Leo Twitter Review: ಕಥೆನೇ ಇಲ್ಲ: ಸೆಕೆಂಡ್ ಹಾಫ್ ಬೋರಿಂಗ್

ಭಾರೀ ನಿರೀಕ್ಷೆ ಮೂಡಿಸಿದ್ದ 'ಲಿಯೋ' ಸಿನಿಮಾ ಕೊನೆಗೂ ಬಿಡುಗಡೆಯಾಗಿದೆ. ಬೆಳ್ಳಬೆಳಗ್ಗೆ ಹಲವು ಭಾಗಗಳಲ್ಲಿ ಸಿನಿಮಾ ಪ್ರದರ್ಶನ ಆರಂಭವಾಗಿತ್ತು. ಸ್ಟಾರ್ ನಿರ್ದೇಶಕ ಲೋಕೇಶ್ ಕನಕರಾಜ್ ಹಾಗೂ ದಳಪತಿ ವಿಜಯ್ ಕ್ರೇಜಿ ಕಾಂಬಿನೇಷನ್‌ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಮಾಡಿತ್ತು.

ಬಹುಕೋಟಿ ವೆಚ್ಚದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣವಾಗಿದೆ. ಪ್ರೀ ರಿಲೀಸ್ ಬ್ಯುಸಿನೆಸ್‌ನಿಂದಲೂ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅಡ್ವಾನ್ಸ್ ಬುಕ್ಕಿಂಗ್‌ಗೂ ಕೂಡ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಹಾಗಾಗಿ ಸಹಜವಾಗಿಯೇ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿತ್ತು. ಬೆಂಗಳೂರಿನಲ್ಲಿ 'ಲಿಯೋ' ಟಿಕೆಟ್ ದರ 1500 ರೂ.ಗೆ ಹೆಚ್ಚಳವಾಗಿತ್ತು. ಇಷ್ಟೆಲ್ಲಾ ಚರ್ಚೆ ಹುಟ್ಟಾಕ್ಕಿರುವ ಸಿನಿಮಾದಲ್ಲಿ ಅಂಥಾದ್ದೇನಿದೆ? ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿತ್ತು.

Leo-twitter-review-in-Kannada

ಬೆಳ್ಳಂ ಬೆಳಗ್ಗೆ ಪ್ರೇಕ್ಷಕರು ಸಿನಿಮಾ ವೀಕ್ಷಿಸಿದ್ದಾರೆ. 5 ಪಟ್ಟು ಹೆಚ್ಚು ಹಣ ಕೊಟ್ಟು ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಿದವರು ಇದ್ದಾರೆ. ಈಗಾಗಲೇ ಸಿನಿಮಾ ನೋಡಿದ ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ‍X (ಟ್ವಿಟ್ಟರ್)ನಲ್ಲಿ ಚಿತ್ರದ ಪ್ಲಸ್ ಏನು? ಮೈನಸ್ ಏನು? ಎನ್ನುವುದನ್ನು ಹೇಳುತ್ತಿದ್ದಾರೆ.

ನಿರೀಕ್ಷೆ ತಲುಪಲಿಲ್ಲ

ನೆಟ್ಟಿಗರೊಬ್ಬರು ಟ್ವೀಟ್ ಮಾಡಿ "ನಿರ್ದೇಶನ, ಸ್ಕ್ರೀನ್‌ಪ್ಲೇ, ಬಿಜಿಎಂ ಹಾಗೂ ವಿಜಯ್ ಪರ್ಫಾರ್ಮನ್ಸ್ ಅದ್ಭುತವಾಗಿದೆ. ಆದರೆ ಬಹಳ ಹೈಪ್ ಕ್ರಿಯೇಟ್ ಆಗಿತ್ತು. ಆ ನಿರೀಕ್ಷೆಯನ್ನು ತಲುಪುವಲ್ಲಿ ಸಿನಿಮಾ ವಿಫಲವಾಗಿದೆ. ಅಂತೂ ಇಂತೂ ಈ ಸಿನಿಮಾ ಲೋಕೇಶ್‌ ಕನಕರಾಜ್ ಸಿನಿಮ್ಯಾಟಿಕ್‌ ಯೂನಿವರ್ಸ್‌ನಲ್ಲಿ ಇರುವುದು ಪಕ್ಕಾ ಆಗಿದೆ. ನನ್ನ ರೇಟಿಂಗ್ 3/5 ಎಂದು ಬರೆದಿದ್ದಾರೆ.

ಅನಿರುದ್ಧ್ ಸಂಗೀತ ಚಿತ್ರದ ಬೆನ್ನೆಲುಬು

ಅಮೃತ ಭಾರತಿ ಎಂಬುವವರು "ದಳಪತಿ ವಿಜಯ್ ಪರ್ಫಾರ್ಮೆನ್ಸ್ ಚಿಂದಿ. ಲೋಕೇಶ್ ಬಹಳ ಟೈಟ್ ಸ್ಕ್ರೀನ್‌ಪ್ಲೇ ಹಾಗೂ ಅದನ್ನು ತೆರೆಗೆ ತಂದಿರುವ ರೀತಿ ಚೆನ್ನಾಗಿದೆ. ಊಹಿಸಿಲಾಗದ ಸಾಕಷ್ಟು ಸರ್‌ಪ್ರೈಸ್‌ಗಳು ಸಿನಿಮಾದಲ್ಲಿದೆ. ಇಂಟರ್‌ವಲ್ ಹಾಗೂ ಕ್ಲೈಮ್ಯಾಕ್ಸ್ ಆಕ್ಷನ್ ಬ್ಲಾಕ್ ಗೂಸ್‌ಬಂಪ್ಸ್ ತರಿಸುತ್ತದೆ. ಅನಿರುದ್ಧ್ ಸಂಗೀತ ಚಿತ್ರದ ಬೆನ್ನೆಲುಬು. ಒಳ್ಳೆ ಪಾತ್ರ ಪೋಷಣೆ ಹಾಗೂ ತ್ರಿಶಾ, ಸಂಜಯ್ ದತ್, ಅರ್ಜುನ್ ಸರ್ಜಾ ಅಭಿನಯ ಚೆನ್ನಾಗಿದೆ. ಒಟ್ಟಾರೆಯಾಗಿ ಥಿಯೇಟರ್‌ನಲ್ಲಿ ನೋಡಬಹುದಾದ ಸಿನಿಮಾ" ಎಂದಿದ್ದಾರೆ.

ಒಟ್ಟಾರೆಯಾಗಿ ಪರವಾಗಿಲ್ಲ

ಲಿಯೋ ಪಾಸಿಸಿವ್, ವಿಜಯ್ ಕರಿಯರ್ ಬೆಸ್ಟ್ ಪರ್ಫಾರ್ಮೆನ್ಸ್. ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ಫಸ್ಟ್ ಹಾಫ್ ಸ್ಕ್ರೀನ್‌ಪ್ಲೇ, ಇಂಟರ್‌ವಲ್ ಬ್ಯಾಂಗ್ ಬೊಂಬಾಟ್ ಆಗಿದೆ. ಅನಿರುದ್ದ್ ಮ್ಯೂಸಿಕ್, ವೇರಿಯೇಷನ್ ಚೆನ್ನಾಗಿದೆ. ನೆಗೆಟಿವ್ ವಿಚಾರಕ್ಕೆ ಬಂದರೆ ಸೆಕೆಂಡ್ ಹಾಫ್ ಬರವಣಿಗೆ ಇನ್ನು ಚೆನ್ನಾಗಿ ಇರಬೇಕಿತ್ತು. ಕೊಂಚ ದೀರ್ಘಾವಧಿ ಅನಿಸಿತು. ಫ್ಯಾಶ್‌ಬ್ಯಾಕ್ ಮತ್ತಷ್ಟು ಪರಿಣಾಮಕಾರಿಯಾಗಿ ಇರಬೇಕಿತ್ತು. ಕಾರ್ ಚೇಸ್ ವಿಎಫ್‌ಎಕ್ಸ್ ಚೆನ್ನಾಗಿಲ್ಲ. ಒಟ್ಟಾರೆಯಾಗಿ ಪೈಸಾವಸೂಲ್ ಸಿನಿಮಾ. ಮುಖ್ಯವಾಗಿ LCU ಲಿಂಕ್ಸ್, ಇಂಟರ್‌ವಲ್, ಒಟ್ಟಾರೆ ಅಭಿಮಾನಿಗಳಿಗೆ ಟ್ರೀಟ್ ಎಂದು ಸಾಮುಯೆಲ್ ಎಂಬುವವರು ಬರೆದಿದ್ದಾರೆ.

Leo-twitter-review-in-Kannada

ಇದು 100% LCU

ಕಾರ್ತಿಕ್ ಎಂಬುವವರು ಟ್ವೀಟ್ ಮಾಡಿ "ತಮಿಳು ಚಿತ್ರರಂಗದಲ್ಲೇ ಬೆಸ್ಟ್ ಫಸ್ಟ್ ಹಾಫ್. ವಿಜಯ್, ಲೋಕೇಶ್ ಕರಿಯರ್‌ನಲ್ಲೂ ಬೆಸ್ಟ್. ಆದರೆ ಸೆಕೆಂಡ್ ಹಾಫ್ ಕೊಂಚ ಎಳೆದಾಡಿದ್ದಾರೆ. ಆದರೆ ಕ್ಲೈಮ್ಯಾಕ್ಸ್ ಎಲ್ಲರಿಗೂ ಸರ್‌ಪ್ರೈಸ್ ಕೊಡುತ್ತದೆ. ಹೈನಾ ಫೈಟ್ ಸೀನ್ ಸೂಪರ್. ಇದು 100% LCU. ಕಮಲ್ ಹಾಸನ್ ಸರ್‌ಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

ಸೆಕೆಂಡ್ ಹಾಫ್ ಬೋರಿಂಗ್

ಯುಕೆಯಲ್ಲಿ 'ಲಿಯೋ' ಪ್ರೀಮಿಯರ್ ಶೋ ನೋಡಿದ ಕೋಶಿ ಎಂಬುವವರು "ಬಿಜಿಎಂ ಓಕೆ. ಎಮೋಷನ್ ಸೀನ್ಸ್ ವರ್ಕ್ ಆಗಿಲ್ಲ. ಸೆಕೆಂಡ್ ಹಾಫ್ ಸಖತ್ ಬೋರಿಂಗ್. ಒಟ್ಟಾರೆಯಾಗಿ ಸಿನಿಮಾ ಅಷ್ಟಕ್ಕಷ್ಟೆ ಎಂದಿದ್ದಾರೆ.

ಕಥೆನೇ ಇಲ್ಲ

ಶ್ರೀರಾಮ್ ಎಂಬುವವರು "ಒಮ್ಮೆ ನೋಡಬಹುದಾದ ಸಿನಿಮಾ. ಲೋಕೇಶ್ ಕನಕರಾಜ್ ಸಿನಿಮಾಗಳಲ್ಲಿ ಕಡಿಮೆ ಚೆನ್ನಾಗಿರುವ ಎನ್ನಬಹುದು. ವಿಜಯ್ ಸ್ಕ್ರೀನ್ ಪ್ರಸೆನ್ಸ್, ಅನಿರುದ್ಧ್ ಬಿಜಿಎಂ ಹಾಗೂ ವಿಷ್ಯುವಲ್ಸ್ ಪ್ಲಸ್ ಪಾಯಿಂಟ್. ಇನ್ನು ಕೆಟ್ಟ ಸ್ಕ್ರೀನ್‌ಪ್ಲೇ, ಅತಿಯಾದ ವೈಲೆನ್ಸ್, ಲಾಜಿಕ್ ಇಲ್ಲದ ಆಕ್ಷನ್ ಸೀಕ್ವೆನ್ಸ್, ಜೀರೋ ಎಮೋಷನಲ್ ಕಂಟೆಂಟ್, ಕತೆನೇ ಇಲ್ಲದಿರುವುದು ಚಿತ್ರದ ನೆಗೆಟಿವ್ಸ್ ಎಂದಿದ್ದಾರೆ.

More from Filmibeat

English summary
Check out What Twitter Audiences Have to Say About the Movie "Leo" in Kannad
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X