twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ-2: 'ಕೆಜಿಎಫ್' ಇಷ್ಟವಾಗೋದು ಈ ಎರಡೇ ಕಾರಣಕ್ಕೆ.!

    |

    ಕೆಜಿಎಫ್ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ನೋಡಿ ಆಯಿತು. ಇದುವರೆಗೂ ನೋಡಿದ್ದ ಯಶ್ ಈ ಚಿತ್ರದಲ್ಲಿ ಕಾಣಿಸಿಲ್ಲ. ಅವರ ರೆಗ್ಯೂಲರ್ ಚಿತ್ರಗಳಂತೆ ಫೈಟ್, ಸಾಂಗ್, ಡೈಲಾಗ್ ಗಳನ್ನ ಬಿಡಲಿಲ್ಲ. ಯಶ್ ಫ್ಯಾನ್ಸ್ ಗೆ ಫುಲ್ ಟ್ರೀಟ್. ಸಾಮಾನ್ಯ ಪ್ರೇಕ್ಷಕರಿಗೆ ಸರ್ಪ್ರೈಸ್.

    ಕೆಜಿಎಫ್ ಮೇಲೆ ಎಲ್ಲರಂತೆ ನನಗೂ ಭಾರಿ ನಿರೀಕ್ಷೆ ಇತ್ತು. ಮೂರು ವರ್ಷದ ಪ್ರಾಜೆಕ್ಟ್, ಯಶ್-ಪ್ರಶಾಂತ್ ನೀಲ್ ಸೇರಿ ಬೇರೇ ಏನೋ ಮಾಡಿರಬಹುದು ಎಂಬ ಲೆಕ್ಕಾಚಾರ ನನ್ನ ತಲೆಯಲ್ಲೂ ಇತ್ತು.

    'ಕೆಜಿಎಫ್' ಪೂರ್ಣ ವಿಮರ್ಶೆ : ಪ್ರಪಂಚ ಗೆಲ್ಲಲು ಹೊರಟ 'ಕೆಜಿಎಫ್' ಕಂದನ ಕಥನ 'ಕೆಜಿಎಫ್' ಪೂರ್ಣ ವಿಮರ್ಶೆ : ಪ್ರಪಂಚ ಗೆಲ್ಲಲು ಹೊರಟ 'ಕೆಜಿಎಫ್' ಕಂದನ ಕಥನ

    ಇನ್ನು ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸಿನಿಮಾವನ್ನ ಮೀರಿಸುತ್ತಾ, ಅಥವಾ ಆ ಚಿತ್ರದ ರೀತಿಯೇ ಮೇಕಿಂಗ್ ಬಂದಿರುತ್ತಾ ಎಂಬ ಕುತೂಹಲ. ಬಟ್, ಸಿನಿಮಾ ಶುರುವಾದ್ಮೇಲೆ ಇದ್ಯಾವುದು ನೆನಪೇ ಆಗಿಲ್ಲ. ಮುಂಬೈ ಟು ಕೆಜಿಎಫ್ ಗೆ ನಾನು ಹೋಗಿ ಬಂದ ಹಾಗೆ ಅನುಭವ ಆಯಿತು. ಅಂದ್ಹಾಗೆ, ಇದು ಸಿನಿಮಾ ರಿವ್ಯೂ ಅಲ್ಲ. ನನಗೆ ಏನು ಅನಿಸಿತು ಎಂಬುದನ್ನ ಮಾತ್ರ ಇಲ್ಲಿ ಬರೆಯುತ್ತಿದ್ದೇನೆ. ಮುಂದೆ ಓದಿ.....

    ಯಶ್ ಲುಕ್ ಗೆ ಫಿದಾ

    ಯಶ್ ಲುಕ್ ಗೆ ಫಿದಾ

    ಯಶ್ ಅವರ ಲುಕ್ ಈ ಚಿತ್ರದ ಪ್ರಮುಖ ಹೈಲೈಟ್. ಉದ್ದನೇಯ ಕೂದಲು ಮತ್ತು ಆ ಗಡ್ಡವೇ 'ರಾಕಿ ಭಾಯ್' ಖದರ್ ಗೆ ಕಿರೀಟ. ಅದರಲ್ಲೂ 80ರ ದಶಕದ ಯಶ್ ಅವರನ್ನ ನೋಡೋದೆ ಖುಷಿ. ಯಾಕಂದ್ರೆ, ಆ ರೆಟ್ರೋ ಸ್ಟೈಲ್ ನಲ್ಲಿ ರಾಕಿ ಭಾಯ್ ಸೂಪರ್. ಇನ್ನು ರಾಕಿ ಭಾಯ್ ಕಂಡ್ರೆ ಇಡೀ ಮುಂಬೈ ನಡುಗುತ್ತೆ. ಗಲ್ಲಿ ಗಲ್ಲಿಯಲ್ಲೂ ರಾಕಿ ಹೆಸರು ಸದ್ದು ಮಾಡುತ್ತೆ. ಆ ದೃಶ್ಯಗಳನ್ನ ನೋಡ್ತಿದ್ರೆ, ಒಂದು ಕ್ಷಣ ಯಶ್ ಬಾಲಿವುಡ್ ಗೆ ಹೋದ್ರೆ ಹವಾ ಹೀಗಿರಬೇಕು ಅನ್ನಿಸುತ್ತೆ.

    ರಾಕಿ 'ಹೀರೋಯಿಸಂ' ಧಮ್

    ರಾಕಿ 'ಹೀರೋಯಿಸಂ' ಧಮ್

    ಯಶ್ ಸಿನಿಮಾ ಅಂದ್ಮೇಲೆ ಜೋಶ್ ಇರಬೇಕು ಅಲ್ವಾ. ಅದಕ್ಕೆ ತಕ್ಕಂತೆ ಮೊದಲಾರ್ಧ ಪೂರ್ತಿ ರಾಕಿ ಅಬ್ಬರ, ಹವಾ, ಹೀರೋಯಿಸಂ ಕಿಕ್ ಕೊಡುತ್ತೆ. ಇಡೀ ಮುಂಬೈನ ರಾಕಿ ಭಾಯ್ ಕೈಯಲ್ಲಿರುತ್ತೆ. ರಾಕಿ ಒಪ್ಪಿಗೆ ಇಲ್ಲದೇ ಯಾವುದೇ ಮಾಫಿಯಾ ನಡೆಯಲ್ಲ. ಇದು ಬಾಲಿವುಡ್ ಸಂಸ್ಕೃತಿಗೆ ಹತ್ತಿರವೆನಿಸಿದರೂ, ಚಿತ್ರದ ಕ್ಲೈಮ್ಯಾಕ್ಸ್ ವರೆಗೂ ರಾಕಿ ಹೀರೋಯಿಸಂ ಸ್ವಲ್ಪವೂ ಕಮ್ಮಿಯಾಗಲ್ಲ. ಹಾಗ್ನೊಡಿದ್ರೆ, ಕೆಜಿಎಫ್ ಚಿತ್ರಕ್ಕೆ ಯಶ್ 'ಒಂಟಿ ಸಲಗ'. ಹತ್ತು ಹಲವು ಕಲಾವಿದರಿದ್ದರೂ ಪ್ರೇಕ್ಷಕರಲ್ಲಿ ಉಳಿಯುವುದು ಯಶ್ ಒಬ್ಬರೇ.

    'ಕೆ.ಜಿ.ಎಫ್' ಫಸ್ಟ್ ಹಾಫ್ ವಿಮರ್ಶೆ: ಇಂಟರ್ವೆಲ್ ವರೆಗೂ ಚಿಂದಿ ಗುರು.!'ಕೆ.ಜಿ.ಎಫ್' ಫಸ್ಟ್ ಹಾಫ್ ವಿಮರ್ಶೆ: ಇಂಟರ್ವೆಲ್ ವರೆಗೂ ಚಿಂದಿ ಗುರು.!

    70-80ರ ದಶಕಕ್ಕೆ ಹೋಗುವ ಪ್ರೇಕ್ಷಕ

    70-80ರ ದಶಕಕ್ಕೆ ಹೋಗುವ ಪ್ರೇಕ್ಷಕ

    ಇಡೀ ಕೆಜಿಎಫ್ ಚಿತ್ರಕ್ಕೆ ಅತಿ ದೊಡ್ಡ ಶಕ್ತಿ ಅಂದ್ರೆ ಚಿತ್ರದ ಸೆಟ್. 70-80ರ ದಶಕದಲ್ಲಿ ನಡೆಯುವ ಕಥೆ ಇದಾಗಿದ್ದರಿಂದ ಅದಕ್ಕೆ ತಕ್ಕಂತೆ ಲೋಕೇಶನ್, ಕಾಸ್ಟ್ಯೂಮ್ ಎಲ್ಲವೂ ಇದೆ. ಒಂದು ಹಾಡು ಕೂಡ ರೆಟ್ರೋ ಸ್ಟೈಲ್ ನಲ್ಲೇ ಇರೋದು ವಿಶೇಷ. 80-90 ದಶಕದ ಸಮಾಜವನ್ನ ನೋಡದ ಯುವಜನಾಂಗ ಕೆಜಿಎಫ್ ಚಿತ್ರವನ್ನ ನೋಡಿ ಖುಷಿ ಪಡಬಹುದು.

    ಬಾಹುಬಲಿಯಂತೆ ಅಚ್ಚರಿಗೊಳಿಸುವ ಸೆಟ್

    ಬಾಹುಬಲಿಯಂತೆ ಅಚ್ಚರಿಗೊಳಿಸುವ ಸೆಟ್

    'ಬಾಹುಬಲಿ' ಚಿತ್ರದಲ್ಲಿ ಸೆಟ್ ನೋಡಿದ್ದ ಜನ ಅಬ್ಬಾ ಅಂದಿದ್ದರು. ಅದೇ ರೀತಿ ಕೆಜಿಎಫ್ ಚಿತ್ರದ ಸೆಕೆಂಡ್ ಹಾಫ್ ನಲ್ಲಿ, ಹಾಕಿರುವ ಸೆಟ್ ನೋಡಿದ್ರೆ ಅದೇ ಅನುಭವ ಆಗುತ್ತೆ. ಸಾವಿರಾರು ಸಂಖ್ಯೆಯಲ್ಲಿ ಜೂನಿಯರ್ ಕಲಾವಿದರು ಇರೋದು ವಾಹ್ ಎನ್ನಿಸುವಂತೆ. ಕೆಜಿಎಫ್ ನಲ್ಲಿ ನಿಜಕ್ಕೂ ಹಾಗೆ ಇದೆಯಾ ಎಂದು ಕಣ್ಬಿಟ್ಟು ನೋಡುವಂತಿದೆ. ಆ ಧೂಳ್, ಆ ಜಾಗ, ಆ ಸೆಟ್, ಅಷ್ಟು ಜನರು ನಿಜಕ್ಕೂ ಅದ್ಭುತ.

    ಫಸ್ಟ್ ಶೋ ಮುಗೀತು, ಫಸ್ಟ್ ರಿವ್ಯೂ ಹೊರಬಿತ್ತು: ರಾಕಿ ಭಾಯ್ ಗೆ ಪ್ರೇಕ್ಷಕರ ಸಲಾಂ.!ಫಸ್ಟ್ ಶೋ ಮುಗೀತು, ಫಸ್ಟ್ ರಿವ್ಯೂ ಹೊರಬಿತ್ತು: ರಾಕಿ ಭಾಯ್ ಗೆ ಪ್ರೇಕ್ಷಕರ ಸಲಾಂ.!

    ಯಶ್ ಒಬ್ಬರೇ ಕಾಣಿಸೋದು

    ಯಶ್ ಒಬ್ಬರೇ ಕಾಣಿಸೋದು

    ಯಶ್ ಜೊತೆ ಈ ಚಿತ್ರದಲ್ಲಿ ಹಲವು ಕಲಾವಿದರಿದ್ದಾರೆ. ಅನಂತ್ ನಾಗ್, ಮಾಳವಿಕ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಜಿಜಿ, ಅಯ್ಯಪ್ಪ, ವಸಿಷ್ಠ ಸಿಂಹ, ಅಚ್ಯುತ್ ರಾವ್, ನಾಯಕಿ ಶ್ರೀನಿಧಿ ಶೆಟ್ಟಿ, ಬಿ ಸುರೇಶ್ ಹೀಗೆ ಅನೇಕರಿದ್ದಾರೆ. ಎಲ್ಲರೂ ಒಳ್ಳೆಯ ಅಭಿನಯ ಮಾಡಿದ್ದಾರೆ. ಆದ್ರೆ, ಯಶ್ ಅಬ್ಬರ ಮಧ್ಯೆ ಅವರೆಲ್ಲರು ಕಳೆದು ಹೋಗ್ತಾರೆ. ಇನ್ನು ವಿಲನ್ ಗಳ ವಿಚಾರಕ್ಕೆ ಬಂದ್ರೆ ನಾಲ್ಕೈದು ಜನ ವಿಲನ್ ಬರ್ತಾರೆ. ಯಾರು, ಯಾಕೆ, ಹೇಗೆ ಎಂಬ ಸಾಕಷ್ಟು ಗೊಂದಲ ಕಾಡುತ್ತೆ.

    ಪ್ರಶಾಂತ್ ನೀಲ್ ಎರಡನೇ ಹೀರೋ

    ಪ್ರಶಾಂತ್ ನೀಲ್ ಎರಡನೇ ಹೀರೋ

    ಚಿತ್ರದ ಕಥೆಯಲ್ಲಿ ವಿಶೇಷತೇ ಏನೂ ಇಲ್ಲ. ಮುಂಬೈನ, ಸುಫಾರಿ, ಜನರನ್ನ ರಕ್ಷಿಸುವುದು, ಎಲ್ಲವೂ ಕಾಮನ್. ಬಟ್, ಆ ಮೇಕಿಂಗ್ ಕೈಚಳಕ ಸಿನಿಮಾಗೆ ಯಶಸ್ಸು ತಂದುಕೊಟ್ಟಿದೆ. ಅದಕ್ಕೆ ಯಶ್ ಉತ್ತಮ ಸಾಥ್ ನೀಡಿದ್ದಾರೆ. ಭುವನ್ ಗೌಡ, ಕಲಾನಿರ್ದೇಶಕ ಶಿವಕುಮಾರ್, ಸಂಗೀತ ನಿರ್ದೇಶಕ ರವಿ ಬಸ್ರೂರು, ಸಂಕಲನಕಾರ ಹೀಗೆ ತಾಂತ್ರಿಕವಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ನಿಜಕ್ಕೂ ಇವರ ಶ್ರಮಕ್ಕೆ ಹ್ಯಾಟ್ಸಾಪ್ ಹೇಳಲೇಬೇಕು. ಸಿನಿಮಾದ ಯಶಸ್ಸಿನಲ್ಲಿ ಇವರ ಶ್ರಮವೇ ಹೆಚ್ಚು.

    ಅಬ್ಬರದಿಂದ ತೆರೆಗೆ ಬಂತು ಕೆ.ಜಿ.ಎಫ್: ಯಶ್ ಚಿತ್ರಕ್ಕೆ ಭರ್ಜರಿ ಓಪನಿಂಗ್.!ಅಬ್ಬರದಿಂದ ತೆರೆಗೆ ಬಂತು ಕೆ.ಜಿ.ಎಫ್: ಯಶ್ ಚಿತ್ರಕ್ಕೆ ಭರ್ಜರಿ ಓಪನಿಂಗ್.!

    'ಅತ್ಯದ್ಭುತ'ವಲ್ಲ ಆದರೂ 'ಅದ್ಭುತ'

    'ಅತ್ಯದ್ಭುತ'ವಲ್ಲ ಆದರೂ 'ಅದ್ಭುತ'

    ಕೆಜಿಎಫ್ ಚಿಂದಿ, ಸೂಪರ್, ಅತ್ಯದ್ಭುತವಲ್ಲ, ಇದು ರೆಗ್ಯುಲರ್ ಸಿನಿಮಾ ಅಂತ ಅನಿಸಿದರೂ, ಇದರಲ್ಲಿ ಹೊಸತನ ಇದೆ. ಅದು ಮೇಕಿಂಗ್ ಆಗಿರಬಹುದು ಅಥವಾ ಯಶ್ ಅವರ ಪ್ರೆಸೆಂಟೆಶನ್ ಆಗಿರಬಹುದು. ಅದನ್ನ ಬಿಟ್ಟರೇ ಕೆಲವು ಕಡೆ ಜನರನ್ನ ಹಿಂಸಿಸುವುದು ಅತಿರೇಕವಾಯಿತು ಅನಿಸುತ್ತೆ. ಅಂತಿಮವಾಗಿ ಚಿತ್ರ ಇಷ್ಟವಾಗೋದು ಎರಡೇ ವಿಷ್ಯಕ್ಕೆ ಒಂದು ಯಶ್ ಇನ್ನೊಂದು ಮೇಕಿಂಗ್.

    English summary
    Kannada actor Yash starrer Kgf movie has released all over world today (december 21). the movie get good response from audience.
    Friday, December 21, 2018, 13:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X