twitter
    For Quick Alerts
    ALLOW NOTIFICATIONS  
    For Daily Alerts

    Katha Sangama Review: ಎಕ್ಸ್ ಪೆರಿಮೆಂಟ್ ಜೊತೆಗೆ ಎಂಟರ್ಟೈನ್ಮೆಂಟ್

    |

    ರೈನ್ ಬೋ, ಸತ್ಯಕಥಾ ಪ್ರಸಂಗ, ಗಿರ್ ಗಿಟ್ಲೆ, ಉತ್ತರ, ಪಡುವಾರಹಳ್ಳಿ, ಸಾಗರ ಸಂಗಮ, ಲಚ್ಚವ್ವ ಈ ಏಳು ಕಥೆಗಳ ಸಂಗಮವೇ 'ಕಥಾ ಸಂಗಮ'. ಈ ಕಥೆಗಳ ಪೈಕಿ ಕೆಲವು ತುಂಬ ಇಷ್ಟ ಆಗುತ್ತವೆ. ಅದರಲ್ಲಿಯೂ ಕೊನೆಯ ಕಥೆ 'ಲಚ್ಚವ್ವ' ಪ್ರೇಕ್ಷಕರನ್ನು ನಗಿಸುತ್ತಾರೆ, ಭಾವುಕ ಆಗುವಂತೆಯೂ ಮಾಡುತ್ತಾರೆ.

    Rating:
    3.5/5

    ಏಳು ಬೇರೆ ಬೇರೆ ಕಥೆಗಳು

    ಏಳು ಬೇರೆ ಬೇರೆ ಕಥೆಗಳು

    ಅಪ್ಪ, ಅಮ್ಮ, ಮಗಳು.. ಮಗಳಿಗಾಗಿ ಏನನ್ನು ಬೇಕಾದರೂ ಮಾಡುವ ಅಪ್ಪ. ಈ ಚಿಕ್ಕ ಕುಟುಂಬದ ಪ್ರೀತಿ ತುಂಬಿದ ಕಥೆಯೇ 'ರೈನ್ ಬೋ ಲ್ಯಾಂಡ್'. ಸತ್ಯ ಎನ್ನುವ ನಿವೃತ್ತಿಯ ಅಂಚಿನಲ್ಲಿ ಇರುವ ಉದ್ಯೋಗಿಯ ಮನಸಿನ ಕಥೆ 'ಸತ್ಯಕಥಾ ಪ್ರಸಂಗ'. ಜೋಡಿ ಹಕ್ಕಿಗಳ ಸರಸ ವಿರಸದ ಕಥೆ 'ಗಿರ್ ಗಿಟ್ಲೆ'. ಮಾಧ್ಯಮ, ಸೋಷಿಯಲ್ ಮೀಡಿಯಾದ ಸುತ್ತ ಸಾಗುವ ಕಥೆ 'ಉತ್ತರ'. ಕ್ರೌರ್ಯದ ಕಥೆ 'ಪಡುವಾರಹಳ್ಳಿ'. ಭಯ ತುಂಬಿದ ಕಥೆ 'ಸಾಗರ ಸಂಗಮ', ಹಳ್ಳಿಯಿಂದ ಬೆಂಗಳೂರಿಗೆ ಬರುವ ಮುಗ್ಧ ಹೆಂಗಸಿನ ಕಥೆ 'ಲಚ್ಚವ್ವ'. ಈ ರೀತಿಯ ಏಳು ಬೇರೆ ಬೇರೆ ಕಥೆಗಳು ಸಿನಿಮಾದಲ್ಲಿ ಇವೆ.

    ಕಥೆಗೆ, ಪಾತ್ರಕ್ಕೆ ತಕ್ಕ ಕಲಾವಿದರು

    ಕಥೆಗೆ, ಪಾತ್ರಕ್ಕೆ ತಕ್ಕ ಕಲಾವಿದರು

    ಕಿಶೋರ್, ಯಜ್ಞ ಶೆಟ್ಟಿ, ಪ್ರಶಾಶ್ ಬೆಳವಾಡಿ, ಬಾಲಾಜಿ ಮನೋಹರ್, ಅವಿನಾಶ್, ಹರಿ ಸಮಸ್ಠಿ, ಪ್ರಮೋದ್ ಶೆಟ್ಟಿ, ಹರಿಪ್ರಿಯಾ, ರಿಷಭ್ ಶೆಟ್ಟಿ, ಪಾರವ್ವ ಹೀಗೆ ಎಲ್ಲ ಕಲಾವಿದರ ಪಾತ್ರಗಳು ತೆರೆ ಮೇಲೆ ಚೆನ್ನಾಗಿ ಮೂಡಿ ಬಂದಿವೆ. ನಟನೆಯ ವಿಷಯಕ್ಕೆ ಬಂದರೆ, ಯಾರು ಹಿಂದೆ ಬಿದ್ದಿಲ್ಲ. ಎಲ್ಲ ಪಾತ್ರಗಳು ವಿಶೇಷತೆಯಿಂದ ಕೂಡಿವೆ.

    ಬಾಲಿವುಡ್ ನಲ್ಲಿ ಈ ರೀತಿ ಕಿತಾಪತಿಗಳು ಬಹಳ ಆಗ್ತಿವೆ- ರಿಷಭ್ ಬೇಸರಬಾಲಿವುಡ್ ನಲ್ಲಿ ಈ ರೀತಿ ಕಿತಾಪತಿಗಳು ಬಹಳ ಆಗ್ತಿವೆ- ರಿಷಭ್ ಬೇಸರ

    ಪ್ರಯೋಗವನ್ನು ಮೆಚ್ಚಬೇಕು

    ಪ್ರಯೋಗವನ್ನು ಮೆಚ್ಚಬೇಕು

    ಕನ್ನಡದಲ್ಲಿ ಈಗ ಬೇರೆ ಬೇರೆ ರೀತಿಯ ಪ್ರಯೋಗಗಳು ನಡೆಯುತ್ತಿವೆ. ಕಥಾ ಸಂಗಮ ಹಿಂದೆ ಬಂದ ಪ್ರಯತ್ನಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಮಾಡಲಾಗಿದೆ. ಕನ್ನಡದಲ್ಲಿ ಈ ರೀತಿಯ ಸಿನಿಮಾವನ್ನು ನಿರ್ಮಿಸಿ, ಚಿತ್ರಮಂದಿರಕ್ಕೆ ತರಬಹುದು ಎನ್ನುವುದನ್ನು ರಿಷಬ್ ಶೆಟ್ಟಿ ಮತ್ತು ತಂಡ ಸಾಭೀತು ಮಾಡಿದೆ. ಅವರ ಈ ಪ್ರಯತ್ನವನ್ನು ನಿಜಕ್ಕೂ ಮೆಚ್ಚಬೇಕು.

    ಮೊದಲ ಕಥೆ, ಕೊನೆಯ ಕಥೆ

    ಮೊದಲ ಕಥೆ, ಕೊನೆಯ ಕಥೆ

    ಸಿನಿಮಾದ ಆರಂಭ ಆಗುವುದು 'ರೈಬೋ ಲ್ಯಾಂಡ್' ಕಥೆಯಿಂದ. ಈ ಕಥೆಯಲ್ಲಿ ಬರುವ ಅಪ್ಪ, ಮಗಳ ಬಾಂದವ್ಯ ತುಂಬ ಚೆನ್ನಾಗಿದೆ. ಸಿನಿಮಾಗೆ ಕಲರ್ ಫುಲ್ ಆದ ಓಪನಿಂಗ್ ಅನ್ನು ಇದು ನೀಡಿದೆ. ಹಾಗೆಯೇ ಕೊನೆಯ ಕಥೆ ಇಡೀ ಸಿನಿಮಾದ ಹೈಲೈಟ್ ಆಗಿದೆ. ಬೆಂಗಳೂರಿಗೆ ಬರುವ ಹಳ್ಳಿ ಲಚ್ಚವ್ವನ ಕಥೆಯನ್ನು ನಿರ್ದೇಶಕ ಜೈ ಶಂಕರ್ ಚೆನ್ನಾಗಿ ಹೇಳಿದ್ದಾರ.

    ಬಾಲಿವುಡ್ ಗೆ ಕಾಲಿಟ್ಟ ಕನ್ನಡದ ಖ್ಯಾತ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿಬಾಲಿವುಡ್ ಗೆ ಕಾಲಿಟ್ಟ ಕನ್ನಡದ ಖ್ಯಾತ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ

    ಕೆಲವು ಕಡೆ ನಿಧಾನ ಅನಿಸುತ್ತದೆ

    ಕೆಲವು ಕಡೆ ನಿಧಾನ ಅನಿಸುತ್ತದೆ

    ಸಿನಿಮಾದ ಕೆಲವು ಭಾಗ ನಿಧಾನ ಅನಿಸುತ್ತದೆ. ಕೆಲವು ಕಥೆಗಳು ಸರಳವಾಗಿ ಇರುವ ಕಾರಣ ನೋಡುಗವರಿಗೆ ಕುತೂಹಲ ಹುಟ್ಟಿಸುವುದಿಲ್ಲ. 'ಉತ್ತರ' ಎಪಿಸೋಡ್ ಒಂದೇ ಕೋಣೆಯಲ್ಲಿ ನಡೆಯುತ್ತದೆ. ಬರೀ ಮಾತುಗಳೇ ಹೆಚ್ಚು ಇರುವ ಕಾರಣವೋ ಏನೋ ಆ ಭಾಗ ಕೊಂಚ ಬೋರ್ ಎನಿಸುತ್ತದೆ.

    ಆನಂದ ನೀಡುವ ಸಂಗೀತ ಮತ್ತು ದೃಶ್ಯ

    ಆನಂದ ನೀಡುವ ಸಂಗೀತ ಮತ್ತು ದೃಶ್ಯ

    ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿರುವ ರೀತಿ ತುಂಬ ಚೆನ್ನಾಗಿದೆ. ಇಂಪಾದ ಸಂಗೀತ ಒಂದು ಕಡೆ ಆದ್ರೆ, ತಂಪಾದ ದೃಶ್ಯಗಳು ತೆರೆ ಮೇಲೆ ಬರುತ್ತಿರುತ್ತದೆ. ಈ ಎರಡೂ ಪ್ರೇಕ್ಷಕರಿಗೆ ಆನಂದ ನೀಡುತ್ತದೆ. ಏಳು ಸಂಚಿಕೆಗಳ ಮ್ಯೂಸಿಕ್ ಹಾಗೂ ಸಿನಿಮಾಟೋಗ್ರಾಫಿ ಬಗ್ಗೆ ಮಾತನಾಡುವ ಹಾಗಿಲ್ಲ. ಟೆಕ್ನಿಕಲಿ ಸಿನಿಮಾ ಮುಂದಿದೆ.

    ಡಿಸೆಂಬರ್ ನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ನಿರೀಕ್ಷೆಯ ಚಿತ್ರಗಳಿವುಡಿಸೆಂಬರ್ ನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ನಿರೀಕ್ಷೆಯ ಚಿತ್ರಗಳಿವು

    ಸಾಮಾನ್ಯ ಸಿನಿಮಾದ ಹಾಗಿಲ್ಲ

    ಸಾಮಾನ್ಯ ಸಿನಿಮಾದ ಹಾಗಿಲ್ಲ

    'ಕಥಾ ಸಂಗಮ' ಒಂದು ನಾರ್ಮಲ್ ಸಿನಿಮಾ ಅಲ್ಲ. ಡಿಫೆರೆಂಟ್ ಸಿನಿಮಾ ಇಷ್ಟ ಪಡುವವರು, ಬೇರೆ ಬೇರೆ ರೀತಿಯ ಸಿನಿಮಾ ಇಷ್ಟ ಪಡುವವರು ಸಿನಿಮಾ ನೋಡಬಹುದು. ವೆಬ್ ಸೀರಿಸ್, ನೆಟ್ ಫ್ಲಿಕ್ಸ್ ಕಾಲದಲ್ಲಿ ಬಂದ ಇದೊಂದು ಒಳ್ಳೆಯ ಎಕ್ಸ್ ಪೆರಿಮೆಂಟ್ ಎಂದು ಹೇಳಬಹುದು.

    English summary
    Katha Sangama kannada movie review.
    Friday, December 6, 2019, 16:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X