ludo movie review: ಕೆಲ ಕಾಲ ನೆನಪುಳಿಯುವ 'ಕಾಮಿಡಿ ಆಫ್ ಎರರ್ಸ್'

ಹಾಸ್ಯ ಸಿನಿಮಾಗಳು ಇತ್ತೀಚೆಗೆ ತುಸು ಅಪರೂಪ. ಕೆಲವು ವರ್ಷಗಳ ಹಿಂದೆ 'ಸಿಂಪಲ್ ಆಗ್ ಒಂದ್ ಲವ್‌ಸ್ಟೋರಿ' ನಂತರ ಕನ್ನಡದಲ್ಲಿ ಹಾಸ್ಯದ ಹೆಸರಲ್ಲಿ ಡಬ್ಬಲ್ ಮೀನಿಂಗ್‌ ಸಿನಿಮಾಗಳ ಕೆಟ್ಟ ಸಂಸ್ಕೃತಿ ಹುಟ್ಟಿಕೊಂಡಿತ್ತಾದರೂ, ಕೆಲವು ಸಿನಿಮಾಗಳು ಸೋತ ನಂತರ ಅದು ಕಡಿಮೆಯಾಗಿದೆ.

ಆದರೆ ಹಾಸ್ಯ ಸಿನಿಮಾಗಳಲ್ಲಿ 'ಕಾಮಿಡಿ ಆಫ್ ಎರರ್ಸ್‌' ಸದಾ ಚಾಲ್ತಿಯಲ್ಲಿರುವ ಮಾದರಿ. ವ್ಯಕ್ತಿಗಳು, ಪಾತ್ರಗಳ ನಡುವಿನ ಗೊಂದಲಗಳು ಆ ಗೊಂದಲಗಳ ಮೂಲಕ ಹುಟ್ಟುವ ಹಾಸ್ಯವೇ ಕಾಮಿಡಿ ಆಫ್ ಎರರ್ಸ್‌. ಕನ್ನಡ, ಹಿಂದಿ, ತೆಲುಗು, ತಮಿಳು ಹೀಗೆ ಹಲವು ಭಾಷೆಗಳಲ್ಲಿ 'ಕಾಮಿಡಿ ಆಫ್ ಎರರ್ಸ್‌' ಅನ್ನೇ ಮುಖ್ಯವಾಗಿಟ್ಟುಕೊಂಡು ಕತೆ ಕಟ್ಟಿ ಯಶಸ್ವಿಯಾದ ಹಲವು ಸಿನಿಮಾಗಳಿವೆ. ಕನ್ನಡದಲ್ಲಿ ರಾಜ್‌ಕುಮಾರ್ ನಟನೆಯ 'ಭಾಗ್ಯದಾ ಲಕ್ಷ್ಮಿ ಬಾರಮ್ಮ' ಸಿನಿಮಾವನ್ನು ಪ್ರಮುಖ ಉದಾಹರಣೆಯಾಗಿ ತೆಗೆದುಕೊಂಡರೆ, ಹಿಂದಿಯ 'ಹೇರಾಪೇರಿ' ಮತ್ತೊಂದು ಕ್ಲಾಸಿಕ್ ಉದಾಹರಣೆ. ಈಗ ಇದಕ್ಕೆ ಹೊಸ ಸೇರ್ಪಡೆ ಹಿಂದಿಯ 'ಲೂಡೊ'.

Rating:
3.5/5

ಕಾಮಿಡಿ ಆಫರ್ ಎರರ್ಸ್ ಮಾದರಿ ಸಿನಿಮಾ

ಕಾಮಿಡಿ ಆಫರ್ ಎರರ್ಸ್ ಮಾದರಿ ಸಿನಿಮಾ

ಅನುರಾಗ್ ಬಾಸು ನಿರ್ದೇಶಕದ 'ಲೂಡೊ' ಸಿನಿಮಾ ಇದೇ ಕಾಮಿಡಿ ಆಫ್ ಎರರ್ಸ್‌ ಮಾದರಿಯ ಸಿನಿಮಾ ಆಗಿದೆ. ಆದರೆ ಈ ಹಿಂದಿನ ಇದೇ ಮಾದರಿಯ ಸಿನಿಮಾಗಳಿಗಿಂತಲೂ ಭಿನ್ನವಾಗಿಸಿ ಹೆಚ್ಚು ಕುತೂಹಲಕಾರಿ, ಅನಿರೀಕ್ಷಿತ ತಿರುವುಗಳ ಮೂಲಕ ಕಟ್ಟಿಕೊಟ್ಟಿದ್ದಾರೆ ಅನುರಾಗ್ ಬಸು.

ಅವೇ ವಸ್ತು ಆದರೆ ಕತೆ ಭಿನ್ನ

ಅವೇ ವಸ್ತು ಆದರೆ ಕತೆ ಭಿನ್ನ

ಒಬ್ಬ ಡಾನ್, ಸೂಟ್‌ಕೇಸ್ ತುಂಬ ಹಣ, ಹಾಸ್ಯಮಯ ಪೊಲೀಸ್, ಇಬ್ಬರು ಪ್ರೇಮಿಗಳು, ಆಕ್ಷನ್, ಸೆಂಟಿಮೆಂಟ್ ಇವೇ ವಿಷಯಗಳನ್ನಿಟ್ಟುಕೊಂಡು ಸಾಕಷ್ಟು ಹಾಸ್ಯಮಯ ಆಕ್ಷನ್ ಸಿನಿಮಾಗಳು ಬಂದಿದ್ದರ ಸಹ ಈ ಸಿನಿಮಾ ಭಿನ್ನವಾಗಿಸಿದೆ ಎನ್ನಲು ಬಸು ಬಳಸಿರುವ ನಿರೂಪಣಾ ತಂತ್ರವೇ ಕಾರಣ.

ಕುತೂಹಲಕಾರಿ ಕತೆ ಹೆಣೆದಿದ್ದಾರೆ ಬಸು

ಕುತೂಹಲಕಾರಿ ಕತೆ ಹೆಣೆದಿದ್ದಾರೆ ಬಸು

ಸಿನಿಮಾದ ಪ್ರಮಖ ಪಾತ್ರಗಳೆಲ್ಲವು ಒಂದೆಡೆ ಸೇರಿದಾಗ ಸಿನಿಮಾ ಪ್ರಾರಂಭವಾಗುತ್ತದೆ. ನಂತರ ಕತೆ ಎಲ್ಲೆಲ್ಲೊ ಹರಿದಾಡಿ, ಪಾತ್ರಗಳು ಯಾವುದ್ಯಾವುದೊ ಗೊಂದಲದಲ್ಲಿ ಸಿಲುಕಿ ಕೊನೆಗೆ ಒಂದೆಡೆ ಸೇರಿದಾಗ ಸಿನಿಮಾ ಮುಗಿಯುತ್ತದೆ. ಈ ಎರಡು ಸೇರುವಿಕೆಯ ನಡುವೆ ಕುತೂಹಲಕಾರಿ ಕತೆ ಹೆಣೆದಿದ್ದಾರೆ ಅನುರಾಗ್ ಬಸು.

ಕಾಮಿಡಿ ಸಿನಿಮಾಕ್ಕೆ ಭಾವುಕತೆಯ ಟಚ್

ಕಾಮಿಡಿ ಸಿನಿಮಾಕ್ಕೆ ಭಾವುಕತೆಯ ಟಚ್

ಕಾಮಿಡಿ ಸಿನಿಮಾ ಆದರೂ ಅದಕ್ಕೆ ಭಾವುಕತೆಯ ಟಚ್ ಕೊಡುವ ಪ್ರಯತ್ನ ಮಾಡಿದ್ದಾರೆ ಬಸು. 'ಜೀವನ ಪಗಡೆ, ಪಗಡೆಯೇ ಜೀವನ' ಎನ್ನುತ್ತಾ ಸಿನಿಮಾದ ಪಾತ್ರಗಳ ಜೀವನದಲ್ಲಿ ದೇವರು ಪಗಡೆ ಆಡುತ್ತಾನೆ ಎಂಬುದನ್ನು ಕತೆಯ ಮೂಲಕ ಹೇಳಿದ್ದಾರೆ. ಸಿನಿಮಾದ ಕತೆಯನ್ನು ಯಾವ ಹಂತದಲ್ಲಿಯೂ ಊಹಿಸಲು ಕಷ್ಟ. ಅದು ಸಿನಿಮಾದ ಒಳ್ಳೆಯ ಗುಣವೂ ಹೌದು.

Recommended Video

ರವಿ ಬೆಳಗೆರೆ ಸಹಾಯ ನೆನೆದು ಬಿಕ್ಕಿ ಬಿಕ್ಕಿ ಅತ್ತರು ಹಿರಿಯ ನಟಿ ಲೀಲಾವತಿ | Filmibeat Kannada
ರಾಜ್‌ಕುಮಾರ್ ರಾವ್, ಪಂಕಜ್ ತ್ರಿಪಾಠಿ, ಅಭಿಷೇಕ್ ಅದ್ಭುತ ನಟನೆ

ರಾಜ್‌ಕುಮಾರ್ ರಾವ್, ಪಂಕಜ್ ತ್ರಿಪಾಠಿ, ಅಭಿಷೇಕ್ ಅದ್ಭುತ ನಟನೆ

ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗವಿದೆ, ಡಾನ್ ಸತ್ತು ಆಗಿ ಪಂಕಜ್ ತ್ರಿಪಾಠಿ ಅದ್ಭುತ ಅಭಿನಯ ನೀಡಿದ್ದಾರೆ. ಭಗ್ನ ಪ್ರೇಮಿಯಾಗಿ ಅದ್ಭುತವಾಗಿ ನಟಿಸಿದ್ದಾರೆ ರಾಜ್‌ಕುಮಾರ್ ಇರಾನಿ, ರೌಡಿ ಆಗಿ ಅಭಿಷೇಕ್‌ರದ್ದು ಮೆಚ್ಚಿಕೊಳ್ಳುವ ಅಭಿನಯ, ಆದಿತ್ಯಾ ರಾಯ್ ಕಪೂರ್ ಸಹ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನು ನಾಯಕಿಯರೂ ಅಷ್ಟೆ ಪುರುಷ ಪಾತ್ರಗಳಿಗೆ ಕಡಿಮೆ ಇಲ್ಲದಂತೆ ನಟಿಸಿದ್ದಾರೆ. ಫಾತಿಮಾ ಸನಾ ಶೇಕ್, ಸಾನ್ಯಾ ಮಲ್ಹೋತ್ರಾ, ಪರ್ಲ್ ಮಾನಿ ಎಲ್ಲರ ನಟನೆಯೂ ಸೂಪರ್.

More from Filmibeat

English summary
Ludo Movie Review: fun to watch movie with some great performences by actors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X