Maa Inti Bangaaram X Review: ಸಮಂತಾ ನಟನೆ ಸೂಪರ್; ಆದ್ರೆ 24 ಕ್ಯಾರೆಟ್ ಬಂಗಾರ ಅಲ್ಲ
ತ್ರಲಾಲಾ ಮೂವಿಂಗ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರಾಜ್ ನಿಡಿಮೋರು, ಸಮಂತಾ, ಹಿಮಾಂಕ್ ರೆಡ್ಡಿ ದುವ್ವೂರು ನಿರ್ಮಾಣದ 'ಮಾ ಇಂಟಿ ಬಂಗಾರಂ' ಸಿನಿಮಾ ತೆರೆಗೆ ಬಂದಿದೆ. ನಂದಿನಿ ರೆಡ್ಡಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಮಂತಾ ಪತಿ ರಾಜ್ ನಿಡುಮೊರು ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸ್ಯಾಮ್ ಲೀಡ್ ರೋಲ್‌ನಲ್ಲಿ ಮಿಂಚಿದ್ದಾರೆ.
ಅನಿರುದ್ಧ್(ದಿಗಂತ್) ಜೊತೆ ಮದುವೆಯಾಗಿ ಸ್ವರ್ಣ(ಸಮಂತಾ) ಅತ್ತೆ ಮನೆಗೆ ಬರ್ತಾಳೆ. ಸೌಮ್ಯ ಸ್ವಭಾವದ ಆಕೆ ಕೂಡು ಕುಟುಂಬದಲ್ಲಿ ಅರಿತು ಬೆರತು ಜೀವನ ನಡೆಸಲು ಸರ್ಕಸ್ ಮಾಡುತ್ತಿರುತ್ತಾಳೆ. ಮೇಲ್ನೋಟಕ್ಕೆ ಮುಗ್ಧಳಂತೆ ಕಾಣುವ ಆಕೆಯ ಜೀವನದಲ್ಲಿ ದೊಡ್ಡ ಫ್ಲ್ಯಾಶ್‌ಬ್ಯಾಕ್ ಇರುತ್ತದೆ. ತನ್ನ ಕುಟುಂಬಕ್ಕೆ ಸಮಸ್ಯೆ ಎಂದು ಗೊತ್ತಾದಾಗ ಆಕೆಯ ಝಾನ್ಸಿ ಅವತಾರದ ದರ್ಶನವಾಗುತ್ತದೆ.

ಗುಲ್ಷನ್ ದೇವಯ್ಯ ವಿಲನ್ ಆಗಿ ಚಿತ್ರದಲ್ಲಿ ನಟಿಸಿದ್ದಾರೆ. ಶ್ರೀಮುಖಿ, ಗೌತಮಿ ಹಾಗೂ ಶ್ರೀಲಕ್ಷ್ಮಿ ಸೇರಿದಂತೆ ದೊಡ್ಡ ತಾರಾಗಣ 'ಮಾ ಇಂಟಿ ಬಂಗಾರಂ' ಚಿತ್ರದಲ್ಲಿದೆ. ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಸಿನಿಮಾ ನೋಡಿದವರು ತಮ್ಮ ಅಭಿಪ್ರಾಯಗಳನ್ನು ಟ್ವಿಟರ್ ವೇದಿಕೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಒಟ್ಟಾರೆ ಒಳ್ಳೆ ಸಿನಿಮಾ
"ಫಸ್ಟ್ ಹಾಫ್ ಉತ್ತಮವಾಗಿದೆ. ತಮಾಷೆಯಾಗಿ ಅಷ್ಟೇ ಸುಂದರವಾಗಿ ಮುಗಿಯುತ್ತೆ. ಸ್ಯಾಮ್ ಚೆನ್ನಾಗಿ ಕಾಣುತ್ತಾಳೆ. ಎಂದಿನಂತೆ ಧೂಳೆಬ್ಬಿಸಿದ್ದಾರೆ. ಮುಗ್ಧ ಗೃಹಿಣಿಯಾಗಿ ಶ್ರೀಮುಖಿ ತುಂಬಾ ಚೆನ್ನಾಗಿ ಕಾಣುತ್ತಾರೆ. ಇಂಟರ್‌ವಲ್ ಚೆನ್ನಾಗಿದೆ. ಸೆಕೆಂಡ್ ಹಾಫ್ ಆವರೇಜ್.. ಸಮಂತಾ ಚೆನ್ನಾಗಿ ನಟಿಸಿದ್ದಾರೆ. ಕೊನೆಯವರೆಗೂ ಎಂಗೇಜಿಂಗ್ ಆಗಿದೆ" ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ಸೆಕೆಂಡ್ ಹಾಫ್ ಪೈಸಾ ವಸೂಲ್
'ಮಾ ಇಂಟಿ ಬಂಗಾರಂ' ಫಸ್ಟ್ ಹಾಫ್ ಕೊಂಚ ಸ್ಲೋ ಹಾಗೂ ಬೋರಿಂಗ್ ಅನಿಸುತ್ತದೆ. ಆದರೆ ಸೆಕೆಂಡ್ ಹಾಫ್ ಅದನ್ನು ಅದನ್ನು ಸಂಪೂರ್ಣವಾಗಿ ಸರಿದೂಗಿಸುತ್ತದೆ. ಸ್ಟ್ರಾಂಗ್ ಎಮೋಷನ್ಸ್, ಎಂಗೇಜಿಂಗ್ ಮೊಮೆಂಟ್ಸ್ ಒಟ್ಟಾರೆ ತೃಪ್ತಿ ಕೊಡುತ್ತದೆ. ಸೆಕೆಂಡ್ ಹಾಫ್‌ಗೆ ಪೈಸಾ ವಸೂಲ್" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಹಳಸಲು ಕಥೆ ದೊಡ್ಡ ಹಿನ್ನಡೆ
ಇದು ಅಪ್ಪಟ ಬಂಗಾರವಲ್ಲ. ಆದರೆ ಸಮಂತಾ ಕಾರಣಕ್ಕೆ ಬಂಗಾರದ ಲೇಪನದಿಂದ ಪ್ರಕಾಶಮಾನವಾಗಿ ಹೊಳೆಯುತ್ತದೆ. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನೋಡಿರುವ ಕಥೆಯೇ ಇಲ್ಲಿದೆ. ಸಮಂತಾ ಪಾತ್ರಕ್ಕೆ ಒಂದು ಫ್ಯಾಶ್‌ಬ್ಯಾಕ್ ಇದೆ. ದೊಡ್ಡ ಕುಟುಂಬಕ್ಕೆ ಸೊಸೆಯಾಗಿ ಬರುವ ನಾಯಕಿಯ ಸುತ್ತಾ ಕಥೆ ಸಾಗುತ್ತದೆ. ಇಂಟರ್‌ವಲ್‌ವರೆಗೆ ಫ್ಯಾಮಿಲಿ ಡ್ರಾಮಾ. ಸೆಕೆಂಡ್ ಹಾಫ್ ಆಕ್ಷನ್‌ನೊಂದಿಗೆ ಮುಂದುವರಿಯುತ್ತದೆ. ಸಮಂತಾಳ ಹಿನ್ನೆಲೆ ಬಹಿರಂಗವಾದ ನಂತರ, ಚಿತ್ರವು ಆಕರ್ಷಕವಾಗುತ್ತದೆ. ಅವಳ ಮೇಕ್ ಓವರ್, ಆಕ್ಷನ್ ಬ್ಲಾಕ್ಸ್ ಮತ್ತು ಹೀರೊ ರೀತಿಯ ಎಲಿವೇಷನ್ಸ್ ಚೆನ್ನಾಗಿದೆ. ಸಮಂತಾ ಇಡೀ ಸಿನಿಮಾ ಹೊತ್ತು ಸಾಗಿದ್ದಾರೆ. ಹಳಸಲು ಕಥೆ ದೊಡ್ಡ ಹಿನ್ನಡೆ. ಗುಲ್ಷನ್ ದೇವಯ್ಯ ನಟನೆ ಪರಿಣಾಮಕಾರಿಯಾಗಿದೆ. ರಾಜ್ ಸ್ಕ್ರಿಪ್ಟ್ ಕೆಲವೊಮ್ಮೆ ವೆಬ್ ಸೀರಿಸ್ ಎನ್ನುವಂತೆ ಭಾಸವಾಗುತ್ತದೆ ಎಂದು ಭೀಷ್ಮ ಎಂಬುವವರು ಪೋಸ್ಟ್ ಮಾಡಿದ್ದಾರೆ.
ಸಮಂತಾ ಕಮಾಲ್
ಇದು ಒಳ್ಳೆಯ ಆಕ್ಷನ್ ಚಿತ್ರ.. ಸಮಂತಾ ಅದರಲ್ಲಿ ಸಂಪೂರ್ಣವಾಗಿ ಮಿಂಚಿದ್ದಾರೆ. ಅವರ ನಟನೆ ಅತ್ಯುತ್ತಮವಾಗಿದೆ. ಮಂಜುಷಾ ಅವರ ಅಭಿನಯ ಆಹ್ಲಾದಕರ ಆಶ್ಚರ್ಯವನ್ನುಂಟು ಮಾಡುವಂತಿದೆ. ಹೆಚ್ಚು ಆಕರ್ಷಕವಾದ ಫ್ಲ್ಯಾಷ್‌ಬ್ಯಾಕ್ ಮತ್ತು ಹೆಚ್ಚು ಬಲವಾದ ದ್ವಿತೀಯಾರ್ಧವನ್ನು ಇನ್ನೂ ಉತ್ತಮಗೊಳಿಸಬಹುದಾಗಿತ್ತು. ಬಿಜಿಎಂ ನಿಜವಾಗಿಯೂ ದೃಶ್ಯಗಳ ಖದರ್ ಹೆಚ್ಚಿಸಿದೆ ಎಂದು ತಮ್ಮೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ಯಾಮ್ ಅದ್ಭುತ ಸ್ಕ್ರೀನ್ ಪ್ರೆಸೆನ್ಸ್
"ನೋಡಬಹುದಾದ ಒಳ್ಳೆ ಸಿನಿಮಾ. ಸಮಂತಾ ಇಡೀ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ಭಾವನಾತ್ಮಕ ದೃಶ್ಯಗಳಿಂದ ಹಿಡಿದು ಮಾಸ್ ಆಕ್ಷನ್ ಬ್ಲಾಕ್‌ಗಳವರೆಗೆ, ಅವರು ಪ್ರತಿಯೊಂದು ಫ್ರೇಮ್ ಅನ್ನು ಆತ್ಮವಿಶ್ವಾಸ ಮತ್ತು ಸೊಬಗಿನಿಂದ ತಮ್ಮದಾಗಿಸಿಕೊಂಡಿದ್ದಾರೆ. ಅದ್ಭುತ ಸ್ಕ್ರೀನ್ ಪ್ರೆಸೆನ್ಸ್.. ಶ್ರೀಮುಖಿ ಕೂಡ ಗುಡ್" ಎನ್ನುವುದು ಮತ್ತೊಬ್ಬರ ರಿವ್ಯೂ.


Click it and Unblock the Notifications