twitter
    For Quick Alerts
    ALLOW NOTIFICATIONS  
    For Daily Alerts

    ಮಾಲಿಕ್: ಮತ್ತೆ ಮೋಡಿ ಮಾಡಿದ ಫಹಾದ್ ಫಾಸಿಲ್, ಮಹೇಶ್ ನಾರಾಯಣ್

    |

    'ಕೇಟ್ ಆಫ್', 'ಸಿ ಯೂ ಸೂನ್' ನಂಥಹಾ ಸುಂದರ ಸಿನಿಮಾಗಳನ್ನು ನೀಡಿದ್ದ ನಟ-ನಿರ್ದೇಶಕ ಜೋಡಿ ಫಹಾದ್ ಫಾಸಿಲ್ ಮತ್ತು ಮಹೇಶ್ ನಾರಾಯಣ್ 'ಮಾಲಿಕ್' ಮೂಲಕ ಮತ್ತೊಂದು ಚರ್ಚಾರ್ಹ ಸಿನಿಮಾ ನೀಡಿದ್ದಾರೆ.

    'ಮಾಲಿಕ್' ಸಿನಿಮಾವನ್ನು ಕೇರಳದ 'ಗಾಡ್‌ ಫಾದರ್', ಮತ್ತೊಂದು 'ನಾಯಗನ್' ಎಂದು ಕೆಲವು ವಿಮರ್ಶಕರು ಹೊಗಳಿದ್ದಾರೆ. ಮತ್ತೆ ಕೆಲವರು 'ಅನವಶ್ಯಕವಾಗಿ ಉದ್ದಗೊಳಿಸಲಾದ ಸಿನಿಮಾ' ಎಂದಿದ್ದಾರೆ. ಹಾಗಾಗಿಯೇ ಹೇಳಿದ್ದು ಇದು 'ಚರ್ಚಾರ್ಹ' ಸಿನಿಮಾ ಎಂದು.

    ಸುಲೇಮಾನ್ ಅಲಿಯಾಸ್ ಅಲಿ ಇಕ್ಕಾ ಕಾನೂನಿನ ಪಾಲಿಗೆ ಗೂಂಡಾ ಆದರೆ ರಾಮಡಪಲ್ಲಿ ಹೆಸರಿನ ಸಮುದ್ರ ತೀರದ ಗ್ರಾಮದ ಜನರಿಗೆ ನಾಯಕ. ಇಂಗ್ಲಿಷ್‌ನ 'ಗಾಡ್‌ ಫಾದರ್', ತಮಿಳಿನ 'ನಾಯಗನ್' ಬಳಿಕ ಇದೇ ಕಥಾವಸ್ತುವುಳ್ಳ ನೂರಾರು ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ಬಂದಿವೆ ಆದರೆ ನೆನಪಲ್ಲಿರುವುದು 'ನಾಯಗನ್' ಮಾತ್ರವೇ. ಆದರೆ 'ಮಾಲಿಕ್' ಮರೆಯಾಗಿ ಹೋದ ನೂರಾರು ಸಿನಿಮಾಗಳ ಸಾಲಿಗೆ ಸೇರುವುದಿಲ್ಲ, ಬದಲಿಗೆ ನೆನಪುಳಿಯುವ 'ಆಂಟಿ ಹೀರೋ' ಸಿನಿಮಾ ಆಗಿ ನೆನಪಲ್ಲುಳಿಯುತ್ತದೆ. ಇದಕ್ಕೆ ಕಾರಣ ಕತೆ ಹೇಳಿರುವ ರೀತಿ.

    'ಮಾಲಿಕ್' ಸಿನಿಮಾ ಪ್ರಾರಂಭದ ದೃಶ್ಯವೇ ಸಿನಿಮಾದ ಬಗ್ಗೆ ದೊಡ್ಡ ಕುತೂಹಲ ಹುಟ್ಟುಹಾಕುತ್ತದೆ. ಉದ್ದನೆಯ ಶಾಟ್‌ನ ಆ ಸಿನಿಮಾದಲ್ಲಿ 'ಗಾಡ್‌ ಫಾದರ್' ರೆಫರೆನ್ಸ್ ಢಾಳಾಗಿದೆ. ಹೊರಗೆ ಸಂಭ್ರಮ ನಡೆಯುತ್ತಿರುತ್ತದೆ ಆದರೆ ಮುಖ್ಯ ಪಾತ್ರಗಳು ಆತಂಕದಲ್ಲಿವೆ. 'ಗಾಡ್‌ ಫಾದರ್‌' ಮೊದಲ ದೃಶ್ಯದಲ್ಲಿಯೂ ಇದೇ ಮಾದರಿಯ ದೃಶ್ಯವಿದೆ.

    Anti Hero ಸುಲೇಮಾನ್

    Anti Hero ಸುಲೇಮಾನ್

    'ಮಾಲಿಕ್' ಸಿನಿಮಾ ಬಹುತೇಕ ಸುಲೇಮಾನ್ ಸುತ್ತಲೇ ಗಿರಕಿ ಹೊಡೆಯುತ್ತದೆ. ಸಿನಿಮಾದಲ್ಲಿ ಸುಲೇಮಾನ್ Anti Hero. ಹಾಗೆಂದ ಮಾತ್ರಕ್ಕೆ ನಾಯಕನ ಮೇಲೆ ಸಿಂಪತಿ ಹಟ್ಟಿಸಲೆಂದು 'ಪರಿಸ್ಥಿತಿ ಒತ್ತಡ' ಸೃಷ್ಟಿಸಿ ಅವನನ್ನು ವಿಲನ್ ಮಾಡಿಲ್ಲ. ಬದಲಿಗೆ ಇಲ್ಲಿ ಸುಲೇಮಾನ್ ಎಳವೆಯಿಂದಲೇ ಅಪರಾಧ ಮನೋಭಾವ ಉಳ್ಳವನು. ಗಾಂಜಾ ಮಾರುತ್ತಿದ್ದ, ಗಾಡಿಗಳಲ್ಲಿ ಪೆಟ್ರೋಲ್ ಕದಿಯುತ್ತಿದ್ದ ಹುಡುಗ ಬೆಳೆಯುತ್ತಾ ಸ್ಲಗ್ಲರ್ ಆಗುತ್ತಾನೆ. ಜೊತೆಗೆ ತನ್ನ ಸಮುದಾಯದ, ಜನರ ಪರವಾಗಿ ಹೋರಾಡುವ ನಾಯಕನಾಗಿಯೂ ಬೆಳೆಯುತ್ತಾನೆ.

    ಮೂವರ ದೃಷ್ಟಿಕೋನದ ಮೂಲಕ ಸುಲೇಮಾನ್ ಕತೆ

    ಮೂವರ ದೃಷ್ಟಿಕೋನದ ಮೂಲಕ ಸುಲೇಮಾನ್ ಕತೆ

    ಸಿನಿಮಾದ ಕತೆ ಬಿಚ್ಚಿಕೊಳ್ಳುವುದು ಫ್ಲ್ಯಾಷ್‌ ಬ್ಯಾಕ್ ಮೂಲಕ. ಸುಲೇಮಾನ್‌ ಬಗ್ಗೆ ಮೂವರು ಕತೆ ಹೇಳುತ್ತಾರೆ. ಮೂವರು ಸಹ ತಮ್ಮದೇ ದೃಷ್ಟಿಕೋನದ ಮೂಲಕ ಕತೆ ಹೇಳುತ್ತಾರೆ. ಬೇರೆಯವರ ದೃಷ್ಟಿಕೋನದ ಮೂಲಕವೇ ಸುಲೇಮಾನ್ ಪ್ರೇಕ್ಷಕರಿಗೆ ಅರ್ಥವಾಗುತ್ತಾನೆ. 'ನಾಯಗನ್' ಸಿನಿಮಾದಲ್ಲಿ ನಾನು ಕೆಟ್ಟವನೊ ಒಳ್ಳೆಯವನೊ ಎಂಬುದು ಕಮಲ್‌ಹಾಸನ್ ನಿರ್ವಹಿಸಿದ್ದ ಪಾತ್ರ ವೇಲುಗೆ ಗೊತ್ತಿರುವುದಿಲ್ಲ. ಇಲ್ಲೂ ಅದೇ ಪರಿಸ್ಥಿತಿ. ಸುಲೇಮಾನ್, ಹುಡುಗನೊಬ್ಬನ ಎದುರು ಭಾವುಕನಾಗಿ ಅಳುವ ಪಾತ್ರ ಇದಕ್ಕೆ ಉದಾಹರಣೆ.

    ಹಲವು ವಿಷಯಗಳನ್ನು ಮುಟ್ಟಿದ್ದಾರೆ ನಿರ್ದೇಶಕ

    ಹಲವು ವಿಷಯಗಳನ್ನು ಮುಟ್ಟಿದ್ದಾರೆ ನಿರ್ದೇಶಕ

    ಸಿನಿಮಾದಲ್ಲಿ ಹಲವು ವಿಷಯಗಳನ್ನು ನಿರ್ದೇಶಕ ಮಹೇಶ್ ನಾರಾಯಣ್ ಮುಟ್ಟಿದ್ದಾರೆ, ಅಪರಾಧ, ಧರ್ಮ, ರಾಜಕೀಯ, ಪೊಲೀಸ್ ಕುತಂತ್ರ, ವ್ಯವಸ್ಥೆಯ ಹುಳುಕುಗಳು, ಪ್ರೀತಿ, ಗೆಳೆತನ, ಮಾನವೀಯತೆ, ಸೇವೆ ರಾಜಕಾರಣಿಗಳ ಅವಕಾಶವಾದಿತನ ಹೀಗೆ ಹಲವು ವಿಷಯಗಳು ಕತೆಯೊಳಗೆ ಸೂಕ್ತವಾಗಿ ಮಿಳಿತವಾಗಿದೆ. ಯಾವುದನ್ನೂ ಬಲವಂತದಿಂದ ಸೇರಿಸಿದಂತೆ ಭಾಸವಾಗುವುದಿಲ್ಲ. ಸಿನಿಮಾವನ್ನು 'ಗಾಡ್ ಫಾಧರ್', 'ನಾಯಗನ್'ಗೆ ಹೋಲಿಸಲಾಗುತ್ತಿದೆಯಾದರೂ ಈ ಸಿನಿಮಾಗಳ ನಕಲು 'ಮಾಲಿಕ್' ಅಲ್ಲ ಎಂಬುದು ಸ್ಪಷ್ಟ.

    ಕ್ಯಾಮೆರಾ ಮತ್ತು ಸಂಗೀತ ಅತ್ಯುತ್ತಮ

    ಕ್ಯಾಮೆರಾ ಮತ್ತು ಸಂಗೀತ ಅತ್ಯುತ್ತಮ

    ಸಿನಿಮಾದ ಪ್ರಮುಖ ಅಂಶ ಅದರ ಸಂಗೀತ ಮತ್ತು ಕ್ಯಾಮೆರ ಕೆಲಸ. ಸಿನಿಮಾದ ಪ್ರಥಮ ದೃಶ್ಯದಿಂದ ಸಿನಿಮಾದ ಕೊನೆಯ ವರೆಗೂ ಸಂಗೀತ ಸಿನಿಮಾದ ಪಾತ್ರವಾಗಿರುತ್ತದೆ. ಅದ್ಭುತವಾದ ಕ್ಯಾಮೆರಾ ಕೆಲಸ ಸಿನಿಮಾದ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ. ಸಿನಿಮಾಟೊಗ್ರಫರ್ ಸಾನು ವರ್ಗೀಸ್, ಅರಬ್ಬಿ ಸಮುದ್ರವನ್ನು ಎಷ್ಟು ರಮಣೀಯವಾಗಿ ತೋರಿಸಿದ್ದಾರೊ ಅಷ್ಟೆ ಅರ್ಥ ಪೂರ್ಣವಾಗಿ ಕಸದ ರಾಶಿಯನ್ನೂ ತೋರಿಸಿದ್ದಾರೆ. ಏಸು ಕ್ರಿಸ್ತನ ಮೂರ್ತಿ, ಮಸೀದಿಯನ್ನೂ ತೋರಿಸಿದ್ದಾರೆ.

     ನಟನೆ ಹೇಗಿದೆ?

    ನಟನೆ ಹೇಗಿದೆ?

    ಇನ್ನು ನಟನೆಯ ವಿಷಯಕ್ಕೆ ಬರುವುದಾದರೆ ಮಲಯಾಳಂ ಸಿನಿಮಾದ ಪ್ರಸ್ತುತ ಅತ್ಯುತ್ತಮ ನಟ-ನಟಿಯರೇ ಈ ಸಿನಿಮಾದಲ್ಲಿ ಪಾತ್ರಗಳಾಗಿದ್ದಾರೆ. ಸುಲೇಮಾನ್ ಆಗಿ ಯುವಕ, ಮಧ್ಯ ವಯಸ್ಕ, ವೃದ್ಧ ಮೂರು ಪಾತ್ರಗಳಿಗೆ ಜೀವ ತುಂಬಿದ್ದಾರೆ ಫಹಾದ್ ಫಾಸಿಲ್. ಅವರ ನಟನಾ ಪ್ರತಿಭೆ ಬಗ್ಗೆ ಹೊಸದಾಗಿ ಹೊಗಳುವಂತಹದ್ದೇನೂ ಇಲ್ಲ. ಇನ್ನು ನಿಮಿಷಾ ಸಜಯನ್ರ ಅಭಿನಯ ಸಹ ಅತ್ಯಂತ ಸಹಜ. ಪ್ರೀತಿಸುವ ಹೆಣ್ಣಾಗಿ, ಪತಿಗಾಗಿ ಹೊರಾಡುವ ಮಹಿಳೆಯಾಗಿ ಎರಡೂ ಶೇಡ್‌ಗಳಲ್ಲಿ ನಿಮಿಷ ಸಹಾ ಮಿಂಚಿದ್ದಾರೆ. ಸುಲೇಮಾನ್ ಗೆಳೆಯ ಡೇವಿಡ್‌ ಪಾತ್ರದಲ್ಲಿ ನಟಿಸಿರುವ ವಿನಯ್ ಫೋರ್ಟ್ ನಟನೆಯೂ ಅತ್ಯುತ್ತಮವಾಗಿದೆ. 'ಮಹೇಶೀಂಟೆ ಪ್ರತೀಕಾರಮ್', 'ತೋಂಡಿಮುತ್ತಲುಮ್ ದೃಕ್‌ಸಾಕ್ಷಿಯುಂ', 'ಜೋಜಿ' ಸಿನಿಮಾಗಳ ನಿರ್ದೇಶಕ ದಿಲೀಶ್ ಪೂತನ್ ಸಹ ರಾಜಕಾರಣಿಯಾಗಿ ಚೆನ್ನಾಗಿ ನಟಿಸಿದ್ದಾರೆ.

    English summary
    Malik Malyalam movie review in Kannada. Staring Fahad Fazil, Nimisha Sajayan, Dileesh Poothan directed by Mahesh Narayan.
    Monday, July 19, 2021, 9:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X