Mark X (Twitter) Review ; ಹೇಗಿದೆ ಮಾರ್ಕ್ ಮಾಸ್ ಅವತಾರ ? ಸುದೀಪ್ ಅಬ್ಬರ- ಪ್ರೇಕ್ಷಕರ ಅಭಿಪ್ರಾಯ
''ಬಿಗ್ ಬಾಸ್'' ಕಾರ್ಯಕ್ರಮದಲ್ಲಿ ಪ್ರತಿ ವರ್ಷ ತಪ್ಪದೇ ತಲ್ಲೀನವಾಗುವ ಸುದೀಪ್, ಸಿನಿಮಾದಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ ಎನ್ನುವ ಮಾತು ಕಳೆದ ಕೆಲ ವರ್ಷಗಳಿಂದ ಅಭಿಮಾನಿ ವಲಯದಲ್ಲಿಯೇ ಕೇಳಿ ಬರುತ್ತಿತ್ತು. ಇದಕ್ಕೆ ಪೂರಕವಾಗಿ ಕನ್ನಡದಲ್ಲಿ 2018ರಿಂದ ಸುದೀಪ್ ವರ್ಷಕ್ಕೆ ಒಂದು ಚಿತ್ರವನ್ನಷ್ಟೇ ಮಾಡುತ್ತಾ ಬಂದಿದ್ದರು. ಆದರೆ .. ''ಮ್ಯಾಕ್ಸ್'' ನಂತರ ಸುದೀಪ್ ಸ್ಪೀಡಾದಂತೆ ಕಾಣ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ....''ಮಾರ್ಕ್'' ..
ಚಿತ್ರವನ್ನು ಸುದೀಪ್ ಕೇವಲ ಆರೇ ತಿಂಗಳಿನಲ್ಲಿ ಮುಗಿಸಿದ್ದಾರೆ. ಮುಂದಿನ ವರಮಹಾಲಕ್ಷ್ಮೀ ಹಬ್ಬಕ್ಕೆ ಮತ್ತೊಂದು ಚಿತ್ರವನ್ನು ಬಿಡುಗಡೆ ಮಾಡುವ ಮಾತುಗಳನ್ನಾಡಿದ್ದಾರೆ. ಸುದೀಪ್ ಅವರ ಈ ನಡೆ ಸದ್ಯ ಇವರ ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದ್ದು ಸದ್ಯ ಈ ಸಂಭ್ರಮವನ್ನು ''ಮಾರ್ಕ್'' ಇನ್ನೂ ಹೆಚ್ಚಿಸಿದೆ. ಬೆಳ್ಳಿತೆರೆಯಲ್ಲಿ ಮಾರ್ಕ್ ಮಾಸ್ ಅವತಾರ ಕಂಡು ಸುದೀಪ್ ಸೈನ್ಯ ಹುಚ್ಚೆದ್ದಿದೆ. ಹಾಗಿದ್ದರೆ ಹೇಗಿದೆ ಮಾರ್ಕ್..? ಮೊದಲ ದಿನದ ಮೊದಲ ಶೋನಲ್ಲಿ ಚಿತ್ರವನ್ನು ನೋಡಿದವರು ಹೇಳಿದ್ದೇನು..? ಎಂದು ತಿಳಿಯಲು ಮುಂದೆ ಓದಿ.

ಒನ್ ಮ್ಯಾನ್ ಆರ್ಮಿ
ಪಾಸಿಟಿವ್ ಅಂಶಗಳು - ಚಿತ್ರಕಥೆ ಮತ್ತು ನಿರ್ದೇಶನ. ಅತ್ಯುತ್ತಮ- ಹಿನ್ನೆಲೆ ಸಂಗೀತ, ಸಂಕಲನ, ಛಾಯಾಗ್ರಹಣ, ನಿರ್ಮಾಣ ಮೌಲ್ಯ, ಕಿಚ್ಚ ಸುದೀಪ್ ಒನ್ ಮ್ಯಾನ್ ಆರ್ಮಿ. ಸಸ್ಪೆನ್ಸ್ ದೃಶ್ಯಗಳು ಆಕರ್ಷಕವಾಗಿವೆ. ಕಥೆ ಮತ್ತು ಕಲಾವಿದರ ಆಯ್ಕೆ ಚೆನ್ನಾಗಿದೆ. ಸಂಗೀತ ಚೆನ್ನಾಗಿದೆ. 15-25 ನಿಮಿಷ ಬೇಸರವಾಗುವಂತಹ ದೃಶ್ಯಗಳಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಒಬ್ಬರು ಚಿತ್ರಕ್ಕೆ ನಾಲ್ಕು ಸ್ಟಾರ್‌ಗಳನ್ನು ನೀಡಿದ್ದಾರೆ. ನಿರ್ದೇಶಕ ವಿಜಯ್ ಕಾರ್ತಿಕೇಯ ಅವರನ್ನು ಪ್ರಶಂಸಿಸಿದ್ದಾರೆ.
ಮ್ಯಾಕ್ಸ್ 2
ನಿರೀಕ್ಷೆಯಂತೆಯೇ ''ಮಾರ್ಕ್'', ''ಮ್ಯಾಕ್ಸ್'' ಚಿತ್ರದ ಮತ್ತೊಂದು ಆವೃತ್ತಿ. ಮೊದಲಾರ್ಧದಲ್ಲಿನ ನಿರಾಶಾದಾಯಕ ಅನುಭವದ ನಂತರ ದ್ವಿತೀಯಾರ್ಧ ಈ ಚಿತ್ರವನ್ನು ಉಳಿಸುತ್ತದೆ. ಚಿತ್ರಕ್ಕೆ ಮ್ಯಾಕ್ಸ್ 2 ಎಂದು ಹೆಸರಿಸಿದ್ದರೆ ನಿರೀಕ್ಷೆಗಳ ಮಟ್ಟಕ್ಕೆ ಚಿತ್ರ ತಲುಪಿರುತ್ತಿತ್ತು ಎಂದು ಪತ್ರಕರ್ತ ಶ್ಯಾಮ್ ಪ್ರಸಾದ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ವಿಮರ್ಷೆ ಮಾಡಿದ್ದಾರೆ.
ಆಕರ್ಷಕ ''ಮಾರ್ಕ್''
''ಮಾರ್ಕ್'' ಸಿನಿಮಾ ಆಕರ್ಷಕ ಹಿನ್ನೆಲೆಯಲ್ಲಿ ಶುರುವಾಗುತ್ತೆ. ಚಿತ್ರದ ಇಂಟ್ರಡಕ್ಷನ್ ಚಿತ್ರದಲ್ಲಿನ ಪ್ರಪಂಚವನ್ನು ಪರಿಣಾಮಕಾರಿಯಾಗಿ ತೆರೆದಿಡುತ್ತೆ. ಮೊದಲಾರ್ಧ ಪಾತ್ರಗಳನ್ನು ಪರಿಚಯಿಸುತ್ತೆ. ದ್ವಿತಿಯಾರ್ಧ ತನಿಖಾ ಹಾದಿಯತ್ತ ಹೊರಳುತ್ತೆ. ಕಿಚ್ಚ ಸುದೀಪ್ ತಮ್ಮನ್ನು ತಾವು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ನಿರ್ದೇಶಕ ವಿಜಯ್ ಕಾರ್ತಿಕೆಯ ಪ್ರಬುದ್ಧತೆಯಿಂದ ವಿಷಯ ಪ್ರಸ್ತಾಪಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರದ ಮತ್ತೊಂದು ಶಕ್ತಿ. ಒಟ್ಟಾರೆಯಾಗಿ ಥ್ರಿಲ್ಲರ್ ಚಿತ್ರ ನೋಡಲು ಬಯಸುವವರಿಗೆ ಹೇಳಿ ಮಾಡಿಸಿದ ಚಿತ್ರ ಇದು ಎಂದು ಸುದಿರ್ಘವಾದ ವಿಮರ್ಶೆ ಹಂಚಿಕೊಂಡಿರುವ ಒಬ್ಬರು ಚಿತ್ರಕ್ಕೆ ಮೂರು ಸ್ಟಾರ್‌ಗಳನ್ನು ನೀಡಿದ್ದಾರೆ.
ಅದ್ಭುತ ಮಾರ್ಕ್
''ಮಾರ್ಕ್'' ಮೊದಲಿಂದ ಅದ್ಭುತ ಅನುಭವ ನೀಡುತ್ತೆ. ಮೊದಲಾರ್ಧದಲ್ಲಿ ಕಥಾಹಂದರ ತೆರೆದುಕೊಂಡರೆ ದ್ವೀತಿಯಾರ್ಧದಲ್ಲಿ ಪ್ರತಿಯೊಂದು ವಿಷಯವನ್ನು ಕ್ರಮಬದ್ದವಾಗಿ ಜೋಡಿಸಲಾಗಿದೆ. ಸುದೀಪ್ ಅವರ ಇಲ್ಲಿಯವರೆಗಿನ ಅತ್ಯುತ್ತಮ ಆಕ್ಷನ್ ಚಿತ್ರ ಇದು. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಚಿತ್ರ ಮೆರಗು ಹೆಚ್ಚಿಸಿದೆ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಹೀಗೆ ಹಲವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಲವರು ಮಾರ್ಕ್‌ನ ಪ್ರಪಂಚ ಬೇರೆಯದ್ದೇ ಇದೆ ಎಂದು ಹೇಳಿದ್ದರೆ, ಇನ್ನೂ ಕೆಲವರು ಮಾರ್ಕ್ ಎಂಬ ಹೆಸರಿಡುವ ಬದಲು ಮ್ಯಾಕ್ಸ್ 2 ಎಂದು ಹೆಸರಿಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಇಂದು (ಡಿಸೆಂಬರ್ 25 ) ಮೊದಲ ದಿನ ''ಮಾರ್ಕ್'' ಚಿತ್ರಕ್ಕೆ ಉತ್ತಮವಾದ ಆರಂಭ ಸಿಕ್ಕಿದ್ದು ಚಿತ್ರ ವಾರಾಂತ್ಯದೊಳಗೆ ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











