Full Meals Review: ಲಿಖಿತ್ ಶೆಟ್ಟಿ, ಖುಷಿ ರವಿ ಪ್ರೇಕ್ಷಕರಿಗೆ 'ಫುಲ್ ಮೀಲ್ಸ್' ಕೊಡ್ತಾರೋ? ಇಲ್ವೋ?
'ಕಾಂತಾರ ಚಾಪ್ಟರ್ 1' ಬಳಿಕ ಕನ್ನಡ ಚಿತ್ರರಂಗದಲ್ಲಿ ಸ್ಮಾಲ್ ಬಜೆಟ್ ಸಿನಿಮಾಗಳು ಹೆಚ್ಚಾಗಿ ರಿಲೀಸ್ ಆಗುತ್ತಿವೆ. ಈ ವಾರ ಕೂಡ ಬರೋಬ್ಬರಿ 8 ಸಿನಿಮಾಗಳು ರಿಲೀಸ್ ಆಗುತ್ತಿವೆ. ಅದರಲ್ಲಿ ಲಿಖಿತ್ ಶೆಟ್ಟಿ, ಖುಷಿ ರವಿ ಹಾಗೂ ತೇಜಸ್ವಿನಿ ಶರ್ಮಾ, ರಂಗಾಯಣ ರಘು ನಟನೆಯ 'ಫುಲ್ ಮೀಲ್ಸ್' ಸಿನಿಮಾ ಕೂಡ ಒಂದು. ಈ ಸಿನಿಮಾ ನಾಳೆ (ನವೆಂಬರ್ 21)ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.
ರೊಮ್ಯಾಂಟಿಕ್, ಕಾಮಿಡಿ ಜಾನರ್ ಸಿನಿಮಾ 'ಫುಲ್ ಮೀಲ್ಸ್' ಈಗಾಗಲೇ ಪ್ರೀಮಿಯರ್ ಶೋ ಆಗಿದೆ. ಈ ಸಿನಿಮಾದಲ್ಲಿ ಲಿಖಿತ್ ಶೆಟ್ಟಿ ಒಬ್ಬ ಫೋಟೊಗ್ರಾಫರ್ ಆಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಖುಷಿ ರವಿ, ತೇಜಸ್ವಿನಿ ಶರ್ಮಾ ನಾಯಕಿಯರಾಗಿ ನಟಿಸುತ್ತಿದ್ದಾರೆ. ಲಿಖಿತ್ ಶೆಟ್ಟಿಯ ಮಾವನಾಗಿ ಹಿರಿಯ ನಟ ರಂಗಾಯಣ ರಘು ನಟಿಸಿದ್ದಾರೆ.

ಎನ್.ವಿನಾಯಕ ನಿರ್ದೇಶಿಸಿರುವ ಈ ಸಿನಿಮಾ ಹಲವು ವರ್ಷಗಳಿಂದ ದೊಡ್ಡ ಯಶಸ್ಸನ್ನು ಎದುರು ನೋಡುತ್ತಿರುವ ಲಿಖಿತ್ ಶೆಟ್ಟಿ 'ಫುಲ್ ಮೀಲ್ಸ್' ಕೊಡುತ್ತಾ? ಮತ್ತೊಂದು ಸಿನಿಮಾ ಕರ್ನಾಟಕ ಬಾಕ್ದಾಫೀಸ್‌ನಲ್ಲಿ ಸಕ್ಸಸ್ ಕೊಡುತ್ತಾ? ಫುಲ್ ಮೀಲ್ಸ್ ಸಿನಿಮಾದ ಕಥೆಯೇನು? ಪ್ಲಸ್ ಏನು? ಮೈನಸ ಏನು? ಎಂದು ತಿಳಯುವುದಕ್ಕೆ ಮುಂದೆ ಓದಿ.
'ಫುಲ್ ಮೀಲ್ಸ್' ಕಥೆಯೇನು?
ಲಿಖಿತ್ ಶೆಟ್ಟಿ ಒಬ್ಬ ಮಿಡಲ್ ಕ್ಲಾಸ್ ಫೋಟೋಗ್ರಾಫರ್. ಅವರ ಮಾವನೇ ರಂಗಾಯಣ ರಘು. ಮಾವನಿಗೆ ತನ್ನ ಮಗಳನ್ನು ಲಿಖಿತ್ ಶೆಟ್ಟಿಗೆ ಕೊಡಬೇಕು ಎನ್ನುವ ಆಸೆಯಿರುತ್ತೆ. ಆದರೆ, ಆ ಹುಡುಗಿ ಬೇರೆಯವರನ್ನು ಇಷ್ಟ ಪಟ್ಟು ಮದುವೆ ಆಗುತ್ತಾರೆ. ಲಿಖಿತ್ ಚಿಕ್ಕಂದಿನಿಂದ ಅವರ ಮನೆಯಲ್ಲಿಯೇ ಬೆಳೆದಿದ್ದರಿಂದ ಸಾಲ ಮಾಡಿ ರಂಗಾಯಣ ರಘು ಫೋಟೊ ಸ್ಟುಡಿಯೋ ಹಾಕಿಕೊಡುತ್ತಾರೆ. ಆದರೆ ಅದರಲ್ಲಿ ವ್ಯಾಪಾರ ಆಗುತ್ತಿರಲ್ಲ. ಚಿಕ್ಕ ಪುಟ್ಟ ಹಣ ತೆಗೆದುಕೊಂಡು ಫೋಟೋಗ್ರಾಫಿ ಮಾಡುತ್ತಿರುತ್ತಾರೆ. ಈ ವೇಳೆ ಇನ್ನೊಬ್ಬ ಹೀರೋಯಿನ್ ತೇಜಸ್ವಿನಿ, ಮೇಕಪ್ ಆರ್ಟಿಸ್ಟ್ ಆಗಿರುತ್ತಾರೆ. ಇವರಿಬ್ಬರೂ ಸೇರಿ ಕಾಂಬಿನೇಷನ್‌ನಲ್ಲಿ ಕೆಲಸ ಮಾಡುತ್ತಾರೆ. ಈ ವೇಳೆ ತೇಜಸ್ವಿನಿಗೆ ಲಿಖಿತ್ ಶೆಟ್ಟಿ ಮೇಲೆ ಲವ್ ಆಗಿರುತ್ತೆ. ಹಾಗಂತ ಇದು ಟು ವೇ ಲವ್ ಅಲ್ಲ. ಇದೇ ವೇಳೆ ಹೀರೋಯಿನ್ ಖುಷಿ ರವಿ ಮದುವೆ ಫಿಕ್ಸ್ ಆಗಿರುತ್ತೆ. ನಾಯಕಿ ಅಣ್ಣ ರಾಜೇಶ್ ನಟರಂಗ ಹಾಗೂ ರಂಗಾಯಣ ರಘು ಪರಿಚಯವಿದ್ದಿದ್ದರಿಂದ ಫೋಟೊಗ್ರಾಫರ್ ಬೇಕು ಎಂದಾಗ, ರಂಗಾಯಣ ರಘು ಲಿಖಿತ್ ಶೆಟ್ಟಿಯನ್ನು ಕಳುಹಿಸಿ ಕೊಡುತ್ತಾರೆ. ತೇಜಸ್ವಿನಿಗೂ ಖುಷಿ ರವಿ ಪರಿಚಯವಿರುತ್ತೆ. ಹೀಗಾಗಿ ಮೂವರು ಇಟ್ಟಿಗೆ ಸೇರುತ್ತಾರೆ. ಪ್ರೀ ವೆಡ್ಡಿಂಗ್ ಶೂಟಿಂಗ್ ಮಾಡುವ ವೇಳೆ ಲಿಖಿತ್ ಶೆಟ್ಟಿಗೂ ನಾಯಕಇ ಖುಷಿ ರವಿಗೂ ಲವ್ ಆಗುತ್ತೆ. ಅದನ್ನು ಒಂದು ದಿನ ಹೇಳಿದಾಗ, ಲಿಖಿತ್ ಶೆಟ್ಟಿ ಆಕೆಯಿಂದ ದೂರು ಸರಿಯುತ್ತಾರೆ. ಈ ಗ್ಯಾಪ್‌ನಲ್ಲಿ ನಡೆದ ಒಂದು ಫೈಟ್ ಲಿಖಿತ್ ಶೆಟ್ಟಿ ಹಾಗೂ ಖುಷಿ ರವಿಯನ್ನು ಒಂದು ಮಾಡುತ್ತೆ. ಹಾಗಂತ ಇದು ಕೇವಲ ಇಂಟರ್‌ವಲ್ ಅಷ್ಟೇ. ಮುಂದೆ ಏನಾಗುತ್ತೆ ಅನ್ನೋದನ್ನು ನೋಡಬೇಕಿದೆ.

ಪ್ಲಸ್ ಪಾಯಿಂಟ್
'ಪುಲ್ ಮೀಲ್ಸ್' ಸಿನಿಾದ ಲೋಕೇಶ್, ಕ್ಯಾಮರಾ ವರ್ಕ್ ಚೆನ್ನಾಗಿದೆ. ಇನ್ನು ಲಿಖಿತ್ ಶೆಟ್ಟಿ, ಖುಷಿ ರವಿ ಹಾಗೂ ತೇಜಸ್ವಿನಿ ಪಾತ್ರಗಳು ಇಷ್ಟ ಆಗುತ್ತವೆ. ಹಾಗೇ ರಂಗಾಯಣ ರಘು, ವಿಜಯ್ ಚೆಂಡೂರು ಅವರ ಪಂಚಿಂಗ್ ಡೈಲಾಗ್ ಪ್ರೇಕ್ಷಕರಿಗೆ ಮಧ್ಯದಲ್ಲಿ ರಿಲೀಫ್ ಸಿಗುತ್ತವೆ.
ಮೈನಸ್ ಪಾಯಿಂಟ್
ಈ ಕಥೆಯಲ್ಲಿ ಧಮ್ ಇಲ್ಲ. ಹಳೆ ಕಥೆಯನ್ನು ಹೊಸದಾಗಿ ಹೇಳುವುದಕ್ಕೆ ಹೊರಟಿದ್ದಾರೆ ಅಂತ ಅನಿಸುತ್ತೆ. ರಂಗಾಯಣ ರಘು, ವಿಜಯ್ ಚೆಂಡೂರು ಡೈಲಾಗ್‌ಗಳು ಆಗಾಗ ಖುಷಿ ಕೊಡುತ್ತವೆ. ಅಷ್ಟು ಬಿಟ್ಟರೆ ಬೇರೆ ಏನೂ ಮಜಾ ಕೊಡುವುದಿಲ್ಲ. ಕಥೆಯಲ್ಲಿ ಹೀಗೆ ಆಗುತ್ತೆ ಎಂದು ಎಕ್ಸ್‌ಪೆಕ್ಟ್ ಮಾಡಬಹುದು. ಗುರುಕಿರಣ್ ಹಿನ್ನೆಲೆ ಸಂಗೀತ ಚೆನ್ನಾಗಿದ್ದರೂ, ಇನ್ನೂ ಅದ್ಭುತವಾದ ಹಾಡುಗಳನ್ನು ಕೊಡಬಹುದಿತ್ತು ಎನಿಸುತ್ತದೆ.


Click it and Unblock the Notifications











