twitter
    For Quick Alerts
    ALLOW NOTIFICATIONS  
    For Daily Alerts

    'ಕಥೆಯೊಂದು ಶುರುವಾಗಿದೆ' ವಿಮರ್ಶೆ: ಇದು ದಿಗಂತ್ ಕಮ್ ಬ್ಯಾಕ್ ಸಿನಿಮಾ

    By Naveen
    |

    'ಕಥೆಯೊಂದು ಶುರುವಾಗಿದೆ' ಸಿನಿಮಾದ ಬಗ್ಗೆ ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಇದೊಂದು ಇದು ದಿಗಂತ್ ಅವರ ಕಮ್ ಬ್ಯಾಕ್ ಸಿನಿಮಾ. ಸರಳ..ತೀರಾ ಸರಳವಾದ ಕಥೆಯನ್ನು ಎಷ್ಟೊಂದು ಚೆನ್ನಾಗಿ ಸಿನಿಮಾದಲ್ಲಿ ತೋರಿಸಿದ್ದಾರೆ. ಪಕ್ಕಾ ಕ್ಲಾಸ್ ಆಗಿರುವ 'ಕಥೆಯೊಂದು ಶುರುವಾಗಿದೆ' ಒಂದು ಒಳ್ಳೆಯ 'ಫೀಲ್ ಗುಡ್ ಸಿನಿಮಾ'.

    Rating:
    4.0/5
    Star Cast: ದಿಗಂತ್​, ಪೂಜಾ ದೇವಾರಿಯಾ, ಬಾಬು ಹಿರಣ್ಣಯ್ಯ
    Director: ಸೆನ್ನಾ ಹೆಗ್ಡೆ

    ಚಿತ್ರ: ಕಥೆಯೊಂದು ಶುರುವಾಗಿದೆ

    ನಿರ್ದೇಶನ: ಸೆನ್ನಾ ಹೆಗ್ಡೆ

    ನಿರ್ಮಾಣ: ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ

    ಸಂಗೀತ: ಸಚಿನ್​ ವಾರಿಯರ್​​​​​

    ಛಾಯಾಗ್ರಹಣ: ಶ್ರೀರಾಜ್​​​ ರವೀಂದ್ರನ್

    ಕಲಾವಿದರು: ದಿಗಂತ್​, ಪೂಜಾ ದೇವಾರಿಯಾ, ಬಾಬು ಹಿರಣ್ಣಯ್ಯ, ಶ್ರೇಯಾ ಅಂಚನ್​​, ಅಶ್ವಿನ್​ ರಾವ್​ ಪಲ್ಲಕ್ಕಿ ಮತ್ತು ಇತರರು

    ಬಿಡುಗಡೆ: ಆಗಸ್ಟ್ 3

    ತರುಣ್, ತಾನಿಯಾ ಇಬ್ಬರ ನಾಲ್ಕು ದಿನದ ಕಥೆ

    ತರುಣ್, ತಾನಿಯಾ ಇಬ್ಬರ ನಾಲ್ಕು ದಿನದ ಕಥೆ

    'ಕಥೆಯೊಂದು ಶುರುವಾಗಿದೆ' ಸಿನಿಮಾದ ನಾಯಕ ತರುಣ್ (ದಿಗಂತ್) ಕಥೆ ಶುರುವಾಗುವುದು ಕ್ಲೈಮ್ಯಾಕ್ಸ್ ದೃಶ್ಯದಲ್ಲಿ. ಫಾರಿನ್ ನಲ್ಲಿ ಒಳ್ಳೆಯ ಕೆಲಸ, ಕೈ ತುಂಬ ಸಂಬಳ ಇದ್ದರೂ, ತರುಣ್ ದಿನ ನಿತ್ಯ ಅದೇ ಅದೇ ಕೆಲಸ ಮಾಡಿ ರೊಬೋಗಳ ರೀತಿ ಆಗಿದ್ದೇನೆ ಎಂದು ಕೆಲಸ ಬಿಟ್ಟು ತನ್ನೂರಿಗೆ ಬರುತ್ತಾನೆ. ಫಾರಿನ್ ನಲ್ಲಿಯೇ ಬದುಕಬೇಕು ಎನ್ನುವ ಪ್ರೇಯಸಿಯನ್ನು ಕೂಡ ಇದೇ ಕಾರಣಕ್ಕೆ ದೂರ ಮಾಡಿಕೊಳ್ಳುತ್ತಾನೆ. ಬಳಿಕ ತನ್ನ ಊರಿಗೆ ಬಂದು ತನ್ನದೇ ಆದ ರೆಸಾರ್ಟ್ ತೆರೆಯುತ್ತಾನೆ. ಆರಂಭದಲ್ಲಿ ಎಲ್ಲ ಚೆನ್ನಾಗಿರುತ್ತದೆ. ಆದರೆ, ಬರು ಬರುತ್ತಾ ರೆಸಾರ್ಟ್ ಖಾಲಿ ಆಗುತ್ತದೆ. ಸಂಪಾದನೆ ಕೂಡ ಕರಗುತ್ತದೆ. ಈ ವೇಳೆಗೆ ಆತನ ರೆಸಾರ್ಟ್ ಗೆ ನಾಯಕಿ ತಾನಿಯಾ (ಪೂಜಾ ದೇವಾರಿಯಾ) ಬರುತ್ತಾಳೆ. ಇಲ್ಲಿಂದ ಇಬ್ಬರ ನಾಲ್ಕು ದಿನದ ಕಥೆ ಶುರು ಆಗುತ್ತದೆ.

    ತನ್ನ ಗಂಡನ ಕಥೆ ಹೇಳ್ತಾಳೆ ತಾನಿಯಾ

    ತನ್ನ ಗಂಡನ ಕಥೆ ಹೇಳ್ತಾಳೆ ತಾನಿಯಾ

    ತಾನಿಯಾ ತನ್ನ ಗಂಡನ ಜೊತೆಗೆ ರೆಸಾರ್ಟ್ ಗೆ ಬರಬೇಕಿರುತ್ತದೆ. ತನ್ನ ರೆಸಾರ್ಟ್ ಗೆ ಬರುತ್ತಿರುವ ಹೊಸ ಅತಿಥಿಗಳನ್ನು ಕರೆದುಕೊಂಡು ಬರಲು ಏರ್ ಪೋರ್ಟ್ ಗೆ ತರುಣ್ ಹೋಗುತ್ತಾನೆ. ಕಾರಿನಲ್ಲಿ ಬರುವಾಗ ತಾನಿಯಾ ತನ್ನ ಗಂಡ ಸತ್ತು ಹೊದ ಎಂದು ಕಣ್ಣೀರು ಹಾಕುತ್ತಾಳೆ. ಈ ರೀತಿ ಇರುವ ಕಥೆಯಲ್ಲಿ ಬರು ಬರುತ್ತಾ ತಾನಿಯಾ ಹಾಗೂ ತರುಣ್ ಹತ್ತಿರ ಆಗುತ್ತಾರೆ. ಇನ್ನೂ ಮದುವೆ ಆಗದೇ ಇರುವ ತರುಣ್ ತಾನಿಯಳನ್ನು ಇಷ್ಟ ಪಡಲು ಶುರು ಮಾಡುತ್ತಾನೆ. ಹೀಗಿರುವ ಕಥೆ ಒಂದು ದೊಡ್ಡ ತಿರುವು ಪಡೆದುಕೊಳ್ಳುತ್ತದೆ. ಅದೇ ಇಡೀ ಚಿತ್ರದ ಹೈಲೆಟ್ ಆಗಿದೆ.

    ಮೊಟ್ಟ ಮೊದಲ ವಿಮರ್ಶೆ: ಪ್ರೇಕ್ಷಕರ ಮನಗೆದ್ದ 'ಕಥೆಯೊಂದು ಶುರುವಾಗಿದೆ' ಮೊಟ್ಟ ಮೊದಲ ವಿಮರ್ಶೆ: ಪ್ರೇಕ್ಷಕರ ಮನಗೆದ್ದ 'ಕಥೆಯೊಂದು ಶುರುವಾಗಿದೆ'

    ಇಡೀ ಚಿತ್ರಣವನ್ನು ಬದಲು ಮಾಡುವ ಒಂದು ತಿರುವು

    ಇಡೀ ಚಿತ್ರಣವನ್ನು ಬದಲು ಮಾಡುವ ಒಂದು ತಿರುವು

    ತರುಣ್ - ತಾನಿಯ ಕಥೆ ನೋಡುವ ಪ್ರೇಕ್ಷಕರಿಗೆ ಇದು ಒಬ್ಬ ವಿಧವೆ ಮತ್ತು ಒಬ್ಬ ಹುಡುಗನ ನಡುವಿನ ಪ್ರೇಮ ಕಥೆ ಎಂದು ಅನಿಸುತ್ತದೆ. ಆದರೆ, ಈ ಚಿತ್ರ ಅಷ್ಟೆ ಅಲ್ಲ. ಸಿನಿಮಾದಲ್ಲಿ ನಾವು ಅಂದುಕೊಳ್ಳುವ ಅಂಶ ಬದಲಾಗುತ್ತದೆ. ಸಿನಿಮಾದ ಒಂದು ಪಾಯಿಂಟ್ ಇಡೀ ಚಿತ್ರದ ಚಿತ್ರಣವನ್ನು ಬದಲು ಮಾಡುತ್ತದೆ. ಆ ನಂತರ ಕೊನೆಯಲ್ಲಿ ತರುಣ್ ಗೆ ತಾನು ಇಷ್ಟ ಪಟ್ಟ ತಾನಿಯ ಸಿಗುತ್ತಾಳ ಇಲ್ವಾ ಎನ್ನುವ ಪ್ರಶ್ನೆಗೆ ಉತ್ತರ ಚಿತ್ರಮಂದಿರದಲ್ಲಿ ಸಿಗುತ್ತದೆ. ಇಡೀ ಸಿನಿಮಾದ ಜರ್ನಿ ತುಂಬ ಚೆನ್ನಾಗಿದೆ. ತಾಳ್ಮೆ ಇಂದ ನೋಡಿದರೆ ಬಹುತೇಕ ದೃಶ್ಯಗಳು ಮನಸಿಗೆ ಹತ್ತಿರ ಆಗುತ್ತದೆ.

    ಲವಲವಿಕೆಯ ನಟನೆ

    ಲವಲವಿಕೆಯ ನಟನೆ

    ಸಿನಿಮಾದಲ್ಲಿ ಇರುವುದು ಕೆಲವೇ ಪಾತ್ರಗಳು. ಆದರೆ, ಆ ಎಲ್ಲ ಪಾತ್ರಗಳು ತುಂಬ ಲವಲವಿಕೆಯಿಂದ ತೆರೆ ಮೇಲೆ ಕಾಣುತ್ತದೆ. ದಿಗಂತ್ ಅವರ ಬೆಸ್ಟ್ ಸಿನಿಮಾಗಳ ಪೈಕಿ ಇದು ಒಂದಾಗಿದೆ. ದಿಗಂತ್ ತುಂಬ ಚೆನ್ನಾಗಿ ತಮ್ಮ ಪಾತ್ರವನ್ನು ಪ್ರದರ್ಶಿಸಿದ್ದಾರೆ. ತಾನಿಯ ಪಾತ್ರಕ್ಕೆ ಪೂಜಾ ಹೇಳಿಮಾಡಿಸಿದ ಆಯ್ಕೆ ಎನ್ನಬಹುದು. ನೈಜವಾಗಿ ಅವರು ತಮ್ಮ ಪಾತ್ರವನ್ನು ಪ್ಲೇ ಮಾಡಿದ್ದಾರೆ. ಉಳಿದ ಪಾತ್ರಗಳು ಸಿನಿಮಾದಲ್ಲಿ ಚಿತ್ರಕ್ಕೆ ಶಕ್ತಿ ತುಂಬಿವೆ.

    ಮದುವೆ ಯಾವಾಗ ? ಅಂದ್ರೆ ಹೀಗೆ ಹೇಳಿದ್ರು ದಿಗಂತ್ - ಐಂದ್ರಿತಾ!ಮದುವೆ ಯಾವಾಗ ? ಅಂದ್ರೆ ಹೀಗೆ ಹೇಳಿದ್ರು ದಿಗಂತ್ - ಐಂದ್ರಿತಾ!

    ಸರಳ ಕಥೆ, ಸೊಗಸಾದ ನಿರೂಪಣೆ

    ಸರಳ ಕಥೆ, ಸೊಗಸಾದ ನಿರೂಪಣೆ

    ಮೊದಲೇ ಹೇಳಿದ ಹಾಗೆ 'ಕಥೆಯೊಂದು ಶುರುವಾಗಿದೆ' ಸಿನಿಮಾದಲ್ಲಿ ಅದ್ಬುತ ಎನ್ನುವ ಕಥೆ ಇಲ್ಲ. ಆದರೆ, ಆ ಸರಳ ಕಥೆಯ ನಿರೂಪಣೆ ಅದ್ಬುತ. ಸಿನಿಮಾದ ತನ್ನ ಕಥೆ ಬಿಟ್ಟು ಒಂದು ಹೆಜ್ಜೆಯೂ ಆಚೆ ಹೋಗುವುದಿಲ್ಲ. ಕಥೆ ಏನು ಕೇಳುತ್ತದೆ ಆ ದೃಶ್ಯಗಳು ಮಾತ್ರ ಇಲ್ಲಿವೆ. ಆಗಾಗ ಬರುವ ಬೀಟ್ ಹಾಡುಗಳು ಒಂದು ದೃಶ್ಯದಿಂದ ಮತ್ತೊಂದು ದೃಶ್ಯಕ್ಕೆ ಹಿತವಾಗಿ ಕರೆದುಕೊಂಡು ಹೋಗುತ್ತದೆ.

    ಕಣ್ಣಿಗೆ ತಂಪು, ಕಿವಿಗೆ ಇಂಪು

    ಕಣ್ಣಿಗೆ ತಂಪು, ಕಿವಿಗೆ ಇಂಪು

    ಸಿನಿಮಾದಲ್ಲಿ ಮೆಚ್ಚುಗೆ ಆಗುವ ಅಂಶಗಳಲ್ಲಿ ಸಿನಿಮಾಟೊಗ್ರಾಫಿ ಕೂಡ ಒಂದು. ಶ್ರೀ ರಾಜ್ ರವೀಂದ್ರನ್ ಅವರ ಪ್ರತಿ ದೃಶ್ಯ ಕೂಡ ಶುಭ್ರವಾಗಿದೆ. ಅದೇ ರೀತಿ ಸಚಿನ್ ವಾರಿಯರ್ ಅವರ ಸಂಗೀತ ಹೊಸತನ ಹೊಂದಿದೆ. ಇವರಿಬ್ಬರ ಕೆಲಸದಿಂದ ಸಿನಿಮಾ ನೋಡುಗರ ಕಣ್ಣಿಗೆ ತಂಪು, ಕಿವಿಗೆ ಇಂಪು ಆಗುತ್ತದೆ. ಚಿತ್ರದ ಡೈಲಾಗ್ ಗಳ ಪಂಚ್ ಸೂಪರ್ ಆಗಿದೆ. ಸಾಕಷ್ಟು ಸಂಭಾಷಣೆಗಳು ಸಿಕ್ಕಾಪಟ್ಟೆ ನಗಿಸುತ್ತದೆ.

    ಮತ್ತೆ ಮತ್ತೆ ಬರಲಿ ಈ ರೀತಿಯ ಸಿನಿಮಾ

    ಮತ್ತೆ ಮತ್ತೆ ಬರಲಿ ಈ ರೀತಿಯ ಸಿನಿಮಾ

    ಅದೇ ಫೈಟ್, ಅದೇ ಲವ್, ಅದೇ ಅಬ್ಬರದ ಡೈಲಾಗ್, ಅದೇ ಡಬ್ಬಲ್ ಮಿನಿಂಗ್ ಡೈಲಾಗ್ ಇದೆಲ್ಲವನ್ನು ಬಿಟ್ಟು ಸಿನಿಮಾದಲ್ಲಿ ಹೊಸದನ್ನು ಪ್ರಯತ್ನ ಮಾಡಿದ್ದಾರೆ. ಬದಲಾಗುತ್ತಿರುವ ಕನ್ನಡ ಚಿತ್ರರಂಗಕ್ಕೆ ಈ ರೀತಿಯ ಸಿನಿಮಾಗಳು ಬೇಕು. ಮತ್ತೆ ಮತ್ತೆ ಇಂತಹ ಪ್ರಯತ್ನ ನಡೆಯಬೇಕು.

    ಕ್ಲಾಸ್ ಸಿನಿಮಾ

    ಕ್ಲಾಸ್ ಸಿನಿಮಾ

    ಕ್ಲಾಸ್ ಸಿನಿಮಾ ಪ್ರಿಯರು, ಹೊಸ ಸ್ಟೈಲ್ ಆಫ್ ಸಿನಿಮಾಗಳನ್ನು ನೋಡಲು ಬಯಸುವವರಿಗೆ ಈ ಚಿತ್ರ ಬೆಸ್ಟ್ ಚಾಯ್ಸ್. ಈ ಸಿನಿಮಾ ನೋಡಿ ಚಿತ್ರಮಂದಿರದಿಂದ ಹೊರ ಬಂದರೆ ಒಂದು ಸುಂದರ ಕಾದಂಬರಿ ಓದಿದ ಅನುಭವ ಆಗುತ್ತದೆ.

    English summary
    Kannada actor Diganth's 'Katheyondu Shuruvaagide' kannada movie review.
    Friday, August 3, 2018, 16:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X