Kshetrapathi Review: ಇವನು 'ಗುಲ್ಟು' ಅಲ್ಲ.. 'ಬಲಿ'ನೂ ಅಲ್ಲ 'ಕ್ಷೇತ್ರಪತಿ'.. ಪಕ್ಕಾ ಕ್ರಾಂತಿಕಾರಿ!
'ಕ್ಷೇತ್ರಪತಿ' ಟೈಟಲ್‌ನಿಂದಲೇ ಗಮನ ಸೆಳೆದ ಸಿನಿಮಾವಿದು. ಟ್ರೈಲರ್, ಟೀಸರ್‌ನಿಂದ ಸಿನಿ ಪ್ರಿಯರ ಗಮನ ಸೆಳೆದಿತ್ತು. 'ಗುಲ್ಟು', 'ಗುರುದೇವ್ ಹೊಯ್ಸಳ' ಸಿನಿಮಾದಲ್ಲಿ ಬಲಿ ಪಾತ್ರದ ಮೂಲಕ ಗಮನ ಸೆಳೆದ ನಟ ನವೀನ್ ಶಂಕರ್ ನಾಯಕನಾಗಿ ನಟಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದ ರೈತರ ಬದುಕಿನ ಕಥೆಯನ್ನು ತೆರೆಮೇಲೆ ತರಲಾಗಿದೆ. ಅನ್ನದಾತನ ಸಮಸ್ಯೆಗಳು, ಹೋರಾಟದ ಬದುಕನ್ನು ಪವರ್‌ಫುಲ್ ತೆರೆಮೇಲೆ ತರಲಾಗಿದೆ. ನವೀನ್ ಶಂಕರ್, 'ಕೆಜಿಎಫ್' ಖ್ಯಾತಿಯ ಅರ್ಚನಾ ಜೋಯಿಸ್, ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಬಹಳ ದಿನಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಉತ್ತರ ಕರ್ನಾಟಕ ಭಾಗದ ಕಥೆಯನ್ನು ಹೊತ್ತ ಸಿನಿಮಾ ಬಂದಿದೆ. ಶ್ರೀಕಾಂತ್ ಕಟಗಿ ನಿರ್ದೇಶಿಸಿದ ಈ ಸಿನಿಮಾ ಹೇಗಿದೆ? ಕಥೆ- ಚಿತ್ರಕಥೆ, ನಿರ್ದೇಶನ, ನಟನೆ ಇವೆಲ್ಲದರ ಬಗ್ಗೆ ತಿಳಿಯಲು ಮುಂದೆ ಓದಿ.
ಸಿನಿಮಾದ ಒನ್ ಲೈನ್ ಕಥೆ ಏನು?
ಮಾರುಕಟ್ಟೆಯಲ್ಲಿ ತರಕಾರಿ ಮಾರುವ ದೃಶ್ಯದಿಂದ ಸಿನಿಮಾ ಆರಂಭ ಆಗುತ್ತೆ. ಇತ್ತ ಹೀರೊ ಇಂಜಿನಿಯರಿಂಗ್ ವಿದ್ಯಾರ್ಥಿ. ವಿದೇಶಕ್ಕೆ ಹೋಗಿ ಅಲ್ಲಿ ಕೆಲಸ ಮಾಡಬೇಕು ಅಂತ ಕನಸು ಕಾಣುವ ಸಿನಿಮಾ. ಇಂತಹ ಹುಡುಗ ರೈತನಾಗಿ ಹೇಗೆ ಬದಲಾಗುತ್ತಾನೆ? ರೈತರ ಪರ ಹೋರಾಟಕ್ಕೆ ಯಾಕೆ ಇಳಿಯುತ್ತಾನೆ ಅನ್ನೋದು ಸಿನಿಮಾ ಕಥೆ. ಅಂದ್ಹಾಗೆ ಹೀರೋ ಕೂಡ ರೈತಾಪಿ ಕುಟುಂಬದಿಂದನೇ ಬಂದಿರುತ್ತಾನೆ. ನಾಯಕನ ತಂದೆ ರೈತ. ಆದರೆ, ಯಾವುದೋ ಒಂದು ಸಂಕಷ್ಟ ಸಿಲುಕಿ ಸಾವನ್ನಪ್ಪುತ್ತಾರೆ. ಆಗ ಹೀರೋ ಊರಿಗೆ ಎಂಟ್ರಿ ಕೊಡುತ್ತಾನೆ. ಅಲ್ಲಿ ನಡೆಯುತ್ತಿರೋ ಅನ್ಯಾಯದ ವಿರುದ್ಧ ಹೋರಾಟಕ್ಕೆ ಇಳಿಯುತ್ತಾನೆ. ಮುಂದೆ ಏನೆಲ್ಲಾ ಆಗುತ್ತೆ ಅನ್ನೋದು ಸಿನಿಮಾದ ತಿರುಳು.
'ಕ್ಷೇತ್ರಪತಿ' ಡೈರೆಕ್ಷನ್ ಹೇಗಿದೆ?
ಅನ್ನದಾತರ ಸಂಕಷ್ಟ. ಅವರ ಮೇಲಾಗುತ್ತಿರುವ ದೌಜನ್ಯ ಹಾಗೂ ಅನ್ಯಾಯವನ್ನೇ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. 'ಕ್ಷೇತ್ರಪತಿ' ಸ್ಟೋರಿ ಪ್ರೇಕ್ಷಕರನ್ನು ನಾಟುವುದರಲ್ಲಿ ಎರಡು ಮಾತಿಲ್ಲ. ಆದರೆ, ಸ್ಕ್ರೀನ್ ಪ್ಲೇಗೆ ಇನ್ನೊಂದಿಷ್ಟು ಕತ್ತರಿ ಹಾಕಬಹುದಿತ್ತು ಎಂದೆನಿಸದೆ ಇರೋದಿಲ್ಲ. ಕ್ಷೇತ್ರಪತಿಯ ಕಥೆ ಗಂಭೀರ ಇರುವುದರಿಂದ ಚಿತ್ರಕಥೆಗೆ ಇನ್ನೊಂದಿಷ್ಟು ಚುರುಕು ಮುಟ್ಟಿಸಬೇಕಿತ್ತು ಅಂತ ಹಲವರಿಗೆ ಅನಿಸದೇ ಇರೋದಿಲ್ಲ.

ಸಿನಿಮಾದ ಪಾತ್ರಧಾರಿಗಳು ಹೇಗಿವೆ?
'ಕ್ಷೇತ್ರಪತಿ' ಸಿನಿಮಾದ ಹೀರೊ ನವೀನ್ ಶಂಕರ್ ಅಭಿನಯಕ್ಕೆ ಖಂಡಿತಾ ಮೆಚ್ಚುಗೆ ಸಿಗುತ್ತೆ. ಪವರ್‌ಫುಲ್ ಪಾತ್ರದಲ್ಲಿ ನವೀನ್ ಶಂಕರ್ ಮಿಂಚಿದ್ದಾರೆ. 'ಗುಲ್ಟು', 'ಗುರುದೇವ್ ಹೊಯ್ಸಳ'ದಂತಹ ಸಿನಿಮಾಗಳಲ್ಲಿ ಪವರ್‌ಫುಲ್ ಹಾಗೂ ವಿಭಿನ್ನ ಪಾತ್ರಗಳಂತೆ ಈ ಸಿನಿಮಾದಲ್ಲೂ ಮಿಂಚಿದ್ದಾರೆ. ಹಾಗೇ ಅರ್ಚನಾ ಜೋಯಿಸ್ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಸಿನಿಮಾ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಇಲ್ಲ. ಎಂದಿನಂತೆ ಅಚ್ಯುತ್ ಕುಮಾರ್ ಪಾತ್ರ ಗಮನ ಸೆಳೆಯುವಂತಿದೆ. ಹಾಗೇ ಇನ್ನೂ ಕೆಲವು ಪಾತ್ರಗಳು ಗಮನ ಸೆಳೆಯುತ್ತವೆ.
ಪಕ್ಕಾ ಜವಾರಿ ಶೈಲಿಯ ಸಿನಿಮಾ
'ಕ್ಷೇತ್ರಪತಿ' ಪಕ್ಕಾ ಜವಾರಿ ಶೈಲಿಯ ಸಿನಿಮಾ. ಉತ್ತರ ಕರ್ನಾಟಕದ ಭಾಗದ ಕಥೆಯನ್ನೇ ಇಟ್ಟುಕೊಂಡು ಸಿನಿಮಾವನ್ನು ಹೆಣೆಯಲಾಗಿದೆ. ಹೀಗಾಗಿ ಇದೊಂದು ಪಕ್ಕಾ ಉತ್ತರ ಕರ್ನಾಟಕದ ಸಿನಿಮಾ ಅಂತ ಹೇಳಬಹುದು. ಈ ಸಿನಿಮಾ ಉತ್ತರ ಕರ್ನಾಟಕದ ಭಾಗದ ಜನರಿಗೆ ಖಂಡಿತಾ ಇಷ್ಟ ಆಗುತ್ತೆ. ಉಳಿದ ಭಾಗದ ಜನರು ಇಷ್ಟ ಪಟ್ಟರೆ ಸಿನಿಮಾ ಗೆದ್ದಂತೆ.
ಪ್ಲಸ್ ಏನು? ಮೈನಸ್ ಏನು?
'ಕ್ಷೇತ್ರಪತಿ' ಸಿನಿಮಾದ ಪ್ಲಸ್ ಪಾಯಿಂಟ್ ಅಂದರೆ, ಸಿನಿಮಾದ ಕಥೆ. ನವೀನ್ ಶಂಕರ್ ಪವರ್‌ಫುಲ್ ಪಾತ್ರ. ಸಿನಿಮಾದ ಪ್ರಬುದ್ಧ ಪಾತ್ರಗಳು. ಇವೆಲ್ಲವೂ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ. ಮೈನಸ್ ಪಾಯಿಂಟ್ ಅಂದ್ರೆ, ಸಿನಿಮಾ ಚಿತ್ರಕಥೆ ಇನ್ನಷ್ಟು ಚುರುಕುಗೊಳಿಸಬೇಕಿತ್ತು ಅಂತ ಅನಿಸುತ್ತೆ. ಇದೆಲ್ಲವನ್ನೂ ಬಿಟ್ಟರೆ ಇದೊಂದು ಉತ್ತಮ ಪ್ರಯತ್ನ ಅಂತ ಹೇಳಬಹುದು.


Click it and Unblock the Notifications











