King Of Kotha Twitter Review: ಹೇಗಿದೆ ದುಲ್ಕರ್ 'ಕಿಂಗ್ ಆಫ್ ಕೊತ್ತಾ'? ಫಸ್ಟ್ ಶೋ ನೋಡಿದವರು ಹೇಳಿದ್ದಿಷ್ಟು

ಇಂದು ( ಆಗಸ್ಟ್ 24 ) ಗುರುವಾರ ಮಲಯಾಳಂನ ಸ್ಟಾರ್‌ ನಟ ದುಲ್ಕರ್ ಸಲ್ಮಾನ್ ನಟನೆಯ ಬಹು‌ ನಿರೀಕ್ಷಿತ ಚಿತ್ರ 'ಕಿಂಗ್ ಆಫ್ ಕೊತ್ತಾ' ಬಿಡುಗಡೆಗೊಂಡಿದೆ.

ಚಿತ್ರ ಸೆಟ್ಟೇರಿದಾಗಿನಿಂದಲೂ ತನ್ನ ವಿಭಿನ್ನ ಪೋಸ್ಟರ್ ಹಾಗೂ ಮಾಸ್ ಎನಿಸುವ ಅಂಶಗಳಿಂದ ಸಿಕ್ಕಾಪಟ್ಟೆ ಹೈಪ್ ಹುಟ್ಟುಹಾಕಿತ್ತು. ಹೆಚ್ಚು ಮಾಸ್ ಸಿನಿಮಾಗಳನ್ನು ನಿರ್ಮಿಸದ ಮಲಯಾಳಂ ಚಿತ್ರರಂಗದಲ್ಲಿ ಹಲವು ದಿನಗಳ ನಂತರ ತಯಾರಾದ ಔಟ್ ಅಂಡ್ ಔಟ್ ಮಾಸ್ ಸಿನಿಮಾ ಇದಾಗಲಿದೆ ಎಂಬ ನಿರೀಕ್ಷೆಯನ್ನು ಹುಟ್ಟುಹಾಕಿತ್ತು ಕಿಂಗ್ ಆಫ್ ಕೊತ್ತಾ. ಭಿನ್ನ ವಿಭಿನ್ನ ಕಥಾ ಹಂದರವಿರುವ ಚಿತ್ರಗಳನ್ನು ಯಾವಾಗಲೂ ಆಯ್ದುಕೊಳ್ಳುವ ದುಲ್ಕರ್ ಸಲ್ಮಾನ್ ಮಾಸ್ ಸಿನಿಮಾವೊಂದರಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದು ಕಮ್ಮಾಟಿಪಾಡಂ ಸಿನಿಮಾದಲ್ಲಿ.

King Of Kotha Twitter Review: What Twitter Audience Says After Watching King Of Kotha Movie

ಈ ಸಿನಿಮಾ ಬಳಿಕ ದುಲ್ಕರ್ ಸಲ್ಮಾನ್ ಪ್ಯೂರ್ ಮಾಸ್ ಸಿನಿಮಾವನ್ನು ಈ ಬಾರಿ ಆಯ್ದುಕೊಂಡಿದ್ದಾರೆ. ಇನ್ನು ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಮತ್ತು ಅವುಗಳಲ್ಲಿನ ದೃಶ್ಯ, ಕಲಾವಿದರ ವೇಷಭೂಷಣ ಸಿನಿ ರಸಿಕರಲ್ಲಿ ಕುತೂಹಲ ಕೆರಳಿಸಿತ್ತು. ತೊಂಬತ್ತರ ದಶಕದ ಸಮಯದ ರೌಡಿಸಂ ಕಥೆಯನ್ನು ಬೆಳ್ಳಿ ತೆರೆ ಮೇಲೆ ವೀಕ್ಷಿಸಲು ದುಲ್ಕರ್ ಸಲ್ಮಾನ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ಕಾತರರಾಗಿ ಇಂದು ಬೆಳಗ್ಗಿನ ಪ್ರದರ್ಶನಕ್ಕೆ ಚಿತ್ರಮಂದಿರಗಳಲ್ಲಿ ಹಾಜರಾಗಿದ್ದಾರೆ.

ಹೀಗೆ ಫಸ್ಟ್ ಡೇ ಫಸ್ಟ್ ಶೋ ಕಿಂಗ್ ಕೊತ್ತಾ ಚಿತ್ರವನ್ನು ವೀಕ್ಷಿಸಿ ಹೊರಬಂದಿರುವ ಸಿನಿ ರಸಿಕರು ಚಿತ್ರ ಹೇಗಿದೆ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಅವರು ಪ್ರಕಟಿಸಿರುವ ವಿಮರ್ಶೆಗಳು ಈ ಕೆಳಕಂಡಂತಿವೆ.

ಜನಪ್ರಿಯ ಸಿಕೆ ರಿವ್ಯೂ ಕೊಟ್ಟ ವಿಮರ್ಶೆ:

ಪ್ರಸಿದ್ಧ ಚಿತ್ರಗಳ ವಿಮರ್ಶೆಗಳನ್ನು ವೇಗವಾಗಿ ಹಾಗೂ ಯಾವುದೇ ರಾಜಕೀಯವಿಲ್ಲದೇ ನೇರವಾಗಿ ನೀಡುವುದಕ್ಕೆ ಜನಪ್ರಿಯತೆ ಗಳಿಸಿರುವ ವಿಮರ್ಶಕರಾದ ಸಿಕೆ ರಿವ್ಯೂ ಕಿಂಗ್ ಆಫ್ ಕೊತ್ತಾಗೆ ಸಾಧಾರಣಕ್ಕಿಂತ ಉತ್ತಮ ಎಂಬ ವಿಮರ್ಶೆಯನ್ನು ನೀಡಿದೆ. ದುಲ್ಕರ್ ಸಲ್ಮಾನ್ ನಿರ್ದಯ ರೌಡಿಯಾಗಿ ಅಬ್ಬರಿಸಿದ್ದಾರೆ. ಸಹ ನಟರಾದ ಶಬೀರ್, ಶಮ್ಮಿ ತಿಲಕನ್ ಹಾಗೂ ನೈಲಾ ಉಸ್ಲಾ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ವಿಷ್ಯುಯಲ್ಸ್ ಹಾಗೂ ಹಿನ್ನೆಲೆ ಸಂಗೀತ ಚಿತ್ರದ ಬಿಗ್ಗೆಸ್ಟ್ ಪ್ಲಸ್ ಪಾಯಿಂಟ್. ಹೊಸತನವಿಲ್ಲದ ಸಾಮಾನ್ಯ ಕಥೆ. ಒಳ್ಳೆಯ ಮೇಕಿಂಗ್. ಊಹಿಸಬಹುದಾದ ಕಥೆ ಹಾಗೂ ನಿಧಾನಗತಿಯಲ್ಲಿ ಸಾಗುವ ಚಿತ್ರಕಥೆ. ಆಕ್ಷನ್ ದೃಶ್ಯಗಳು ಓಕೆ. ಸಾಧಾರಣಕ್ಕಿಂತ ಉತ್ತಮ ಚಿತ್ರ ಎಂದು ಸಿಕೆ ರಿವ್ಯೂ ಟ್ವೀಟ್ ಮಾಡಿದೆ.

ಫ್ರಂಟ್ ರೋನದ್ದೂ ಸೇಮ್ ವಿಮರ್ಶೆ:

ಇನ್ನು ಫ್ರಂಟ್ ರೋ ಎಂಬ ವಿಮರ್ಶಕ ಸಹ ಸಿಕೆ ರಿವ್ಯೂ ನೀಡಿದ ವಿಮರ್ಶೆಯ ರೀತಿಯೇ ಕಿಂಗ್ ಆಫ್ ಕೊತ್ತಾಗೆ ವಿಮರ್ಶೆ ಬರೆದುಕೊಂಡಿದ್ದಾರೆ. ಕಿಂಗ್ ಆಫ್ ಕೊತ್ತಾ ಒಂದು ಸಾಧಾರಣಕ್ಕಿಂತ ಉತ್ತಮ ಚಿತ್ರವಾಗಿದ್ದು ಹಲವು ಪ್ಲಸ್ ಹಾಗೂ ಮೈನಸ್ ಪಾಯಿಂಟ್‌ಗಳನ್ನು ಹೊಂದಿದೆ. ನಿರ್ದೇಶಕ ಅಭಿಲಾಷ್ ಹಲವೆಡೆ ಸೂಪರ್ ಎನಿಸುವ ಸನ್ನಿವೇಶಗಳನ್ನು ಸೃಷ್ಟಿಸಿದ್ದರೂ ಸಹ ಎಮೋಷನಲ್ ಭಾಗದಲ್ಲಿ ಅವರ ಬರವಣಿಗೆ ಇನ್ನೂ ಸಹ ಗಟ್ಟಿಯಾಗಿ ಇರಬೇಕಿತ್ತು. ಕ್ಲೈಮ್ಯಾಕ್ಸ್ ಚೆನ್ನಾಗಿದೆ. ಆಕ್ಷನ್ ದೃಶ್ಯಗಳು ಚೆನ್ನಾಗಿವೆ. ಒಮ್ಮೆ ನೋಡುವಂತಹ ಚಿತ್ರ. ಬಾಕ್ಸ್ ಆಫೀಸ್‌ನಲ್ಲಿ ಖಂಡಿತವಾಗಿ ಗೆಲ್ಲಲಿದೆ ಎಂದು ಫ್ರಂಟ್ ರೋ ಬರೆದುಕೊಂಡಿದೆ.

ಮಿಶ್ರ ಪ್ರತಿಕ್ರಿಯೆ ಹೆಚ್ಚು:

ಕಿಂಗ್ ಆಫ್ ಕೊತ್ತಾ ಚಿತ್ರಕ್ಕೆ ಹೆಚ್ಚಾಗಿ ಮಿಶ್ರ ಪ್ರತಿಕ್ರಿಯೆಗಳೇ ವ್ಯಕ್ತವಾಗಿವೆ. ಆದರೆ ಈ ಮಿಶ್ರ ಪ್ರತಿಕ್ರಿಯೆ ನೀಡಿದ ಪ್ರತಿಯೊಬ್ಬರೂ ಸಹ ಚಿತ್ರವನ್ನು ಒಂದೊಮ್ಮೆ ನೋಡಬಹುದು ಎಂದು ಹೇಳುತ್ತಿದ್ದು, ಚಿತ್ರ ಬಾಕ್ಸ್ ಅಫೀಸ್‌ನಲ್ಲಿ ಗೆಲ್ಲುವುದು ಪಕ್ಕಾ ಎಂದು ಬರೆದುಕೊಳ್ಳುತ್ತಿದ್ದಾರೆ. ಇನ್ನು ಹೆಚ್ಚಾಗಿ ಸಂಗೀತ ನಿರ್ದೇಶನವನ್ನು ಹಾಡಿ ಹೊಗಳುತ್ತಿದ್ದು, ಚಿತ್ರದ ಚಿತ್ರಕಥೆ ನಿಧಾನಗತಿಯಿಂದ ಕೂಡಿರುವುದೇ ಚಿತ್ರದ ದೊಡ್ಡ ಮೈನಸ್ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಕಿಂಗ್ ಆಫ್ ಕೊತ್ತಾ ಮೂಡಿಸಿದ್ದ ನಿರೀಕ್ಷೆಯನ್ನು ಮುಟ್ಟದೇ ಇದ್ದರೂ ಸಹ ಅದಕ್ಕೆ ವಿರುದ್ಧವಾದಂತಹ ಪ್ರತಿಕ್ರಿಯೆಯನ್ನು ಪಡೆದುಕೊಳ್ಳದೇ ಒಂದೊಮ್ಮೆ ನೋಡಬಹುದಾದಂತಹ ಸಿನಿಮಾ ಎಂಬ ವಿಮರ್ಶೆಗಳನ್ನು ಹೆಚ್ಚು ಪಡೆದುಕೊಳ್ತಿದೆ.

More from Filmibeat

English summary
Explore The Audience Response To King Of Kotha Malayalam Movie On Twitter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X