twitter
    For Quick Alerts
    ALLOW NOTIFICATIONS  
    For Daily Alerts

    Love Mocktail Review: ಬಹಳ ದಿನಗಳ ನಂತರ ಬಂದ ಒಂದೊಳ್ಳೆ ಪ್ರೇಮಕಥೆ

    |

    ಲವ್ ಸ್ಟೋರಿ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಕಾಮನ್ ಆಗಿ ಬಿಟ್ಟಿತ್ತು. ಆದರೆ, ಈಗ ಔಟ್ ಅಂಡ್ ಔಟ್ ಲವ್ ಸ್ಟೋರಿ ಸಿನಿಮಾಗಳು ತೀರ ಕಡಿಮೆಯಾಗಿ ಬಿಟ್ಟಿದೆ. ಸಿನಿಮಾದಲ್ಲಿ ಪ್ರೇಮಕಥೆ ಇದ್ದರೂ, ಪ್ರೇಮಕಥೆಯನ್ನೇ ಆಧಾರವಾಗಿ ಇಟ್ಟುಕೊಂಡು ಬರುವ ಸಿನಿಮಾಗಳ ಸಂಖ್ಯೆ ಇಳಿಕೆಯಾಗಿದೆ. ಆದರೆ, ಬಹಳ ದಿನಗಳ ನಂತರ ಒಂದು ಒಳ್ಳೆಯ ಲವ್ ಸ್ಟೋರಿ ಸಿನಿಮಾ ಬಂದಿದೆ. ಅದೇ 'ಲವ್ ಮಾಕ್ ಟೈಲ್'.

    Rating:
    4.0/5

    Review: ಇಷ್ಟವಾಗುತ್ತೆ 'ನಾನು ಮತ್ತು ಗುಂಡ'ನ ಕಥೆReview: ಇಷ್ಟವಾಗುತ್ತೆ 'ನಾನು ಮತ್ತು ಗುಂಡ'ನ ಕಥೆ

    ಆದಿಯ ಲವ್ ಸ್ಟೋರಿಸ್

    ಆದಿಯ ಲವ್ ಸ್ಟೋರಿಸ್

    ಸ್ಕೂಲ್ ನಲ್ಲಿ ಒಂದು.. ಕಾಲೇಜ್ ನಲ್ಲಿ ಒಂದು.. ಹೀಗೆ ನಾಯಕ ಆದಿಗೆ (ಡಾರ್ಲಿಂಗ್ ಕೃಷ್ಣ) ಲವ್ ಆಗುತ್ತಲೇ ಇರುತ್ತದೆ. ನಿಜವಾದ ಪ್ರೀತಿಯ ಹುಡುಕಾಟದ ನಟನಿಗೆ ಮತ್ತೆ ಮತ್ತೆ ಪ್ಯಾರ್ ಗೆ ಆಗ್ಬಿಡ್ ತೈತೆ. ಹೀಗೆ ಆದಿ ಜೀವನದ ವಿಧವಿಧವಾದ ಪ್ರೇಮಕಥೆಗಳು ಸಿನಿಮಾ ಕಥೆಯಾಗಿದೆ. ಕೊನೆಗೆ ನಿಜವಾದ ಪ್ರೀತಿ ಅಂದ್ರೆ ಏನು ಅಂತ ಎಲ್ಲರಿಗೂ ಅರ್ಥ ಮಾಡಿಸುತ್ತಾರೆ.

    ಫಸ್ಟ್ ಹಾಫ್ ಮತ್ತು ಸೆಕೆಂಡ್ ಹಾಫ್

    ಫಸ್ಟ್ ಹಾಫ್ ಮತ್ತು ಸೆಕೆಂಡ್ ಹಾಫ್

    ಸಿನಿಮಾದ ಮೊದಲಾರ್ಥ ತುಂಬ ಚೆನ್ನಾಗಿದೆ. ಅಲ್ಲಿಯೇ ಸಿನಿಮಾ ಬಗ್ಗೆ ನಂಬಿಕೆ ಮೂಡುತ್ತದೆ. ಫಸ್ಟ್ ಹಾಫ್ ಪಾಸ್ ಆದ ಮೇಲೆ ಸೆಕೆಂಡ್ ಹಾಫ್ ನಲ್ಲಿ ಏನಾಗುತ್ತದೆ ಎನ್ನುವ ನಿರೀಕ್ಷೆ ಶುರು ಆಗುತ್ತದೆ. ಸೆಕೆಂಡ್ ಹಾಫ್ ನಿಧಾನವಾಗಿ ಪ್ರಾರಂಭವಾದರೂ, ನಂತರ ಕಥೆಯಲ್ಲಿ ತಿರುವು ಸಿಗುತ್ತದೆ. ಕ್ಲೈಮ್ಯಾಕ್ಸ್ ಆದ ಮೇಲೆ ಸಿನಿಮಾ ಖುಷಿ ಕೊಡುತ್ತದೆ.

    ತೆರೆ ಮುಂದೆ ಹಾಗೂ ಹಿಂದೆ ಕೃಷ್ಣ ಕರಾಮತ್ತು

    ತೆರೆ ಮುಂದೆ ಹಾಗೂ ಹಿಂದೆ ಕೃಷ್ಣ ಕರಾಮತ್ತು

    ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಕೃಷ್ಣ ಭರವಸೆ ಮೂಡಿಸಿದ್ದಾರೆ. ತಮಗೆ ತಾವೇ ಒಂದೊಳ್ಳೆ ಸಿನಿಮಾ ಮಾಡಿಕೊಂಡಿದ್ದಾರೆ. ಸರಳ ಪ್ರೇಮಕಥೆಗಳನ್ನು ಸುಂದರವಾಗಿ ಹೇಳಿದ್ದಾರೆ. ಈ ಹಿಂದಿನ ಸಿನಿಮಾಗಳಿಗಿಂತ ತುಂಬ ಚೆನ್ನಾಗಿ ನಟಿಸಿದ್ದಾರೆ. ಹಾಸ್ಯ ಮತ್ತು ಭಾವುಕತೆಯ ದೃಶ್ಯಗಳಲ್ಲಿ ಕೃಷ್ಣ ತಮ್ಮ ಸಾಮರ್ಥ್ಯ ತೋರಿದ್ದಾರೆ.

    ಕೃಷ್ಣನ ಹುಡುಗಿಯರು

    ಕೃಷ್ಣನ ಹುಡುಗಿಯರು

    ಸಿನಿಮಾದಲ್ಲಿ ಎಲ್ಲರ ನಟನೆ ತುಂಬ ಚೆನ್ನಾಗಿದೆ. ಎಲ್ಲ ನಟಿಯರ ಪಾತ್ರಗಳಿಗೆ ಬೇರೆ ಬೇರೆ ಶೇಡ್ ಇದೆ. ಎಲ್ಲರೂ ತುಂಬ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಮಿಲನ, ಅಮೃತ ಹಾಗೂ ರಚನಾ ಪಾತ್ರಗಳು ಇಷ್ಟ ಆಗುತ್ತದೆ. ನಾಯಕನ ಸ್ನೇಹಿತರ ಪಾತ್ರಗಳ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ.

    ನೈಜತೆಗೆ ಹತ್ತಿರ

    ನೈಜತೆಗೆ ಹತ್ತಿರ

    ಸಿನಿಮಾದಲ್ಲಿ ಬರುವ ದೃಶ್ಯಗಳು ಪ್ರತಿಯೊಬ್ಬರಿಗೂ ಬಹಳ ಹತ್ತಿರ ಆಗುತ್ತದೆ. ನಾವು ನೋಡಿರುವ, ನಮ್ಮ ಜೀವನದಲ್ಲಿಯೂ ನಡೆದಿರುವ ಘಟನೆಗಳೆ ಸಿನಿಮಾದಲ್ಲಿವೆ. ಇಂತಹ ದೃಶ್ಯಗಳನ್ನು ಹೊಂದಿರುವ ಸಿನಿಮಾ ನೋಡುವರಿಗೆ ಬಹಳ ಹತ್ತಿರ ಆಗುತ್ತದೆ. ನಿಜ ಜೀವನದ ದೃಶ್ಯಗಳನ್ನು ಅಂದವಾಗಿ ತೆರೆ ಮೇಲೆ ತಂದಿದ್ದಾರೆ.

    ರಘು ದೀಕ್ಷಿತ್ ಸಂಗೀತ

    ರಘು ದೀಕ್ಷಿತ್ ಸಂಗೀತ

    ರಘು ದೀಕ್ಷಿತ್ ಹಿನ್ನಲೆ ಸಂಗೀತ ಚೆನ್ನಾಗಿದೆ. ಎರಡು ಹಾಡುಗಳು ಇಷ್ಟ ಆಗುತ್ತದೆ. ಆದರೆ, ಸಿನಿಮಾಗೆ ಇನ್ನಷ್ಟು ಒಳ್ಳೆಯ ಹಾಡುಗಳ ಕೊಡುಗೆಯನ್ನು ಅವರು ನೀಡಬಹುದಿತ್ತು. ಕ್ಯಾಮರಾ ವರ್ಕ್ ಓಕೆ ಓಕೆ. ಕೆಲವು ಕಡೆ ಸುಂದರವಾಗಿ ಕಾಣುವ ಪರದೆ, ಕೆಲವು ಕಡೆ ಕೊರತೆಯಿಂದ ಕಾಣುತ್ತದೆ.

    ಕ್ಯೂಟ್, ಸ್ವೀಟ್ ಅಂಡ್ ನೀಟ್

    ಕ್ಯೂಟ್, ಸ್ವೀಟ್ ಅಂಡ್ ನೀಟ್

    'ಲವ್ ಮಾಕ್ ಟೈಲ್' ಸಿನಿಮಾ ಕ್ಯೂಟ್ ಆಗಿದೆ, ಸ್ವೀಟ್ ಆಗಿದೆ, ತುಂಬ ನೀಟ್ ಆಗಿದೆ. ಒಂದು ಪಾತ್ರದ ಜೀವನದ ಪಯಣದಲ್ಲಿ ಬರುವ ಪ್ರೇಮಕಥೆಗಳನ್ನು ಪ್ರೇಕ್ಷಕರಿಗೆ ಮನರಂಜನೆ ನೀಡುವ ಹಾಗೆ ತುಂಬ ಚೆನ್ನಾಗಿ ತೋರಿಸಿದ್ದಾರೆ. ನಮ್ಮ ಅಕ್ಕ ಪಕ್ಕ ನಡೆಯುವ ಕಥೆ ಇದಾಗಿದ್ದರೂ, ತೆರೆ ಮೇಲೆ ಮಜಾ ನೀಡುತ್ತದೆ.

    English summary
    Love Mocktail kannada movie review.
    Friday, January 31, 2020, 17:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X