For Quick Alerts
  ALLOW NOTIFICATIONS  
  For Daily Alerts

  'ವಾಸ್ಕೋಡಿಗಾಮ'ನ ಹೊಸ ರೂಟು; ಏನಂದ್ರು ವಿಮರ್ಶಕರು?

  By Harshitha
  |

  ನಟ ಕಿಶೋರ್ ಲೆಕ್ಚರರ್ ಆಗಿ ಅಭಿನಯಿಸಿರುವ 'ವಾಸ್ಕೋಡಿಗಾಮ' ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಕಾಲೇಜು ಹುಡುಗರ ಪಾಲಿಗೆ ಸಖತ್ ಮನರಂಜನೆ ನೀಡುವ 'ವಾಸ್ಕೋಡಿಗಾಮ' ವಿದ್ಯಾರ್ಥಿಗಳಿಗೆ ಹೇಳಿ ಮಾಡಿಸಿದ ಚಿತ್ರ.

  ಇಂದಿನ ಶಿಕ್ಷಣ ವ್ಯವಸ್ಥೆಯನ್ನು ವಿಡಂಬನೆ ಮಾಡುವ 'ವಾಸ್ಕೋಡಿಗಾಮ' ಚಿತ್ರಕ್ಕೆ ವಿದ್ಯಾರ್ಥಿಗಳಂತೂ ಜೈಕಾರ ಹಾಕಿದ್ದಾರೆ. ಆದ್ರೆ, ವಿಮರ್ಶಕರಿಗೆ 'ವಾಸ್ಕೋಡಿಗಾಮ'ನ ಹೊಸ ಶಿಕ್ಷಣ ದಾರಿ ಇಷ್ಟವಾಯ್ತಾ? [ವಿಮರ್ಶೆ : ವಿದ್ಯಾರ್ಥಿಗಳಿಗಾಗಿ ಹೇಳಿ ಮಾಡಿಸಿರುವ 'ವಾಸ್ಕೋಡಿಗಾಮ']

  ನಿರ್ದೇಶಕ ಮಧುಚಂದ್ರ ನೀಡಿರುವ ಫಾರ್ಮುಲಾ ಬಗ್ಗೆ ವಿಮರ್ಶಕರ ಅಭಿಪ್ರಾಯವೇನು ಅಂತ ತಿಳಿದುಕೊಳ್ಳೋಣ ಬನ್ನಿ...'ವಾಸ್ಕೋಡಿಗಾಮ' ಚಿತ್ರದ ಬಗ್ಗೆ ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ ವಿಮರ್ಶೆಗಳ ಗುಚ್ಛ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

  ಪ್ರಯಾಸದ ಪಾಠ.! - ಪ್ರಜಾವಾಣಿ

  ಪ್ರಯಾಸದ ಪಾಠ.! - ಪ್ರಜಾವಾಣಿ

  ಉದ್ಯಮವಾಗಿರುವ ಶಿಕ್ಷಣ ವ್ಯವಸ್ಥೆಗೆ ವಿರುದ್ಧವಾಗಿ, ಯುವಜನತೆಗೆ ಇಷ್ಟವಾದದ್ದನ್ನು ಮಾಡುವಂತೆ ಅವರನ್ನು ಪ್ರೇರೇಪಿಸುವ ಮತ್ತು ಅದರಲ್ಲಿ ಅವರು ಯಶಸ್ವಿಯಾಗುವಂತೆ ಕಾಳಜಿ ವಹಿಸುವ ಕಷ್ಟದ ಕೆಲಸ ನಿರ್ವಹಿಸಿದ್ದಾರೆ ನಿರ್ದೇಶಕ ಮಧು ಚಂದ್ರ. ಈ ಸಂದೇಶವನ್ನು ಪ್ರೇಕ್ಷಕನಿಗೆ ತಲುಪಿಸುವಲ್ಲಿ ನಿರ್ದೇಶಕರಿಗೆ ನೆರವಾಗಿದ್ದು ನಾಯಕ ವಾಸು ಡಿ. ಗಾಮನಹಳ್ಳಿ ಅಲಿಯಾಸ್ ವಾಸ್ಕೋಡಿಗಾಮ (ಕಿಶೋರ್). ಎಲ್ಲರಿಗೂ ಗೊತ್ತಿರುವ ಈ ಸಮಸ್ಯೆಯನ್ನು ಸಿನಿಮಾ ಮೂಲಕ ಪ್ರೇಕ್ಷಕನಿಗೆ ದಾಟಿಸುವುದು ನಾಯಕನ ನಟನೆಯಿಂದಷ್ಟೇ ಶಕ್ಯವಿಲ್ಲ. ನಿರ್ದೇಶಕರ ಶ್ರಮವೂ ಬೇಕು. ಆ ವಿಚಾರದಲ್ಲಿ ನಿರ್ದೇಶಕರು ಎಡವಿದ್ದಾರೆ. - ಗಣೇಶ್ ವೈದ್ಯ

  ಮಾಮ ಮಾಮ ಸ್ಟೂಡೆಂಟ್ ಮಾಮ, ಬೇಡ ಬೇಡ ವಾಸ್ಕೋಡಿಗಾಮ - ಕನ್ನಡ ಪ್ರಭ

  ಮಾಮ ಮಾಮ ಸ್ಟೂಡೆಂಟ್ ಮಾಮ, ಬೇಡ ಬೇಡ ವಾಸ್ಕೋಡಿಗಾಮ - ಕನ್ನಡ ಪ್ರಭ

  ಇಂದಿನ ಶಿಕ್ಷಣ ವ್ಯವಸ್ಥೆಯ ಟೀಕೆಯಾಗಿ ಸಿನೆಮಾ ಮಾಡುವಾಗ, ಟೀಕೆ ಮಾಡಲು ಬಳಸುತ್ತಿರುವ ಮಾಧ್ಯಮವನ್ನು ಸಶಕ್ತವಾಗಿ ಬಳಸಿಕೊಳ್ಳುವುದು ಅಗತ್ಯ. ಆ ಮಾಧ್ಯಮದ ಪರಿಣಿತಿಯಿರಬೇಕು, ಸೃಜನಶೀಲತೆಯಿರಬೇಕು ಮತ್ತು ಮಾಧ್ಯಮದ ಬಗ್ಗೆ ಅಪಾರ ಪ್ರೀತಿ-ಕಾಳಜಿ ಇರಬೇಕು. ಅಥವಾ ಕಡೆಯ ಪಕ್ಷ ಟೀಕೆ ಮಾಡುತ್ತಿರುವ ವ್ಯವಸ್ಥೆಯ ಬಗ್ಗೆಯಾದರೂ ಆಳವಾದ ಅಧ್ಯಯನ ಇರಬೇಕು. ಇವುಗಳಲ್ಲಿ ಯಾವುದೂ ಇಲ್ಲವಾದರೆ ಆ ಟೀಕೆ, ವಿಮರ್ಶೆಯೇ ಹಾಸ್ಯಾಸ್ಪದವಾಗುತ್ತದೆ. ಶಿಕ್ಷಣ ವ್ಯವಸ್ಥೆಯನ್ನು ವಿಮರ್ಶೆ ಮಾಡಲು ಹೊರಟಿರುವ ಮಧುಚಂದ್ರ ನಿರ್ದೇಶನದ 'ವಾಸ್ಕೋಡಿಗಾಮ' ಸಿನೆಮಾದ್ದು ಕೂಡ ಇದೇ ಅವಸ್ಥೆ! - ಗುರುಪ್ರಸಾದ್ ನಾರಾಯಣ

  Vascodigama review - Times of India

  Vascodigama review - Times of India

  Vasu D Gammanahalli, fondly known as Vascodigama, has kidnapped all students from a college. The media breaks into a frenzy as do parents and others. What made him do so? The filmmakers, throughout their campaigning, claimed that this film has a relevant social message regarding the current education system. The trailers had evoked a lot of interest too. But, eventually, the film ends up being what most students would colloquially term a 'tus pataki' (a malfunctioning firecracker). - Sunayana Suresh

  Vascodigama review - Bangalore Mirror

  Vascodigama review - Bangalore Mirror

  Vascodigama is a film that has the lofty ambition of clearing the cobwebs of the education system. For a change, here is a film that almost entirely takes place on a college campus. The film takes comic pot-shots at the education system, like any average college student would do. In the end, Vascodigama reminds one of 3 Idiots as far as its solution to the problem goes. - Shyam Prasad S

  English summary
  Kannada Actor Kishore starrer Kannada Movie 'Vascodigama' has received mixed response from the critics. Here is the collection of reviews by Top News Papers of Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X