For Quick Alerts
  ALLOW NOTIFICATIONS  
  For Daily Alerts

  'ಸೆಲ್ಫಿ' ಸಹವಾಸ ಕೆಲವರಿಗೆ ಇಷ್ಟವಾಯ್ತು, ಕೆಲವರಿಗೆ ಕಿರಿಕಿರಿಯಾಯ್ತು

  By Naveen
  |
  ಹೇಗಿತ್ತು ಲೈಫ್ ಜೊತೆ ಒಂದ್ ಸೆಲ್ಫಿ..! | Filmibeat Kannada

  ಏಳು ವರ್ಷಗಳ ನಂತರ ದಿನಕರ್ ತೂಗುದೀಪ್ ಮತ್ತೆ ಚಿತ್ರ ನಿರ್ದೇಶಕ್ಕೆ ಮರಳಿದ್ದಾರೆ. ಅವರ 'ಲೈಫ್ ಜೊತೆ ಒಂದ್ ಸೆಲ್ಫಿ' ಸಿನಿಮಾ ನಿನ್ನೆ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.

  ದಿನನಿತ್ಯ ನಡೆಯುವ ಸುಂದರ ಸನ್ನಿವೇಶವನ್ನು ನಾವು ಸೆಲ್ಫಿಯಲ್ಲಿ ಸೆರೆ ಹಿಡಿಯುತ್ತೇವೆ. ಅದೇ ರೀತಿ ಜೀವನದ ಕೆಲವು ಅಮೂಲ್ಯ ಘಟನೆಗಳ ಜೋಡಣೆಯೇ 'ಲೈಫ್ ಜೊತೆ ಒಂದು ಸೆಲ್ಫಿ' ಸಿನಿಮಾ. ಏನೇ ಕಷ್ಟ ಇದ್ದರೂ ಅದಕ್ಕೆ ಒಂದು ಪರಿಹಾರ ಇದ್ದೇ ಇರುತ್ತದೆ ಎನ್ನುವ ಈ ಸಿನಿಮಾ ಸರಳ ಹಾಗೂ ಸ್ವಚ್ಛ ಚಿತ್ರ.

  ವಿಮರ್ಶೆ: ಇಷ್ಟ ಇದ್ರೆ ಒಮ್ಮೆ ಸೆಲ್ಫಿ ತೆಗೆದುಕೊಳ್ಳಬಹುದು ವಿಮರ್ಶೆ: ಇಷ್ಟ ಇದ್ರೆ ಒಮ್ಮೆ ಸೆಲ್ಫಿ ತೆಗೆದುಕೊಳ್ಳಬಹುದು

  ಅಂದಹಾಗೆ, ಕನ್ನಡ ದಿನ ಪತ್ರಿಕೆಗಳಲ್ಲಿ ಬಂದ 'ಲೈಫ್ ಜೊತೆ ಒಂದ್ ಸೆಲ್ಫಿ' ಸಿನಿಮಾದ ವಿಮರ್ಶೆ ಮುಂದಿದೆ ಓದಿ..

  ಮೂರು ಫ್ಲಾಷ್ ಬ್ಯಾಕು ಒಂದೇ ಒಂದು ಸೆಲ್ಫೀ - ಕನ್ನಡ ಪ್ರಭ

  ಮೂರು ಫ್ಲಾಷ್ ಬ್ಯಾಕು ಒಂದೇ ಒಂದು ಸೆಲ್ಫೀ - ಕನ್ನಡ ಪ್ರಭ

  ''ಒಬ್ಬ ತಾಯಿಗೆ ತಕ್ಕ ಮಗ, ಮತ್ತೊಬ್ಬ ತನ್ನ ಕನಸಿಗಾಗಿ ಅಮ್ಮನಿಂದಲೇ ದೂರವಾದ ಮಗ, ತನ್ನಿಷ್ಟದಂತೆ ಬದುಕಲು ಪ್ರಿಯಕರನನ್ನೆ ದೂರ ಮಾಡಿ ಬಂದ ಹುಡುಗಿ. ಈ ಮೂವರದ್ದು ಒಂದೊಂದು ಕತೆ. ಇವರು ಜೊತೆಯಾದರೆ ಹೇಗಿರುತ್ತದೆ ಎನ್ನುವ ಕುತೂಹಲದ ದಾರಿಯಲ್ಲಿ ನೋಡುಗರನ್ನು ಕರೆದುಕೊಂಡು ಹೋಗುವ ಪ್ರಯತ್ನ ಮಾಡುತ್ತದೆ ಲೈಫ್ ಜೊತೆ ಒಂದು ಸೆಲ್ಫಿ. ಅಂದಹಾಗೆ, ಇವರ ಕಥೆಗಳು ತೆರೆದುಕೊಳ್ಳುವುದು ಗೋವಾದ ಕಡಲ ತೀರದಲ್ಲಿ. ಆರಂಭದಲ್ಲಿ ಇವು ಅವರವರ ಸೆಲ್ಫಿ ಕಥೆಗಳೆನಿಸಿಕೊಂಡರೂ ವಿರಾಮದ ಹೊತ್ತಿಗೆ ಇವು ಎಲ್ಲರಿಗೂ ಅನ್ವಯಿಸುವ ಸ್ಟೋರಿಗಳು ಅನ್ನಿಸುತ್ತದೆ. ಕನಸು ಮತ್ತು ವಾಸ್ತವದ ಬದುಕನ್ನು ಹೇಗೆ ಸರಿದೂಗಿಸಿಕೊಂಡು ಹೋಗ ಬೇಕೆಂಬುದನ್ನು ಅಚ್ಚುಕಟ್ಟಾಗಿ ಹೇಳುತ್ತದೆ ಈ ಸಿನಿಮಾ'' - ಆರ್.ಕೇಶವಮೂರ್ತಿ

  ವಿಭಿನ್ನ ವ್ಯಕ್ತಿತ್ವಗಳ ಸುಂದರ ಪಯಣ - ವಿಜಯ ಕರ್ನಾಟಕ

  ವಿಭಿನ್ನ ವ್ಯಕ್ತಿತ್ವಗಳ ಸುಂದರ ಪಯಣ - ವಿಜಯ ಕರ್ನಾಟಕ

  ''ನಕುಲ್ (ಪ್ರೇಮ್), ರಶ್ಮಿ (ಹರಿಪ್ರಿಯಾ), ವಿರಾಟ್‌( ಪ್ರಜ್ವಲ್ ದೇವರಾಜ್‌), ಈ ಮೂವರು ಗೋವಾದಲ್ಲಿ ಭೇಟಿಯಾಗುತ್ತಾರೆ. ಅಪರಿಚಿತರಾದ ಇವರು ಸ್ನೇಹಿತರಾಗುತ್ತಾರೆ. ಒಬ್ಬೊಬ್ಬರದ್ದು ಒಂದೊಂದು ಕಥೆ, ಆ ಕಥೆಗಳನ್ನು ನೋಡಲು ಸಿನಿಮಾ ನೋಡಲೇಬೇಕು. ನಿರ್ದೇಶಕ ದಿನಕರ್ ಮತ್ತು ಕಥೆಗಾರ್ತಿ ಮಾನಸಾ ಅವರ ಆಲೋಚನೆಗೆ ಪ್ರೇಮ್, ಪ್ರಜ್ವಲ್, ಹರಿಪ್ರಿಯಾ ಜೀವ ತುಂಬಿದ್ದಾರೆ. ಹರಿಪ್ರಿಯಾ ಅಂತೂ ಲವಲವಿಕೆಯಿಂದ ಗಮನ ಸೆಳೆಯುತ್ತಾರೆ. ಸುಧಾರಾಣಿ ಪಾತ್ರ ಮನಸ್ಸಲ್ಲಿ ಉಳಿಯುತ್ತದೆ. ಸಿನಿಮಾದ ಉದ್ದ ಸ್ವಲ್ಪ ಹೆಚ್ಚಾಯಿತು ಅನ್ನುವುದು ಬಿಟ್ಟರೆ ಕುಟುಂಬ ಸಮೇತರಾಗಿ ಒಮ್ಮೆ ನೋಡಲು ಅಡ್ಡಿಯಿಲ್ಲ.'' - ಹರಿ

  ಸಮೀರನ ಮುಗ್ಧತೆ ಕಂಡು ಮಗುವಾದರು ವಿಮರ್ಶಕರು ಸಮೀರನ ಮುಗ್ಧತೆ ಕಂಡು ಮಗುವಾದರು ವಿಮರ್ಶಕರು

  ಪ್ರೀತಿ, ಕನಸು ಮತ್ತು ವಾತ್ಸಲ್ಯದ ಸೆಲ್ಫಿ - ಉದಯವಾಣಿ

  ಪ್ರೀತಿ, ಕನಸು ಮತ್ತು ವಾತ್ಸಲ್ಯದ ಸೆಲ್ಫಿ - ಉದಯವಾಣಿ

  "ಲೈಫ್ ಜೊತೆ ಒಂದ್ ಸೆಲ್ಫಿ' ಚಿತ್ರ ನಿಮಗೆ ಭಿನ್ನವಾಗಿ ಕಾಣುವುದು ಚಿತ್ರ ಪಡೆದುಕೊಳ್ಳುವ ಕೆಲವು ಅನಿರೀಕ್ಷಿತ ತಿರುವುಗಳಿಂದ. ಅದು ಫ್ಯಾಮಿಲಿಯಾಗಿರಬಹುದು ಅಥವಾ ಫ್ರೆಂಡ್ಸ್ ಆಗಿರಬಹುದು. ಇಂತಹ ಅಂಶಗಳ ಮೂಲಕ ಸಿನಿಮಾ ಖುಷಿಕೊಡುತ್ತದೆ. ಸಿದ್ಧಸೂತ್ರಗಳಿಂದ ಹೊರತಾದ ಸಿನಿಮಾ ಇದಾದರೂ, ದಿನಕರ್, ಸಾಧುಕೋಕಿಲ ಕಾಮಿಡಿ, ಒಂದು ಫೈಟ್, ಕ್ಲಬ್‌ ಸಾಂಗ್. ಹೀಗೆ ಮಾಸ್‌ ಪ್ರಿಯರಿಗೂ ಮೋಸ ಮಾಡಿಲ್ಲ. ಚಿತ್ರದ ಟ್ರಕ್ಕಿಂಗ್, ಸಾಧು ಕಾಮಿಡಿ ಸೇರಿದಂತೆ ಕೆಲವು ದೃಶ್ಯಗಳನ್ನು ಟ್ರಿಮ್ ಮಾಡುವ ಅವಕಾಶ ನಿರ್ದೇಶಕರಿಗಿತ್ತು. ಜೀವನದಲ್ಲಿ ಸಮಸ್ಯೆಗಳಿಗೆ ಜೀವನವೇ ಪರಿಹಾರ ಕೊಡುತ್ತದೆ ತಾತ್ಪಾರ್ಯದೊಂದಿಗೆ ಸಾಗುತ್ತದೆ. ಚಿತ್ರವನ್ನು ಮುನ್ನಡೆಸುವಲ್ಲಿ ಸುಧಾರಾಣಿ ಪಾತ್ರ ಪ್ರಮುಖವಾಗಿದೆ. ಒಂದು ಹಂತದ ನಂತರ ಸುಧಾರಾಣಿ ಇಡೀ ಸಿನಿಮಾವನ್ನು ಆವರಿಸಿಕೊಳ್ಳುತ್ತಾರೆ ಮತ್ತು ಕಥೆಯನ್ನು ಮುಂದುವರೆಸಿಕೊಂಡು - ರವಿ ರೈ

  ಸೆಲ್ಪಿಯೊಳಗೆ ಭಾವನೆಗಳ ಛಾಯಾಚಿತ್ರ - ವಿಜಯವಾಣಿ

  ಸೆಲ್ಪಿಯೊಳಗೆ ಭಾವನೆಗಳ ಛಾಯಾಚಿತ್ರ - ವಿಜಯವಾಣಿ

  ''ಮೂರು ಭಿನ್ನ ಮನಸ್ಥಿತಿಗಳನ್ನು ಒಂದೇ ಸೂರಿನಡಿ ಅವರವರ ಕಥೆಯನ್ನು ಹೇಳಿಕೊಳ್ಳುವ, ಸುತ್ತಾಟದ ಹಾದಿಯಲ್ಲಿಯೇ ಸರಿ-ತಪ್ಪುಗಳಿಗೆ ಪರಿಹಾರ ಕಂಡುಕೊಳ್ಳುವ ಚಿತ್ರ ‘ಲೈಫ್ ಜೊತೆ ಒಂದ್ ಸೆಲ್ಪಿ'. ದುಡ್ಡಿನ ತೂಕಕ್ಕಿಂತ ಭಾವನೆಗಳ ತೂಕವೇ ಹೆಚ್ಚು ಎಂಬ ಬೋಧನೆ ರೀತಿಯ ಅಂಶಗಳೇ ಸಿನಿಮಾದಲ್ಲಿ ಸ್ಥಾನಪಡೆದಿವೆ. ಸಣ್ಣ ಸಣ್ಣ ಖುಷಿಯಲ್ಲಿಯೇ ಜೀವನಪ್ರೀತಿ ಕಂಡುಕೊಳ್ಳಬಹುದಾದ ಕೆಲ ಅಂಶಗಳನ್ನು ಹೇರಳವಾಗಿ ಪಾತ್ರಧಾರಿಗಳ ಬಾಯಿಂದ ಹೇಳಿಸಿದ್ದಾರೆ. ಅಂಥ ಮಾತುಗಳು ಒಮ್ಮೊಮ್ಮೆ ಅತಿ ಅನಿಸುವುದೂ ಉಂಟು. ಭಾವನೆಗಳನ್ನು ಹೆಣೆಯುವ ಅವಸರದಲ್ಲಿ ಕೆಲವೊಂದಿಷ್ಟು ಬೇಡದ ದೃಶ್ಯಗಳು ಸುಮ್ಮನೆ ತೇಲಿ ಬರುತ್ತವೆ. ಹರಿಕೃಷ್ಣ ಬತ್ತಳಿಕೆಯಲ್ಲಿನ ಹಾಡುಗಳ ಪೈಕಿ ಒಂದು ಹಾಡು ಮಾತ್ರ ಕಿವಿಗಿಂಪು. - ಮಂಜು ಕೊಟಗುಣಸಿ

  ಲೈಫ್ ಜೊತೆ ಒಂದ್ ಸೆಲ್ಪಿ ವಿಮರ್ಶೆ : ಬೆಂಗಳೂರು ಮಿರರ್

  ಲೈಫ್ ಜೊತೆ ಒಂದ್ ಸೆಲ್ಪಿ ವಿಮರ್ಶೆ : ಬೆಂಗಳೂರು ಮಿರರ್

  This film felt so much like watching television at home. You watch a few scenes of Kannada TV serials like Putta Gowri Maduve and Lakshmi Baaramma and switch to TLC or Fox Life for sometime. Throw in a bit of some adventure programmes from Discovery or NGC and you have Life Jothe Ondu Selfie, a full-time advertisement for the Goa Tourism Department. The film leaves you in no doubt that it was written watching TV and while being busy with the remote.

  Recent films which have taken the actors on a Goa trip have become huge hits. So not ruling out such a possibility, you can still safely conclude that this film was not worth all the selfies it demanded.

  English summary
  Kannada actors Prajwal Devaraj, Nenapirali Prem and actress Haripriya starring 'Life Jothe Ondu Selfie' kannada movie critics review.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X