Love Mocktail 3 X Review ; ನಿಧಿ ನೆನಪಲ್ಲಿ ಆದಿಯ ಪಯಣ - ಇಷ್ಟವಾಗುತ್ತಾ ತಂದೆ-ಮಗಳ ಕಥನ ? ಪ್ರೇಕ್ಷಕರ ಅಭಿಪ್ರಾಯ

ಕಿರುತೆರೆಯಿಂದ ಬೆಳ್ಳಿತೆರೆಗೆ ಹಲವಾರು ಜನ ಬಂದಿದ್ದಾರೆ. ಆ ಪೈಕಿ ಡಾರ್ಲಿಂಗ್ ಕೃಷ್ಣ ಕೂಡ ಒಬ್ಬರು. ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿದ್ದು, ನಾಯಕನಾಗಿ ನೆಲೆಯೂರುವ ಪ್ರಯತ್ನ ಮಾಡಿದ ಕೃಷ್ಣಗೆ ಗೆಲುವು ಆರಂಭದಲ್ಲಿ ಸಿಗಲಿಲ್ಲ. ಹಾಗಂಥ ಕೃಷ್ಣ ಸೋಲನ್ನೂ ಕೂಡ ಒಪ್ಪಿಕೊಳ್ಳಲಿಲ್ಲ.

ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಸಹಾಯಕ ನಿರ್ದೇಶಕನಾಗಿಯೂ ಕೂಡ ದುಡಿದ ಡಾರ್ಲಿಂಗ್ ಕೃಷ್ಣ 2020ರಲ್ಲಿ ದಿಗ್ಗನೆ ಎದ್ದು ನಿಂತರು.ನಿರ್ದೇಶಕನಾಗಿ ಬಡ್ತಿ ಪಡೆದರು. ''ಲವ್ ಮಾಕ್ಟೇಲ್'' ಎಂಬ ಕ್ಯೂಟ್ ಚಿತ್ರವನ್ನು ಮಾಡಿದರು. ಈ ಚಿತ್ರ ಕೃಷ್ಣ ಅವರ ಇಮೇಜನ್ನೇ ಸಂಪೂರ್ಣ ಬದಲಿಸಿತು.

Love Mocktail 3 X Review  Emotional Masterstroke or Weepy Drag  The Final Verdict

ಇನ್ನು ಎಲ್ಲರಿಗೆ ಗೊತ್ತು.ಕನ್ನಡದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಮಾಡುವ ಹೀರೋಗಳ ಸಂಖ್ಯೆ ತೀರಾ ಕಡಿಮೆ. ಹೀಗಿರುವಾಗ ''ಲವ್ ಮಾಕ್ಟೇಲ್'' ನೋಡಲು ಜನ ಬ್ಲಾಕ್ ಟಿಕೇಟ್ ಖರೀದಿಸಲು ಮುಗಿಬಿದ್ದಾಗ ಸಿನಿಪ್ರಿಯರು ಸಂಭ್ರಮಿಸಿದ್ದರು. ಈಗ ''ಲವ್ ಮಾಕ್ಟೇಲ್ 3 ಸರದಿ''.

ಹಾಗಿದ್ದರೆ ''ಲವ್ ಮಾಕ್ಟೇಲ್ 3'' ಹೇಗಿದೆ..? ಕೃಷ್ಣ ಮತ್ತು ಮಿಲನಾ ಹೇಳಿರುವ ಈ ಅಂತಿಮ ಅಧ್ಯಾಯ ಪ್ರೇಕ್ಷಕರಿಗೆ ಇಷ್ಟ ಆಯ್ತಾ..? ತಂದೆ-ಮಗಳ ಭಾವನಾತ್ಮಕವಾದ ಕಥನ ಪ್ರೇಕ್ಷಕರ ಕಣ್ಣಾಲಿಯನ್ನು ಒದ್ದೆಯಾಗಿಸಿತಾ..? ಚಿತ್ರ ನೋಡಿದವರು ಹೇಳಿದ್ದೇನು..? ಎಂದು ತಿಳಿಯಲು ಮುಂದೆ ಓದಿ.

ಒಳ್ಳೆಯ ಸಿನಿಮಾ

ಪ್ರೀಮಿಯರ್ ಪ್ರದರ್ಶನದಲ್ಲಿ ಸಿನಿಮಾ ನೋಡಿದೆ. ಛಾಯಾಗ್ರಹಣ ಮತ್ತು ಹಾಡುಗಳು ಚೆನ್ನಾಗಿವೆ. ಅನಿರೀಕ್ಷಿತ ಕಥಾವಸ್ತು. ಫ್ರಾಂಚೈಸಿಗೆ ಉತ್ತಮ ಅಂತ್ಯ. ನಿರ್ದೇಶಕರು ಈ ಕಥೆಯ ಮೂಲಕ ಸಾಮಾಜಿಕ ಪರಿಣಾಮವನ್ನು ಬೀರಿದ್ದಾರೆ.

ಕಲ್ಲು ಹೃದಯವನ್ನು ಕರಗಿಸುವ ಸಿನಿಮಾ

ತಂದೆ ಮತ್ತು ಮಗಳ ಸಂಬಂಧದ ಸುತ್ತ ಹೆಣೆಯಲಾದ ಸರಳವಾದ ಕಥೆ ಹೊಂದಿರುವ ಚಿತ್ರ ''ಲವ್ ಮಾಕ್ಟೇಲ್ 3''. ಭಾವನಾತ್ಮಕವಾದ ಕೋರ್ಟ್‌ ರೂಮ್ ಡ್ರಾಮಾ. ನನ್ನಂತಹ ಕಲ್ಲು ಹೃದಯವನ್ನು ಹೊಂದಿರುವನನ್ನೂ ಭಾವುಕವನ್ನಾಗಿಸಿದ ಸಿನಿಮಾ ಇದು. ನನಗೆ ತುಂಬಾ ಇಷ್ಟ ಆಯ್ತು. ಕುಟುಂಬ ಸಮೇತ ನೋಡಲೇಬೇಕಾದ ಚಿತ್ರ.

ಭಾವನಾತ್ಮಕ ಚಿತ್ರ

''ಲವ್ ಮಾಕ್ಟೇಲ್ 3'' ಖಂಡಿತವಾಗಿಯೂ ನೋಡಬಹುದಾದ ಒಳ್ಳೆಯ ಸಿನಿಮಾ. ಕೋರ್ಟ್‌ ರೂಮ್ ಡ್ರಾಮಾ ಚೆನ್ನಾಗಿ ಮೂಡಿ ಬಂದಿದೆ. ಶುದ್ಧವಾದ ಭಾವನೆಗಳನ್ನು ಹೊಂದಿರುವ ಆಕರ್ಷಕ ಚಿತ್ರ. ಜೈ ಕನ್ನಡ

ಜಸ್ಟ್ ಓಕೆ ಸಿನಿಮಾ

ಕೆಲ ಹಾಸ್ಯ ದೃಶ್ಯಗಳನ್ನೊಂದಿರುವ ಚಿತ್ರದ ಮೊದಲಾರ್ಧ ನೋಡಿಸಿಕೊಂಡು ಹೋಗುತ್ತೆ. ಆದರೆ ಪರಿಪೂರ್ಣ ಚಿತ್ರವನ್ನಾಗಿ ನೋಡಿದಾಗ ಜಸ್ಟ್ ಓಕೆ ಎನ್ನಬಹುದಾದ ಸಿನಿಮಾ ಇದು.

ಗುಂಗಿನಿಂದ ಹೊರ ಬರಲು ಆಗುತ್ತಿಲ್ಲ

ಪ್ರೀಮಿಯರ್ ಪ್ರದರ್ಶನದಲ್ಲಿ ''ಲವ್ ಮಾಕ್ಟೇಲ್ 3'' ಸಿನಿಮಾ ನೋಡಿದೆ. ಚಿತ್ರ ಮುಗಿದು ಒಂದು ಗಂಟೆಯಾಗಿದೆ. ಆದರೆ ಚಿತ್ರದ ಗುಂಗಿನಿಂದ ಹೊರ ಬರಲು ಇನ್ನೂ ಸಾಧ್ಯವಾಗುತ್ತಿಲ್ಲ. ಒಳ್ಳೆಯ ಅನುಭವ ನೀಡುವ ಈ ಚಿತ್ರದ ಕುರಿತು ನಾನು ತುಂಬಾ ಬರೆಯಬಲ್ಲೆ . ಆದರೆ ಸದ್ಯ ಒಂದು ಸಹಾಯ ಮಾಡಿ. ಚಿತ್ರಮಂದಿರಕ್ಕೆ ಹೋಗಿ ಈ ದಯವಿಟ್ಟು ಸುಂದರವಾದ ಅನುಭವ ನೀಡುವ ಈ ಚಿತ್ರವನ್ನು ನೋಡಿ. ಬ್ಲಾಕ್ ಬಸ್ಟರ್.

ಬೇರೆಯ ಹೆಸರಿಡಬೇಕಿತ್ತು

ಈ ಸಿನಿಮಾ ಬೇರೆ ಕಥೆಯಂತೆ ಮಾಡಿದ್ದರೆ ಭಾವನಾತ್ಮಕವಾಗಿ ಮನ ಮುಟ್ಟುತ್ತಿತ್ತು. ಆದರೆ, ''ಲವ್‌ ಮಾಕ್ಟೇಲ್'' ಫ್ರಾಂಚೈಸಿಯ ಉತ್ತರಾಧಿಕಾರಿಯಾಗಿ ಈ ಚಿತ್ರವನ್ನು ಸಮರ್ಥಿಸಿಕೊಳ್ಳುವುದು ಕಷ್ಟ.

ಇನ್ನೂ ಹಲವರು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರನ್ನು ಟ್ಯಾಗ್ ಮಾಡಿ ತಮ್ಮ ತಮ್ಮ ಮನದ ಮಾತುಗಳನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ಧಾರೆ. ಆ ಪೈಕಿ ಒಬ್ಬರು ಯಾಕೆ ನಮ್ಮ ಭಾವನೆಗಳ ಜೊತೆ ಹೀಗೆ ಆಟ ಆಡ್ತೀರಾ ಎಂದು ಪ್ರಶ್ನೆ ಮಾಡುತ್ತಿದ್ಧಾರೆ. ಎಲ್ರೂ ಲೈಫ್ ಅಲ್ಲಿ ನಿಧಿಮಾ ಅನ್ನೋ ವ್ಯಕ್ತಿ ಇರ್ಬೇಕು ಆದ್ರೆ ನಿಧಿ ಅನ್ನೋದು ತುಂಬ ಮುಖ್ಯ. ಎಲ್ಲರಿಗೂ ಆ ನಿಧಿ ಸಿಗಿಲ್ಲ. ಆ ನಿಧಿ ಏನ್ ಅದ್ರು ನಮ ಜೀವನದಲಿ ಸಿಕ್ದಿದ್ರೆ ಜೀವನ ತುಂಬಾ ಖುಷಿಯಾಗಿ ಇರುತ್ತೆ ಎಂದು ಹೇಳಿದ್ಧಾರೆ.

ಕೇವಲ ಜನಸಾಮಾನ್ಯರು ಮಾತ್ರವಲ್ಲ ಪ್ರೀಮಿಯರ್ ಪ್ರದರ್ಶನದಲ್ಲಿ ಚಿತ್ರವನ್ನು ನೋಡಿದ ಹಲವು ತಾರೆಯರು ಚಿತ್ರ ನೋಡಿ ಖುಷಿ ಪಟ್ಟಿದ್ಧಾರೆ. ಭಾವುಕರಾಗಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ಧಾರೆ.

More from Filmibeat

English summary
Darling Krishna returns with Love Mocktail 3! Does the Adi-Nidhi bond live up to the hype? Check out the raw first-day-first-show reactions and X reviews. We break down why fans are calling this 2026 release a "tear-jerker" finale you can't miss.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X