್. ಹೊಂಬಾಳೆ ಸಂಸ್ಥೆಗೆ ಅಭಿನಂದನೆ. ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಖಚಿತ ಎಂದು ಮತ್ತೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ರುಕ್ಮಿಣಿ ಸರ್‌ಪ್ರೈಸ್ ಪ್ಯಾಕೇಜ್
ಕಾಂತಾರ- 1 ಭಾರತೀಯ ಚಿತ್ರರಂಗದ ಹೆಮ್ಮೆ. ಇದು ಅದ್ಭುತ ಸಿನಿಮಾ ಅನುಭೂತಿ. ರಿಷಬ್ ಶೆಟ್ಟಿಗೆ ಬಹುಪರಾಕ್, ರುಕ್ಮಿಣಿ ಸರ್‌ಪ್ರೈಸ್ ಪ್ಯಾಕೇಜ್, ಹೊಂಬಾಳೆ ಸರಣಿ ಸಿನಿಮಾಗೆ ಒಳ್ಳೆ ತಂಡವನ್ನು ಹೊಂದಿದ್ದು ಸಿನಿಮಾ ದೊಡ್ಡದಾಗಿ ಗೆಲ್ಲುತ್ತದೆ ಎಂದು ಮಾರುತಿ ಎಂಬುವವರು ಟ್ವೀಟ್ ಮಾಡಿದ್ದಾರೆ.
ಡಿವೈನ್ ಸಿನಿಮಾ
ಕಾಂತಾರ ಅಧ್ಯಾಯ- 1 ಡಿವೈನ್ ಸಿನಿಮಾ, ಮೈ ಜುಮ್ ಎನಿಸುವ ಅನುಭವ. ಪ್ರತಿ ಫ್ರೇಮ್ ಅನ್ನು ರಿಷಬ್ ಶೆಟ್ಟಿ ಆವರಿಸಿಕೊಂಡಿದ್ದಾರೆ. ಆ ಬದಲಾವಣೆ ಹಾಗೂ ಕ್ಲೈಮ್ಯಾಕ್ಸ್ ಚಿತ್ರಮಂದಿಗಳಲ್ಲಿ ಆರ್ಭಟ. ರುಕ್ಮಿಣಿ ಅಚ್ಚರಿ ಮೂಡಿಸುತ್ತಾರೆ. ಅಜನೀಶ್ ಲೋಕನಾಥ್ ಚಿತ್ರದ ಆತ್ಮ. ಇದು ಬರೀ ಸಿನಿಮಾ ಅಲ್ಲ. ಶುದ್ಧ ಭಕ್ತಿಯ ಪ್ರಯಾಣ" ಎಂದು ತಮಿಳು ಚಿತ್ರ ವಿಮರ್ಶಕ ರಮೇಶ್ ಬಾಲಾ ಬರೆದುಕೊಂಡಿದ್ದಾರೆ.
ರಿಷಬ್ ಶೆಟ್ಟಿ ರುದ್ರ ತಾಂಡವ
'ಕಾಂತಾರ - 1' ಮೇಳೈಸುವ ಸೂಪ್ತತೆ, ಆಕ್ಷನ್, ಮೇಕಿಂಗ್ ಅದ್ಭುತ. ರಿಷಬ್ ಶೆಟ್ಟಿ ರುದ್ರತಾಂಡವ. ಕನಕವತಿ ಸೂಜಿ-ಮಲ್ಲಿಗೆ, ಬಹುತೇಕ ಪಾತ್ರವರ್ಗ ಗಟ್ಟಿತನ, ಅತೀಂದ್ರಿಯ ಶಕ್ತಿ ಕಂಡವನಿಗೆ, ಅನುಭವಿಸುವ ದೇಹಕ್ಕಷ್ಟೇ" ಎನ್ನುವುದು ಮತ್ತೊಬ್ಬರ ಅಭಿಪ್ರಾಯ.
ಚಿತ್ರಮಂದಿರಗಳಲ್ಲೇ ನೋಡಿ
ಇದು ತಾಂತ್ರಿಕವಾಗಿ ಶ್ರೀಮಂತ ಸಿನಿಮಾ. ನಿರ್ಮಾಣ ಮತ್ತು VFX ಅಸಾಧಾರಣ. ಟೈಗರ್ ಸೀಕ್ವೆನ್ಸ್, ರಿಷಬ್ ಶೆಟ್ಟಿ ರೂಪಾಂತರವಾಗುವುದು ಹಾಗೂ ಕ್ಲೈಮ್ಯಾಕ್ಸ್‌ನ 30 ನಿಮಿಷ ಚಿತ್ರಮಂದಿರದಲ್ಲೇ ನೋಡುವಂಥದ್ದು. ಹಾಸ್ಯದ ಸನ್ನಿವೇಶಗಳು ಚೆನ್ನಾಗಿದೆ. ಕನ್ನಡದಲ್ಲಿ ನೋಡಿದರೆ ಇನ್ನು ಇಷ್ಟವಾಗುತ್ತದೆ. ರುಕ್ಮಿಣಿ ಮತ್ತು ಜಯರಾಮ್‌ಗೆ ಒಳ್ಳೆ ಪಾತ್ರಗಳು ಸಿಕ್ಕಿದೆ. ರಿಷಬ್ ಶೆಟ್ಟಿ ನಿರ್ದೇಶಕರಾಗಿ ಅದ್ಭುತ. ನಟನೆಯಲ್ಲಿ ತಮ್ಮ ಆತ್ಮ, ರಕ್ತ ಪಣಕ್ಕಿಟ್ಟಿದ್ದಾರೆ. ಮೊದಲಾರ್ಧದಲ್ಲಿ ಸಣ್ಣ ಪುಟ್ಟ ಲ್ಯಾಗ್ ಬಿಟ್ಟರೆ ಬೇರೆ ಏನೂ ಸಮಸ್ಯೆ ಇಲ್ಲ. ಅಜನೀಶ್ ಸಂಗೀತ ಚಿತ್ರದ ಹೈಲೆಟ್. ಕ್ಲೈಮ್ಯಾಕ್ಸ್ ಅಂತೂ ಸೂಪರ್. ಒಟ್ಟಾರೆಯಾಗಿ ಒಳ್ಳೆ ಸಿನಿಮಾ. ಚಿತ್ರಮಂದಿರಗಳಲ್ಲೇ ನೋಡಿ ಎಂದು ಅಮೃತ ಭಾರತಿ ಎಂಬುವವರು ಬರೆದುಕೊಂಡಿದ್ದಾರೆ.


Click it and Unblock the Notifications











