»   » ಮಳೆ ವಿಮರ್ಶೆ : ಸಿಂಪಲ್ ಕಥೆ, ಸ್ವಲ್ಪ ನಾಟಕ, ಲವ್ ಜರ್ನಿ

ಮಳೆ ವಿಮರ್ಶೆ : ಸಿಂಪಲ್ ಕಥೆ, ಸ್ವಲ್ಪ ನಾಟಕ, ಲವ್ ಜರ್ನಿ

Posted By:
Subscribe to Filmibeat Kannada

ನಿರ್ದೇಶಕ ಎ.ಆರ್ ಶಿವ ತೇಜಸ್ ಆಕ್ಷನ್- ಕಟ್ ಹೇಳಿರುವ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಮಳೆ' ಇಂದು (ಆಗಸ್ಟ್ 7) ರಾಜ್ಯಾದ್ಯಂತ ತೆರೆ ಮೇಲೆ ಅಪ್ಪಳಿಸಿದ್ದು, ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಗಳಿಸುತ್ತಿದೆ. ಆರ್.ಚಂದ್ರು ನಿರ್ಮಾಣದಲ್ಲಿ ಆರ್.ಎಸ್ ಪ್ರೊಡಕ್ಷನ್ಸ್ ಕರ್ನಾಟಕದಾದ್ಯಂತ ಚಿತ್ರವನ್ನು ನೀಟಾಗಿ ವಿತರಿಸಿದ್ದಾರೆ.[ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಮಳೆಯಲ್ಲಿ ನೆನೆಯಿರಿ]


'Male' movie Review: Watch it for Prem and Amoolya's Jugalbandhi!

ಲವ್ಲಿ ಕಥೆಯನ್ನು ಹೊಂದಿರುವ 'ಮಳೆ' ಚಿತ್ರದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಬಬ್ಲಿ ಕ್ವೀನ್ ಅಮೂಲ್ಯ ಲೀಡ್ ರೋಲ್ ನಲ್ಲಿ ಮಿಂಚಿದ್ದಾರೆ.
ಚಿತ್ರದ ಸಂಪೂರ್ಣ ವಿಮರ್ಶೆ ಇಲ್ಲಿದೆ ನೋಡಿ....


Rating:
3.0/5

'ಮಳೆ' ಕಥೆ: ವರುಣ್ (ಪ್ರೇಮ್) ಹಾಗೂ ವರ್ಷಾ (ಅಮೂಲ್ಯ) ಎಂಬ ಎರಡು ಸುಂದರ ಹೃದಯಗಳ ನಡುವೆ ನಡೆಯುವ ಕಲರ್ ಫುಲ್ ಲವ್ ಸ್ಟೋರಿ 'ಮಳೆ'. ಮಳೆಯ ಇನ್ನು ಕೆಲವು ನಾಮಧೇಯಗಳಾದ ವರುಣ್, ವರ್ಷಾ ಅನ್ನೋದನ್ನ ಚಿತ್ರದ ನಾಯಕ-ನಾಯಕಿಗೆ ಹೆಸರಿಟ್ಟಿರುವುದು ಚಿತ್ರದ ವಿಶೇಷ.['ಮಳೆ'ಯಲ್ಲಿ ಲವ್ಲಿ ಸ್ಟಾರ್ ಜೊತೆ ಬೇಬಿ ಡಾಲ್ ಅಮೂಲ್ಯ ಡಾನ್ಸ್]


'ಮಳೆ'ಯಲ್ಲಿ 'ಲೈಫ್ ಈಸ್ ಆಸ್ಸಮ್' ಎನ್ನುವ ಹಾಡಿನ ಮೂಲಕ ಗ್ರ್ಯಾಂಡ್ ಎಂಟ್ರಿ ಪಡೆದುಕೊಳ್ಳುವ ಚಿತ್ರದ ನಾಯಕ ವರುಣ್ ಮೂಲಕ ಪ್ರೀತಿಯ ಜರ್ನಿ ಪ್ರಾರಂಭಗೊಳ್ಳುತ್ತದೆ.


ನಾಯಕ ವರುಣ್ ಗೆ ನಾಯಕಿ ವರ್ಷಾ ಮೇಲೆ ಲವ್ ಅಟ್ ಫಸ್ಟ್ ಸೈಟ್ ಆಗುತ್ತೆ ಆದ್ರೆ ನಾಯಕಿಗಲ್ಲ, ಇಲ್ಲಿ ನಾಯಕಿ ಪಾತ್ರ ಮಾಡಿರುವ ಅಮೂಲ್ಯ ಗಂಡುಬೀರಿಯಂತೆ ಮಿಂಚಿದರೆ ನಾಯಕ ಪ್ರೇಮ್ ಪ್ಯೂರ್ ಲವರ್ ಬಾಯ್ ಆಗಿ ಪ್ರೇಕ್ಷಕರಿಗೆ ಕ್ಯೂಟ್ ಅನಿಸಿಕೊಳ್ಳುತ್ತಾರೆ.


ಅಂತೂ ಇಂತೂ ತುಂಬಾ ಸತಾಯಿಸಿದ ನಂತರ ವರುಣ್ ಪ್ರೀತಿಗೆ ಮನಸೋತು ವರ್ಷಾ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳೆ. ಆದ್ರೆ ಅಲ್ಲಿ ಟ್ವಿಸ್ಟ್ ಏನಪ್ಪಾ ಅಂದ್ರೆ ಪ್ರೇಮ್ ಅಪ್ಪ ಅನಂತ್ ನಾಗ್ ಸಡನ್ ಆಗಿ ಸಾವನ್ನಪ್ಪುವುದರಿಂದ ನಾಯಕಿ ಅಮೂಲ್ಯ ಳಿಗೆ ತಿಳಿಯುವುದೇನೆಂದರೆ ಪ್ರೇಮ್ ತುಂಬಾ ಶ್ರೀಮಂತ ಮನೆತನದ ಹುಡುಗ ಅಂತ.


'Male' movie Review: Watch it for Prem and Amoolya's Jugalbandhi!

ಮೊದಲೇ ಹಣವಂತ ಹುಡುಗರನ್ನು ದ್ವೇಷಿಸುವ ಮಿಡ್ಲ್ ಕ್ಲಾಸ್ ಫ್ಯಾಮಿಲಿ ನಾಯಕಿ, ನಾಯಕ ಸುಳ್ಳು ಹೇಳಿ ಪ್ರೀತಿಸಿದ ಅನ್ನೋ ಕಾರಣಕ್ಕೆ ನಾಯಕನ ಪ್ರೀತಿಯನ್ನು ನಿರಾಕರಿಸುತ್ತಾಳೆ. ಅಂತೂ ಚಿತ್ರ ಕೊನೆಗೆ ನಾಟಕೀಯವಾಗಿ ಮೂಡಿಬಂದಿದ್ದು, ಒಟ್ನಲ್ಲಿ ನಿರ್ದೇಶಕ 'ಮಳೆ'ಯನ್ನು ಮಾತ್ರ ಚೆನ್ನಾಗಿ ಅಳವಡಿಸಿಕೊಂಡಿದ್ದಾರೆ ಅಂದ್ರೂ ತಪ್ಪಾಗ್ಲಿಕ್ಕಿಲ್ಲಾ.[ಆರ್. ಚಂದ್ರು 'ಮಳೆ' ಗೆ 'ಮುದ್ದು ಮನಸು' ನಲುಗಿತೆ?]


ಒಟ್ಟಾರೆ ಪ್ರೀತಿ ಅನ್ನೋದು 'ಮಳೆ' ಇದ್ದಂತೆ ಒಮ್ಮೆ ಧೋ ಎಂದು ಸುರಿದು ನಿಲ್ಲುತ್ತೆ ಅನ್ನೋದನ್ನ ನಿರ್ದೇಶಕರು ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದಾರೆ.


ಪಾತ್ರವರ್ಗದ ಅಭಿನಯ: ಒಟ್ಟಾರೆ ಚಿತ್ರದ ಮುಖ್ಯ ಆಕರ್ಷಣೆ ಅಂದ್ರೆ ಪರದೆಯ ಮೇಲೆ ಪ್ರೇಮ್ ಅಮೂಲ್ಯ ಕೆಮಿಸ್ಟ್ರಿ ಸಖತಾಗೆ ವರ್ಕೌಟ್ ಆಗಿದ್ದು. ಇವರಿಬ್ಬರ ಅಭಿನಯ 'ಸಂಪತ್ತಿಗೆ ಸವಾಲ್' ಚಿತ್ರದಲ್ಲಿ ಡಾ.ರಾಜ್ ಹಾಗೂ ಮಂಜುಳಾ ಅವರನ್ನು ನೆನಪಿಸುವಂತಿದೆ.


ಇನ್ನುಳಿದಂತೆ ಸಪೋರ್ಟಿಂಗ್ ಪಾತ್ರದಲ್ಲಿ ಮಿಂಚಿರುವ ಸಾಧು ಕೋಕಿಲ, ಬುಲ್ಲೆಟ್ ಪ್ರಕಾಶ್, ಕಡ್ಡಿಪುಡಿ ಚಂದ್ರು, ಜೈ ಜಗದೀಶ್, ನಾಗೇಂದ್ರ ಶಾ, ಪದ್ಮಜಾ ರಾವ್ ಮುಂತಾದವರು ತಮ್ಮ ತಮ್ಮ ಅಭಿನಯದಲ್ಲಿ ಯಾರೂ ಮೋಸ ಮಾಡಿಲ್ಲ.


ತಾಂತ್ರಿಕತೆ: 'ಮಳೆ' ಬಗ್ಗೆ ಒಟ್ಟಾರೆ ಹೇಳಬೇಕೆಂದರೆ ಇದೊಂಥರಾ ಪಕ್ಕಾ ಫ್ಯಾಮಿಲಿ ಮನೋರಂಜನೆ ಜೊತೆಗೆ ರೋಮ್ಯಾಂಟಿಕ್ ಚಿತ್ರ. ನಿರ್ದೇಶಕ ಎ.ಆರ್.ತೇಜಸ್ ನಾಯಕ-ನಾಯಕಿಯರನ್ನು ಬಿಟ್ಟು ಉಳಿದ ಪಾತ್ರಗಳನ್ನು ಮರೆತಂತಿದೆ ಕೇವಲ ನಾಯಕ ಹಾಗು ನಾಯಕಿಗೆ ವಿಶೇಷ ಒತ್ತು ನೀಡಲಾಗಿದೆ. ಇನ್ನುಳಿದವರು ಹಾಗೆ ಬಂದು ಹೀಗೆ ಹೋಗುತ್ತಾರೆ.


ಚಿತ್ರದ ಫಸ್ಟ್ ಹಾಫ್ ನಲ್ಲಿ ಟಿಪಿಕಲ್ ರೋಮ್ಯಾಂಟಿಕ್ ಹಾಗೂ ಕಾಮಿಡಿ ಶೇಡ್ ನಲ್ಲಿದ್ದರೆ, ಸೆಕೆಂಡ್ ಹಾಫ್ ಪ್ರೇಕ್ಷಕರಿಗೆ ಬೋರ್ ಹೊಡೆಸುತ್ತದೆ, ಇನ್ನುಳಿದಂತೆ ಚಿತ್ರದ ಕ್ಯಾಮರಾ ವರ್ಕ್ ಅದ್ಬುತವಾಗಿ ಮೂಡಿಬಂದಿದೆ, ಜೊತೆಗೆ ಡಬ್ಬಲ್ ಮೀನಿಂಗ್ ಡೈಲಾಗ್ಸ್ ಪ್ರೇಕ್ಷಕರ ಮುಖದಲ್ಲಿ ಲೈಟಾಗಿ ನಗು ತರಿಸುತ್ತದೆ.


ಸಂಗೀತ: ರೋಮ್ಯಾಂಟಿಕ್ ಲವ್ ಜರ್ನಿಯನ್ನು 'ಮಳೆ' ಹಾಡುಗಳ ಮೂಲಕ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ತಂದಿದ್ದಾರೆ ಅಂದ್ರೆ ತಪ್ಪಾಗ್ಲಿಕ್ಕಿಲ್ಲ. 2015 ನೇ ಸಾಲಿಗೆ ಬೆಸ್ಟ್ ಮ್ಯೂಸಿಕ್ ಆಲ್ಬಂ ಗೆ 'ಮಳೆ' ಹಾಡುಗಳನ್ನು ಸೇರಿಸಬಹುದು.


ಒಟ್ಟಾರೆ 'ಮಳೆ': ಸಿಂಪಲ್ ಕಥೆ, ಅಂತ್ಯದಲ್ಲಿ ಸ್ವಲ್ಪ ನಾಟಕೀಯತೆ, ಒಟ್ಟಿನಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಬಬ್ಲಿ ಹುಡುಗಿ ಅಮೂಲ್ಯ ಜುಗಲ್ ಬಂದಿ ನೇ ಈ 'ಮಳೆ'. ಚಿತ್ರ ನೋಡಬಹುದು ಇನ್ನೇನು ಈ ವೀಕೆಂಡ್ ಫ್ರೀ ಮಾಡ್ಕೊಂಡು ಒಮ್ಮೆ ಥಿಯೇಟರ್ ಕಡೆ ಕಾಲು ಹಾಕಿ ಏನಂತೀರಾ.


ಚಿತ್ರ: 'ಮಳೆ'
ನಿರ್ಮಾಣ: ಆರ್.ಚಂದ್ರು
ಕಥೆ-ಚಿತ್ರಕಥೆ-ನಿರ್ದೇಶನ: ಎ.ಆರ್.ತೇಜಸ್
ಸಂಗೀತ: ಜೆಸ್ಸಿ ಗಿಫ್ಟ್
ತಾರಾಗಣ: ಪ್ರೇಮ್ ಕುಮಾರ್, ಅಮೂಲ್ಯ, ಸಾಧು ಕೋಕಿಲ, ಕಡ್ಡಿಪುಡಿ ಚಂದ್ರು, ಬುಲೆಟ್ ಪ್ರಕಾಶ್, ನಾಗೇಂದ್ರ ಶಾ, ಪದ್ಮಜಾ ರಾವ್ ಮತ್ತು ಇತರರು.

Read in English: 'Male' Movie Review
English summary
AR Shiva Tejas directed Kannada movie 'Male' Review: Kannada actor Prem Kumar, Kannada Actress Amoolya in the lead role.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada