Mana Shankara Varaprasad Garu ‍‍'X' Review: ಚಿರಂಜೀವಿ ಕಾಮಿಡಿ ಕಿಕ್ ಕೊಡ್ತಾ? ಇಲ್ವಾ?

ಸಂಕ್ರಾಂತಿಗೆ ಅನಿಲ್ ರಾವಿಪುಡಿ ನಿರ್ದೇಶನದ ಸಿನಿಮಾ ಬರ್ತಿದೆ ಅಂದ್ರೆ ನಿರೀಕ್ಷೆ ಮೂಡುತ್ತದೆ. ಕಾರಣ ಈ ಹಿಂದೆ ಸುಗ್ಗಿ ಸಂಭ್ರಮದಲ್ಲಿ ಬಂದಿದ್ದ ಅವರ ಸಿನಿಮಾಗಳೆಲ್ಲಾ ಹಿಟ್ ಆಗಿತ್ತು. ಈ ಬಾರಿ ಚಿರಂಜೀವಿ ಹಾಗೂ ನಯನತಾರ ಜೋಡಿಯನ್ನು ಒಟ್ಟಿಗೆ ಅನಿಲ್ ತೆರೆಗೆ ತಂದಿದ್ದಾರೆ. ಜೊತೆಗೆ ವಿಕ್ಟರಿ ವೆಂಕಟೇಶ್ ಗೆಸ್ಟ್ ಅಪಿಯರೆನ್ಸ್ ಕೂಡ ಇದೆ. ಹಾಗಾಗಿ ನಿರೀಕ್ಷೆ ಎವರೆಸ್ಟ್ ಎತ್ತರಕ್ಕೆ ಏರಿತ್ತು.

'ಮನ ಶಂಕರವರ ಪ್ರಸಾದ್‌ ಗಾರು' ಸಿನಿಮಾ ಬಿಡುಗಡೆ ಆಗಿದೆ. ಒಂದು ದಿನ ಮೊದಲೇ ಪ್ರೀಮಿಯರ್ ಶೋಗಳು ಆರಂಭವಾಗಿದೆ. ಸಾಮಾನ್ಯವಾಗಿ ಶುಕ್ರವಾರ ಸಿನಿಮಾಗಳು ಬಿಡುಗಡೆ ಆಗುತ್ತವೆ. ಆದರೆ ಸಂಕ್ರಾಂತಿ ಹಿನ್ನೆಲೆ ಸೋಮವಾರವೇ ಸಿನಿಮಾ ಬಿಡುಗಡೆ ಆಗಿ ಸದ್ದು ಮಾಡ್ತಿದೆ. ಫ್ಯಾಮಿಲಿ ಕಾಮಿಡಿ ಎಂಟರ್‌ಟೈನರ್ ಸಿನಿಮಾ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವ ಸುಳಿವು ಸಿಕ್ಕಿದೆ. ಸೋಮವಾರ ಸಿನಿಮಾ ರಿಲೀಸ್ ಆದರೂ ಭಾನುವಾರ ಸಂಜೆಯೇ ಪ್ರೀಮಿಯರ್ ಶೋಗಳು ನಡೆದಿವೆ. ಮೆಗಾ ಫ್ಯಾನ್ಸ್ ಹಬ್ಬದ ರೀತಿ ಸಿನಿಮಾ ಸ್ವಾಗತಿಸಿದ್ದಾರೆ.

Mana Shankara Vara Prasad Garu twitter Review  6 tweets to read before watching chirajeevi film

ಕಳೆದ ವರ್ಷ ವೆಂಕಟೇಶ್ ಹಾಗೂ ಅನಿಲ್ ಕಾಂಬಿನೇಷನ್‌ನಲ್ಲಿ 'ಸಂಕ್ರಾತಿಗೆ ವಸ್ತುನ್ನಾಂ' ಸಿನಿಮಾ ತೆರೆಕಂಡು ಹಿಟ್ ಆಗಿತ್ತು. 300 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಈ ಬಾರಿ 'ಮನ ಶಂಕರವರ ಪ್ರಸಾದ್‌ ಗಾರು' ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ಈಗಾಗಲೇ ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಓಕೆ ಓಕೆ

ಆವರೇಜ್ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ.

ಮೊದಲಾರ್ಧವು ಚೆನ್ನಾಗಿದೆ. ಬಹಳ ದಿನಗಳ ನಂತರ ಚಿರಂಜೀವಿ ಕಾಮಿಡಿ ಟೈಮಿಂಗ್ ನೋಡಬಹುದು. ಸೆಕೆಂಡ್ ಹಾಫ್ ಸರಳವಾಗಿ ಶುರುವಾಗುತ್ತದೆ. ಆದರೆ ಬಳಿಕ ನಿರಾಸೆ ಮೂಡಿಸುತ್ತದೆ. ಅಷ್ಟೇನು ಪರಿಣಾಮ ಬೀರದ ಖಳನಾಯಕನ ಟ್ರ್ಯಾಕ್ ಹಾಗೂ ಬಹಳ ಪ್ರಚಾರ ಪಡೆದ ವೆಂಕಿ ಸನ್ನಿವೇಶ ಕೈ ಕೊಟ್ಟಿದೆ. ಕೆಲವೆಡೆ ಕಾಮಿಡಿ ಚೆನ್ನಾಗಿದೆ. ಮತ್ತೆ ಕೆಲವೆಡೆ ಬೇಸರ ಮೂಡಿಸುತ್ತದೆ. ಚಿರು ಚಿತ್ರವನ್ನು ಸಂಪೂರ್ಣವಾಗಿ ನಿಭಾಯಿಸುತ್ತದೆ. ಒನ್‌ಮ್ಯಾನ್ ಶೋ" ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ಸೆಕೆಂಡ್ ಹಾಫ್ ಹೈಲೆಟ್

'ಮನ ಶಂಕರವರ ಪ್ರಸಾದ್‌ ಗಾರು' ಸಿನಿಮಾ ಚೆನ್ನಾಗಿದೆ. ಚಿರು ಚೆನ್ನಾಗಿ ಕಾಣುತ್ತಾರೆ. ನಯನತಾರಾ ಹಾಗೂ ಉಳಿದ ತಾರಾಗಣ ಕೂಡ ಆಪ್ತವಾಗಿದೆ. ಕಾಮಿಡಿ ಸನ್ನಿವೇಶಗಳು ಮುಖ್ಯವಾಗಿ ಚಿರು ಹಾಗೂ ನಯನತಾರಾ ನಡುವಿನ ದೃಶ್ಯಗಳು ಕ್ಲಿಕ್ ಆಗಿದೆ. ಮ್ಯೂಸಿಕ್ ಉತ್ತಮವಾಗಿದೆ. ಸೆಕೆಂಡ್ ಹಾಫ್ ಪ್ಲಸ್ ಪಾಯಿಂಟ್ ಎನ್ನುವುದು ಮತ್ತೊಬ್ಬರು ಪ್ರತಿಕ್ರಿಯೆ.

ಅದ್ಭುತ ಸಿನಿಮಾ

ಬಾಸ್ ಈಸ್ ಬ್ಯಾಕ್.. ಇಡೀ ಸಿನಿಮಾ ಚಿರಂಜೀವಿ ಉತ್ಸಾಹಭರಿತರಾಗಿದ್ದಾರೆ. ಎಂತಹ ಎನರ್ಜಿ ಹಾಗೂ ಗ್ರೇಸ್. ಮತ್ತು ಚೆಲುವು. ಅನಿಲ್ ರಾವಿಪುಡ್ ನಿಮಗೆ ಚಪ್ಪಾಳೆ.. ಚಿತ್ರ ಇಷ್ಟವಾಯಿತು.. ತುಂಬಾ ಧನ್ಯವಾದಗಳು.. ವೆಂಕಟೇಶ್ ಸರ್ ಅದ್ಭುತ ಹಾಗೂ ನಯನತಾರ
ಎಂದಿನಂತೆ ಸೊಗಸಾಗಿ ಮಿಂಚಿದ್ದಾರೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

300 ಕೋಟಿ ಗ್ಯಾರೆಂಟಿ

ಅನಿಲ್ ರಾವಿಪುಡಿ ಈ ಬಾರಿ ಬೇರೆಯದ್ದೇ ಸಿನಿಮಾ ಮಾಡಿದ್ದೀರಾ. ಐ ಲವ್ ಯು. ಮತ್ತೆ ಹೇಳ್ತಿದ್ದೀನಿ ಒಳ್ಳೆ ಸಿನಿಮಾ ಮಾಡಿದ್ರೆ ಬಾಕ್ಸಾಫೀಸ್ ಹೇಗೆ ಶೇಕ್ ಆಗುತ್ತದೆ ಎನ್ನುವುದಕ್ಕೆ ಇದು ಜಸ್ಟ್ ಎಕ್ಸಾಂಪಲ್.. ಸಿನಿಮಾ 300 ಕೋಟಿ ರೂ. ಬಹಳ ಸುಲಭವಾಗಿ ಕಲೆಕ್ಷನ್ ಮಾಡುತ್ತದೆ ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.

ನನ್ನ ಕಣ್ಣಲ್ಲಿ ನೀರು ಬಂತು

'ಮನ ಶಂಕರವರ ಪ್ರಸಾದ್‌ ಗಾರು' ಅದ್ಭುತವಾಗಿದೆ. ಚಿರಂಜೀವಿ ಹೇಗಿದ್ದಾರೋ ಹಾಗೆ ತೋರಿಸಿ ಅನಿಲ್ ಎಲ್ಲರನ್ನು ಖುಷಿಪಡಿಸಿದ್ದೀರಾ.. ಚಿರಂಜೀವಿ ನಿಮ್ಮ ಉತ್ಸಾಹಭರಿತ ನಟನೆ ಸಖತ್ ಕಿಕ್ ಕೊಡ್ತು. ಭಾವನಾತ್ಮಕ ಸನ್ನಿವೇಶಗಳಲ್ಲಿ ನನ್ನ ಕಣ್ಣಲ್ಲಿ ನೀರು ಬಂತು. ಮ್ಯೂಸಿಕ್ ಅದ್ಭುತ ಎಂದು ಸಿನಿಮಾ ನೋಡಿದ ಮತ್ತೊಬ್ಬರು ಸಂತವ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ 'ಮನ ಶಂಕರವರ ಪ್ರಸಾದ್‌ ಗಾರು' ಚಿತ್ರಕ್ಕೆ ಆರಂಭದಲ್ಲಿ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಮುಂದೆ ಸಿನಿಮಾ ಹೇಗೆ ಸದ್ದು ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕು.

More from Filmibeat

English summary
Mana Shankara Vara Prasad Garu X Review; netizens hail it as ‘comeback of mega star’;
Read more about: chiranjeevi tollywood review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X