For Quick Alerts
  ALLOW NOTIFICATIONS  
  For Daily Alerts

  ಅರ್ಜುನ್ - ನಂದಿನಿಯ 'ಕಿಸ್' ನೋಡಿದ ವಿಮರ್ಶಕರು ಏನ್ ಹೇಳಿದ್ರು?

  |

  'ಕಿಸ್' ಸಿನಿಮಾ ನಿನ್ನೆ (ಶುಕ್ರವಾರ) ಬಿಡುಗಡೆಯಾಗಿದೆ. ಮತ್ತೆ ಎ ಪಿ ಅರ್ಜುನ್ ಪ್ರೀತಿಯ ಕಥೆ ಹೇಳಿ, ಹೊಸ ಜೋಡಿಯನ್ನು ಪರಿಚಯ ಮಾಡಿದ್ದಾರೆ.

  ಈ ಸಿನಿಮಾ ಯುವ ಜನತೆಗೆ ಹತ್ತಿರ ಆಗುವ ಕಥೆ ಹೊಂದಿದೆ. ಪಕ್ಕಾ ಲವ್ ಸ್ಟೋರಿ ಆಗಿರುವ ಈ ಸಿನಿಮಾ ರಾಯಲ್ ಹುಡುಗ ಹಾಗೂ ಕ್ಯೂಟ್ ಹುಡುಗಿಯ ಕಿಸ್ಸಿಂಗ್ ಕಥೆಯಾಗಿದೆ. ಮೊದಲ ಸಿನಿಮಾದಲ್ಲಿಯೇ ನಟ ವಿರಾಟ್ ಹಾಗೂ ಶ್ರೀಲೀಲಾ ನಟನೆಗೆ ದೊಡ್ಡ ಮಾತುಗಳು ಕೇಳಿ ಬಂದಿವೆ.

  Kiss Review: 72 ದಿನಗಳ 'ಕ್ಯೂಟ್' ಲವ್ ಸ್ಟೋರಿ

  ಸಿನಿಮಾ ಕಂಟೆಂಟ್ ವಿಷಯದ ಬಗ್ಗೆ ಕೊಂಚ ಬೇಸರ ಆಗಿರುವ ವಿಮರ್ಶಕರು ಒಟ್ಟಾರೆ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಹರಿಕೃಷ್ಣ ಸಂಗೀತಕ್ಕೆ ವಿಶೇಷವಾಗಿ ಪ್ರಶಂಸೆ ನೀಡಿದ್ದಾರೆ. ಕನ್ನಡ ದಿನಪತ್ರಿಕೆಗಳಲ್ಲಿ ಬಂದ 'ಕಿಸ್' ಸಿನಿಮಾದ ವಿಮರ್ಶೆ ಹೀಗಿದೆ.

  ಯುವ ಪ್ರೇಕ್ಷಕರನ್ನು ಕಟ್ಟಿಹಾಕುವ ಕಿಸ್: ವಿಜಯ ಕರ್ನಾಟಕ

  ಯುವ ಪ್ರೇಕ್ಷಕರನ್ನು ಕಟ್ಟಿಹಾಕುವ ಕಿಸ್: ವಿಜಯ ಕರ್ನಾಟಕ

  ''ಎ.ಪಿ. ಅರ್ಜುನ್‌ ನಿರ್ದೇಶನದ ಚಿತ್ರ ‘ಕಿಸ್' ಮೊದಲೇ ಹೇಳಿದಂತೆ ಕ್ಯೂಟ್ ಕಪಲ್‌ಗಳ ಲವ್‌ ಸ್ಟೋರಿಯ ಚಿತ್ರ. ವಿರಾಟ್‌ ಮತ್ತು ಶ್ರೀಲೀಲಾ ನಟನೆಯ ಈ ಸಿನಿಮಾ ಯುವಜನತೆಗೆ ಭರಪೂರ ಮನರಂಜನೆ ನೀಡುವುದರಲ್ಲಿ ಅನುಮಾನವೇ ಇಲ್ಲ. ಕಲರ್‌ಫುಲ್‌ ಆಗಿ ತೆರೆಗೆ ತಂದಿರುವ ನಿರ್ದೇಶಕರು ಲವ್‌ ಸ್ಟೋರಿ ಬಿಟ್ಟು ಅತ್ತಿತ್ತ ಹೋಗದೆ ಯುವ ಪೀಳಿಗೆಯನ್ನು ರಂಜಿಸುವುದರತ್ತಲೇ ಗಮನ ಹರಿಸಿದ್ದಾರೆ. ಸುಂದರವಾಗಿ ತೆರೆಯ ಮೇಲೆ ತಂದಿರುವ ನಿರ್ದೇಶಕರು ಸ್ವಲ್ಪ ಚಿತ್ರದ ಕಂಟೆಂಟ್ ಮತ್ತು ಅವಧಿಯ ಬಗ್ಗೆ ಎಚ್ಚರಿಕೆ ವಹಿಸಿದ್ದರೆ ಉತ್ತಮವಿತ್ತು ಎನ್ನಿಸದಿರದು. ಕೆಲವೆಡೆ ಲ್ಯಾಗ್ ಎನ್ನಿಸುತ್ತದೆ. ನಟನೆಯಲ್ಲಿ ವಿರಾಟ್‌ ಮತ್ತು ಶ್ರೀಲೀಲಾ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ವಿರಾಟ್‌ ಮೊದಲ ಚಿತ್ರದಲ್ಲಿ ಡಾನ್ಸ್ ಮತ್ತು ಫೈಟ್ ದೃಶ್ಯಗಳಲ್ಲಿ ನುರಿತ ನಟನಂತೆ ಮಿಂಚಿದ್ದಾರೆ.'' - ಪದ್ಮಾ ಶಿವಮೊಗ್ಗ

  ಮುತ್ತಿನ ಮತ್ತಿನಲ್ಲಿ ಯೂಥ್ ಫುಲ್ ಜರ್ನಿ - ಕನ್ನಡ ಪ್ರಭ

  ಮುತ್ತಿನ ಮತ್ತಿನಲ್ಲಿ ಯೂಥ್ ಫುಲ್ ಜರ್ನಿ - ಕನ್ನಡ ಪ್ರಭ

  ''ಕಿಸ್'ಗಾಗಿ ಪರದಾಡುವ ಒಂದು ಮುದ್ದಾದ ಜೋಡಿಯ ಕಥೆಯೇ 'ಕಿಸ್' ಸಿನಿಮಾ. ಅವರ ಔಟ್ ಲುಕ್ ಗೆ ತಕ್ಕಂತೆ ಇದೊಂದು ಪಕ್ಕಾ ಯೂತ್ ಫುಲ್ ಸಿನಿಮಾ. ಕಾಲೇಜು ಹುಡುಗ-ಹುಡುಗಿಯರೇ ಇದರ ಟಾರ್ಗೆಟ್. ಆ ಲೆಕ್ಕಕ್ಕೆ ಇದೊಂದು ಶುದ್ಧ ಕಾಲೇಜು ಲವ್ ಸ್ಟೋರಿ. ಹಾಗಂತ ಪ್ರೀತಿಗೆ ಅವರಷ್ಟೇ ರಾಯಭಾರಿಗಳಲ್ಲ. ಪ್ರೀತಿಸುವ ಪ್ರತಿ ಮನಸ್ಸುಗಳು ಅದರ ವಾರಸುದಾರರೇ. ಅವರೆಲ್ಲರಿಗೂ ಇಷ್ಟವಾಗಬಹುದಾದ ಸಿನಿಮಾ. ನವ ಜೋಡಿಯ ಮುದ್ದಾದ ನಟನೆ ಕೊಂಚ ಕತೆ ತೆಳು ಅನ್ನನುವುದನ್ನು ಮರೆಸುತ್ತದೆ.'' - ದೇಶಾದ್ರಿ ಹೊಸ್ಮನೆ

  'ಕಿಸ್' ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಗಾನ

  ಆದಿ-ಅಂತ್ಯದಿ ಕಿಸ್ ನಡುನಡುವೆ ಖುಷ್ - ವಿಜಯ ವಾಣಿ

  ಆದಿ-ಅಂತ್ಯದಿ ಕಿಸ್ ನಡುನಡುವೆ ಖುಷ್ - ವಿಜಯ ವಾಣಿ

  ''ನಾಯಕ-ನಾಯಕಿಯರ ‘ಯೂಥ್'ನಿಂದ ಸಿನಿಮಾದಲ್ಲಿ ಲವಲವಿಕೆ ಇದೆಯಾದರೂ ಚಿತ್ರಕಥೆಯಲ್ಲಿ ಒಂದಷ್ಟು ಹಿಡಿತ, ಗಟ್ಟಿತನ ಇದ್ದಿದ್ದರೆ ಇದು ಕಾಲೇಜು ಹುಡುಗರನ್ನು ಹೊರತಾದ ಪ್ರೇಕ್ಷಕರಿಗೂ ಹೆಚ್ಚು ಹತ್ತಿರವಾಗಿರುತ್ತಿತ್ತು. ನಿರ್ದೇಶಕರೇ ಸಂಭಾಷಣೆ ಬರೆದಿದ್ದು ಅಲ್ಲಲ್ಲಿ ಕೆಲವು ಡೈಲಾಗ್​ಗಳ ಮೂಲಕ ಪಂಚ್ ಕೊಡುತ್ತಾರೆ. ಚಾಕೊಲೇಟ್ ಹೀರೋ, ಚೆಲ್ಲಾಟದ ಹೀರೋಯಿನ್ ಆಗಿ ಹೊಸಬರೇ ಅಭಿನಯಿಸಿದ್ದರೂ ಇಬ್ಬರೂ ಗಮನ ಸೆಳೆಯುತ್ತಾರೆ. ಹುಡುಗಾಟದ ದೃಶ್ಯಗಳಲ್ಲಂತೂ ಹುಡುಗಿಯೇ ಹೆಚ್ಚು ಮನ ಸೆಳೆಯುತ್ತಾಳೆ. ಚಿಕ್ಕಣ್ಣನದ್ದು ಚಿಕ್ಕ ಪಾತ್ರವೇ ಆದರೂ ಅನ್ಯಮನಸ್ಕರಾಗುವ ಪ್ರೇಕ್ಷಕರನ್ನು ‘ಜಗ್ಗಿ' ಕೂರಿಸುತ್ತಾರೆ. ಸಾಧು ಕೋಕಿಲ ಅಲ್ಲಲ್ಲಿ ಕಿಲಕಿಲ ಅನಿಸುತ್ತಾರೆ.'' - ರವಿಕಾಂತ ಕುಂದಾಪುರ

  ಪ್ರೀತಿಯ ಆಳಕ್ಕೆ ಕಿಸ್ ಮುದ್ರೆ - ಪ್ರಜಾವಾಣಿ

  ಪ್ರೀತಿಯ ಆಳಕ್ಕೆ ಕಿಸ್ ಮುದ್ರೆ - ಪ್ರಜಾವಾಣಿ

  ''ಪ್ರೀತಿ ಎಂದರೆ ಶುದ್ಧ ಮನಸುಗಳಲ್ಲಿ ಹುಟ್ಟುವ ಅ(ವ್ಯಕ್ತ) ಭಾವನೆ. ಪ್ರೀತಿಗೆ ಮತ್ತೇರಿಸುವ ಕಿಸ್ ಮಂತ್ರವನ್ನು ಹೊಸಬರಾದ ವಿರಾಟ್ ಹಾಗೂ ಶ್ರೀಲೀಲಾ ಅವರ ಮೂಲಕ ಯುವ ಮನಸುಗಳ ಮೇಲೆ ಪ್ರಯೋಗಿಸಿದ್ದಾರೆ. ವಿರಾಟ್ ಮತ್ತು ಶ್ರೀಲೀಲಾ ಹೊಸಬರಾದರೂ ಇಬ್ಬರೂ ಮನೋಜ್ಞವಾಗಿ ಅಭಿನಯಿಸಿದ್ದಾರೆ. ತೆರೆ ಮೇಲೆಯೂ ಈ ಜೋಡಿ ಅಷ್ಟೇ ಕ್ಯೂಟ್ ಆಗಿ ಕಾಣುತ್ತದೆ. ಚಿತ್ರ ನೋಡುವಾಗ ಓಘು ಲಯ ತಪ್ಪಿದೆ ಅನಿಸುವ ಭಾವನೆ ಮಾತ್ರ ಪ್ರೇಕ್ಷಕನಿಗೆ ತ್ರೀವ್ರವಾಗಿ ಕಾಡುತ್ತದೆ. ಕಾಡುವ ಆ ಭಾವನೆ ಚಿತ್ರದಲ್ಲಿ ಗಟ್ಟಿತನದ ಕಂಟೆಂಟ್ ನ ಕೊರತೆಯತ್ತ ಬೊಟ್ಟು ಮಾಡುತ್ತದೆ.'' - ಕೆ ಎಂ ಸಂತೋಷ್ ಕುಮಾರ್

  ಕಿಸ್ ಸಿನಿಮಾದ ವಿಮರ್ಶೆ : ಟೈಮ್ಸ್ ಆಫ್ ಇಂಡಿಯಾ

  ಕಿಸ್ ಸಿನಿಮಾದ ವಿಮರ್ಶೆ : ಟೈಮ್ಸ್ ಆಫ್ ಇಂಡಿಯಾ

  ''Kiss is a cute but predictable love story that takes viewers on a roller coaster ride from the word go. A tad longer than it should have been, it has a blend of action, romance and comedy, which might work for young audiences. The film touches upon subjects such as love failures and how fragile relationships are today, which only works in parts. The songs are quite good and keeps one engrossed in the narrative. Viraat and Sreeleela shine in their roles in what is a debut for both of them. Go and watch Kiss if love stories are your cup of tea.''

  English summary
  Kiss Movie Critics Review in Kananda:

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more