For Quick Alerts
  ALLOW NOTIFICATIONS  
  For Daily Alerts

  ಹೊಸ 'ಕರಿಯ'ನ ಖದರ್ ನೋಡಿ ವಿಮರ್ಶಕರು ಏನು ಹೇಳುತ್ತಾರೆ..?

  By Naveen
  |

  ನಿನ್ನೆ ಬಿಡುಗಡೆಯಾದ 'ಕರಿಯ 2' ಸಿನಿಮಾವನ್ನು ಪ್ರೇಕ್ಷಕರ ನೋಡಿ ಇಷ್ಟ ಪಟ್ಟಿದ್ದಾರೆ. ಸಿಕ್ಕಾಪಟ್ಟೆ ಆಕ್ಷನ್ ಜೊತೆಗೆ ಲವ್, ಸೆಂಟಿಮೆಂಟ್, ಕಾಮಿಡಿ ಇರುವ ಈ ಚಿತ್ರ ಒಂದು ಉತ್ತಮ ಕಮರ್ಷಿಯಲ್ ಸಿನಿಮಾವಾಗಿದೆ.

  'ಕರಿಯ 2' ಸಿನಿಮಾ ಹಳೆಯ 'ಕರಿಯ' ಚಿತ್ರದ ಟೈಟಲ್ ಗೆ ನ್ಯಾಯ ಒದಗಿಸಿದೆ. ಸಾಮಾನ್ಯ ಪ್ರೇಕ್ಷಕನನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕಥೆ ಮಾಡಿ, ಅದನ್ನು ಅವರಿಗೆ ಇಷ್ಟ ಆಗುವ ಶೈಲಿಯಲ್ಲಿ ನಿರ್ದೇಶಕರು ಹೇಳಿದ್ದಾರೆ.

  ಅಂದಹಾಗೆ, 'ಕರಿಯ 2' ಬಗ್ಗೆ ಕನ್ನಡದ ಜನಪ್ರಿಯ ಪತ್ರಿಕೆಗಳಲ್ಲಿ ಬಂದಿರುವ ವಿಮರ್ಶೆ ಮುಂದಿದೆ ಓದಿ...

  ಫ್ಲ್ಯಾಶ್​ ಬ್ಯಾಕ್​ನಲ್ಲೇ ಮಿನುಗುವ ಕರಿಯ - ವಿಜಯವಾಣಿ

  ಫ್ಲ್ಯಾಶ್​ ಬ್ಯಾಕ್​ನಲ್ಲೇ ಮಿನುಗುವ ಕರಿಯ - ವಿಜಯವಾಣಿ

  ಭೂಗತಲೋಕ ಮತ್ತು ಲವ್​ಸ್ಟೋರಿಯನ್ನು ಕೇಂದ್ರವಾಗಿಟ್ಟುಕೊಂಡು ಬಂದ ಹತ್ತಾರು ಸಿನಿಮಾಗಳನ್ನು ನೋಡಿರುವ ಪ್ರೇಕ್ಷಕರಿಗೆ ಈ ಕರಿಯನ ಕಥೆಯಲ್ಲಿ ಹೆಚ್ಚೇನೂ ಹೊಸತನ ಕಾಣಿಸದು. ಆದರೆ ಫ್ಲ್ಯಾಶ್​ ಬ್ಯಾಕ್ ತಂತ್ರವನ್ನು ಚೆನ್ನಾಗಿ ಬಳಸಿಕೊಂಡಿರುವ ಕಾರಣ ಇಡೀ ಚಿತ್ರಕ್ಕೆ ಹೊಸ ಮೆರುಗು ಸಿಕ್ಕಿದೆ. ನೆನಪು ಕಳೆದುಕೊಂಡ ಮಾಜಿ ರೌಡಿಯಾಗಿ ಸಂತೋಷ್ ಅಭಿನಯ ಚೆನ್ನಾಗಿದೆ. ಆಕ್ಷನ್ ವಿಚಾರದಲ್ಲೂ ಅವರ ಶ್ರಮ ಎದ್ದು ಕಾಣುತ್ತದೆ. ನಾಯಕ ಮತ್ತು ನಾಯಕಿಯಷ್ಟೇ ಪ್ರಾಮುಖ್ಯತೆಯನ್ನು ಪಡೆದಿದ್ದಾರೆ. ತೀರಾ ಗಂಭೀರವಾಗಿ ನೋಡಿದರೆ ಅನೇಕ ಕಡೆ ಲಾಜಿಕ್ ಕಣ್ಮರೆ ಆಗಿರುವುದು ಗೊತ್ತಾಗುತ್ತದೆ. ಆದರೆ ಮಾಸ್ ಅಂಶಗಳ ಮುಂದೆ ಅದನ್ನು ಮಾಫಿ ಮಾಡಬಹುದು. - ಮದನ್ ಕುಮಾರ್, ಸಾಗರ

  'ಕರಿಯ 2' ಮಿನಿ ವಿಮರ್ಶೆ : ವಿಜಯ ಕರ್ನಾಟಕ

  'ಕರಿಯ 2' ಮಿನಿ ವಿಮರ್ಶೆ : ವಿಜಯ ಕರ್ನಾಟಕ

  ಮಯೂರಿ ಮತ್ತು ಸಂತೋಷ್‌ ಕಾಂಬಿನೇಷನ್ ನ 'ಕರಿಯಾ 2' ಸಿನಿಮಾ ಮಾಸ್‌ ಅಂಶಗಳನ್ನು ಹೊಂದಿರುವ ಈ ಚಿತ್ರ. ಇದರಲ್ಲೊಂದು ಕ್ಯೂಟ್ ಲವ್‌ ಸ್ಟೋರಿ ಕೂಡ ಇದೆ. ಪ್ರೀತಿಗಾಗಿ ಕಥಾ ನಾಯಕ ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾ ಅನ್ನುವುದೇ ಚಿತ್ರದ ಕತೆ. ಗಣಪ ಸಿನಿಮಾದ ನಾಯಕ ಸಂತೋಷ್‌ ಬಾಲರಾಜ್‌ ಈ ಸಿನಿಮಾದಲ್ಲಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪರಮೇಶ್ ಮತ್ತು ಪ್ರೇಮ್ ಚಿತ್ರದ ನಿರ್ಮಾಪಕರು. ಪ್ರಭು ಶ್ರೀನಿವಾಸ್ ಅವರ ನಿರ್ದೇಶನವಿದೆ. ಚಿತ್ರಕ್ಕೆ ಕೃಪಾ ಕರಣ್ ಸಂಗೀತ ನೀಡಿದ್ದು, ಶ್ರೀನಿವಾಸ್ ದೇವಸ್ವಮ್ ಅವರ ಸಿನಿಮಾಟೋಗ್ರಫಿ ಇದೆ. ತೆಲುಗು ಚಿತ್ರರಂಗದಿಂದ ಅಜಯ್ ಘೋಷ್‌ ಖಳ ನಟನಾಗಿ ಕಾಣಿಸಿಕೊಂಡಿದ್ದರೆ, ಸಾಧು ಕೋಕಿಲ ತಾರಾಗಣದಲ್ಲಿದ್ದಾರೆ.

  ಮಾರಾಮಾರಿ ಭಗ್ನಪ್ರೇಮ ಮಯೂರಿ ಪ್ರೇಮಧ್ಯಾನ - ಕನ್ನಡ ಪ್ರಭ

  ಮಾರಾಮಾರಿ ಭಗ್ನಪ್ರೇಮ ಮಯೂರಿ ಪ್ರೇಮಧ್ಯಾನ - ಕನ್ನಡ ಪ್ರಭ

  ನಮ್ಮಲ್ಲಿ ರೌಡಿಸಂ ಸಿನಿಮಾಗಳ ಪರಂಪರೆಯೇ ಇದೆ. 'ಕರಿಯ' ಆ ಲಿಸ್ಟ್ ಗೆ ಸೇರ್ಪಡೆ. ರೌಡಿಸಂ ಸಿನಿಮಾ ಅಂದಾಕ್ಷಣ ಅಲ್ಲೊಬ್ಬ ತರುಣ ಇರಬೇಕು. ಅವನೇ ಕರಿಯ. ನಿರ್ದೇಶಕ ಪ್ರಭ್ರು ಶ್ರೀನಿವಾಸ್ ಕರಿಯನ ತಬ್ಬಲಿತನ, ಒಂಟಿತನ, ರೋಷ, ಆವೇಶ, ಹುಚ್ಚು, ಪ್ರೇಮ, ತ್ಯಾಗ, ಎಲ್ಲವನ್ನೂ ಒಂದೇ ವೇಗದಲ್ಲಿ ಹೇಳುತ್ತಾರೆ. ಕರಿಯ ಒಬ್ಬ ಒಳ್ಳೆಯ ಹುಡುಗ, ಅವನು ಕಾಡುತ್ತಾನೆ ಮತ್ತು ಅಯ್ಯೋ ಅನ್ನಿಸುತ್ತಾನೆ. - ರಾಜೇಶ್ ಶೆಟ್ಟಿ

  'ಕರಿಯ 2' ಸಿನಿಮಾ ವೀಕ್ಷಿಸಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್

  Kariya 2 Movie Review - ದಿ ಟೈಮ್ಸ್ ಆಫ್ ಇಂಡಿಯಾ

  Kariya 2 Movie Review - ದಿ ಟೈಮ್ಸ್ ಆಫ್ ಇಂಡಿಯಾ

  Prabhu Srinivas and Santhosh Balaraj made a decent first outing together with the crowd pleasing action film Ganapa. This time around, the take on another such action subject, which also has ample dose of romance and family sentiment. With the A certificate and the opening fight sequence, we know there is a bloody tale lying ahead of us (all pun intended). But, how different is the film from the regular underworld stories that one sees is the question.

  Kariya 2 has certain parts that remind one of different films, but the filmmaker has pieced together an interesting tale of love and revenge. Santhosh and Mayuri have performed well, though. The film rests mainly on their shoulders and they try to salvage it through their performances. But will this be enough to sail the film through to the masses, is to be seen. The action scenes, though, can be a treat for people who like their gory fight sequences. Try it if that's your cuppa.

  English summary
  'Kariya 2' movie has received mixed response from the critics. Here is the collection of 'Kariya 2' reviews by Top News Papers of Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X