For Quick Alerts
  ALLOW NOTIFICATIONS  
  For Daily Alerts

  Lucky Man Twitter Review : ಲಕ್ಕಿಮ್ಯಾನ್ ಪ್ರೀಮಿಯರ್ ಶೋ ನೋಡಿದ ಅಪ್ಪು ಫ್ಯಾನ್ಸ್ ಏನಂದ್ರು?; ಇಲ್ಲಿದೆ ಟ್ವಿಟರ್ ರೆಸ್ಪಾನ್ಸ್

  |
  Lucky Man Twitter Review: Puneeth Rajkumar went as human and came back as god

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಡಾರ್ಲಿಂಗ್ ಕೃಷ್ಣ ಅಭಿನಯದ ಅಭಿನಯದ ಬಹುನಿರೀಕ್ಷಿತ ಚಿತ್ರ ಲಕ್ಕಿ ಮ್ಯಾನ್ ಚಿತ್ರದ ಪ್ರೀಮಿಯರ್ ಶೋಗಳು ಇಂದು ( ಸೆಪ್ಟೆಂಬರ್ 8 ) ಆಯೋಜನೆಯಾಗಿದ್ದವು. ಚಿತ್ರ ನಾಳೆ ( ಸೆಪ್ಟೆಂಬರ್ 9 ) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

  ಇನ್ನು ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು, ತುಮಕೂರು, ಶಿವಮೊಗ್ಗ ಹಾಗೂ ಇನ್ನಿತರ ನಗರಗಳಲ್ಲಿ ಲಕ್ಕಿ ಮ್ಯಾನ್ ಚಿತ್ರವನ್ನು ಅಪ್ಪು ಅಭಿಮಾನಿಗಳು ಇಂದೇ ಪೇಯ್ಡ್ ಪ್ರೀಮಿಯರ್ ಶೋಗಳ ಮೂಲಕ ವೀಕ್ಷಿಸಿದ್ದು, ಜೇಮ್ಸ್ ಬಳಿಕ ತಮ್ಮ ಆರಾಧ್ಯ ದೈವ ಪುನೀತ್ ಅವರನ್ನು ತೆರೆ ಮೇಲೆ ಕಂಡು ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ, ಎಂದು ನಿಂತು ನಮಸ್ಕರಿಸಿದ್ದಾರೆ. ಮಲ್ಟಿಪ್ಲೆಕ್ಸ್‌ಗಳಲ್ಲಿಯೂ ಅಪ್ಪು ಎಂಟ್ರಿಗೆ ಡೈಲಾಗ್, ಬಿಜಿಎಂ ಕೇಳದ ಹಾಗೆ ಅಪ್ಪು ಅಭಿಮಾನಿಗಳು ಶಿಳ್ಳೆ ಹೊಡೆದಿದ್ದಾರೆ.

  ಸದ್ಯ ಲಕ್ಕಿಮ್ಯಾನ್ ಅಪ್ಪು ಎಂಟ್ರಿಗೆ ಅಪ್ಪು ಅಭಿಮಾನಿಗಳ ಪ್ರತಿಕ್ರಿಯೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಾಟ್ಸಪ್‌ಗಳಲ್ಲಿ ಹರಿದಾಡುತ್ತಿದೆ. ಇನ್ನು ಚಿತ್ರ ವೀಕ್ಷಿಸಿ ಹೊರಬಂದ ಪುನೀತ್ ಅಭಿಮಾನಿಗಳು ತಮ್ಮ ತಮ್ಮ ಟ್ವಿಟರ್ ಖಾತೆಗಳಲ್ಲಿ ಲಕ್ಕಿಮ್ಯಾನ್ ಹೇಗಿದೆ ಎಂಬುದನ್ನೂ ಸಹ ಟ್ವೀಟ್ ಮಾಡಿದ್ದಾರೆ. ಆ ಕೆಲ ಆಯ್ದ ಟ್ವೀಟ್‌ಗಳ ಪಟ್ಟಿ ಈ ಕೆಳಕಂಡಂತಿದೆ.

  ಲಕ್ಕಿಮ್ಯಾನ್ ಸೂಪರ್ ಮೂವಿ, ಎಲ್ಲಾ ಪಾತ್ರಗಳೂ ಅದ್ಭುತವಾಗಿ ಮೂಡಿ ಬಂದಿವೆ, ಮೈ ಗಾಡ್ ಅಪ್ಪು ಬಾಸ್ ಸೂಪರ್ ಎಂದು ದಿಲೀಪ್ ಕುಮಾರ್ ಕೆಎಸ್ ಎಂಬ ಅಭಿಮಾನಿ ಟ್ವೀಟ್ ಮಾಡಿದ್ದಾರೆ.

  ಲಕ್ಕಿಮ್ಯಾನ್ ಚಿತ್ರದ ಮೊದಲಾರ್ಧ ನೋಡಿದರೆ ಸಾಕು ಮತ್ತೊಮ್ಮೆ ಚಿತ್ರಮಂದಿರಕ್ಕೆ ಬರಬೇಕು ಎನಿಸುತ್ತದೆ ಎಂದು ಪುನೀತ್ ಎಫ್‌ಸಿ ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದೆ.

  ಗೌತಮ್ ಎಂಬ ಅಪ್ಪು ಫ್ಯಾನ್ ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಮಾನವನಾಗಿ ಬಿಟ್ಟು ಹೋಗಿ ದೇವರಾಗಿ ಮತ್ತೆ ಬಂದಿದ್ದಾರೆ, ಪ್ರತಿಯೊಂದು ಅವರು ತೆರೆ ಮೇಲೆ ಬಂದಾಗ ರೋಮಾಂಚನ ಆಗ್ತಿದೆ, ನಮ್ಮನ್ನು ಆಶೀರ್ವದಿಸಿ, ಮಿಸ್ ಯು ಅಪ್ಪು ಬಾಸ್ ಎಂದು ಬರೆದುಕೊಂಡಿದ್ದಾರೆ.

  ಸಿದ್ದೇಶ್ ಎಂಬ ಅಪ್ಪು ಅಭಿಮಾನಿ ಟ್ವೀಟ್ ಮಾಡಿದ್ದು, ನೈಸ್ ಮೂವಿ, ಎಲ್ಲಾ ಪಾತ್ರಗಳು ಚೆನ್ನಾಗಿವೆ, ದೇವ್ರು ದೇವರ ಪಾತ್ರದಲ್ಲಿ ಚೆನ್ನಾಗಿ ಕಾಣ್ತಾರೆ, ಆ ಪಾತ್ರ ಅವರಿಗೆ ಮಾತ್ರ ಒಪ್ಪುತ್ತೆ, ಪ್ರಿ ಇಂಟರ್‌ವೆಲ್ ದೃಶ್ಯ ಹಾಗೂ ಪ್ರಿ ಕ್ಲೈಮ್ಯಾಕ್ಸ್ ದೃಶ್ಯ ಸಾಕು ಕೊಡುವ ದುಡ್ಡಿಗೆ ಎಂದು ಬರೆದಿದ್ದಾರೆ.

  ಡಾರ್ಲಿಂಗ್ ಕೃಷ್ಣ ಅತ್ಯದ್ಬುತ, ನಾಗಭೂಷಣ್ ಕಾಮಿಡಿ ಸಖತ್ತಾಗಿದೆ, ನಟಿ ಸಂಗೀತ ಶೃಂಗೇರಿ ಅವರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ, ನಮ್ಮ ಪ್ರೀತಿಯ ಅಪ್ಪು ಅವರ ಕೆಲ ದೃಶ್ಯಗಳು ಮುಖದಲ್ಲಿ ನಗು ಮೂಡಿಸುತ್ತವೆ, ಚಿತ್ರಮಂದಿರಕ್ಕೆ ತೆರಳಿ ದೇವರು ನಿಮ್ಮ ಆಗಮನಕ್ಕಾಗಿ ಕಾಯುತ್ತಿದ್ದಾರೆ ಎಂದು ರಜನಿ ಪ್ರಸನ್ನ ಎಂಬ ಸಿನಿ ಪ್ರೇಮಿ ಬರೆದುಕೊಂಡಿದ್ದಾರೆ.

  English summary
  Lucky Man Twitter Review: Puneeth Rajkumar went as human and came back as god
  Friday, September 9, 2022, 9:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X