twitter
    For Quick Alerts
    ALLOW NOTIFICATIONS  
    For Daily Alerts

    ಕಣ್ಣಿಲ್ಲದ 'ಕೃಷ್ಣ ತುಳಸಿ'ಯ ಪ್ರೇಮಕಥೆ ವಿಮರ್ಶಕರ ಮನಸ್ಸು ಗೆದ್ದಿದೆ

    By Naveen
    |

    Recommended Video

    ಕಣ್ಣು ತೆರೆಸುತ್ತೆ ಕಣ್ಣಿಲ್ಲದವನ ಪ್ರೀತಿ | Filmibeat Kannada

    ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮತ್ತೊಂದು ವಿಭಿನ್ನ ಪಾತ್ರದ ಜೊತೆಗೆ ಪ್ರೇಕ್ಷಕರ ಮುಂದೆ ಬಂದಿದ್ದರು. ಅವರ 'ಕೃಷ್ಣ ತುಳಸಿ' ಸಿನಿಮಾ ನಿನ್ನೆ ರಾಜ್ಯಾದಂತ್ಯ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ನಟ ಸಂಚಾರಿ ವಿಜಯ್ ಮತ್ತು ನಟಿ ಮೇಘಶ್ರೀ ಕುರುಡು ಪ್ರೇಮಿಗಳ ಪಾತ್ರವನ್ನು ಮಾಡಿದ್ದರು. ಅಂಧರ ಅಂದದ ಪ್ರೇಮಕಥೆಯನ್ನು ಜನ ನೋಡಿ ಇಷ್ಟ ಪಟ್ಟರು.

    ವಿಮರ್ಶೆ : ಅಂಧರ ಅಂದದ ಒಲವೇ ಜೀವನ ಸಾಕ್ಷಾತ್ಕಾರ ವಿಮರ್ಶೆ : ಅಂಧರ ಅಂದದ ಒಲವೇ ಜೀವನ ಸಾಕ್ಷಾತ್ಕಾರ

    ಇದರ ಜೊತೆಗೆ 'ಕೃಷ್ಣ ತುಳಸಿ'ಯ ಪ್ರೇಮಕಥೆ ವಿಮರ್ಶಕರ ಮನಸ್ಸು ಗೆದ್ದಿದೆ. ಬಹುಪಾಲು ಪತ್ರಿಕೆಗಳಲ್ಲಿ ಸಿನಿಮಾಗೆ ಒಳ್ಳೆಯ ವಿಮರ್ಶೆ ಬಂದಿದೆ. ನಿರ್ದೇಶಕರ ಪ್ರಯತ್ನವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. 'ಕೃಷ್ಣ ತುಳಸಿ ಮನಸ್ಸಿಗೆ ತಂಪೆರೆವ ಸಿನಿಮಾ', 'ಕೃಷ್ಣ ತುಳಸಿ ಫಮಘಮಿಸುವ ಪ್ರೇಮದ ರಾಗತಾನಪಲ್ಲವಿ' ಎಂದು ವಿಮರ್ಶಕರು ಸಿನಿಮಾವನ್ನು ಬಾಯಿ ತುಂಬ ಹೊಗಳಿದ್ದಾರೆ.

    ಅಂದಹಾಗೆ, ಕನ್ನಡದ ಜನಪ್ರಿಯ ಪ್ರತಿಕೆಗಳಲ್ಲಿ ಬಂದ 'ಕೃಷ್ಣ ತುಳಸಿ' ಸಿನಿಮಾದ ವಿಮರ್ಶೆ ಮುಂದಿದೆ ಓದಿ....

    ಮನಸ್ಸಿಗೆ ತಂಪೆರೆವ ಸಿನಿಮಾ : ವಿಜಯ ಕರ್ನಾಟಕ

    ಮನಸ್ಸಿಗೆ ತಂಪೆರೆವ ಸಿನಿಮಾ : ವಿಜಯ ಕರ್ನಾಟಕ

    ''ಲವ್‌ ಈಸ್‌ ಬ್ಲೈಂಡ್ ಅನ್ನೋ ಮಾತು ಹಳೆಯದು. ಆದರೆ, ಬ್ಲೈಂಡ್ ಲವ್‌ ಅನ್ನೋದು ಹೇಗಿರುತ್ತೆ ಮತ್ತು ಅದು ಎಷ್ಟು ಗಾಢವಾಗಿರುತ್ತದೆ ಅನ್ನೋದನ್ನು ತಿಳಿಯಬೇಕು ಅಂದರೆ ಕೃಷ್ಣ ತುಳಸಿ ಚಿತ್ರ ನೋಡಿ. ಸುಕೇಶ್ ನಾಯಕ್‌ ಚೊಚ್ಚಲ ನಿರ್ದೇಶನದ ಈ ಚಿತ್ರ ನೋಡುಗರನ್ನು ಆರ್ದ್ರಗೊಳಿಸಿದರೆ, ನಾಯಕನಾಗಿ ನಟಿಸಿರುವ ಸಂಚಾರಿ ವಿಜಯ್‌ ತಮ್ಮ ನಟನೆಯಿಂದ ಬೇರೊಂದು ಲೋಕಕ್ಕೆ ಕರೆದೊಯ್ಯುತ್ತಾರೆ. ಲವ್‌ ಅಟ್‌ ಫಸ್ಟ್‌ ಸೈಟ್‌ ತರದ ಲವ್‌ ಇದಲ್ಲ. ಯಾಕೆಂದರೆ, ಸೌಂದರ್ಯ ನೋಡಿ ಮೆಚ್ಚಿ ಪ್ರೀತಿಸೋಕೆ ಕಣ್ಣಿಲ್ಲ. ಹಾಗಾಗಿ ಇದು ಎರಡು ಮನಸ್ಸುಗಳು ಬೆಸೆದ ಕಥೆ. ಇವರ ಹೃದಯದಲ್ಲಿ ಅರಳಿದ ನಿಷ್ಕಲ್ಮಶ ಪ್ರೀತಿ ನೋಡುಗರಲ್ಲೂ ಆನಂದಬಾಷ್ಪ ತರುತ್ತದೆ. ಇಲ್ಲಿ ಎಲ್ಲಾ ಚಿತ್ರಗಳಲ್ಲಿ ಬರುವಂತೆ ಈ ಪ್ರೇಮಿಗಳ ಮಧ್ಯೆ ವಿಲನ್ ಬರೋಲ್ಲ. ಫೈಟ್ ಆಗೋಲ್ಲ. ತ್ರಿಕೋನ ಪ್ರೇಮಕಥೆಯೂ ಇಲ್ಲ. ಅವರ ಪರಿಸ್ಥಿತಿ ಪ್ರೇಮವನ್ನು ತಲ್ಲಣಗೊಳಸುತ್ತದೆ. ನೋಡುಗರ ಹೃದಯ ಕಲಕುತ್ತದೆ. ಸೊಂಟ ಬಳಸಿ ಹಾಡುವ ಪ್ರೇಮಿಗಳಲ್ಲ. ಆದರೆ, ಅವರ ಕೈ ಸೋಕುವುದೂ ಕೂಡಾ ರೋಮಾಂಚನವನ್ನುಂಟು ಮಾಡುತ್ತದೆ. ಇಡೀ ಚಿತ್ರದಲ್ಲಿ ಇಷ್ಟವಾಗುವುದು ಪಾಸಿಟಿವ್ ಆಟಿಟ್ಯೂಡ್. ಚಿತ್ರದ ಅವಧಿ ಸ್ವಲ್ಪ ಕಡಿಮೆ ಮಾಡಿದ್ದರೆ ಚೆನ್ನಾಗಿತ್ತು. ಆದರೂ, ಫೀಲ್ ಗುಡ್‌ ಸಿನಿಮಾ ಇದು.'' - ಪದ್ಮ ಶಿವಮೊಗ್ಗ

    ಫಮಘಮಿಸುವ ಪ್ರೇಮದ ರಾಗತಾನಪಲ್ಲವಿ - ಕನ್ನಡ ಪ್ರಭ

    ಫಮಘಮಿಸುವ ಪ್ರೇಮದ ರಾಗತಾನಪಲ್ಲವಿ - ಕನ್ನಡ ಪ್ರಭ

    ''ಅಂಧರಿಬ್ಬರ ನಡುವಿನ ನವೀರಾದ ಪ್ರೇಮ ಕಥಾನಕವೇ 'ಕೃಷ್ಣ ತುಳಸಿ' ಸಿನಿಮಾ. ಪ್ರೀತಿಗೆ ಕಣ್ಣಿದ್ದರೆ ಸಾಲದು ಮನಸಾರೆ ಪ್ರೀತಿಸುವ ಹೃದಯಬೇಕು ಎನ್ನುವ ಆ ಎರಡು ಜೀವಗಳೆ ಕೃಷ್ಣ ಮತ್ತು ತುಳಸಿ. ಅಮ್ಮನಿಲ್ಲದೆ, ಅಪ್ಪನ ಆಸೆಯಲ್ಲಿ ಬೆಳೆದ ಆ ಹುಡುಗಿಗೆ ತಾನು ಪ್ರೀತಿಸುವ ಹುಡುಗನೇ ಬೆಳಕು ಕೊಡುವ ಸೂರ್ಯ. ಅತ್ತ ಕಣ್ಣಿಲ್ಲದ ಹುಡುಗನಿಗೆ ಪತ್ನಿಯಾಗಿ ಕೈ ಹಿಡಿಯುವವಳ ಮೂಲಕ ಜಗತ್ತನ್ನು ನೋಡುವ ಆಸೆ. ಪರಸ್ಪರ ಹಾಗಂದುಕೊಂಡೇ ಗಾಡವಾದ ಗೆಳೆತನದ ಸೆಳೆತಕ್ಕೆ ಸಿಲುಕಿದವರು ಅವರು. ಆ ಗೆಳೆತನಕ್ಕೆ ಬಿಗಿಯಾದ ಬೆಸುಗೆ ಹಾಕಿದ್ದು ಮೈಸೂರು ಮಲ್ಲಿಗೆ ಘಮ. ಅದೇ ಗೆಳೆತನದೊಂದಿಗೆ ಮೈಸೂರಿನ ರಸ್ತೆಗಳಲ್ಲಿ ಅಲೆದಾಡಿ ಪಾನಿಪೂರಿ ತಿಂದು ತಮಾಷೆ ಮಾಡುತ್ತಾ, ನಾಗುತ್ತಾ, ಮೈ ಕೈ ಸ್ಪರ್ಶಿಸುವ ಹಾಗೆ ಆತ್ಮೀಯರಾಗಿ ಓಡಾಡುವಾಗ ಅವರಿಬ್ಬರ ನಡುವೆ ಶುರುವಾಗಿದ್ದು ಪ್ರೀತಿ. ಆದರೆ ಇಬ್ಬರು ಕಣ್ಣಿಲ್ಲದವರು ಅಂತ ಪರಸ್ಪರ ಗೊತ್ತಾದ ವೇಳೆ ಆ ಪ್ರೀತಿ ಉಳಿಯುತ್ತಾ ಎನ್ನುವುದೇ ಆ ಕಥೆಯ ಟ್ವಿಸ್ಟ್. ಇಲ್ಲಿ ಲಾಂಗು - ಮಂಚು, ಹೊಡಿ - ಬಡಿ ಅಥವಾ ಐಟಂ ಸಾಂಗಿನ ರಂಗು ಯಾವುದು ಇಲ್ಲ. ಆ ಮಟ್ಟಿಗೆ ಇದೊಂದು ಹೊಸ ಬಗೆಯ ಪ್ರಯೋಗಾತ್ಮಕ ಚಿತ್ರ.'' ದೇಶಾದ್ರಿ ಹೊಸ್ಮನೆ

    ಅಂಧರ ಅಂದದ ಒಲವೇ ಜೀವನ ಸಾಕ್ಷಾತ್ಕಾರ - ಫಿಲ್ಮಿಬೀಟ್ ಕನ್ನಡ

    ಅಂಧರ ಅಂದದ ಒಲವೇ ಜೀವನ ಸಾಕ್ಷಾತ್ಕಾರ - ಫಿಲ್ಮಿಬೀಟ್ ಕನ್ನಡ

    ಅಂಧ ಪ್ರೇಮಿಗಳ ಬಗ್ಗೆ ಈಗಾಗಲೇ ಕನ್ನಡದಲ್ಲಿ ಅನೇಕ ಸಿನಿಮಾಗಳು ಬಂದಿದೆ. ಆದರೆ 'ಕೃಷ್ಣ ತುಳಸಿ' ಸಿನಿಮಾ ಅದೆಲ್ಲದಕ್ಕಿಂತ ಕೊಂಚ ಭಿನ್ನವಾಗಿದೆ. ಕುರುಡು ಪ್ರೇಮಿಯ ಕಲ್ಮಶವಿಲ್ಲದ ಪ್ರೇಮಕಥೆ ಈ ಸಿನಿಮಾದಲ್ಲಿ ಇದೆ. ಒಲವೇ ಜೀವನ ಸಾಕ್ಷಾತ್ಕಾರ, ಪ್ರೀತಿ ಎಲ್ಲದಕ್ಕಿಂತ ದೊಡ್ಡದು ಎನ್ನುವುದು ಈ ಸಿನಿಮಾದ ಸಂದೇಶ. ಮಡಿಕೇರಿಯ ಹುಡುಗ ಕೃಷ್ಣ ಕಣ್ಣಿಲ್ಲದ ಅಂಧ. ತನ್ನ ಊರಿನಲ್ಲಿ ಟ್ರಾವೆಲ್ ಗೈಡ್ ಕೆಲಸ ಮಾಡುತ್ತಿರುವ ಈ ಹುಡುಗನಿಗೆ ಮೈಸೂರಿನಲ್ಲಿ ಕೆಲಸ ಸಿಗುತ್ತದೆ. ತನ್ನ ತಾಯಿಗೆ ಮೈಸೂರಿನಲ್ಲಿ ಫೇರ್ ಅಂಡ್ ಲವ್ಲಿ ತರದ ಹುಡುಗಿಯನ್ನು ಸೊಸೆಯಾಗಿ ಕರೆದುಕೊಂಡು ಬರುತ್ತೇನೆ ಅಂತ ಕೃಷ್ಣ ಹೊರಡುತ್ತಾನೆ. ಮೈಸೂರಿನ ಸುಂದರ ತಾಣಗಳನ್ನು ಅಲ್ಲಿಗೆ ಬರುವ ಪ್ರವಾಸಿಗರಿಗೆ ತೋರಿಸುವ ಕೆಲಸ ಮಾಡುತ್ತಿರುವ ಕೃಷ್ಣನ ಜೀವನದಲ್ಲಿ ಒಂದು ಹುಡುಗಿಯ ಆಗಮನ ಆಗುತ್ತದೆ. ಆಕಸ್ಮಿಕವಾಗಿ ಬಸ್ಸಿನಲ್ಲಿ ಸಿಗುವ ತುಳಸಿ ಜೊತೆಗೆ ಮಾತು ಮಾತುನಲ್ಲಿಯೇ ಪ್ರೇಮ ಶುರುವಾಗುತ್ತದೆ. ಹೀಗೆ ಸಾಗುವ ಕಥೆಯಲ್ಲಿ ಕೊನೆಗೆ ಈ ಇಬ್ಬರು ಪ್ರೇಮಿಗಳು ಒಂದಾಗುತ್ತಾರಾ? ಕುರುಡನಾಗಿರುವ ಕೃಷ್ಣನಿಗೆ ತುಳಸಿ ಸಿಗುತ್ತಾಳಾ ಎನ್ನುವುದೇ ಸಿನಿಮಾದ ಕಥೆ.

    Experience unseen love : The New Indian Express

    Experience unseen love : The New Indian Express

    ''There is an emergence of a cult of filmmakers, winding their way through creativity, using simple, heart warming tales that get connected with the audience, even if the character is not even remotely associated with them. Krishna Tulasi is one such tale told without holding any notion of becoming a commercial potboiler, but with the intent of bringing a modest story nurtured with equal measures of joy and pain that often comesby default in any tale of love. The story is of Krishna (Sanchari Vijay), a visually challenged individual working in Mysuru museum. He regularly travels in a bus, where he happens to meet Tulasi (Meghashree) who works with the Railways, and who is also blind. Initially, both find their company interesting and their meetings develop to a close bonding though they do not express. Unaware of their disability, both let their friendship blossom, until Krishna gets to know about Tulasi's visual impairment. The decision taken by Krishna, and its after affects over Tulasi puts the film through an emotional journey, moving towards a happy ending. The first timer has kept the story simple with a neat cast, as he allows the lead characters to evolve. Except for one twist, the director has taken an uncomplicated path, and the outcome is a delight. Predictable but satisfying.'' - A Sharadhaa

    English summary
    National Award winning actor Sanchari Vijay's Krishna Tulasi kannada movie critics review. The movie is released yesterday (April 20.)
    Saturday, April 21, 2018, 13:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X