For Quick Alerts
  ALLOW NOTIFICATIONS  
  For Daily Alerts

  Lambodara Review : ಬಸವನಗುಡಿ ಲಂಬೋದರ, ನೋಡಿದ್ರೆ ನಗ್ತೀರಾ

  |

  ಒಂದು ಸಿನಿಮಾಗೆ ಹೋದರೆ ಖುಷಿಯಾಗಬೇಕು. ನಮ್ಮ ದಿನನಿತ್ಯದ ಜಂಜಾಟವನ್ನು ಮರೆಸಬೇಕು. ಚಿತ್ರಮಂದಿರದಲ್ಲಿ ಇರುವಷ್ಟು ಹೊತ್ತು ಎಂಜಾಯ್ ಮಾಡಬೇಕು. ಇದು ಒಂದು ಸಿನಿಮಾದಿಂದ ಒಬ್ಬ ಸಾಮಾನ್ಯ ಪ್ರೇಕ್ಷಕ ಬಯಸುವ ಅಂಶಗಳು. ಈ ರೀತಿ ಯೋಚನೆ ಮಾಡುವ ಪ್ರೇಕ್ಷಕರಿಗೆ 'ಲಂಬೋದರ' ಸಿನಿಮಾ ಒಂದು ಉತ್ತಮ ಆಯ್ಕೆ.

  Rating:
  3.5/5

  ಚಿತ್ರ : ಲಂಬೋದರ ಬಸವನಗುಡಿ ಬೆಂಗಳೂರು

  ನಿರ್ದೇಶನ: ಕೆ ಕೃಷ್ಣರಾಜ್

  ನಟನೆ : ಯೋಗಿ, ಅಕಾಂಕ್ಷ, ಧರ್ಮಣ್ಣ, ಸಿದ್ದು

  ಸಂಗೀತ ನಿರ್ದೇಶನ: ಕಾರ್ತಿಕ್ ಶರ್ಮ

  ಬಿಡುಗಡೆಯ ದಿನಾಂಕ: ಜನವರಿ 11, 2018

  ಬಸವನಗುಡಿ ಬಾಯ್, ಸಿಕ್ಕಾಪಟ್ಟೆ ಎಂಜಾಯ್

  ಬಸವನಗುಡಿ ಬಾಯ್, ಸಿಕ್ಕಾಪಟ್ಟೆ ಎಂಜಾಯ್

  'ಲಂಬೋದರ' ಸಿನಿಮಾ ಒಬ್ಬ ಲೋಕಲ್ ಹುಡುಗನ ಕಥೆಯಾಗಿದೆ. ಒಂದು ಸಾಮಾನ್ಯ ಕುಟುಂಬದ ಪೋಲಿ ಹುಡುಗನೇ ಲಂಬೋದರ (ಯೋಗಿ). ಶಾಲೆಯ ದಿನದಲ್ಲೇ ಈತನ ಪೋಲಿತನ ಶುರುವಾಗುತ್ತದೆ. ದೊಡ್ಡವನಾದ ಮೇಲೆ ಕೇಳಬೇಕೆ, ಯಾವುದೇ ಹುಡುಗಿ ಕಂಡರೂ ಲೈನ್ ಹೊಡೆಯುತ್ತಿರುತ್ತಾನೆ. ಇಬ್ಬರು ಫ್ರೆಂಡ್ಸ್, ರಾತ್ರಿ ಡ್ರಿಂಗ್ಸ್ ಇಷ್ಟೇ ಜೀವನ ಎಂದುಕೊಂಡಿರುತ್ತಾನೆ. ಹೀಗಿದ್ದ ಲಂಬೋದರನ ಜೀವನ ಹೇಗೆ ಬದಲಾಗುತ್ತದೆ?, ಅಪ್ಪಟ್ಟ ಪೋಲಿಗೆ ಹೇಗೆ ಜವಾಬ್ದಾರಿ ಬರುತ್ತದೆ ಎನ್ನುವುದು ಚಿತ್ರದ ಕಥೆ.

  ಯೋಗಿ, ಅಕಾಂಕ್ಷಾ ನಟನೆ

  ಯೋಗಿ, ಅಕಾಂಕ್ಷಾ ನಟನೆ

  ನಟ ಲೂಸ್ ಮಾದ ಯೋಗಿ ಮಾಡಿರುವ ಬೆಸ್ಟ್ ಸಿನಮಾಗಳ ಪೈಕಿ ಇದು ಒಂದಾಗಬಹುದು. ಇಡೀ ಸಿನಿಮಾದಲ್ಲಿ ಅವರ ಪಾತ್ರ ಸಖತ್ ಮಜಾ ನೀಡುತ್ತದೆ. ಯೋಗಿಯ ಕಾಮಿಡಿ ಮ್ಯಾನರಿಸಂ ಅನ್ನು ನಿರ್ದೇಶಕರು ತುಂಬ ಚೆನ್ನಾಗಿ ಬಳಸಿಕೊಂಡಿದ್ದಾರೆ. ಸಿನಿಮಾ ಯೋಗಿ ಅಭಿಮಾನಿಗಳಿಗೆ ಇಷ್ಟ ಆಗುತ್ತದೆ. ಬಸವಗುಡಿಯ ಈ ಸಿನಿಮಾದಲ್ಲಿ ಅಕಾಂಕ್ಷಾ ವಿದ್ಯಾರ್ಥಿ ಭವನ್ ದೊರೆ ರೀತಿ ಇದ್ದಾರೆ. ಎನ್ ಜಿ ಓ ಪಾತ್ರದಲ್ಲಿ ಮುದ್ದು ಮುದ್ದಾಗಿ ಕಾಣುತ್ತಾರೆ.

  ವಿಮರ್ಶೆ : ಆಡಿಸಿದಾತ ಬೇಸರ ಮೂಡಿಸಿ ಆಟ ಮುಗಿಸಿದ ವಿಮರ್ಶೆ : ಆಡಿಸಿದಾತ ಬೇಸರ ಮೂಡಿಸಿ ಆಟ ಮುಗಿಸಿದ

  ಧರ್ಮಣ್ಣ ಚಿತ್ರದ ಎರಡನೇ ಹೀರೋ

  ಧರ್ಮಣ್ಣ ಚಿತ್ರದ ಎರಡನೇ ಹೀರೋ

  ಸಿನಿಮಾದ ಮೊದಲ ಹೀರೋ ನಟ ಯೋಗಿಯಾದರೆ, ಎರಡನೇ ಹೀರೋ ಧರ್ಮಣ್ಣ. ಧರ್ಮಣ್ಣಗೆ ಇರುವ ಕಾಮಿಡಿ ಟೈಮಿಂಗ್ ಇಲ್ಲಿಯೂ ಸಖತ್ ವರ್ಕ್ ಔಟ್ ಆಗಿದೆ. ಧರ್ಮಣ್ಣ ಅವರ ಕೇದರನಾಥ್ ಪಾತ್ರ ತೆರೆ ಮೇಲೆ ಇರುವಷ್ಟು ಹೊತ್ತು ಪ್ರೇಕ್ಷಕರು ನಗುತ್ತಾರೆ. ಇನ್ನೊಬ್ಬ ಗೆಳೆಯನಾಗಿ ಸಿದ್ದು ಹಾಗೂ ತಂದೆಯ ಪಾತ್ರದಲ್ಲಿ ಅಚ್ಚುತ್ ಕುಮಾರ್ ಗಮನ ಸೆಳೆಯುತ್ತಾರೆ.

  ಟ್ವಿಟ್ಟರ್ ವಿಮರ್ಶೆ: 'ಎನ್.ಟಿ.ಆರ್ ಕಥಾನಾಯಕುಡು' ಅದ್ಭುತಂ, ಅಮೋಘಂ.! ಟ್ವಿಟ್ಟರ್ ವಿಮರ್ಶೆ: 'ಎನ್.ಟಿ.ಆರ್ ಕಥಾನಾಯಕುಡು' ಅದ್ಭುತಂ, ಅಮೋಘಂ.!

  ಪ್ಲಾಸ್ಸು, ಮೈನಸ್ಸು

  ಪ್ಲಾಸ್ಸು, ಮೈನಸ್ಸು

  ಈ ಸಿನಿಮಾದಲ್ಲಿ ಹೈಲೆಟ್ ಕಾಮಿಡಿ. ಎಲ್ಲ ಕಾಮಿಡಿ ಪಂಚ್ ವರ್ಕ್ ಆಗಿವೆ. ಮೂರು ಬರೀ ಬರುವ ಸಾಹಸ ದೃಶ್ಯವು, ಸಿನಿಮಾದ ಅವಧಿ ಹೆಚ್ಚು ಮಾಡಿದೆ. ಮೂರು ಬಾರಿ ವಿಲನ್ ಗಳ ಜೊತೆಗೆ ಹೊಡೆದಾಟ ಅಗತ್ಯ ಇತ್ತೆ ಎನ್ನುವ ಪ್ರಶ್ನೆ ಬರುತ್ತದೆ. ಸಿನಿಮಾದ ಅವಧಿ ಸ್ವಲ್ಪ ಕಡಿಮೆ ಆಗಿದ್ದರೆ, ಪ್ರೇಕ್ಷಕರಿಗೆ ಇನ್ನೂ ಹೆಚ್ಚು ತೃಪ್ತಿ ನೀಡುತಿತ್ತು.

  ಸಂಗೀತ ಹಿತವಾಗಿದೆ

  ಸಂಗೀತ ಹಿತವಾಗಿದೆ

  ಸಿನಿಮಾದ ಹಾಡುಗಳು ಚೆನ್ನಾಗಿವೆ. ಜಯಂತ್ ಕಾಯ್ಕಿಣಿ ಬರೆದಿರುವ 'ಗೆಳೆಯ..' ಹಾಡು ಇಷ್ಟ ಆಗುತ್ತದೆ. ಹಿನ್ನಲೆ ಸಂಗೀತದ ಕೆಲಸ ಸಹ ಚೆನ್ನಾಗಿ ಆಗಿದೆ. ಉಳಿದಂತೆ, ಕ್ಯಾಮರಾದಲ್ಲಿ ಬೆಂಗಳೂರು ಹಾಗೂ ಬಸವನಗುಡಿಯ ಅಂದ ಇನ್ನಷ್ಟು ಜಾಸ್ತಿಯಾಗಿದೆ.

  Petta review: ಅಭಿಮಾನಿಗಳು ನಿರೀಕ್ಷೆ ಮಾಡಿದ್ದು ಇದನ್ನೇ Petta review: ಅಭಿಮಾನಿಗಳು ನಿರೀಕ್ಷೆ ಮಾಡಿದ್ದು ಇದನ್ನೇ

  ಮನರಂಜನೆಗಾಗಿ ಸಿನಿಮಾ

  ಮನರಂಜನೆಗಾಗಿ ಸಿನಿಮಾ

  ಮನರಂಜನೆಗಾಗಿ ಸಿನಿಮಾ ಎಂದು ನಂಬಿದವರು ಆರಾಮಾಗಿ 'ಲಂಬೋದರ' ಸಿನಿಮಾ ನೋಡಬಹುದು. ಚಿತ್ರಮಂದಿರದಲ್ಲಿ ಇರುವಷ್ಟು ಸಮಯ ಯಾವುದೇ ಬೇಸರ ಇಲ್ಲದೆ ನಕ್ಕು ಬರಬಹುದು. ಕ್ಲೈಮ್ಯಾಕ್ಸ್ ನಲ್ಲಿ ಬರುವ ಸಂದೇಶವನ್ನು ತರಬಹುದು.

  English summary
  Kannada actor Loose Mada Yogi 'Lambodara' kannada movie review.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X