ವಿಮರ್ಶೆ : ಕೋಮಲ ಕುಮಾರಿ ಜೊತೆ ಸರಳ ಸಿದ್ದುವಿನ ಪ್ರಣಯ ಪ್ರಸಂಗ

By Naveen

ಟಾಲಿವುಡ್ ನಲ್ಲಿ ಹಿಟ್ ಆಗಿದ್ದ 'ಕುಮಾರಿ 21F' ಸಿನಿಮಾ ಕನ್ನಡಲ್ಲಿಯೂ ಬಂದಿದೆ. ಇಂದು ಈ ಸಿನಿಮಾ ಬಿಡುಗಡೆಯಾಗಿದ್ದು, ಯುವ ಜನತೆಗೆ ಇಷ್ಟ ಆಗುವ ರೀತಿ ಚಿತ್ರ ಮೂಡಿ ಬಂದಿದೆ. ಇಡೀ ಸಿನಿಮಾದ ತುಂಬ ಕೋಮಲ ಕುಮಾರಿ ಜೊತೆ ಸರಳ ಸಿದ್ದು ಪ್ರಣಯ ಪ್ರಸಂಗ ನಡೆಯುತ್ತದೆ. ಹೀಗಾಗಿ ಇದು ಟೀನೇಜ್ ಹೃದಯಗಳಿಗೆ ಟಚ್ ಆಗುವ ಕಥೆ.

Rating:
3.0/5
Star Cast: ಪ್ರಣಮ್ ದೇವರಾಜ್, ನಿಧಿ ಕುಷಾಲಪ್ಪ, ಅವಿನಾಶ್
Director: ಶ್ರೀಮನ್ ವೆಮುಲ

ಗ್ಲಾಮರ್ ಕುಮಾರಿ - ಸಿಂಪಲ್ ಸಿದ್ದು

ಗ್ಲಾಮರ್ ಕುಮಾರಿ - ಸಿಂಪಲ್ ಸಿದ್ದು

ಮಾಡೆಲ್ ಆಗಿರುವ ಕುಮಾರಿ ಹಾಗೂ ಒಬ್ಬ ಸಾಮಾನ್ಯ ಹುಡುಗ ಸಿದ್ದು ಇಬ್ಬರ ಪ್ರೀತಿ, ಪ್ರೇಮ ಸೆಳೆತದ ಕಥೆಯೇ 'ಕುಮಾರಿ 21F'. ತಾನಾಗೆ ಬಂದು ತನ್ನ ಮಾದಕತೆಯ ಮೂಲಕ ಕುಮಾರಿ ಸಿದ್ದು ಗಮನ ಸಳೆಯುತ್ತಾಳೆ. ಕುಮಾರಿಯ ಅಮಲಿನಲ್ಲಿ ಸಿದ್ದು ಪ್ರೀತಿಯಲ್ಲಿ ಬೀಳುತ್ತಾನೆ. ಹೀಗಿರುವಾಗ ಮಧ್ಯಂತರದ ಹೊತ್ತಿಗೆ ಸರಿಯಾಗಿ ಕಥೆಯಲ್ಲಿ ಒಂದು ತಿರುವು ಸಿಗುತ್ತದೆ. 'ನಿನಗೆ ಮೆಚ್ಯೂರಿಟಿ ಇಲ್ಲ' ಎಂಬ ಕಾರಣ ಹೇಳಿ ಕುಮಾರಿ ದೂರ ಆಗುತ್ತಾಳೆ. ಮುಂದೆ ಇಬ್ಬರ ಕಥೆ ಏನಾಯ್ತೂ ಎನ್ನುವುದೇ ಚಿತ್ರದ ಜೀವಾಳ.

ಸಿನಿಮಾದಲ್ಲಿದೆ ಒಂದು ಸಂದೇಶ

ಸಿನಿಮಾದಲ್ಲಿದೆ ಒಂದು ಸಂದೇಶ

ಸಾಮಾನ್ಯವಾಗಿ ನಮ್ಮ ಸುತ್ತ ಮುತ್ತಲೇ ಅನೇಕರು ಯಾರಾದರೂ ಹುಡುಗಿಯರ ಬಗ್ಗೆ ಏನೇನೇ ಮಾತನಾಡಿಕೊಳ್ಳುತ್ತಾರೆ. ತಾವೇ ಗಾಸಿಪ್ ಗಳನ್ನು ಹಬ್ಬಿಸುತ್ತಿರುತ್ತಾರೆ. ಈ ರೀತಿ ಮಾಡುವವರಿಗೆ ಸಿನಿಮಾ ಒಂದು ಸಂದೇಶ ನೀಡುತ್ತದೆ. ಆದರೆ, ಚಿಕ್ಕ ಬಟ್ಟೆ ಹಾಕಿದರೂ, ಹುಡುಗರ ಜೊತೆಗೆ ಓಡಾಡಿದ ಮಟ್ಟಿಗೆ ಒಂದು ಹುಡುಗಿಯನ್ನು ಕೆಟ್ಟವಳು ಎಂದು ಬಿಂಬಿಸಬೇಡಿ ಎಂಬ ಸಂದೇಶ ಸಿನಿಮಾ ಹೇಳಿದೆ.

ಪ್ರಣಮ್ - ನಿಧಿ ಕೆಮಿಸ್ಟ್ರಿ ಚೆನ್ನಾಗಿದೆ

ಪ್ರಣಮ್ - ನಿಧಿ ಕೆಮಿಸ್ಟ್ರಿ ಚೆನ್ನಾಗಿದೆ

ಈ ರೀತಿಯ ಸಿನಿಮಾಗೆ ಮುಖ್ಯವಾಗಿ ನಟ ಮತ್ತು ನಟಿಯ ನಡುವಿನ ಕೆಮಿಸ್ಟ್ರಿ ಹೊಂದಿಕೆ ಆಗಬೇಕು. ಆ ವಿಚಾರದಲ್ಲಿ ಈ ಸಿನಿಮಾ ಗೆದ್ದಿದೆ. ಪ್ರಣಮ್ ಹಾಗೂ ನಿಧಿ ಜೋಡಿ ತೆರೆ ಮೇಲೆ ತುಂಬ ಚೆನ್ನಾಗಿ ಕಾಣುತ್ತದೆ. ಮುತ್ತಿನ ದೃಶ್ಯದಿಂದ ಹಿಡಿದು ಅಳುವ ದೃಶ್ಯದ ವರೆಗೆ ಇಬ್ಬರ ಭಾವನೆಗಳು ಮ್ಯಾಚ್ ಆಗಿವೆ. ಈ ಕಾರಣ ಚಿತ್ರದಲ್ಲಿ ಈ ಎರಡು ಪಾತ್ರಗಳು ಹೈಲೆಟ್ ಆಗಿವೆ.

ಯುವಕ, ಯುವತಿಯರ ಸಿನಿಮಾ

ಯುವಕ, ಯುವತಿಯರ ಸಿನಿಮಾ

ಇಂದಿನ ಯುವಕ ಯುವತಿಯರಿಗೆ ಸಿನಿಮಾ ಇಷ್ಟ ಆಗುತ್ತದೆ. ವಿಭಿನ್ನ ಪ್ರೇಮ ಕಥೆ ಚಿತ್ರದಲ್ಲಿದೆ. ಸಿನಿಮಾ ನೋಡುವುದರ ಜೊತೆಗೆ ಒಂದು ಸಂದೇಶ ಅವರಿಗೆ ಸಿಗುತ್ತದೆ. ಸಿನಿಮಾದ ಸೆಕೆಂಡ್ ಹಾಫ್ ಗಟ್ಟಿಯಾಗಿದೆ. ಶುರುವಿನಲ್ಲಿ ಮಜಾವಾಗಿ ಪ್ರಾರಂಭ ಆಗುವ ಕಥೆ ಕೊನೆ ಕೊನೆಗೆ ಸೀರಿಯಸ್ ಆಗುತ್ತದೆ.

ಪ್ರಣಮ್ ಡ್ಯಾನ್ಸ್ ಸೂಪರ್

ಪ್ರಣಮ್ ಡ್ಯಾನ್ಸ್ ಸೂಪರ್

ದೇವರಾಜ್ ಅವರ ಪುತ್ರ ಎನ್ನುವ ಕಾರಣಕ್ಕೆ ನಟ ಪ್ರಣಮ್ ದೇವರಾಜ್ ಮೇಲೆ ನಿರೀಕ್ಷೆ ಇತ್ತು. ಅದೇ ರೀತಿ ಅವರು ತಮ್ಮ ಸರಳ ನಟನೆಯ ಮೂಲಕ ಗಮನ ಸಳೆದಿದ್ದರೆ. ಅದರಲ್ಲಿಯೂ ತಮ್ಮ ಡ್ಯಾನ್ಸ್ ಗಾಗಿ ಹೆಚ್ಚು ಅಂಕ ಪಡೆಯುತ್ತಾರೆ.

ಹಾಡುಗಳು ಬದಲಾಗಬಹುದಿತ್ತು

ಹಾಡುಗಳು ಬದಲಾಗಬಹುದಿತ್ತು

ತೆಲುಗಿನಲ್ಲಿ ಇರುವ ಮ್ಯೂಸಿಕ್ ಅನ್ನು ಈ ಚಿತ್ರದಲ್ಲಿಯೂ ಇಲ್ಲಿಯೂ ಬಳಸಲಾಗಿದೆ. ಆ ಹಾಡುಗಳು ಒಂದೆರಡು ಬಾರಿ ಹೇಳುವುದಕ್ಕೆ ಚೆನ್ನಾಗಿವೆ. ಆದರೆ, ಕನ್ನಡಕ್ಕೆ ತಕ್ಕಂತೆ ಹೊಸ ಹಾಡುಗಳನ್ನು ಮಾಡಿದ್ದರೆ ಚಿತ್ರಕ್ಕೆ ಇನ್ನಷ್ಟು ಮೆರಗು ಸಿಗುತ್ತಿತ್ತು.

ಟೀನೇಜ್ ಹೃದಯಗಳಿಗಾಗಿ

ಟೀನೇಜ್ ಹೃದಯಗಳಿಗಾಗಿ

ಮನರಂಜನೆಗಾಗಿ ಸಿನಿಮಾ ನೋಡುವವರು 'ಕುಮಾರಿ 21F' ಚಿತ್ರವನ್ನು ಅಡ್ಡಿ ಇಲ್ಲದೆ ನೋಡಬಹುದು. ಟೀನೇಜ್ ಹೃದಯಗಳಿಗೆ ಈ ಸಿನಿಮಾ ಟಚ್ ಆಗುತ್ತದೆ.

More from Filmibeat

English summary
Devaraj spoke about his son Pranam Devaraj's 'Kumari 21F' movie kannada movie review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X