twitter
    For Quick Alerts
    ALLOW NOTIFICATIONS  
    For Daily Alerts

    ಬೃಹಸ್ಪತಿ ವಿಮರ್ಶೆ: 'ಡೀಸೆಂಟ್ ಪೋಲಿ'ಯ ಡೀಸೆಂಟ್ ಸಿನಿಮಾ.!

    |

    ''ನಮ್ಮಪ್ಪ ಪೋಲಿ ಆಗಿದ್ರೋ ಇಲ್ವೋ ಗೊತ್ತಿಲ್ಲ. ಆದ್ರೆ, ನಾನು ಒಂಥರಾ ಡೀಸೆಂಟ್ ಪೋಲಿ'' ಅಂತ ಪರಿಚಯ ಮಾಡಿಕೊಂಡರೂ, ನಾಯಕ ಸುಧೀರ್ ಅಂಥ ಪೋಲಿ ಏನಲ್ಲ.! ಕೈಯಲ್ಲಿ ಕೆಲಸ ಇಲ್ಲದೇ ಇದ್ದರೂ, ಮನಸ್ಸಿನಲ್ಲಿ ಛಲ ಹೊಂದಿರುವ 'ಪ್ರಳಯಾಂತಕ'ನ ಕಥೆ ಈ 'ಬೃಹಸ್ಪತಿ'. ವೃತ್ತಿ ಇಲ್ಲದ ಪದವೀಧರನ ಸುತ್ತ ಹೆಣೆದಿರುವ 'ಬೃಹಸ್ಪತಿ' ಡೀಸೆಂಟ್ ಎಂಟರ್ ಟೇನರ್.

    Rating:
    3.0/5
    Star Cast: ಮನೋರಂಜನ್ ರವಿಚಂದ್ರನ್, ಮಿಶ್ತಿ ಚಕ್ರವರ್ತಿ, ಸಾಯಿ ಕುಮಾರ್, ಸಿತಾರಾ, ಸಾಧು ಕೋಕಿಲ
    Director: ನಂದ ಕಿಶೋರ್

    'ಬೃಹಸ್ಪತಿ'ಯ ಸುತ್ತ-ಮುತ್ತ

    'ಬೃಹಸ್ಪತಿ'ಯ ಸುತ್ತ-ಮುತ್ತ

    ನಾಯಕ ಸುಧೀರ್ (ಮನೋರಂಜನ್ ರವಿಚಂದ್ರನ್) ಸಿವಿಲ್ ಎಂಜಿನಿಯರ್. ಆದರೂ, ನಿರುದ್ಯೋಗಿ. ಸಂಬಳಕ್ಕಾಗಿ ಬೇರೆ ಕೆಲಸ ಮಾಡದೆ, ಓದಿಗೆ ತಕ್ಕ ಹಾಗೆ ಕೆಲಸ ಮಾಡಬೇಕು ಎಂಬ ಹಠ. 'ವೃತ್ತಿ ಇಲ್ಲದ ಪದವೀಧರ'ನ ಕಷ್ಟ-ಸುಖಗಳ ಸುತ್ತ ಹೆಣೆದಿರುವ ಚಿತ್ರವೇ 'ಬೃಹಸ್ಪತಿ'.

    ರೀಮೇಕ್ ಸಿನಿಮಾ

    ರೀಮೇಕ್ ಸಿನಿಮಾ

    2014 ರಲ್ಲಿ ತೆರೆಕಂಡಿದ್ದ ತಮಿಳಿನ 'ವಿ.ಐ.ಪಿ' ಚಿತ್ರದ ರೀಮೇಕ್ ಈ 'ಬೃಹಸ್ಪತಿ'. 'ವಿ.ಐ.ಪಿ' ಚಿತ್ರಕ್ಕೆ ಹೋಲಿಸಿದರೆ, 'ಬೃಹಸ್ಪತಿ' ಚಿತ್ರದ ಕಥೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದ್ರೆ, ಸಂಭಾಷಣೆಯಲ್ಲಿ ಮಾತ್ರ ಕನ್ನಡ ಸೊಗಡು ಇದೆ.

    'ಪ್ರಳಯಾಂತಕ' ಮನೋರಂಜನ್

    'ಪ್ರಳಯಾಂತಕ' ಮನೋರಂಜನ್

    ನಿರುದ್ಯೋಗಿ ಹುಡುಗನ ಪಾತ್ರದಲ್ಲಿ ಮನೋರಂಜನ್ ರವಿಚಂದ್ರನ್ ಅಭಿನಯ ಅಚ್ಚುಕಟ್ಟಾಗಿದೆ. ಡೈಲಾಗ್ ಡೆಲಿವರಿಯಲ್ಲಿ ಮನೋರಂಜನ್ ಇನ್ನೂ ಪಳಗಬೇಕು. ಸಿಕ್ಸ್ ಪ್ಯಾಕ್ ನಲ್ಲಿ ಮಿಂಚುವ ಮನೋರಂಜನ್ ಡ್ಯಾನ್ಸ್ ಮತ್ತು ಫೈಟ್ ನಲ್ಲಿ ಅಕ್ಷರಶಃ ಮನರಂಜನೆ ನೀಡುತ್ತಾರೆ.

    ಕಣ್ಮನ ಸೆಳೆಯುವ ಮಿಶ್ತಿ ಚಕ್ರವರ್ತಿ

    ಕಣ್ಮನ ಸೆಳೆಯುವ ಮಿಶ್ತಿ ಚಕ್ರವರ್ತಿ

    ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಮಿಂಚಿರುವ ಮಿಶ್ತಿ ಚಕ್ರವರ್ತಿ ಅಭಿನಯ ಚೆನ್ನಾಗಿದೆ. ಗ್ಲಾಮರಸ್ ಆಗಿ ಕಾಣಿಸಿಕೊಳ್ಳದೇ ಇದ್ದರೂ, ಗೊಂಬೆಯಂತೆ ಕಾಣುವ ಮಿಶ್ತಿ ಕಣ್ಮನ ಸೆಳೆಯುತ್ತಾರೆ.

    ಉಳಿದವರ ನಟನೆ ಹೇಗಿದೆ.?

    ಉಳಿದವರ ನಟನೆ ಹೇಗಿದೆ.?

    ಸಾಯಿಕುಮಾರ್, ಸಿತಾರಾ, ಅವಿನಾಶ್, ಪ್ರಕಾಶ್ ಬೆಳವಾಡಿ, ಸಾಧು ಕೋಕಿಲ... ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

    ಪ್ಲಸ್ ಪಾಯಿಂಟ್ಸ್ ಏನು.?

    ಪ್ಲಸ್ ಪಾಯಿಂಟ್ಸ್ ಏನು.?

    ರೀಮೇಕ್ ಸಿನಿಮಾ ಆದರೂ, 'ಬೃಹಸ್ಪತಿ' ಚಿತ್ರವನ್ನ ಕನ್ನಡದ ನೇಟಿವಿಟಿಗೆ ತಕ್ಕಂತೆ ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ ನಿರ್ದೇಶಕ ನಂದ ಕಿಶೋರ್. ಆಕ್ಷನ್, ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಹದವಾಗಿ ಬೆರೆತಿರುವ ಈ ಸಿನಿಮಾದಲ್ಲಿ ಎಲ್ಲೂ ಬೋರ್ ಆಗುವ ಸನ್ನಿವೇಶಗಳಿಲ್ಲ. ತಮಿಳಿನ 'ವಿ.ಐ.ಪಿ' ನೋಡದವರು 'ಬೃಹಸ್ಪತಿ' ಚಿತ್ರವನ್ನ ಕೂತು ಆರಾಮಾಗಿ ನೋಡಬಹುದು.

    ಮೈನಸ್ ಪಾಯಿಂಟ್ಸ್ ಏನು.?

    ಮೈನಸ್ ಪಾಯಿಂಟ್ಸ್ ಏನು.?

    ತಮಿಳಿನ 'ವಿ.ಐ.ಪಿ' ನೋಡಿರುವವರಿಗೆ 'ಬೃಹಸ್ಪತಿ' ಚಿತ್ರದಲ್ಲಿ ಅಂತಹ ಹೊಸತನ ಕಾಣಿಸುವುದಿಲ್ಲ. ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಹಾಡುಗಳು ಅಷ್ಟಕಷ್ಟೆ. ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಕೂಡ ಮೂಲ ಚಿತ್ರವನ್ನೇ ನೆನಪಿಸುತ್ತದೆ.

    ಫೈನಲ್ ಸ್ಟೇಟ್ ಮೆಂಟ್

    ಫೈನಲ್ ಸ್ಟೇಟ್ ಮೆಂಟ್

    ಡಬಲ್ ಮೀನಿಂಗ್ ಡೈಲಾಗ್ಸ್ ಹಾಗೂ ಐಟಂ ಸಾಂಗ್ ಇಲ್ಲದ ಡೀಸೆಂಟ್ ಸಿನಿಮಾ 'ಬೃಹಸ್ಪತಿ'. ಮಕ್ಕಳ ಮಧ್ಯೆ ಭೇದಭಾವ ಮಾಡಬಾರದು ಎಂಬ ಸಂದೇಶವನ್ನು 'ಬೃಹಸ್ಪತಿ' ಚಿತ್ರದ ಮೂಲಕ ತೋರಿಸಿದ್ದಾರೆ.

    English summary
    Read Manoranjan Ravichandran starrer Kannada Movie 'Brihaspathi' review.
    Saturday, September 29, 2018, 13:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X