Just In
- 10 hrs ago
ನ್ಯಾಯಾಲಯಕ್ಕೆ ಹಾಜರಾದ ರಕ್ಷಿತ್ ಶೆಟ್ಟಿ, ಇದು ಸುಲಿಗೆ ತಂತ್ರ ಎಂದ ಸಿಂಪಲ್ ಸ್ಟಾರ್
- 11 hrs ago
50 ಲಕ್ಷ ವಂಚನೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂಜನಾ ಗಲ್ರಾನಿ ಸಹೋದರಿ
- 11 hrs ago
ರಾಜ್ಕುಮಾರ್ ಪುಣ್ಯಸ್ಮರಣೆ: ಅಣ್ಣಾವ್ರನ್ನು ದರ್ಶನ್ ಸ್ಮರಿಸಿದ್ದು ಹೀಗೆ
- 13 hrs ago
ಬಾಫ್ಟಾ 2021: ರಿಷಿ ಕಪೂರ್, ಇರ್ಫಾನ್ಗೆ ಗೌರವ, 'ವೈಟ್ ಟೈಗರ್'ಗೆ ನಿರಾಸೆ
Don't Miss!
- News
ಭಾರತದಲ್ಲಿ 24 ಗಂಟೆಯಲ್ಲಿ 1,61,736 ಹೊಸ ಕೋವಿಡ್ ಪ್ರಕರಣ
- Sports
ರಾಜಸ್ಥಾನ್ ವಿರುದ್ಧ ಗೆದ್ದು ಮುಂಬೈ ಹಿಂದಿಕ್ಕಿದ ಪಂಜಾಬ್ ಕಿಂಗ್ಸ್
- Finance
ಏಪ್ರಿಲ್ 13ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ
- Automobiles
ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮೇಲೆ ಒಟ್ಟು ರೂ.12 ಸಾವಿರ ಕೋಟಿ ಹೂಡಿಕೆ ಮಾಡಿದ ಮಹೀಂದ್ರಾ
- Lifestyle
ಮಂಗಳವಾರದ ದಿನ ಭವಿಷ್ಯ: ಯುಗಾದಿಯಂದು ಹೇಗಿದೆ ನಿಮ್ಮ ರಾಶಿಫಲ
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಓ ಪ್ರೇಮವೇ' ನೋಡಿ ವಿಮರ್ಶಕರು ಮಾಡಿರುವ ಕಾಮೆಂಟ್ಸ್ ಏನು.?
ನವ ನಿರ್ದೇಶಕ ಮನೋಜ್ ಕುಮಾರ್ ನಟಿಸಿ, ನಿರ್ದೇಶನ ಮಾಡಿರುವ ಸಿನಿಮಾ 'ಓ ಪ್ರೇಮವೇ'. ಜೀವನದಲ್ಲಿ ಹಣ, ಐಶ್ವರ್ಯ ಶಾಶ್ವತ ಅಲ್ಲ. ಪ್ರೀತಿಯೇ ಶಾಶ್ವತ ಎಂಬ ಸಂದೇಶ ಸಾರಿರುವ 'ಓ ಪ್ರೇಮವೇ' ಚಿತ್ರ ಹರೆಯದ ಹುಡುಗ ಹುಡುಗಿಯರ ಮನಸ್ಸು ಗೆದ್ದಿದೆ.
ನಟಿ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ನಾಯಕಿ ಆಗಿ ಅಭಿನಯಿಸಿರುವ, ಹುಚ್ಚ ವೆಂಕಟ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಓ ಪ್ರೇಮವೇ' ಸಿನಿಮಾ ಹೇಗಿದೆ.? ವಿಮರ್ಶಕರಿಗೆ ಈ ಸಿನಿಮಾ ಇಷ್ಟ ಆಯ್ತಾ.?
ಹರೆಯದ ಕನವರಿಕೆ, ಹುಡುಕಾಟದ ಪ್ರೇಮ ಕಹಾನಿ ಹೊತ್ತಿರುವ 'ಓ ಪ್ರೇಮವೇ' ಸಿನಿಮಾ ನೋಡಿ ವಿಮರ್ಶಕರು ಮಾಡಿರುವ ಕಾಮೆಂಟ್ಸ್ ಏನು.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟ ಮಾಡಿರುವ 'ಓ ಪ್ರೇಮವೇ' ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ...

ದಣಿದ ಪ್ರೇಮಿಯ ಕಥಾನಕ - ಪ್ರಜಾವಾಣಿ
ನಿಷ್ಕಲ್ಮಷ ಪ್ರೀತಿ ಹುಡುಕುವ ಹುಡುಗ. ಆದರೆ, ಶ್ರೀಮಂತ ಹುಡುಗನ ಸಂಗ ಬಯಸುವ ಹುಡುಗಿ. ಒಂದಿಷ್ಟು ಹಾಸ್ಯ. ನಾಯಕನ ಎಂಟ್ರಿಗೆ ಭರ್ಜರಿ ಹೊಡೆದಾಟ. ನಾಯಕ, ನಾಯಕಿ ನಡುವೆ ಮುಸುಕಿನ ಗುದ್ದಾಟ. ಈ ನಡುವೆಯೇ ಮತ್ತೊಬ್ಬ ನಾಯಕಿಯ ಪ್ರವೇಶ. ಕೊನೆಗೆ, ಅವಳಿಗೂ ದಕ್ಕದ ನಾಯಕ... ಇಂಥಹ ಅಂಶಗಳಿರುವ ಸಿನಿಮಾಗಳು ಈಗಾಗಲೇ ಸಾಕಷ್ಟು ಬಂದುಹೋಗಿವೆ. ಇದಕ್ಕೆ ಹೊಸ ಸೇರ್ಪಡೆ ‘#ಓ...ಪ್ರೇಮವೇ' ಚಿತ್ರ - ಕೆ.ಎಚ್.ಓಬಳೇಶ್

ಪ್ರೇಮದ ಲೆಕ್ಕಾಚಾರದಲ್ಲಿ ಲವ್ ಮತ್ತು ದೋಖಾ - ವಿಜಯ ಕರ್ನಾಟಕ
ಪ್ರೇಮ ಎನ್ನುವುದು ಎಲ್ಲ ಕಾಲಕ್ಕೂ ಸಲ್ಲುವಂಥದ್ದು. ಹಾಗಾಗಿಯೇ ಭಾರತೀಯ ಸಿನಿಮಾ ರಂಗದಲ್ಲಿ ನಾನಾ ರೀತಿಯ ಪ್ರೇಮಕಥೆಗಳು ತೆರೆಗೆ ಬಂದಿವೆ. ಪ್ರೀತಿ ಕುರಿತಾದ ನೈಜ ಘಟನೆಗಳೂ ಸಿನಿಮಾವಾಗಿವೆ. ಅಂಥದ್ದೇ ಒಂದು ನೈಜ ಘಟನೆಯನ್ನು ‘ಓ ಪ್ರೇಮವೇ' ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಮನೋಜ್. ಅದಕ್ಕಷ್ಟು ಸಿನಿಮಯ ಸನ್ನಿವೇಶಗಳನ್ನು ಬೆರೆಸಿದ್ದರೂ, ಬಹುತೇಕ ಪ್ರೇಮಿಗಳ ಬದುಕಿನಲ್ಲಿ ನಡೆಯುವಂತಹ ಅಂಶಗಳು ಇಲ್ಲಿವೆ. ಹಾಗಾಗಿ ‘ಓ ಪ್ರೇಮವೇ' ಆಯಾ ಪ್ರೇಮಿಗಳ ಬದುಕಿನಂತೆ ತೆರೆದುಕೊಂಡಿದೆ - ಶರಣು ಹುಲ್ಲೂರು

ಆ ಪ್ರೇಮ ಈ ಪ್ರೇಮ ಓ ಪ್ರೇಮ! - ಕನ್ನಡ ಪ್ರಭ
ಮಾಜಿ ಸಚಿವ, ಹಾಲಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಪುತ್ರ ಮನೋಜ್ ಕುಮಾರ್ ನಾಯಕ, ನಿರ್ದೇಶಕ ಹಾಗೂ ನಿರ್ಮಾಪಕ ಎಂಟ್ರಿ ಸೊಗಸಾಗಿದೆ, ಅದ್ಧೂರಿಯಾಗಿದೆ. ಕತೆ ಮತ್ತಷ್ಟು ಗಟ್ಟಿಯಾಗಿರಬೇಕಿತ್ತು ಅನ್ನಿಸುವ ಹೊತ್ತಿಗೆ ನಟನೆಯ ಸಹಜತೆ ಗಮನ ಸೆಳೆಯುತ್ತದೆ. ಮನೋಜ್ ಮತ್ತು ಅಂಜಲಿ ಇಬ್ಬರೂ ತೆರೆಯ ಮೇಲೆ ಸೊಗಸಾಗಿ ಕಾಣುತ್ತಾರೆ. ಸಾಧು ಕೋಕಿಲ, ಪ್ರಶಾಂತ್ ಸಿದ್ದಿ, ಬುಲೆಟ್ ಪ್ರಕಾಶ್ ಹಾಸ್ಯ ಕತೆಯಲ್ಲಿ ಸುಸ್ತಾದಾಗ ಟಾನಿಕ್ ಕೊಟ್ಟಂತಿದೆ. ರಂಗಾಯಣ ರಘು, ಸಂಗೀತಾ ಅಭಿನಯವೂ ಅಚ್ಚುಕಟ್ಟಾಗಿದೆ - ದೇಶಾದ್ರಿ ಹೊಸ್ಮನೆ

O Premave Review - Times of India
The film sees a typical testosterone-driven drama, in which you have the overly ambitious middle-class girl and her antithesis - a rich girl, who wants to own the world, but still looks for love. Who manages to woo the hero in the end? The story drags and the two-hour narrative seems much longer than it should have been. This film can be a choice for those who want an old-fashioned love story, with the hero being the one who uploads all things idealistic. And yes, you even have Huccha Venkat in a cameo drilling in sense to the heroine. Go ahead, check it out if you must - Sunayana Suresh