twitter
    For Quick Alerts
    ALLOW NOTIFICATIONS  
    For Daily Alerts

    Kavaludaari Review : ಮಲ್ಟಿಪ್ಲೆಕ್ಸ್ ಪ್ರೇಕ್ಷಕರಿಗೆ ಸಲ್ಲುವ ಸಿನಿಮಾ

    |

    Recommended Video

    ಕವಲುದಾರಿ ಸಿನೆಮಾ ವಿಮರ್ಶೆ ಇಲ್ಲಿದೆ

    ಒಂದು ಕೊಲೆಯ ಸುತ್ತ ಹೆಣೆದ ಪಕ್ಕಾ ಕ್ರೈಮ್ ಥ್ರಿಲ್ಲರ್ ಸಿನಿಮಾ 'ಕವಲುದಾರಿ'. ಇಡೀ ಸಿನಿಮಾದ ಕಥೆ ಪೊಲೀಸ್ ತನಿಖೆಯ ಮೇಲೆ ಇದೆ. ಈ ಸಿನಿಮಾವನ್ನು ಅರ್ಥ ಮಾಡಿಕೊಳ್ಳಲು ಪ್ರೇಕ್ಷಕನ ಚುರುಕುತನವೂ ಮುಖ್ಯ. ಎಲ್ಲ ಕಮರ್ಷಿಯಲ್ ಅಂಶಗಳನ್ನು ಕಟ್ಟಿಟ್ಟು ಮಾಡಿರುವ ಈ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟ ಆಗುವುದು ಕಷ್ಟ.

    Rating:
    3.0/5
    Star Cast: ರಿಷಿ, ಅನಂತ್ ನಾಗ್, ರೋಷನಿ ಪ್ರಕಾಶ್, ಅಚ್ಚುತ್ ಕುಮಾರ್
    Director: ಹೇಮಂತ್ ರಾವ್

    'ಕವಲುದಾರಿ'ಯಲ್ಲಿ ಕಾಣುವ ಮುಖಗಳು

    'ಕವಲುದಾರಿ'ಯಲ್ಲಿ ಕಾಣುವ ಮುಖಗಳು

    ಸಿನಿಮಾದ ಶುರುವಿನಲ್ಲಿಯೇ ಒಂದು ಕೊಲೆ ಆಗಿರುತ್ತದೆ. ಕಟ್ ಮಾಡಿದರೆ, ಮೆಟ್ರೋ ಕಾಮಗಾರಿ ನಡೆಯುವ ಸ್ಥಳದಲ್ಲಿ ಮೂಳೆಗಳು ಸಿಗುತ್ತವೆ. ಟ್ರಾಫಿಕ್ ಪೊಲೀಸ್ ಆಗಿದ್ದ ಶ್ಯಾಮ್ ಗೆ ಖಾಕಿ ಅಂಗಿ ತೊಡುವ ಆಸೆ ಇರುತ್ತದೆ. ಕ್ರೈಮ್ ಪೊಲೀಸ್ ರೀತಿ ತಾವೇ ತನಿಖೆ ಶುರು ಮಾಡುತ್ತಾರೆ. ಅಲ್ಲಿಂದ ಸಿನಿಮಾದ ಒಂದೊಂದೆ ಮುಖಗಳು ತೆರೆದುಕೊಳ್ಳುತ್ತದೆ.

    ನಾಯ್ಡು ಕುಟುಂಬದ ಆ ಕೊಲೆ

    ನಾಯ್ಡು ಕುಟುಂಬದ ಆ ಕೊಲೆ

    ನಾಯ್ಡು ಕುಟುಂಬದ ಆ ಕೊಲೆಯ ತನಿಖೆ ಪ್ರಾರಂಭ ಮಾಡುವ ಪೊಲೀಸ್ ಶ್ಯಾಮ್ ಗೆ ಬೇರೆ ಬೇರೆ ಕವಲುದಾರಿಗಳು ಸಿಗುತ್ತವೆ. ಆ ದಾರಿಯಲ್ಲಿ ಈ ಹಿಂದೆ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದ ಮುತ್ತಣ್ಣ ಹಾಗೂ ಪತ್ರಕರ್ತ ಕುಮಾರ್ ಪಾತ್ರ ಬರುತ್ತದೆ. ನಾಯ್ಡು ಕೊಲೆಯ ಜೊತೆಗೆ ಮತ್ತೊಂದು ಕೊಲೆ ಆಗಿರುತ್ತದೆ. ಈ ಘಟನೆಗಳ ಬೆನ್ನು ಹತ್ತುವ ನಾಯಕ ಕೊನೆಗೂ ಕೊಲೆಗಾರನನ್ನು ಹಿಡಿಯುತ್ತಾನೆ. ಅದು ಯಾರು ಎನ್ನುವುದನ್ನು ಸಿನಿಮಾದಲ್ಲಿಯೇ ನೋಡಬೇಕು.

    ಈ ವಾರ 'ಕವಲುದಾರಿ' ಜೊತೆ 3 ಚಿತ್ರಗಳ ಬಿಡುಗಡೆ ಈ ವಾರ 'ಕವಲುದಾರಿ' ಜೊತೆ 3 ಚಿತ್ರಗಳ ಬಿಡುಗಡೆ

    ರಿಷಿ ನೋಡಿ ಖುಷಿ ಆಗುತ್ತೆ

    ರಿಷಿ ನೋಡಿ ಖುಷಿ ಆಗುತ್ತೆ

    ನಟ ರಿಷಿಗೆ ಒಂದು ಒಳ್ಳೆಯ ಪಾತ್ರ ಸಿಕ್ಕಿದೆ. ಅದನ್ನು ಅವರು ತುಂಬ ಚೆನ್ನಾಗಿ ಬಳಸಿಕೊಂಡಿದ್ದಾರೆ. ಪೊಲೀಸ್ ಶ್ಯಾಮ್ ಆಗಿ ಅವರು ಪ್ರತಿ ದೃಶ್ಯದ ನಟನೆಗೆ ಅಂಕ ಪಡೆಯುತ್ತಾರೆ. ಹಿಂದಿನ ಚಿತ್ರದಲ್ಲಿ ತಮಾಷೆ ಮಾಡುತ್ತಿದ್ದ ರಿಷಿ ಇಲ್ಲಿ ತುಂಬ ಗಂಭೀರವಾಗಿ ಗಮನ ಸೆಳೆಯುತ್ತಾರೆ. ನಟಿ ರೋಷನಿ ಪ್ರಕಾಶ್ ಚಿಕ್ಕ ಪಾತ್ರವನ್ನು ಚೊಕ್ಕವಾಗಿ ನಿರ್ವಹಿಸಿದ್ದಾರೆ.

    ಅನಂತ್, ಅಚ್ಚುತ್, ಸಂಪತ್ ಇವ್ರೆಲ್ಲ ಸಖತ್

    ಅನಂತ್, ಅಚ್ಚುತ್, ಸಂಪತ್ ಇವ್ರೆಲ್ಲ ಸಖತ್

    ನಟ ಅನಂತ್ ನಾಗ್ ಮತ್ತೊಮ್ಮೆ ತಮ್ಮ ಪ್ರಬುದ್ಧ ನಟನೆ ಮೂಲಕ ಪ್ರೇಕ್ಷಕರ ಚಪ್ಪಾಳೆ ಪಡೆಯುತ್ತಾರೆ. ಮುತ್ತಣ್ಣ ರೋಲ್ ಅವರಿಗೆ ಹೇಳಿ ಮಾಡಿಸಿದ ಹಾಗಿದೆ. ಅಚ್ಚುತ್ ಕುಮಾರ್ ಮತ್ತು ಸಂಪತ್ ಕುಮಾರ್ ಎಂದಿನಂತೆ ಅಭಿನಯ ಚತುರರು ಅಂತ ಸಾಭೀತು ಮಾಡಿದ್ದಾರೆ. ಸುಮನಾ ರಂಗನಾಥ್, ಆರ್ ಜೆ ಸಿರಿ, ಸಮನ್ವಿತಾ ಶೆಟ್ಟಿ ಎಲ್ಲ ಪಾತ್ರಗಳು ಅಚ್ಚುಕಟ್ಟಾಗಿವೆ.

    ಅಣ್ಣಾವ್ರ ನೆನಪಿನಲ್ಲಿ ಅಪ್ಪು ನಿರ್ಮಾಣದ ಮೊದಲ ಸಿನಿಮಾ ಬಿಡುಗಡೆ ಅಣ್ಣಾವ್ರ ನೆನಪಿನಲ್ಲಿ ಅಪ್ಪು ನಿರ್ಮಾಣದ ಮೊದಲ ಸಿನಿಮಾ ಬಿಡುಗಡೆ

    ಸಿನಿಮಾಟೋಗ್ರಫಿ ಹಾಗೂ ಸಂಗೀತ

    ಸಿನಿಮಾಟೋಗ್ರಫಿ ಹಾಗೂ ಸಂಗೀತ

    ಅದ್ವೈತ ಗುರುಮೂರ್ತಿ ಸಿನಿಮಾಟೋಗ್ರಫಿಯಲ್ಲಿ ಚಿತ್ರದ ಅಂದವನ್ನು ಹೆಚ್ಚು ಮಾಡಿದೆ. ಪ್ರತಿ ದೃಶ್ಯವನ್ನು ಅವರು ಹೆಚ್ಚು ಸುಂದರವಾಗಿ ತೋರಿಸಿದ್ದಾರೆ. ಅನೇಕ ಬಾರಿ ಕತ್ತಲು ಹಾಗೂ ಬೆಳಕಿನ ಆಟ ಆಡುತ್ತಾರೆ. ಚರಣ್ ರಾಜ್‌ ಹಿನ್ನಲೆ ಸಂಗೀತ ಇಂಪಾಗಿದೆ. ಹಾಡುಗಳು ಕೂಡ ಹೊಸದಾಗಿವೆ.

    ಸಿನಿಮಾದ ಅವಧಿ ಹೆಚ್ಚಾಯ್ತು ಅನಿಸುತ್ತದೆ

    ಸಿನಿಮಾದ ಅವಧಿ ಹೆಚ್ಚಾಯ್ತು ಅನಿಸುತ್ತದೆ

    'ಕವಲುದಾರಿ' ಸಿನಿಮಾ ಅವಧಿ ಸ್ವಲ್ಪ ಹೆಚ್ಚಾಯ್ತು ಅನಿಸುತ್ತದೆ. ಸೆಕೆಂಡ್ ಹಾಫ್ ಕೊನೆ ಕೊನೆಗೆ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ನಡೆಯುತ್ತದೆ. ನಿರ್ದೇಶಕ ಹೇಮಂತ್ ರಾವ್ ಮೇಕಿಂಗ್ ಸ್ಟೈಲ್ ಚೆನ್ನಾಗಿದೆ. ಆದರೆ. ಸಿನಿಮಾ ನೋಡುವವರಿಗೆ ಒಂದಷ್ಟು ಮನರಂಜನೆಯನ್ನೂ ಅವರು ನೀಡಬೇಕು. ಇನ್ನು ಚಿತ್ರದಲ್ಲಿ ಇರುವ ಕೆಲ ಅಂಶಗಳನ್ನು ಗೊಂದಲವನ್ನು ಮೂಡಿಸುತ್ತದೆ.

    ಇದು ಮಲ್ಟಿಪ್ಲೆಕ್ಸ್ ಸಿನಿಮಾ

    ಇದು ಮಲ್ಟಿಪ್ಲೆಕ್ಸ್ ಸಿನಿಮಾ

    'ಕವಲುದಾರಿ' ಒಂದು ಒಳ್ಳೆಯ ಸಿನಿಮಾ. ಆದರೆ, ಸಾಮಾನ್ಯ ಪ್ರೇಕ್ಷಕರಿಗೆ ಚಿತ್ರ ಇಷ್ಟ ಆಗುವುದು ಅನುಮಾನ. ಮನರಂಜನೆ ದೃಷ್ಟಿಯಿಂದ ಈ ಸಿನಿಮಾಗೆ ಹೋದರೆ ನಿರಾಸೆ ಖಂಡಿತ. ಕ್ರೈಮ್ ಥ್ರಿಲ್ಲರ್ ಇಷ್ಟ ಪಡುವವರಿಗೆ ಈ ಸಿನಿಮಾ ಖುಷಿ ನೀಡಬಹುದು. ಬಹುಮುಖ್ಯವಾಗಿ ಇದು ಮಲ್ಟಿಪ್ಲೆಕ್ಸ್ ಸಿನಿಮಾವಾಗಿ ಮಾತ್ರ ನಿಲ್ಲುತ್ತದೆ.

    English summary
    'Kavaludaari' kannada movie review. The movie is a crime trillar movie. 'Kavaludaari' is starring Rishi, Ananth Nag, Roshni Prakash and others.
    Friday, April 12, 2019, 15:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X