'ಫ್ಯಾಮಿಲಿ ಮ್ಯಾನ್-2' ಟ್ವಿಟ್ಟರ್ ವಿಮರ್ಶೆ; ಮನೋಜ್ ಬಾಜಪೇಯಿ-ಸಮಂತಾಗೆ ಅಭಿಮಾನಿಗಳು ಫಿದಾ
ಚಿತ್ರಪ್ರೇಕ್ಷಕರು ಭಾರಿ ಕುತೂಹಲದಿಂದ ಕಾಯುತ್ತಿದ್ದ ಫ್ಯಾಮಿಲಿ ಮ್ಯಾನ್-2 ಕೊನೆಗೂ ಬಿಡುಗಡೆಯಾಗಿದೆ. ಅಮೆಜಾನ್ ಪ್ರೈಂನಲ್ಲಿ ವೆಬ್ ಸರಣಿ ಬಿಡುಗಡೆಯಾಗುತ್ತಿದ್ದಂತೆ ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸಿದ್ದಾರೆ. ರಿಲೀಸ್ ಗೂ ಮೊದಲು ವಿವಾದ ಸೃಷ್ಟಿಸಿದ್ದ ಫ್ಯಾಮಿಲಿ ಮ್ಯಾನ್-2, ಬಿಡುಗಡೆ ಬಳಿಕ ಬಹುತೇಕರು ಇಷ್ಟಪಟ್ಟಿದ್ದಾರೆ.
ವೆಬ್ ಸರಣಿ ವೀಕ್ಷಿಸಿದ ಅಭಿಮಾನಿಗಳು ಟ್ವಿಟ್ಟರ್ ಮೂಲಕ ವಿಮರ್ಶೆ ಮಾಡಿದ್ದಾರೆ. ಬಹುತೇಕರು ಫ್ಯಾಮಿಲಿ ಮ್ಯಾನ್-2 ಸರಣಿಯನ್ನು ಹಾಡಿ ಹೊಗಳಿದ್ದಾರೆ. ನಾಯಕ ಮನೋಜ್ ಬಾಜಪೇಯಿ, ಸರಣಿಯ ಹೊಸ ಸೇರ್ಪಡೆ ಸಮಂತಾ ಅಭಿನಯ, ರಾಜ್ ಮತ್ತು ಡಿಕೆ ನಿರ್ದೇಶನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಭಾರತದ ಬಹುನಿರೀಕ್ಷೆಯ ವೆಬ್ ಸರಣಿ ವೀಕ್ಷಿಸಿದ ಅಭಿಮಾನಿಗಳು ಹೇಳಿದ್ದೇನು? ಮುಂದೆ ಓದಿ...
ಮನೋಜ್, ಬಾಸ್ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ
'ಫ್ಯಾಮಿಲಿ ಮ್ಯಾನ್2 ರಾಜ್ ಮತ್ತು ಡಿಕೆ ಅವರ ಮಾಸ್ಟರ್ ಪೀಸ್. ಮನೋಜ್ ಬಾಜಪೇಯಿ ಬಾಸ್ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಸಮಂತಾ ಅವರ ಪಾತ್ರ ಮತ್ತೊಂದು ದೊಡ್ಡ ಭಾಗವನ್ನು ತೆರೆಯುತ್ತದೆ. ವರ್ತ್ ವಾಚಿಂಗ್. ನೀವು ನೋಡದಿದ್ದರೆ ದಯವಿಟ್ಟು ನೋಡಿ. ತಂಡದ ಅದ್ಭುತವಾದ ಕೆಲಸ.' ಎಂದು ಒಬ್ಬ ಅಭಿಮಾನಿ ಟ್ವೀಟ್ ಮಾಡಿದ್ದಾರೆ.
9 ಎಪಿಸೋಡ್, 413 ನಿಮಿಷ, ಒಂದು ರಾತ್ರಿ
'9 ಎಪಿಸೋಡ್, 413 ನಿಮಿಷ, ಒಂದು ರಾತ್ರಿ, ಥ್ರಿಲ್ಡ್. ಮನೋಜ್ ಬಾಜಪೇಯಿ ಎಂದಿನಂತೆ ಅದ್ಭುತ. ಆದರೆ ಸಮಂತಾ ಈ ಎಪಿಸೋಡ್ ಹೈಟೆಲ್. ಸಮಂತಾ ಈ ಎಪಿಸೋಡ್ ನ ಅದ್ಭುತ, ಎಲ್ಲರ ಹೃದಯ ಕದ್ದಿದ್ದಾರೆ. 10ಕ್ಕೆ 10 ಅಂಕ. ಭಾರತದ ಅತ್ಯುತ್ತಮ ಆಕ್ಷನ್ ಥ್ರಿಲ್ಲರ್ ವೆಬ್ ಸರಣಿ' ಎಂದು ಮತ್ತೋರ್ವ ವಿಮರ್ಶೆ ಮಾಡಿದ್ದಾರೆ.
ಸಮಂತಾ ಈ ಸೀಸನ್ ನ ಜಾಕ್ ಪಾಟ್
'ದಿ ಫ್ಯಾಮಿಲಿ ಮ್ಯಾನ್-2 ದೊಡ್ಡ ಟ್ರೀಟ್. ಮನೋಜ್ ಬಾಜಪೇಯಿ ಅದ್ಭುತ ಪ್ರದರ್ಶನ. ಸಮಂತಾ ಅವರ ಸೀಸನ್-2ನ ಜಾಕ್ ಪಾಟ್. ರಾಜ್ ಮತ್ತು ಡಿಕೆ ಮುಂದಿನ ಸೀಸನ್ ನ ಹಿಂಟ್ ನೀಡಿದ್ದಾರೆ' ಎಂದಿದ್ದಾರೆ.
ರಾಜ್ ಮತ್ತು ಡಿಕೆ ಅವರ ಮತ್ತೊಂದು ಬೌಂಡರಿ
'ಕೊನೆಗೂ ಮತ್ತೊಂದು ಅದ್ಭುತ ಕಥೆಯ ಮೂಲಕ ಮನೋಜ್ ಬಾಜಪೇಯಿ ಎಂಟ್ರಿ ಕೊಟ್ಟಿದ್ದಾರೆ. ಉತ್ತಮವಾದ ವೈನ್. ರಾಜ್ ಮತ್ತು ಡಿಕೆ ಮತ್ತೊಮ್ಮೆ ಬೌಂಡರಿ ಹೊಡೆದಿದ್ದೀರಿ. ಸಮಂತಾ ಪ್ರದರ್ಶನ ಅದ್ಭುತ' ಎಂದಿದ್ದಾರೆ.
ಅಧ್ಭುತವಾದ ಸರಣಿ
'ಫ್ಯಾಮಿಲಿ ಮ್ಯಾನ್-2 ನೋಡಿ ಈಗ ಮುಗಿಸಿದೆ. ಅದ್ಭುತವಾದ ಸರಣಿ. ಕಾದಿರುವುದಕ್ಕೂ ಸಾರ್ಥಕತೆ ಇದೆ. ಮನೋಜ್ ಬಾಜಪೇಯಿ ಸರ್ ಅದ್ಭುತ ಪ್ರದರ್ಶನ. ಸಮಂತಾ, ಆಸಿಫ್, ಪ್ರಿಯಮಣಿ ಪ್ರತಿಯೊಬ್ಬರು ಅಮೇಜಿಂಗ್. ರಾಜ್ ಮತ್ತು ಡಿಕೆ ಅವರ ನಿರ್ದೇಶನ ಅತ್ಯದ್ಭುತವಾಗಿದೆ'


Click it and Unblock the Notifications











