ಕೆಜಿಎಫ್ 'ಕನ್ನಡದ ಗೋಲ್ಡನ್ ಫಿಲಂ' ಎನ್ನುತ್ತಿದ್ದಾರೆ ಪ್ರೇಕ್ಷಕ ಪ್ರಭುಗಳು.!

Recommended Video

KGF Kannada Movie: ಕೆಜಿಎಫ್ 'ಕನ್ನಡದ ಗೋಲ್ಡನ್ ಫಿಲಂ' ಎನ್ನುತ್ತಿದ್ದಾರೆ ಪ್ರೇಕ್ಷಕ ಪ್ರಭುಗಳು.!

''ವಾಹ್.....ಸೂಪರ್.....ಅಬ್ಬಾ.....ಏನೋ ಮಗಾ ಇದು ಹೀಗಿದೆ.... ಏನೋ ಇದು ಸೆಟ್'' ಇದು ಚಿತ್ರಮಂದಿರದಲ್ಲಿ ಕೆಜಿಎಫ್ ನೋಡುತ್ತಿದ್ದ ಪ್ರೇಕ್ಷಕರ ಎಕ್ಸ್ ಪ್ರೆಶನ್. ಯಶ್ ಅವರ ರೆಗ್ಯೂಲರ್ ಸಿನಿಮಾಗಳನ್ನ ನೋಡಿ ಅಭ್ಯಾಸವಾಗಿದ್ದ ಪ್ರೇಕ್ಷಕರಿಗೆ ಕೆಜಿಎಫ್ ಹೊಸ ಫೀಲ್ ಕೊಟ್ಟಿದೆ.

ಹಾಗಾಗಿ, ಸಿನಿಮಾ ನೋಡಿದವರಿಗೆ ಇದು ಹೊಸತು ಎನಿಸುತ್ತಿದೆ. ಅವರು ಫ್ಯಾನ್, ಇವರ ಫ್ಯಾನ್ ಅನ್ನದೇ ಪ್ರತಿಯೊಬ್ಬರು ಚಿತ್ರವನ್ನ ಮೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿ ನೆಗಿಟೀವ್ ಹುಡುಕದೇ ಒಂದೊಳ್ಳೆ ಸಿನಿಮಾ ಬಂದಿದೆ ಎಂದು ಖುಷಿ ಪಡ್ತಿದ್ದಾರೆ.

ಹೀಗೆ, ಕೆಜಿಎಫ್ ಚಿತ್ರದ ಮೊದಲ ಶೋ ನೋಡಿ ಚಿತ್ರಮಂದಿರದಿಂದ ಹೊರಬಂದ ಕೆಲವರು ಪ್ರೇಕ್ಷಕರನ್ನ ಮಾತನಾಡಿಸಿದಾಗ, ಅವರೆಲ್ಲರೂ ಥ್ರಿಲ್ ಆಗಿದ್ದರು. ಇನ್ನೊಂದು ಸಲ ಹೋಗ್ತೀನಿ, ಇನ್ನು ಎರಡು ಸಲ ಹೋಗ್ತೀನಿ ಅಂತ ಸ್ನೇಹಿತರಿಗೆ ಫೋನ್ ಮಾಡಿ ಹೇಳ್ತಿದ್ದರು. ಹಾಗಿದ್ರೆ, ಸಾಮಾನ್ಯ ಪ್ರೇಕ್ಷಕರಿಗೆ ಕೆಜಿಎಫ್ ಚಿತ್ರದಲ್ಲಿ ಏನು ಇಷ್ಟ ಆಯ್ತು? ಮುಂದೆ ಓದಿ.....

ಕನ್ನಡ ಗೋಲ್ಡನ್ ಫಿಲಂ

ಕನ್ನಡ ಗೋಲ್ಡನ್ ಫಿಲಂ

'ನಾನು ಫಸ್ಟ್ ಟೈಂ ಈ ರೀತಿಯಾದ ಸಿನಿಮಾ ನೋಡಿದ್ದು, ಯಶ್ ಅವರ ನಟನೆ ತುಂಬಾ ಇಷ್ಟವಾಯ್ತು. ಬ್ಯಾಕ್ರೌಂಡ್ ಮ್ಯೂಸಿಕ್ ಸಖತ್ ಆಗಿದೆ. ಸೆಟ್ ಹಾಕಿ ಶೂಟ್ ಮಾಡಿದ್ದಾರೆ ಅನ್ನೋತರ ಕಾಣಿಸಿಲ್ಲ. ಎಲ್ಲಿಯೂ ಹೆಚ್ಚು ಗ್ರಾಫಿಕ್ಸ್ ಬಳಸಿಲ್ಲ. ಎಲ್ಲವೂ ನೈಜ ಪಾತ್ರಗಳೇ ಅನಿಸುತ್ತೆ. ಯಾರದ್ದು ಆಕ್ಟಿಂಗ್ ಅನ್ಸಲ್ಲ. ಇನ್ನೊಂದು ಸಲ ನೋಡ್ತೀನಿ. ಕೊನೆಯದಾಗಿ ಹೇಳುವುದಾರೇ 'ಕನ್ನಡ ಗೋಲ್ಡನ್ ಫಿಲಂ' ಎನ್ನಬಹುದು '' ಮಂಜುನಾಥ್, ಪ್ರೇಕ್ಷಕ

ಕನ್ನಡ ಚಿತ್ರರಂಗಕ್ಕೆ ಹೆಮ್ಮೆ

ಕನ್ನಡ ಚಿತ್ರರಂಗಕ್ಕೆ ಹೆಮ್ಮೆ

''ಸಿನಿಮಾ ನಿಜಕ್ಕೂ ತುಂಬಾ ಚೆನ್ನಾಗಿದೆ. ಕನ್ನಡ ಚಿತ್ರರಂಗದಲ್ಲಿ ಇಂತಹದೊಂದು ಸಿನಿಮಾ ಬಂದಿರುವುದು ಹೆಮ್ಮೆಯ ವಿಷ್ಯ. ಯಾರೂ ಮಾಡದೇ ಇರೋದನ್ನ ಈ ಸಿನಿಮಾ ಮಾಡಿದೆ, ಯಶ್ ಅವರ ಆಕ್ಟಿಂಗ್, ಅವರ ಡೈಲಾಗ್ಸ್, ಫೈಟ್ಸ್ ಎಲ್ಲವೂ ಇಷ್ಟ ಆಯ್ತು. ಕೆಜಿಎಫ್ ಚಿತ್ರದಿಂದ ಇಂಡಸ್ಟ್ರಿಗೆ ಒಂದು ಬೆಲೆ ಬಂತು. ಇಂತಹ ಸಿನಿಮಾವನ್ನ ದಯವಿಟ್ಟು ಎಲ್ಲರೂ ಥಿಯೇಟರ್ ಗೆ ಹೋಗಿ ನೋಡ್ಬೇಕು ಅಂತ ವಿನಂತಿ ಮಾಡಿಕೊಳ್ತೀನಿ'' ಸ್ವಾಮಿ, ಪ್ರೇಕ್ಷಕ

ಯಶ್ ಆಕ್ಟಿಂಗ್ ಸೂಪರ್

ಯಶ್ ಆಕ್ಟಿಂಗ್ ಸೂಪರ್

''ಸಿನಿಮಾ ಸೂಪರ್ ಆಗಿದೆ. ಎಂಟ್ರಿ ಸೀನ್ ಚಿಂದಿ ಆಗಿದೆ. ಕ್ಲೈಮ್ಯಾಕ್ಸ್ ಗೆ ನಾನು ಫಿದಾ. ರಾಕಿಂಗ್ ಎಂಬ ಹೆಸರಿಗೆ ಯಶ್ ಅದ್ಭುತವಾಗಿ ನಟಿಸಿದ್ದಾರೆ. ಯಶ್ ಅವರ ಲುಕ್ ಸಖತ್ ಆಗಿದೆ. ಚಾಪ್ಟರ್ 2 ಬೇಗ ಬರಲಿ ಅಂತ ಕಾಯ್ತಿದ್ದೀನಿ. ಇನ್ನೊಂದು ಸಲ ಹೋಗ್ತೀನಿ'' - ಅವಿನಾಶ್, ಪ್ರೇಕ್ಷಕ

ಇನ್ನೊಂದು ಸಲ ಹೋಗ್ತೀನಿ

ಇನ್ನೊಂದು ಸಲ ಹೋಗ್ತೀನಿ

''ಬೆಳಿಗ್ಗೆ ಫಸ್ಟ್ ಶೋನೇ ನೋಡ್ದೆ. ಸೂಪರ್ ಆಗಿದೆ. ಯಶ್ ಫೈಟಿಂಗ್, ಆಕ್ಷನ್ ಅಂತೂ ಚಿಂದಿ. ಸೆಟ್ ತುಂಬಾ ಚೆನ್ನಾಗಿ ಹಾಕಿದ್ದಾರೆ. ವಿಲನ್ ಗಳು ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದಾರೆ. ಕನ್ನಡ ಸಿನಿಮಾ ಈ ಮಟ್ಟಕ್ಕೆ ರಿಲೀಸ್ ಆಗಿರುವುದು ತುಂಬಾ ಖುಷಿ ಆಗ್ತಿದೆ. ಇನ್ನೊಂದು ಸಲ ಹೋಗೋಣ ಅಂತ ಇದ್ದೀನಿ'' ಚಂದ್ರ, ಪ್ರೇಕ್ಷಕ

ಎಲ್ಲೂ ಬೋರ್ ಆಗಲ್ಲ

ಎಲ್ಲೂ ಬೋರ್ ಆಗಲ್ಲ

''ಸಿನಿಮಾ ತುಂಬಾ ಇಷ್ಟ ಆಯ್ತು. ಬ್ಯಾಕ್ರೌಂಡ್ ಮ್ಯೂಸಿಕ್, ಸ್ಕ್ರೀನ್ ಪ್ಲೇ, ಆ ಕ್ಯಾರೆಕ್ಟರ್ ಗಳು ಎಲ್ಲವೂ ಸೂಪರ್. ಒಂದೇ ಒಂದು ಕಡೆ ಬೋರ್ ಆಗಲ್ಲ, ಒಂದು ಸೀನ್ ನಲ್ಲೂ ಬೋರ್ ಆಗಲ್ಲ, ಸಿನಿಮಾ ಮುಗಿಯೋದೇ ಗೊತ್ತಾಗಲ್ಲ. ಈ ಸಿನಿಮಾ ನೋಡಿದ್ಮೇಲೆ ಯಶ್ ಅವರ ಹಳೆಯ ಚಿತ್ರಗಳು ನೆನಪಾಗಲ್ಲ. ಯಶ್ ಹೊಸ ಹೀರೋ ರೀತಿ ಹೊಸ ಇಮೇಜ್ ನಿಂದ ಬಂದಿದ್ದಾರೆ. ಇನ್ನು ಮೂರ್ನಾಲ್ಕು ಸಲ ನೋಡ್ತೀನಿ'' ವಿನಯ್, ಪ್ರೇಕ್ಷಕ

ನಿರೀಕ್ಷೆಗೆ ಮೋಸ ಆಗಲ್ಲ

ನಿರೀಕ್ಷೆಗೆ ಮೋಸ ಆಗಲ್ಲ

''ನಿರೀಕ್ಷೆ ಇಟ್ಕೊಂಡು ಹೋದವರಿಗೆ ಮೋಸ ಆಗುವುದಿಲ್ಲ. ಇಡೀ ತಂಡದ ಶ್ರದ್ಧೆ ಪ್ರತಿ ದೃಶ್ಯದಲ್ಲೂ ಎದ್ದು ಕಾಣುತ್ತಿದೆ. ಯಶ್ ಅವರಿಗಿಂತ ಪ್ರಶಾಂತ್ ನೀಲ್ ನನಗೆ ಹೆಚ್ಚು ಇಷ್ಟವಾಗ್ತಾರೆ. ವಿಲನ್ ಗಳ ಪಾತ್ರ ಮತ್ತಷ್ಟು ಗಟ್ಟಿಯಾಗಿರಬೇಕಾಗಿತ್ತು. ಚಾಪ್ಟರ್-2 ಬರೋದ್ರಿಂದ ಅದರಲ್ಲಿ ವಿಲನ್ ಗಳು ಮತ್ತಷ್ಟು ಶಕ್ತಿಯುತ ಪಾತ್ರ ನಿರ್ವಹಿಸುತ್ತಾರೆ ಅನಸುತ್ತಿದೆ'' ಶ್ರೀವಸ್ತ್, ಪ್ರೇಕ್ಷಕ

More from Filmibeat

English summary
Kannada actor Yash starrer Kgf movie has released all over world today (december 21). the movie get good response from audience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X