For Quick Alerts
  ALLOW NOTIFICATIONS  
  For Daily Alerts

  'ಕವಲುದಾರಿ' ನೋಡಿಬಂದ ವಿಮರ್ಶಕರು ಥ್ರಿಲ್ ಆದ್ರಾ?

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಸಿನಿಮಾ ಕವಲುದಾರಿ ಈ ವಾರ ರಾಜ್ಯಾದ್ಯಂತ ತೆರೆಕಂಡಿದೆ. ರಿಷಿ, ಅನಂತ್ ನಾಗ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನ ಹೇಮಂತ್ ಕುಮಾರ್ ನಿರ್ದೇಶನ ಮಾಡಿದ್ದಾರೆ.

  ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ ಈ ಸಿನಿಮಾ ಟ್ರೈಲರ್ ಮೂಲಕ ಭಾರಿ ಕುತೂಹಲ ಮೂಡಿಸಿತ್ತು. ಆ ಕುತೂಹಲ, ಆ ಥ್ರಿಲ್ಲಿಂಗ್ ಚಿತ್ರಮಂದಿರದಲ್ಲಿ ಸಿಕ್ತಾ? ಮೊದಲ ದಿನ ಸಿನಿಮಾ ನೋಡಿದ ಅಭಿಮಾನಿಗಳು ಚಿತ್ರವನ್ನ ಮೆಚ್ಚಿಕೊಂಡಿದ್ದಾರೆ.

  Kavaludaari Review : ಮಲ್ಟಿಪ್ಲೆಕ್ಸ್ ಪ್ರೇಕ್ಷಕರಿಗೆ ಸಲ್ಲುವ ಸಿನಿಮಾ Kavaludaari Review : ಮಲ್ಟಿಪ್ಲೆಕ್ಸ್ ಪ್ರೇಕ್ಷಕರಿಗೆ ಸಲ್ಲುವ ಸಿನಿಮಾ

  ಆದ್ರೆ, ವಿಮರ್ಶಕರ ಮನಸ್ಸು ಗೆಲ್ಲುವಲ್ಲಿ ಪುನೀತ್ ಕವಲುದಾರಿ ಯಶಸ್ವಿ ಆಯ್ತಾ? ಪುನೀತ್ ನಿರ್ಮಾಣ ಸಂಸ್ಥಗೆ ಒಳ್ಳೆಯ ಆರಂಭ ಸಿಕ್ಕಿದ್ಯಾ ಎಂಬ ಪ್ರಶ್ನೆಗಳು ಈಗ ಕಾಡುತ್ತಿದೆ. ಇದಕ್ಕೆಲ್ಲಾ ಕನ್ನಡದ ಖ್ಯಾತ ದಿನಪತ್ರಿಕೆಗಳು ವಿಮರ್ಶೆ ರೂಪದಲ್ಲಿ ಉತ್ತರ ಕೊಟ್ಟಿದೆ. ಮುಂದೆ ಓದಿ?

  ಸಸ್ಪೆನ್ಸ್ ದಾರಿಯಲ್ಲಿ ರೋಚಕ ಪಯಣ

  ಸಸ್ಪೆನ್ಸ್ ದಾರಿಯಲ್ಲಿ ರೋಚಕ ಪಯಣ

  ನಿರೂಪಣೆಯಲ್ಲಿ ಕಿಂಚಿತ್ತೂ ಧಾವಂತ ತೋರದೆ, ನಿಧಾನವಾಗಿಯೇ ಚಿತ್ರವನ್ನು ಕಟ್ಟಿಕೊಡಲಾಗಿದೆ. ಪರಿಣಾಮ, ಕೊಂಚ ಎಳೆದಾಡಿದ ಅನುಭವ ಪ್ರೇಕ್ಷಕರಿಗಾಗಬಹುದು. ಯಾವುದನ್ನೂ ನೇರವಾಗಿ ಹೇಳದೆ, ಸಾಧ್ಯವಾದಷ್ಟರಮಟ್ಟಿಗೆ ಸೂಕ್ಷ್ಮವಾದ ದೃಶ್ಯಗಳ ಮೂಲಕವೇ ಕಥೆ ನಿರೂಪಿಸುವಲ್ಲಿ ನಿರ್ದೇಶಕರ ಶ್ರಮ ಕಾಣುತ್ತದೆ. ಬಹುತೇಕ ದೃಶ್ಯಗಳಲ್ಲಿ ಚುಟುಕು ಸಂಭಾಷಣೆಯ ಮೊರೆ ಹೋಗಲಾಗಿದೆ. ಸಸ್ಪೆನ್ಸ್-ಥ್ರಿಲ್ಲರ್ ಚಿತ್ರಕ್ಕೆ ಅದು ಸೂಕ್ತ ಶೈಲಿ ಹೌದಾದರೂ ಹೇಳಬೇಕಾದ ಕೆಲವು ಮಾತುಗಳು ಅವ್ಯಕ್ತವಾಗಿಯೇ ಉಳಿದವೇನೋ ಎಂಬ ಅನುಮಾನ ಕಾಡಲಾರಂಭಿಸುತ್ತದೆ. ಎಲ್ಲೋ ಬಿಟ್ಟುಹೋದ ಮಾತಿನ ಕೊಂಡಿ, ಇನ್ನೆಲ್ಲೋ ಸೇರಿಕೊಂಡು ಕೊನೆಗೂ ಸಂಪೂರ್ಣತೆಯ ಅನುಭೂತಿ ದಕ್ಕುತ್ತಿದೆ. ಅಲ್ಲಿಯವರೆಗೂ ಕಾಯುವ ತಾಳ್ಮೆ ಪ್ರೇಕ್ಷಕರಿಗೆ ಇರಬೇಕು - ವಿಜಯವಾಣಿ

   ಪಿ.ಆರ್.ಕೆ ಸಂಸ್ಥೆಯಲ್ಲಿ ಮೆಗಾ ಸಿನಿಮಾ: ಶಿವಣ್ಣ, ರಾಘಣ್ಣ, ಪುನೀತ್ ಒಟ್ಟಿಗೆ ನಟನೆ ಪಿ.ಆರ್.ಕೆ ಸಂಸ್ಥೆಯಲ್ಲಿ ಮೆಗಾ ಸಿನಿಮಾ: ಶಿವಣ್ಣ, ರಾಘಣ್ಣ, ಪುನೀತ್ ಒಟ್ಟಿಗೆ ನಟನೆ

  ಕವಲುದಾರಿಗುಂಟ ಭಾವಗಳ ಮೆರವಣಿಗೆ

  ಕವಲುದಾರಿಗುಂಟ ಭಾವಗಳ ಮೆರವಣಿಗೆ

  ಮೂವರು ವ್ಯಕ್ತಿಗಳ ಪಳೆಯುಳಿಕೆಗಳಿಂದ ಆರಂಭವಾಗುವ ಚಿತ್ರಕಥೆ, ತನ್ನ ಪದರಗಳನ್ನು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಈ ಪದರಗಳನ್ನು ನಿರ್ದೇಶಕರು ಬುದ್ಧಿವಂತಿಕೆಯಿಂದ ಕಟ್ಟಿಕೊಡುತ್ತಾರೆ. ದೃಶ್ಯಗಳು ಸಾಗಿದಂತೆ ಕಥೆಯು ನೋಡುಗನ ಮನಸ್ಸಿನಲ್ಲಿ ಇಳಿಯುವಂತೆ ಮಾಡುವಲ್ಲಿ ಅವರು ಗೆದ್ದಿದ್ದಾರೆ. ಹಾಗಾಗಿಯೇ ಸಿನಿಮಾ ನೋಡುಗ ಮತ್ತು ಚಿತ್ರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತದೆ. ಭಾವಗಳು ನೋಡುಗನ ಮನದಲ್ಲಿ ಮನೆ ಮಾಡುತ್ತವೆ. ಸಿನಿಮಾದೊಂದಿಗೆ ನೋಡುಗ ತನ್ನ ಬದುಕನ್ನು ಬೆಸೆದುಕೊಳ್ಳುತ್ತಾನೆ. ಈ ರೀತಿಯ ಅನುಭವ ಕವಲುದಾರಿಯ ಸಾಕಷ್ಟು ದೃಶ್ಯಗಳಲ್ಲಿ ಕಾಣುತ್ತದೆ. ಕಾಡುವಂಥ ಸಿನಿಮಾವನ್ನು ಕಟ್ಟಿಕೊಡಬೇಕು ಎಂಬ ನಿರ್ದೇಶಕರ ಆಲೋಚನೆ ಸಿನಿಮಾದ ಕ್ಲೈಮ್ಯಾಕ್ಸ್ ವರೆಗೂ ಸಾಗಿದೆ. ಇದಕ್ಕೆ ಕಲಾವಿದರು ಮತ್ತು ತಂತ್ರಜ್ಞರು ಕೂಡ ಸಾಥ್ ನೀಡಿದ್ದಾರೆ - ವಿಜಯಕರ್ನಾಟಕ

  ರೋಚಕ ದಾರಿಯಲ್ಲಿ ನೂರೆಂಟು ತಿರುವು

  ರೋಚಕ ದಾರಿಯಲ್ಲಿ ನೂರೆಂಟು ತಿರುವು

  'ಗೋಧಿ ಬಣ್ಣ ಸಾಧಾರಾಣ ಮೈಕಟ್ಟು' ಚಿತ್ರದಲ್ಲೇ ಒಂದು ಕಥೆಯನ್ನು ನೀಟಾಗಿ ಹೇಳಬಲ್ಲೆ ಎಂದು ನಿರೂಪಿಸಿದ್ದ ನಿರ್ದೇಶಕ ಹೇಮಂತ್‌ ರಾವ್‌, 'ಕವಲುದಾರಿ'ಯಲ್ಲೂ ಆ ಭರವಸೆ, ನಿರೀಕ್ಷೆಯನ್ನು ಉಳಿಸಿಕೊಂಡಿದ್ದಾರೆ. ಮರ್ಡರ್ ಮಿಸ್ಟರಿ ಕಥೆಯನ್ನು ಆಯ್ಕೆಮಾಡಿಕೊಂಡಿರುವ ಹೇಮಂತ್‌, ಎಲ್ಲಾ ಸಿದ್ಧಸೂತ್ರಗಳನ್ನು ಬದಿಗೊತ್ತಿ, ತಮ್ಮದೇ ಶೈಲಿಯಲ್ಲಿ ನಿರೂಪಿಸಿದ್ದಾರೆ. ಒಂದು ಥ್ರಿಲ್ಲರ್‌ ಸಿನಿಮಾವನ್ನು ಅಷ್ಟೇ ಥ್ರಿಲ್ ಆಗಿ ಕಣ್ತುಂಬಿಕೊಳ್ಳುವ ಉದ್ದೇಶ ಹೊಂದಿರುವವರು 'ಕವಲುದಾರಿ' ನೋಡಬಹುದು. ಅದು ಬಿಟ್ಟು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್ ಸಿನಿಮಾ ಪ್ರಿಯರಿಗೆ ಚಿತ್ರ ಹೆಚ್ಚು ರುಚಿಸೋದು ಕಷ್ಟ. 'ಕವಲುದಾರಿ' ಹೇಗೆ ಒಂದು ಥ್ರಿಲ್ಲರ್‌ ಸಿನಿಮಾವೋ, ಹಾಗೆ ಒಂದು ಸೆಂಟಿಮೆಂಟ್ ಸಿನಿಮಾ ಕೂಡಾ.

  Kavaludaari review

  Kavaludaari review

  Kavaludaari is an excellent showcase of Hemanth Rao's skills as a technician. As a story teller, he fails to make the necessary impact. There is nothing wrong in any individual aspect of the film. The acting is great. Rishi makes an impact, Anant Nag is his usual best in a role written for him. The cinematography is a lesson in masterclass. The background score and music is mesmerising. Kavaludaari marks one more milestone in the direction young film makers are heading. It looks greener.

  English summary
  Puneeth rajkumar produced movie kavaludaari has released yesterday (april 12th). the movie get mixed response from audience. here is the critics review of movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X