For Quick Alerts
  ALLOW NOTIFICATIONS  
  For Daily Alerts

  ಸಕತ್ ಕಾಮಿಡಿ 'ಲೆಸ್' ಚಿತ್ರದಲ್ಲಿ ಕಪಿಲ್ 'ಕಮಾಲ್'

  By ಜೇಮ್ಸ್ ಮಾರ್ಟಿನ್
  |

  ಲಾಜಿಕ್ ಇಲ್ಲದೆ, ಕಾಮನ್ ಸೆನ್ಸ್ ಇಲ್ಲದೆ ಕಪಿಲ್ ಶರ್ಮ 'ಕಾಮಿಡಿ ನೈಟ್' ಬೆಳ್ಳಿ ಪರದೆ ಮೇಲೆ ನೋಡಬೇಕೆನಿಸಿದರೆ ತಪ್ಪದೇ ಕಿಸ್ ಕಿಸ್ಕೋ ಪ್ಯಾರ್ ಕೋ ಚಿತ್ರ ಹೋಗಿ ಬನ್ನಿ. ಕನ್ನಡದಲ್ಲಿ ಹೇಮಂತ್ ಹೆಗ್ಡೆ ನಿರ್ದೇಶನದ 'ನಿಂಬೆಹುಳಿ' ಚಿತ್ರದ ಕಥೆಯನ್ನು ಕದ್ದ ಆರೋಪ ಹೊತ್ತಿರುವ ಈ ಚಿತ್ರಕ್ಕೆ ಶಾರುಖ್ ಖಾನ್, ವಿದ್ಯಾಬಾಲನ್ ಸೇರಿದಂತೆ ಸೆಲೆಬ್ರಿಟಿಗಳಿಂದ ಭಾರಿ ಮೆಚ್ಚುಗೆ ಸಿಕ್ಕಿದೆ.

  ಟೀಂ ಇಂಡಿಯಾದ ಕ್ರಿಕೆಟರ್ಸ್ ಕೂಡಾ ಚಿತ್ರ ನೋಡಿ ಆನಂದಿಸಿದ್ದಾರೆ. ಅದರೆ, ಸಾಮಾನ್ಯ ಪ್ರೇಕ್ಷಕ ಕೊಟ್ಟ ಕಾಸಿಗೆ ತಕ್ಕ ಕಜ್ಜಾಯವನ್ನು ಕಪಿಲ್ ನೀಡುತ್ತಾರೆಯೇ? ಎಂಬ ಪ್ರಶ್ನೆಗೆ ವಿಮರ್ಶಕರು 'ನೋ' ಎಂದಿದ್ದಾರೆ. ವಿಮರ್ಶಕರು ನೀಡಿರುವ ವಿಮರ್ಶೆಗಳನ್ನು ಗುಡ್ಡೆ ಹಾಕಿ ಲೆಕ್ಕಾಚಾರ ಮಾಡಿದರೆ ಸರಾಸರಿ 5 ಕ್ಕೆ 2.5 ರಷ್ಟು ಅಂಕ ಈ ಚಿತ್ರ ಸಲ್ಲಬಹುದು.

  ಟಿವಿ ರಿಯಾಲಿಟಿ ಟಾಕ್ ಶೋ ನಂತರ ಬಾಲಿವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿರುವ ಕಪಿಲ್ ಅವರು ಈ ಚಿತ್ರದಲ್ಲಿ ಗೆದ್ದಿದ್ದಾರೆ. ಅದರೆ, ಚಿತ್ರ ಎಲ್ಲರನ್ನು ಸೆಳೆಯುವಲ್ಲಿ ಸೋಲುತ್ತದೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.

  ಬಾಜಿಗರ್, ರೇಸ್ ನಂಥ ಚಿತ್ರವನ್ನು ನೀಡಿದ ಅಬ್ಬಾಸ್ ಮಸ್ತಾನ್ ಜೋಡಿ ತಮ್ಮ 30 ವರ್ಷಗಳ ಅನುಭವದ ಲಾಭ ಪಡೆದು ಕಾಮಿಡಿ ಚಿತ್ರವನ್ನು ಸಮರ್ಥವಾಗಿ ನೀಡುವಲ್ಲಿ ಕೊಂಚ ಎಡವಿದ್ದಾರೆ. ಚಿತ್ರ ಬೋರ್ ಹೊಡೆಸದಿದ್ದರೂ ಯಾವುದೇ ಮ್ಯಾಜಿಕ್ ಮಾಡುವುದಿಲ್ಲ. ಚಿತ್ರದ ಬಗ್ಗೆ ಇನ್ನಷ್ಟು ಮಾತು, ವಿಮರ್ಶಕರ ವಿಮರ್ಶೆ ಮುಂದಿದೆ.

  ಬಹುಪತ್ನಿವಲ್ಲಭ ನಾಯಕನ ಚಿತ್ರ ಹೊಸದೇನಿಲ್ಲ

  ಬಹುಪತ್ನಿವಲ್ಲಭ ನಾಯಕನ ಚಿತ್ರ ಹೊಸದೇನಿಲ್ಲ

  ಚಿತ್ರದ ಆರಂಭದಿಂದ ಕೊನೆ ತನಕ ಯಾವುದೇ ಸನ್ನಿವೇಶದಲ್ಲೂ ಲಾಜಿಕ್ ಇಲ್ಲ. ಪ್ರಶ್ನೆ ಮಾಡದೆ ಚಿತ್ರ ನೋಡಿ ಆನಂದಿಸಬಹುದು. ಮೂವರನ್ನು ಮದುವೆಯಾಗಿ ಒಂದೇ ಕಟ್ಟಡದಲ್ಲಿ ವಾಸಿಸುವುದು ಕಪಿಲ್ ಚಿತ್ರದಲ್ಲಿ ಮಾತ್ರ ಸಾಧ್ಯ ಎಂದು ಇನ್ಮುಂದೆ ಹೇಳಿಕೊಳ್ಳಬಹುದು. ಕಪಿಲ್ ಬಿಟ್ಟರೆ ಮಿಕ್ಕವರಿಂದ ಅಭಿನಯ ಹಾಗೂ ಕಾಮಿಡಿ ಟೈಮಿಂಗ್ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಕಪಿಲ್ ಅಭಿಮಾನಿಯಾದರೆ ಒಮ್ಮೆ ನೋಡಿ- ಸುಬ್ರಮಣ್ಯ ಹರಿಕುಮಾರ್, ಬಾಲಿವುಡ್ ಲೈಫ್ 2.5/5

  ಕಪಿಲ್ ಪಂಚ್ ಲೈನ್ ಬಿಟ್ರೆ ಟುಸ್ : ಫಸ್ಟ್ ಪೋಸ್ಟ್

  ಕಪಿಲ್ ಪಂಚ್ ಲೈನ್ ಬಿಟ್ರೆ ಟುಸ್ : ಫಸ್ಟ್ ಪೋಸ್ಟ್

  ಟಾಕ್ ಶೋ ರೀತಿಯಲ್ಲೇ ಕಪಿಲ್ ತಮ್ಮ ಪಂಚ್ ಲೈನ್ ಮೂಲಕ ಎಲ್ಲರನ್ನು ನಗಿಸುತ್ತಾರೆ. ಅದರೆ, ನಟನೆ ವಿಷಯಕ್ಕೆ ಬಂದರೆ ಇನ್ನೂ ಕಲಿಯುವುದು ಸಾಕಷ್ಟಿದೆ. 90 ರ ದಶಕದಲ್ಲಿ ಈ ಚಿತ್ರ ಬಂದಿದ್ದರೆ ಜನ ಹುಚ್ಚೆದ್ದು ನೋಡುತ್ತಿದ್ದರು ಎನ್ನಿಸುತ್ತದೆ. ಈಗ ಕಾಲ ಬದಲಾಗಿದೆ. ಟಿವಿ ಚಾನೆಲ್ ನಲ್ಲೇ ಟಾಕ್ ಶೋ ಚೆನ್ನಾಗಿರುತ್ತದೆ. ಸಿನಿಮಾ ಎಂದರೆ ಬೇರೆಯದೇ ಮಾಧ್ಯಮ ತಿಳಿದಿರಲಿ-ದೀಪಾಂಜನಾ ಪಾಲ್

  rn

  ಕಮಲ್ ಆರ್ ಖಾನ್ ರಿಂದ ವಿಮರ್ಶೆ

  ಕಮಲ್ ಆರ್ ಖಾನ್ ರಿಂದ ವಿಮರ್ಶೆ, ನಿರ್ದೇಶಕರಾದ ಅಬ್ಬಾಸ್ ಮಸ್ತಾನ್ ಗೆ 5/5 ಕೊಟ್ಟಿದ್ದಾರೆ.

   ಕಪಿಲ್ ಅಭಿಮಾನಿಯಾದ್ರೆ ನೋಡಿ

  ಕಪಿಲ್ ಅಭಿಮಾನಿಯಾದ್ರೆ ನೋಡಿ

  ಕಪಿಲ್ ಟಾಕ್ ಶೋ ಅಭಿಮಾನಿಯಾದ್ರೆ ತಪ್ಪದೇ ನೋಡಿ ಆನಂದಿಸಬಹುದು. ಅಬ್ಬಾಸ್ ಮಸ್ತಾನ್ ಅವರ ಕಥೆ ಆಯ್ಕೆ ಹಳೆಯದಾದರೂ ನಿರೂಪಣೆಯಲ್ಲಿ ಹೊಸತನವಿದೆ. ಹುಸೇನ್ ಬರ್ಮಾವಾಲಾ ಅವರ ಸಂಕಲನ ಚಿತ್ರದ ಓಟಕ್ಕೆ ಪೂರಕವಾಗಿದೆ. 3/5 ಬಾಲಿವುಡ್ ಹಂಗಾಮಾ.ಕಾಂ

  English summary
  'Kis Kisko Pyaar Karu' will require you to literally leave logic, intelligence and common sense behind. Having said that Kapil Sharma's comedy flick is thoroughly enjoyable and will make you laugh through out. Definitely worth the watch.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X