twitter
    For Quick Alerts
    ALLOW NOTIFICATIONS  
    For Daily Alerts

    Kempegowda 2 Review: ಪ್ರಜೆಗಳ ಸೇವಕ, ಪ್ರಜಾಪ್ರಭುತ್ವದ ರಕ್ಷಕ

    |

    ''ಮೀಸೆ ಬಿಟ್ಟವರೆಲ್ಲ ಗಂಡಸರಲ್ಲ, ಮೀಸೆ ತಿರುಗಿಸೋರೆಲ್ಲ ಕೆಂಪೇಗೌಡ ಅಲ್ಲ....'' ಬಹುಶಃ ಕೋಮಲ್ ಚಿತ್ರಗಳಲ್ಲಿ ಇಂತಹ ಮಾಸ್ ಡೈಲಾಗ್ ಕೇಳಿದ್ದು ಇದೇ ಮೊದಲ ಸಲ ಅನ್ಸುತ್ತೆ. ಈ ಡೈಲಾಗ್ ನಷ್ಟೇ ಸಿನಿಮಾ ಕೂಡ ಸೀರಿಯಸ್ ಆಗಿದೆ. ಇದು ಔಟ್ ಅಂಡ್ ಔಟ್ ಕಮರ್ಷಿಯಲ್ ಚಿತ್ರ.

    Rating:
    3.0/5

    ಪೊಲೀಸ್ ಇಲಾಖೆಯ ಸಿಂಹ

    ಪೊಲೀಸ್ ಇಲಾಖೆಯ ಸಿಂಹ

    ಪೊಲೀಸ್ ಇಲಾಖೆಯಲ್ಲಿ ಸಿಂಹ ಅಂತಾನೇ ಕರೆಸಿಕೊಳ್ಳುವ ಕೆಂಪೇಗೌಡ, ಯಾವುದೇ ಪ್ರಕರಣಕ್ಕೆ ಕೈ ಹಾಕಿದ್ರೆ ಆರೋಪಿಗಳ ಕಥೆ ಮುಗಿತು ಅಂತ ಅರ್ಥ. ಜನರ ಕಷ್ಟಗಳಿಗೆ ಕಿವಿ ಕೊಡುವ ಪ್ರಮಾಣಿಕತೆ ಮತ್ತು ದಕ್ಷ ಅಧಿಕಾರಿ. ನ್ಯಾಯಕ್ಕಾಗಿ ಹೋರಾಡುವ ಸೂಪರ್ ಕಾಪ್. ಹೀಗೆ, ಮೊದಲ ದೃಶ್ಯದಿಂದ ಕೊನೆಯ ದೃಶ್ಯದವರೆಗೂ ಕೆಂಪೇಗೌಡನ ಬಿಲ್ಡಪ್ ಹೈಲೈಟ್. ಸುದೀಪ್ ಅಭಿನಯದ ಕೆಂಪೇಗೌಡ ಚಿತ್ರಕ್ಕೂ ಈ ಕೆಂಪೇಗೌಡನಿಗೂ ಯಾವ ಸಂಬಂಧವೂ ಇಲ್ಲ. ಇದೊಂದು ರೆಗ್ಯುಲರ್ ಕಮರ್ಷಿಯಲ್ ಸಿನಿಮಾ. ಅದ್ಭುತ ಎನ್ನುವಂತಿಲ್ಲ, ಚೆನ್ನಾಗಿಲ್ಲ ಎನ್ನುವಂತೆಯೂ ಇಲ್ಲ.

    ಪ್ರಜಾಪ್ರಭುತ್ವದ ರಕ್ಷಕ

    ಪ್ರಜಾಪ್ರಭುತ್ವದ ರಕ್ಷಕ

    ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸುವ ಕೆಂಪೇಗೌಡ, ಆ ಕೊಲೆ ಹಿಂದೆ ಯಾರಿದ್ದಾರೆ, ಯಾಕೆ ಕೊಲೆ ಮಾಡಿದ್ರು, ಆತನ ಉದ್ದೇಶವೇನು, ರಾಜಕೀಯಕ್ಕೂ ಆತನಿಗೂ ಏನು ಸಂಬಂಧ, ಹೀಗೆ ಇಡೀ ಕಥೆ ಇಲ್ಲಿಯೇ ಸುತ್ತುತ್ತೆ. ಇದರ ಜೊತೆ ಕರ್ನಾಟಕ ರಾಜಕೀಯ, ಮುಖ್ಯಮಂತ್ರಿ ಪಟ್ಟ, ಸಮ್ಮಿಶ್ರ ಸರ್ಕಾರ, ಕುದುರೆ ವ್ಯಾಪರ, ರಾಜಕಾರಣಿಗಳ ವೀಕ್ನೆಸ್, ರಾಜಕೀಯ ಪಕ್ಷಗಳ ಕೆಲಸ, ಬ್ಲ್ಯಾಕ್ ಮೇಲ್ ತಂತ್ರ, ಚುನಾವಣೆ, ಅಕ್ರಮ ಮತದಾನ, ಇವಿಎಂ ಹ್ಯಾಕ್ ಹೀಗೆ ಹಲವು ವಿಷ್ಯಗಳನ್ನ ಕಥೆಯಲ್ಲಿ ಪ್ರಸ್ತಾಪಿಸಲಾಗಿದೆ.

    ಕೋಮಲ್ ಹಾರ್ಡ್ ವರ್ಕ್ ಇದೆ

    ಕೋಮಲ್ ಹಾರ್ಡ್ ವರ್ಕ್ ಇದೆ

    ಇಷ್ಟು ದಿನ ಬರಿ ಕಾಮಿಡಿ ಮಾಡ್ಕೊಂಡು, ಕಾಮಿಡಿ ಆಧಾರಿತ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದ ಕೋಮಲ್, ಇಲ್ಲಿ ಬಹಳ ಗಂಭೀರ ಪಾತ್ರ ನಿಭಾಯಿಸಿದ್ದಾರೆ. ಒಂದೇ ಒಂದು ದೃಶ್ಯದಲ್ಲಿ ಕೋಮಲ್ ಹಾಸ್ಯ ಮಾಡಿಲ್ಲ. ದಕ್ಷ ಪೊಲೀಸ್ ಅಧಿಕಾರಿಯಾಗಿ ಬಹಳ ಗಂಭೀರವಾಗಿ ಚೆನ್ನಾಗಿ ನಟಿಸಿದ್ದಾರೆ. ಹೀರೋಯಿಸಂಗೆ ಹೆಚ್ಚು ಪ್ರಾಮುಖ್ಯತೆಯಿದ್ದು, ಕೋಮಲ್ ಅವರನ್ನ ಸಡನ್ ಆಗಿ ಇಂತಹ ಬದಲಾವಣೆಯಲ್ಲಿ ಸ್ವೀಕರಿಸುವುದು ಕಷ್ಟ. ಬಿಲ್ಡಪ್ ಜಾಸ್ತಿ ಆಯಿತು ಅನ್ಸುತ್ತೆ. ಇದೆಲ್ಲದರ ಹಿಂದೆ ಕೋಮಲ್ ಹಾರ್ಡ್ ವರ್ಕ್ ಎದ್ದು ಕಾಣುತ್ತೆ.

    ಇತರೆ ಪಾತ್ರಗಳ ಕಥೆ ಏನು?

    ಇತರೆ ಪಾತ್ರಗಳ ಕಥೆ ಏನು?

    ಸಿನಿಮಾದಲ್ಲಿ ಹೀರೋಯಿನ್ ಗೆ ಮಹತ್ವವಿಲ್ಲ. ಕೋಮಲ್ ಬಿಟ್ಟರೇ ವಿಲನ್ ಪಾತ್ರದಲ್ಲಿ ನಟಿಸಿರುವ ಕ್ರಿಕೆಟಿಗ ಶ್ರೀಶಾಂತ್ ಗಮನ ಸೆಳೆಯುತ್ತಾರೆ. ಕಮಿಷನರ್ ಪಾತ್ರದಲ್ಲಿ ನಾಗಬಾಬು ಒಳ್ಳೆಯ ನಟನೆ. ಸರ್ಪ್ರೈಸ್ ಆಗಿ ಬರುವ ಲೂಸ್ ಮಾದ ಒಂದು ಹಾಡು, ಒಂದೆರೆಡು ಸೀನ್ ಗೆ ಸೀಮತ. ಆದ್ರೆ, ಪಾತ್ರಕ್ಕೆ ಧಮ್ ಇಲ್ಲ. ತೆಲುಗು ನಟ ಆಲಿ ಬಂದ್ರೂ ಕಾಮಿಡಿ ಬರಲಿಲ್ಲ.

    ಕೊನೆಯದಾಗಿ ಹೇಳುವುದೇನಂದರೆ

    ಕೊನೆಯದಾಗಿ ಹೇಳುವುದೇನಂದರೆ

    ಅಭಿನಯದಲ್ಲಿ ಎಲ್ಲವೂ ಚೆನ್ನಾಗಿದೆ. ನಿರ್ಮಾಪಕರು ಸಿಕ್ಕಾಪಟ್ಟೆ ಖರ್ಚು ಮಾಡಿದ್ದಾರೆ. ಕೆಂಪೇಗೌಡ ಎಂಬ ಹೆಸರು ಬಿಟ್ಟರೇ ಮ್ಯೂಸಿಕ್, ಹಾಡು ಯಾವುದು ನೆನಪಿನಲ್ಲಿ ಉಳಿಯುವುದಿಲ್ಲ. ಸಿನಿಮಾಟೋಗ್ರಫಿಗೆ ಅಂಕಗಳಿದೆ. ಫೈಟ್ ಗಳು ಕೋಮಲ್ ಅವರಿಗೆ ತಕ್ಕಂತೆ ಮಾಸ್ ಆಗಿದೆ. ಕಥೆಯಲ್ಲಿ ಹೊಸತೇನು ಇಲ್ಲ. ರೆಗ್ಯುಲರ್ ಕಮರ್ಷಿಯಲ್ ಸ್ಟೋರಿ. ಕೋಮಲ್ ಅವರಿಗೆ ಸೂಕ್ತವಾಗುವಂತೆ ಸ್ಕ್ರಿಪ್ಟ್ ಮಾಡಿ ಪ್ರೆಸೆಂಟ್ ಮಾಡುವಲ್ಲಿ ನಿರ್ದೇಶಕರು ಸಕ್ಸಸ್ ಆಗಿದ್ದಾರೆ. ಸುದೀಪ್ ಅವರ ಕೆಂಪೇಗೌಡ ನೆನಪಿನಲ್ಲಿಟ್ಟುಕೊಂಡು ಸಿನಿಮಾಗೆ ಹೋದರೆ ನಿರಾಸೆ ಖಂಡಿತ. ಅದನ್ನ ಬಿಟ್ಟು ಕೋಮಲ್ ಸಿನಿಮಾ ಎಂದು ಹೋದರೆ ಸರ್ಪ್ರೈಸ್ ಆಗುವುದು ಖಚಿತ.

    English summary
    Kempegowda 2 Movie Review in Kananda: Rating: 3/5 stars
    Friday, August 9, 2019, 14:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X