Karuppu (X) Twitter Review ; ಚಿತ್ರಮಂದಿರಗಳಲ್ಲಿ ಸೂರ್ಯ ಅಬ್ಬರ ; ಪೈಸಾ ವಸೂಲಾ ? ಹೆಂಗೈತಂತೆ 'ಕರುಪ್ಪು' ?
ಸೂರ್ಯ ಬಹುದೊಡ್ಡ ಗೆಲುವನ್ನು ಕಂಡು ಹತ್ ಹತ್ರ ಒಂದು ದಶಕವಾಗುತ್ತ ಬಂದಿದೆ. ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಬದುಕಿನ ಹಾದಿಯನ್ನು ಆಧರಿಸಿ ರೂಪಗೊಂಡ ಸಿಂಘಂ 3.. ಸೂರರೈ ಪೊಟ್ರು.. ಜೈ ಭೀಮ್.. ಚಿತ್ರ ಹೊರತು ಪಡಿಸಿದರೆ ''24''.. ''ತಾನಾ ಸೇಂದ ಕೂಟ್ಟಂ''.. ''ಎನ್.ಜಿ.ಕೆ.''.. ''ಕಾಪ್ಪನ್''.. ''ಎದರ್ಕ್ಕುಂ ತುಣಿಂದವನ್''.. ''ಕಂಗುವ''.. ಸೇರಿದಂತೆ ಸೂರ್ಯ ಅವರ ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗಿವೆ.
ಈ ಕಾರಣಕ್ಕೆ ಸೂರ್ಯ ಅವರ ಪಾಲಿಗೆ ತುಂಬಾನೇ ಮಹತ್ವವಾದ ಚಿತ್ರ ''ಕರುಪ್ಪು''. ಆರಂಭದಿಂದಲೂ ಒಂದಿಲ್ಲೊಂದು ಅಡೆ ತಡೆಗಳನ್ನು ಎದುರಿಸಿಕೊಂಡು ಬಂದ ಈ ಚಿತ್ರ ಇಂದು (ಮೇ 15 ) ಕೊನೆಗೂ ಬಿಡುಗಡೆಯಾಗಿದೆ. ಹಾಗಿದ್ದರೆ ''ಕರುಪ್ಪು'' ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದ ಪ್ರೇಕ್ಷಕರು ಹೇಳಿದ್ದೇನು..? ಈ ಬಾರಿಯಾದರೂ ಸೂರ್ಯ ಗೆಲ್ಲುತ್ತಾರಾ..? ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಪಕ್ಕಾ ಪೈಸಾ ವಸೂಲ್ ಸಿನಿಮಾ
''ಕರುಪ್ಪು'' ಫಸ್ಟ್ ಹಾಫ್ ಸೂಪರ್, ಸೆಕೆಂಡ್ ಹಾಫ್ ಮಾತ್ರ ಪಕ್ಕಾ ಮಾಸ್.ಇಂಟರ್ವಲ್ ಸೀನ್ ಅಂತೂ ಅಲ್ಟಿಮೇಟ್..ಕ್ಲೈಮ್ಯಾಕ್ಸ್ ಮಾತ್ರ ಚಿಂದಿ ಗುರು. ನಮ್ ಹಳೇ ಸೂರ್ಯ ಈಸ್ ಬ್ಯಾಕ್. ಏನ್ ಎನರ್ಜಿ ಯಪ್ಪಾ. ಆರ್ ಜೆ ಬಾಲಾಜಿ ಬರವಣಿಗೆ ಬೆಂಕಿ. ಸೂರ್ಯ ಫ್ಯಾನ್ಸ್‌ಗೆ ಈ ಚಿತ್ರವಂತೂ ಹಬ್ಬ.
ಸಿನಿಮಾದಲ್ಲಿ ಸಖತ್ ಸರ್‌ಪ್ರೈಸ್ ಕೊಡೋ ಸೀನ್‌ಗಳಿವೆ, ಒಂದೊಂದು ರೆಫರೆನ್ಸ್ ಕೂಡ ಮೈ ಜುಂ ಎನ್ನಿಸುತ್ತೆ. ಸಾಯಿ ಅಭ್ಯಂಕರ್ ಬಿಜಿಎಂ ಕ್ರೇಜಿಯಾಗಿದೆ.. ಆ 'ವೀರಪ್ಪ' ಸಾಂಗ್ ಮಾತ್ರ ಬೇರೆ ಲೆವೆಲ್ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ವ್ಯಕ್ತಿಯೊಬ್ಬರು ಚಿತ್ರಕ್ಕೆ 4.25 ಸ್ಟಾರ್ ಗಳನ್ನು ನೀಡಿದ್ದಾರೆ.
ಸಖತ್ ಇಂಪ್ರೆಸಿವ್ ಆಗಿದೆ ಸಿನಿಮಾ
ಚಿತ್ರ ಪ್ರಾರಂಭವಾದ ಘಳಿಗೆಯಿಂದಲೇ ಕಥೆಯ ಕುರಿತು ಕ್ಲ್ಯಾರಿಟಿ ಸಿಗುತ್ತೆ.ಇಂದ್ರನ್ಸ್ ಮತ್ತು ಅನಘಾ ಸಖತ್ ಆಗಿ ನಟಿಸಿದ್ದಾರೆ.ಆರ್ ಜೆ ಬಾಲಾಜಿ ನಿರ್ದೇಶನ ಮತ್ತು ನಟನೆ ಎರಡರಲ್ಲಿಯೂ ತುಂಬಾ ಒಳ್ಳೆ ಕೆಲಸ ಮಾಡಿದ್ದಾರೆ. ಸಾಯಿ ಅಭ್ಯಂಕರ್ ಹಿನ್ನೆಲೆ ಸಂಗೀತ ತುಂಬಾ ಕಡೆ ತುಂಬಾ ಚೆನ್ನಾಗಿ ವರ್ಕ್ ಆಗಿದೆ.
ನಾಂಗಾ ನಾಲು ಪೆರು ಹಾಡಿನಲ್ಲಿ ಕೆಲವು ಬೀಟ್ಸ್ ಮಾತ್ರ ಕಿಕ್ ಕೊಡುತ್ತವೆ. ''ಕರುಪ್ಪು'' ಸಿನಿಮಾದ ಅನಿಮೇಷನ್ ಕೆಲಸಗಳು ಕೆಲವು ಕಡೆ ಚೆನ್ನಾಗಿ ಬಂದಿವೆ. ಇನ್ನು ಜಿಕೆ ವಿಷ್ಣು ಅವರ ಸಿನಿಮಾಟೋಗ್ರಫಿ ಕೂಡ ಸೊಗಸಾಗಿದೆ. ಕರುಪ್ಪುಸ್ವಾಮಿ ಎಂಟ್ರಿ ಮಾತ್ರ ಲೆವೆಲ್ ಇದೆ, ಸಖತ್ ಇಂಪ್ರೆಸಿವ್ ಆಗಿದೆ ಅದ್ರಲ್ಲೂ ಯಾರು ಊಹಿಸದ ಒಂದು ಸರ್‌ಪ್ರೈಸ್ ಟ್ವಿಸ್ಟ್ ಇಲ್ಲಿದೆ.
ಮೊದಲಾರ್ಧ ಎಮೋಷನಲ್, ದ್ವಿತೀಯಾರ್ಧ ಪಕ್ಕಾ ಮಾಸ್
ಟೀಸರ್ ಅಥವಾ ಟ್ರೈಲರ್‌ನಲ್ಲಿ ತೋರಿಸದ ಕೆಲವು ಸರ್‌ಪ್ರೈಸ್ 'ಫ್ಯಾಂಟಸಿ' ವಿಷಯಗಳು ಸಿನಿಮಾದಲ್ಲಿ ಸಖತ್ ಆಗಿ ವರ್ಕ್ ಆಗಿವೆ. ಅದರಲ್ಲೂ ಸೆಕೆಂಡ್ ಹಾಫ್‌ನಲ್ಲಿ ಬರೋ ಒಂದು ಸೀನ್ ಅಂತೂ ಥಿಯೇಟರ್‌ನಲ್ಲಿ ಅಕ್ಷರಶಃ ಬೆಂಕಿ ಹಚ್ಚುತ್ತೆ. ಸತತ 2 ನಿಮಿಷಗಳ ಕಾಲ ಶಿಳ್ಳೆ-ಚಪ್ಪಾಳೆ ನಿಲ್ಲೋದೇ ಇಲ್ಲ.
ಸಿನಿಮಾ ಉದ್ದಕ್ಕೂ ಸಖತ್ ಥಿಯೇಟರ್ ಮೋಮೆಂಟ್ಸ್‌ಗಳಿವೆ. ತಾಂತ್ರಿಕವಾಗಿ ಸಿನಿಮಾ ಸಿನೆಮಾ ಸಖತ್ ರಿಚ್ ಆಗಿದೆ . ಕ್ಯಾಮೆರಾ ವರ್ಕ್ ಸೂಪರ್, ಇನ್ನು ಸಾಯಿ ಅವರ ಬಿಜಿಎಂ ಮಾತ್ರ ಪಕ್ಕಾ 'ರುದ್ರತಾಂಡವ'. ನಾವು ಸೂರ್ಯ ಅವರಿಂದ ಏನನ್ನು ನಿರೀಕ್ಷಿಸಿದ್ವೋ ಅದೇ ಸಿಕ್ಕಿದೆ. ಪೀಕ್ ಕಮರ್ಷಿಯಲ್ ಸಿನಿಮಾ. ಅರ್ ಜೆ ಬಾಲಾಜಿ.. ಕ್ಲೈಮ್ಯಾಕ್ಸ್.. ಎಲ್ಲವೂ ಮಸ್ತ್! ಆದ್ರೆ ತ್ರಿಶಾ ಪಾತ್ರ ಇನ್ನು ಸ್ವಲ್ಪ ಚೆನ್ನಾಗಿರಬಹುದಿತ್ತು. ಇಲ್ಲಿ ಲಾಜಿಕ್ ಅಥವಾ ಕ್ಲಾಸ್ ಸಿನೆಮಾ ಅಂತ ಹುಡುಕಬೇಡಿ. ಇದು ಕೇವಲ ಥಿಯೇಟರ್‌ನಲ್ಲಿ ಎಂಜಾಯ್ ಮಾಡೋಕೆ ಮಾಡಿರೋ ಪಕ್ಕಾ ಕಮರ್ಷಿಯಲ್ ಎಂಟರ್ಟೈನರ್. ಒಟ್ಟಾರೆಯಾಗಿ ಹೇಳಬೇಕೆಂದರೆ ಸಖತ್ ತೃಪ್ತಿ ನೀಡುವ ಕಮರ್ಷಿಯಲ್ ಸಿನಿಮಾ, ಮಿಸ್ ಮಾಡ್ದೆ ನೋಡಿ.


Click it and Unblock the Notifications