Kesari 2 Twitter (X ) Review ; ಹೇಗಿದೆ ಜಲಿಯನ್ ವಾಲಾಬಾಗ್ ದುರಂತ ನೆನಪಿಸುವ ಕೇಸರಿ 2 ?
ಹೆಚ್ಚೇನ್ ಇಲ್ಲ.. ಕೊರೊನಾ ಎಂಬ ಪೀಡೆ ವಕ್ಕರಿಸಿಕೊಳ್ಳುವ ಮುನ್ನ ಒಂದಾದ ಮೇಲೊಂದು ಗೆಲುವನ್ನೂ ಕಂಡವರು ಅಕ್ಷಯ್ ಕುಮಾರ್. ಆದರೆ.. ಕೊರೊನಾ ಕರಿನೆರಳು ಸರಿದ ಬಳಿಕ, ಅಕ್ಷಯ್ ಕುಮಾರ್ ಮಾಡಿದ್ದೆಲ್ಲವೂ ಪರಮ ತೋಪು ಸಿನಿಮಾಗಳೇ. ಕೊರೊನಾ ನಂತರ ಅಕ್ಷಯ್ ಕುಮಾರ್ ಅಭಿನಯದ ಹನ್ನೆರಡು ಸಿನಿಮಾಗಳು ತೆರೆಗೆ ಬಂದಿವೆ.ಈ ಹನ್ನೆರಡು ಸಿನಿಮಾಗಳಲ್ಲಿ ಪ್ರೇಕ್ಷಕರಿಂದ ಬ್ಲಾಕ್ ಬಸ್ಟರ್ ರೆಸ್ಫಾನ್ಸ್ ಪಡೆದಿದ್ದು ಕೇವಲ ಸೂರ್ಯವಂಶಿ ಚಿತ್ರ ಮಾತ್ರ.
ಸೂರ್ಯವಂಶಿ ಹೊರತು ಪಡಿಸಿದರೆ ಓ ಮೈ ಗಾಡ್-02 ಮಾತ್ರ ಗೆಲುವನ್ನು ಕಂಡಿದೆ. ಮಿಕ್ಕಂತೆ ಅಕ್ಷಯ್ ಕುಮಾರ್ ಗೆ ಸಿಕ್ಕಿದ್ದು ಸೋಲು ಮತ್ತು ಹಿನ್ನೆಡೆ. ಹೀಗಾಗಿಯೇ ಒಂದು ಕಾಲದಲ್ಲಿ ಇವರನ್ನು ಲಕ್ಕಿ ಕುಮಾರ್ ಎಂದು ಕರೆಯುತ್ತಿದ್ದ ಬಾಲಿವುಡ್ ಈಗೀಗ ಅನ್‌ಲಕ್ಕಿ ಕುಮಾರ್ ಎಂದು ಕರೆಯಲು ಶುರು ಮಾಡಿದೆ.

ಹೀಗಿರುವಾಗ ಇಂದು ಕೇಸರಿ ಚಾಪ್ಟರ್ 2 ಚಿತ್ರ ತೆರೆಗೆ ಬಂದಿದೆ. ಅಕ್ಷಯ್ ಕುಮಾರ್‌ಗೆ ಮಾತ್ರವಲ್ಲದೇ ಬಾಲಿವುಡ್‌ಗೆ ಈ ಚಿತ್ರದ ಮೇಲೆ ಅಪಾರ ನಿರೀಕ್ಷೆಗಳಿವೆ. ಹಾಗಿದ್ದರೆ ಕೇಸರಿ ಚಾಪ್ಟರ್ 2 ಹೇಗಿದೆ.? ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದ ಪ್ರೇಕ್ಷಕರು ಹೇಳಿದ್ದೇನು ? ಎಂದು ತಿಳಿಯಲು ಮುಂದೆ ಓದಿ.
ಅದ್ಭುತ ಚಿತ್ರ
ಕೇಸರಿ 2 ಅದ್ಭುತವಾದ ಚಿತ್ರ. ನಮ್ಮ ಇತಿಹಾಸದ ಪ್ರಮುಖ ಅಧ್ಯಾಯವನ್ನು ಅಷ್ಟೇ ಸೊಗಸಾಗಿ ತೆರೆಯ ಮೇಲೆ ತರಲಾಗಿದೆ. ಚಿತ್ರದಲ್ಲಿ ರಾಷ್ಟ್ರೀಯತೆ, ದೇಶಭಕ್ತಿ, ಶೌರ್ಯ ಎಲ್ಲವೂ ಚಿತ್ರದಲ್ಲಿದೆ. ಅಕ್ಷಯ್ ಕುಮಾರ್ ವೃತ್ತಿ ಬದುಕಿನ ಅತ್ಯುತ್ತಮ ಚಿತ್ರ ಇದು. ತಪ್ಪದೇ ಚಿತ್ರಮಂದಿರಗಳಲ್ಲಿ ಚಿತ್ರವನ್ನು ನೋಡಿ ಎಂದು ಒಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ರೋಮಾಂಚನಕಾರಿ
ಜಲಿಯನ್ ವಾಲಾಬಾಗ್ ದುರಂತರ ನಂತರ ನಡೆಯುವ ಘಟನೆಗಳ ಸುತ್ತ ಹೆಣೆಯಲಾದ ಈ ಚಿತ್ರ ತುಂಬಾ ರೋಮಾಂಚನಕಾರಿಯಾಗಿದೆ. ಸಿ.ಶಂಕರನ್ ನಾಯರ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಮಿಂಚಿದ್ದಾರೆ. ಆರ್ ಮಾಧವನ್ ಮತ್ತು ಅನನ್ಯಾ ಪಾಂಡೆ ಪ್ರಭಾವ ಬೀರುತ್ತಾರೆ. ಉತ್ತಮವಾಗಿ ನಿರೂಪಿಸಲಾದ ಭಾವನಾತ್ಮಕವಾದ ಈ ಚಿತ್ರವನ್ನು ಎಲ್ಲರು ನೋಡಬೇಕು.
ಹೃದಯವಿದ್ರಾವಕ
ಕೇಸರಿ ಚಾಪ್ಟರ್ 2 ನನ್ನ ಮೇಲೆ ತುಂಬಾನೇ ಆಳವಾಗಿ ಪರಿಣಾಮ ಬೀರಿದ ಚಿತ್ರ. ಹೃದಯವಿದ್ರಾವಕ ವಾಸ್ತವವನ್ನು ಬೆಳ್ಳಿತೆರೆ ಮೂಲಕ ಹೇಳಲಾಗಿದೆ. ಭಾವನಾತ್ಮಕವಾಗಿ ಕಲಕುವ ಚಿತ್ರ ಇದು.
ಅತ್ಯಮೋಘ
ಕೇಸರಿ 2 ಅತ್ಯಮೋಘವಾದ ಚಿತ್ರ. ಭಾರತದ ಅದಮ್ಯ ಚೇತನಕ್ಕೆ ಒಂದು ಪ್ರಬಲವಾದ ಗೌರವ. ಅಕ್ಷಯ್ ಕುಮಾರ್, ಆರ್ ಮಾಧವನ್, ಅನನ್ಯಾ ಪಾಂಡೆ ಅದ್ಭುತವಾಗಿ ಅಭಿನಯಿಸಿದ್ದಾರೆ. ದೇಶಭಕ್ತಿಯಿಂದ ಕೂಡಿರುವ ಈ ಚಿತ್ರವನ್ನು ಎಲ್ಲರು ತಪ್ಪದೇ ನೋಡಲೇಬೇಕು
ಹೃದಯ ಸ್ಪರ್ಶಿ
ಹೃದಯ ಸ್ಪರ್ಶಿ ದೃಶ್ಯಗಳನ್ನು ಹೊಂದಿರುವ ಚಿತ್ರ ಕೇಸರಿ 2. ಕೆಲವು ಕಥೆಗಳನ್ನು ನಾವು ಆಚರಿಸಬೇಕು ಶಂಕರನ್ ನಾಯರ್ ಅವರ ಈ ಕಥೆ ಅಂತಹದ್ದೇ ಕಥೆಗಳಲ್ಲಿ ಒಂದು. ಭಾವನೆ, ದೇಶಭಕ್ತಿ, ಕೋರ್ಟ್‌ರೂಮ್‌ನ ದೃಶ್ಯಾವಳಿಗಳು, ಚಪ್ಪಾಳೆ ಹೊಡೆಯುವಂತಹ ಸಂಭಾಷಣೆಗಳಿಂದ ಕೂಡಿದ ಚಿತ್ರ ಇದು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಕೇವಲ ಪ್ರೇಕ್ಷಕರು ಮಾತ್ರವಲ್ಲ ಬಾಲಿವುಡ್‌ನ ಅನೇಕ ವಿಮರ್ಷಕರು ಕೂಡ ಕೇಸರಿ 2 ಚಿತ್ರಕ್ಕೆ ಮನ ಸೋತಿದ್ದಾರೆ. ಐದಕ್ಕೆ ಹಲವರು ನಾಲ್ಕು ಸ್ಟಾರ್‌ಗಳನ್ನು ನೀಡಿದ್ದಾರೆ. ಆ ಪೈಕಿ ಬಾಲಿವುಡ್‌ನ ಗಳಿಕೆಯ ಲೆಕ್ಕಾಚಾರವನ್ನು ಹಂಚಿಕೊಳ್ಳುವ ತರಣ್ ಆದರ್ಶ್ ಕೂಡ ಒಬ್ಬರು. ಚಿತ್ರದ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ತರಣ್ ಆದರ್ಶ್ ಕೇಸರಿ 2 ಕೇವಲ ಚಿತ್ರವಲ್ಲ, ನಾವು ಕಳೆದುಕೊಂಡದ್ದನ್ನು ಮತ್ತು ನಾವು ಎಂದಿಗೂ ಮರೆಯಬಾರದ್ದು ಎಂದು ನೆನಪಿಸುವ ಚಿತ್ರ, ಚಿತ್ರದ ನಿರ್ದೇಶಕ ಕರಣ್ ಸಿಂಗ್ ತ್ಯಾಗಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿನ ಹೇಳಲಾಗದ ಕಥೆಯನ್ನು ಹೇಳಿ ಅದಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.
ಹೀಗೆ ಪ್ರೇಕ್ಷಕರ ಮತ್ತು ವಿಮರ್ಷಕರ ಹೃದಯವನ್ನು ಗೆಲ್ಲುತ್ತಿರುವ ಕೇಸರಿ 2 ಚಿತ್ರ ಮೊದಲ ದಿನ ಉತ್ತಮವಾದ ಗಳಿಕೆ ಮಾಡುವ ನಿರೀಕ್ಷೆ ಇದೆ. ಹತ್ತು ಕೋಟಿಯನ್ನು ಬಾಕ್ಸಾಫೀಸ್‌ನಲ್ಲಿ ದೋಚುವ ಸಾಧ್ಯತೆ ಇದೆ.


Click it and Unblock the Notifications











