For Quick Alerts
ALLOW NOTIFICATIONS  
For Daily Alerts

ದಿನ ಪತ್ರಿಕೆಗಳಲ್ಲಿ 'ಕುರುಕ್ಷೇತ್ರ' ಗುಣಗಾನ: ಯಾರು ಎಷ್ಟು ಸ್ಟಾರ್ ಕೊಟ್ಟಿದ್ದಾರೆ?

|

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 2ಡಿ ಮತ್ತು 3ಡಿ ವರ್ಷನ್ ಗಳಲ್ಲಿ ಕುರುಕ್ಷೇತ್ರ ತೆರೆಕಂಡಿದ್ದು, ಕನ್ನಡ ಕಲಾಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ.

ಮುನಿರತ್ನ ಕುರುಕ್ಷೇತ್ರ ನೋಡಿದ ಬಹುತೇಕ ಎಲ್ಲರೂ ಚಿತ್ರಕ್ಕೆ ಭೇಷ್ ಎಂದಿದ್ದಾರೆ. ನಿರ್ಮಾಪಕ ಮುನಿರತ್ನ ಅವರ ಪ್ರಯತ್ನ ನಿಜಕ್ಕೂ ಅದ್ಭುತ. ದರ್ಶನ್ ಅವರ ನಟನೆ ಇಡೀ ಚಿತ್ರಕ್ಕೆ ತಾಕತ್ ಹೆಚ್ಚಿಸಿದೆ. ಉಳಿದಂತೆ ಎಲ್ಲ ಕಲಾವಿದರು ಕೂಡ ಅಮೋಘ ನಟನೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.

Kurukshetra Movie Review : ಮಹಾ ಕಾವ್ಯದ ಮಹಾ 'ದರ್ಶನ'

ಜನಮೆಚ್ಚಿದ ಕುರುಕ್ಷೇತ್ರವನ್ನ ಕರ್ನಾಟಕದ ಸಿನಿ ವಿಮರ್ಶಕರು ಕೂಡ ಒಪ್ಪಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲೊಂದು ಇಂತಹ ಪ್ರಯತ್ನ ಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ, ಕುರುಕ್ಷೇತ್ರ ಚಿತ್ರಕ್ಕೆ ಯಾವ ಪತ್ರಿಕೆಯಲ್ಲಿ ಎಷ್ಟು ಮಾರ್ಕ್ಸ್ ಕೊಟ್ಟಿದ್ದಾರೆ. ಮುಂದೆ ಓದಿ....

ಸಾಧ್ಯ, ಅಸಾಧ್ಯಗಳ ಸಮ್ಮಿಶ್ರಣ

ಸಾಧ್ಯ, ಅಸಾಧ್ಯಗಳ ಸಮ್ಮಿಶ್ರಣ

''ಕುರುಕ್ಷೇತ್ರದಂತ ಸಿನಿಮಾ ಮಾಡುವುದು ಕನ್ನಡದ ಮಟ್ಟಿಗೆ ಸುಲಭವಲ್ಲ. ಸೀಮಿತ ಮಾರುಕಟ್ಟೆಗೆ ಆ ದೃಶ್ಯಗಳನ್ನು ಹೊಂದಿಸುವುದು ಕಷ್ಟ ಸಾಧ್ಯ. ಈ ಎಲ್ಲ ಸಾಧ್ಯ, ಅಸಾಧ್ಯಗಳನ್ನು ಒಟ್ಟಾಗಿಸಿ ಸಿನಿಮಾ ಮಾಡಿದ್ದಾರೆ ನಿರ್ಮಾಪಕ ಮುನಿರತ್ನ ಮತ್ತು ನಿರ್ದೇಶಕ ನಾಗಣ್ಣ. ಅವರ ಶ್ರಮ ತೆರೆಯ ಮೇಲೆ ಭವ್ಯ ಅರಮನೆಯಂತೆ ಶೃಂಗಾರಗೊಂಡಿದೆ. ಪಾಂಡವರ ಮತ್ತು ಕೌರವರ ನಡುವಿನ ರೋಚಕ ಸಂಗತಿಗಳನ್ನು ಅಷ್ಟೇ ಸೊಗಸಾಗಿ ಸೆರೆಹಿಡಿಯಲಾಗಿದೆ. ಪಾತ್ರಗಳ ಆಯ್ಕೆ, ದೃಶ್ಯ ಸಿಂಗರಿಸಿದ ರೀತಿ, ಆಡುವ ಸಂಭಾಷಣೆ ಮತ್ತು ಸಂಗೀತದ ಅಲಂಕಾರಗಳಿಂದಾಗಿ ಕುರುಕ್ಷೇತ್ರ ಕಳೆಗಟ್ಟಿದೆ'' - ವಿಜಯ ಕರ್ನಾಟಕ 3.5/5

ರಣ ರೋಚಕ ಕ್ಷೇತ್ರ ವೈಭವ

ರಣ ರೋಚಕ ಕ್ಷೇತ್ರ ವೈಭವ

''ಪೌರಾಣಿಕ ಸಿನಿಮಾಕ್ಕೆ ಮುಖ್ಯವಾಗಿ ಬೇಕಾಗಿರೋದು ಮೂಲ ಅಂಶಗಳಿಗೆ ನಿಷ್ಠೆ ಹಾಗೂ ದೃಶ್ಯ ವೈಭವ. ‘ಕುರುಕ್ಷೇತ್ರ' ಚಿತ್ರದ ಪ್ರತಿಯೊಂದು ದೃಶ್ಯ ಕೂಡಾ ಅದ್ಧೂರಿ ಹಾಗೂ ಅದ್ಭುತವಾಗಿದೆ. ಕೌರವ-ಪಾಂಡವರ ಸಾಮ್ರಾಜ್ಯ, ಜೂಜು, ಅದ್ಧೂರಿತವನ್ನು ನಿರ್ಮಾಪಕ ಮುನಿರತ್ನ ಹಾಗೂ ನಿರ್ದೇಶಕ ನಾಗಣ್ಣ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಸುಯೋಧನನ ಎಂಟ್ರಿ, ಯುದ್ಧ, ಹಾಡು ಎಲ್ಲವೂ ಕಣ್ಣಿಗೆ ಹಬ್ಬದಂತಿದೆ. ಈ ಅಂಶಗಳಲ್ಲಿ ಗ್ರಾಫಿಕ್‌ ಅನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಜೊತೆಗೆ ಸಾಮಾನ್ಯವಾಗಿ ಪೌರಾಣಿಕ ಸಿನಿಮಾಗಳನ್ನು ಮಾಡುವಾಗ ಆಗುವ ಆಭಾಸಗಳಿಂದಲೂ ‘ಕುರುಕ್ಷೇತ್ರ' ಮುಕ್ತ. ಅಂದಿನ ಕಾಲಘಟ್ಟ ಹೇಗಿತ್ತೋ, ಏನು ಬೇಕಿತ್ತೋ ಅವೆಲ್ಲವೂ ‘ಕುರುಕ್ಷೇತ್ರ'ದಲ್ಲಿದೆ. ಪೌರಾಣಿಕ ಸಿನಿಮಾಗಳಲ್ಲಿ ವೇಷ-ಭೂಷಣದ ಜೊತೆಗೆ ಪ್ರಮುಖ ಪಾತ್ರ ವಹಿಸುವುದು ಸಂಭಾಷಣೆ. ಆ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವಿ.ನಾಗೇಂದ್ರ ಪ್ರಸಾದ್‌ ಎಲ್ಲೂ ಅಪಭ್ರಂಶವಾಗದಂತೆ ನೋಡಿಕೊಂಡಿದ್ದಾರೆ'' - ಉದಯವಾಣಿ ವಿಮರ್ಶೆ

'ಕುರುಕ್ಷೇತ್ರ' ಚಿತ್ರ ನೋಡಿ ಸುಮಲತಾ, ದರ್ಶನ್ ಬಗ್ಗೆ ಹೇಳಿದ್ದು ಹೀಗೆ

ಗ್ರಾಫಿಕ್ಸ್ ಮೆರುಗಿನ ರೋಚಕ ಕುರುಕ್ಷೇತ್ರ

ಗ್ರಾಫಿಕ್ಸ್ ಮೆರುಗಿನ ರೋಚಕ ಕುರುಕ್ಷೇತ್ರ

''ದುರ್ಯೋಧನನ ದೃಷ್ಟಿಕೋನದಲ್ಲಿ ‘ಮುನಿರತ್ನ ಕುರುಕ್ಷೇತ್ರ' ಮೂಡಿಬಂದಿದೆ. ಆ ಪಾತ್ರಕ್ಕೆ ದರ್ಶನ್ ಸಂಪೂರ್ಣ ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಕೌರವನ ಗತ್ತು, ಗಾಂಭೀರ್ಯಕ್ಕೆ ದರ್ಶನ್ ನಿಲುವು ಹೇಳಿಮಾಡಿಸಿದಂತಿದೆ. ಖಡಕ್ ಕಣ್ಣೋಟ, ಕಂಚಿನ ಕಂಠ, ಭುಜಬಲದ ಕಾರಣದಿಂದ ಅವರು ಸಾಕ್ಷಾತ್ ದುರ್ಯೋಧನನಂತೆ ಕಾಣುತ್ತಾರೆ. ಇತರ ಪ್ರಕಾರದ ಸಿನಿಮಾಗಳಿಗಿಂತಲೂ ಈ ಪೌರಾಣಿಕ ಚಿತ್ರದಲ್ಲೇ ಅವರ ನಟನಾ ಸಾಮರ್ಥ್ಯ ಪ್ರದರ್ಶನಕ್ಕೆ ಹೇರಳ ಅವಕಾಶ ಸಿಕ್ಕಿದೆ. ಗ್ರಾಂಥಿಕ ಸ್ವರೂಪದ ಸಂಭಾಷಣೆಗಳನ್ನು ಅವರು ಅನುಭವಿಸಿ ನುಡಿದಂತಿದೆ. ಈ ಎಲ್ಲ ಅಂಶಗಳಿಂದಾಗಿ ದರ್ಶನ್ ಅಭಿಮಾನಿಗಳಿಗೆ ‘..ಕುರುಕ್ಷೇತ್ರ' ಭರಪೂರ ಮನರಂಜನೆ ಒದಗಿಸುತ್ತದೆ. ಹಾಗಂತ ಪೂರ್ತಿ ಚಿತ್ರಕ್ಕೆ ಈ ಮಾತು ಅನ್ವಯವಲ್ಲ. ಮೊದಲಾರ್ಧದಲ್ಲಿ ರಾರಾಜಿಸುವ ದುರ್ಯೋಧನ, ದ್ವಿತೀಯಾರ್ಧದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುವುದೇ ಇಲ್ಲ. ಮಧ್ಯಂತರದ ನಂತರ ಆತನನ್ನು ಹೊರತುಪಡಿಸಿ, ಇನ್ನುಳಿದ ಹಲವು ಪಾತ್ರಗಳೇ ಮುನ್ನೆಲೆಗೆ ಬಂದಿವೆ'' - ವಿಜಯವಾಣಿ ವಿಮರ್ಶೆ

'ನಿಖಿಲ್ ಸೂಪರ್ ಆಗಿ ಆಕ್ಟ್ ಮಾಡಿದ್ದಾನೆ' ಅಂದ್ರು ಸುಮಲತಾ

ಇದು ದರ್ಶನ್ ಕುರುಕ್ಷೇತ್ರ

ಇದು ದರ್ಶನ್ ಕುರುಕ್ಷೇತ್ರ

''ಇದು ದರ್ಶನ್ ಅವರ 50ನೇ ಸಿನಿಮಾ. ಇದರಿಂದ ಚಿತ್ರದ ಮೇಲೆ ನಿರೀಕ್ಷೆಯ ಭಾರ ಹೆಚ್ಚಿತ್ತು. ದುರ್ಯೋಧನನ ಪಾತ್ರದಲ್ಲಿ ಅವರು ತಮ್ಮ ನಿಲುವು, ಕಣ್ಣೋಟ, ಗತ್ತಿನಿಂದ ಮನ ಸೆಳೆಯುತ್ತಾರೆ. ಅವರ ಪ್ರಭಾವಳಿ ಮತ್ತು ವ್ಯಾಪಾರಿ ಸೂತ್ರ ಚೌಕಟ್ಟಿನಲ್ಲಿಯೇ ರೂಪುಗೊಂಡಿರುವ ಸಿನಿಮಾ ಇದು. ಹಾಗಾಗಿ ಪಾತ್ರದೊಳಗೆ ಅವರೆಷ್ಟು ಪರಕಾಯ ಪ್ರವೇಶ ಮಾಡಿದ್ದಾರೆಂಬ ಲೆಕ್ಕಾಚಾರ ಬದಿಗಿಟ್ಟು ಸಿನಿಮಾ ನೋಡುವುದು ಅನಿವಾರ್ಯ. ದರ್ಶನ್ ಡೈಲಾಗ್ ಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಆದರೆ, ಅವರ ಕಣ್ಣಲ್ಲಿ ಕಣ್ಣಿಟ್ಟು ಕೌರವಶ ನಾಶಕ್ಕೆ ಪಣತೊಡುವ ಶಕುನಿ ಪಾತ್ರಧಾರಿಯಾಗಿ ರವಿಶಂಕರ್ ಅವರ ಕ್ರೌರ್ಯವನ್ನೇ ಮೆತ್ತಿಕೊಂಡಂತೆ ಅಭಿನಯಿಸಿದ್ದಾರೆ'' - ಪ್ರಜಾವಾಣಿ ವಿಮರ್ಶೆ

'ಕುರುಕ್ಷೇತ್ರ' ನೋಡಿದ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಹೇಳಿದ್ದೇನು?

Seamless treat of mythology we’ve grown up with

Seamless treat of mythology we’ve grown up with

''Producer Munirathna took up the task of moving the Mahabharata out of pint-sized weekly instalments to the big screen, zeroing in on one of the epic's most definitive battles - the one fought at Kurukshetra. The movie differs in one major way from the tales of yore, however, as it shows the battle from Duryodhana's point of view. The character is portrayed by Darshan in his landmark 50th outing. With 3D technology, the war is played out in a feature-length costume drama, with the spectacular visual effects making for gleeful viewing'' - Indian express kurukshetra review 4/5

English summary
Challenging star darshan starrer 50th movie kurukshetra Released yesterday. here is the news paper review collection.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more