Martin Teaser : ಪಾಕಿಸ್ತಾನ್ ಜೈಲಿನಲ್ಲಿ ನಾಯಕ, ಇದು ಎಪಿ ಅರ್ಜುನ್ ಸಿನಿಮಾನಾ? ಮಾರ್ಟಿನ್ ಟೀಸರ್ ನೋಡಿದವರು ಹೇಳಿದ್ದಿಷ್ಟು!

ಎಪಿ ಅರ್ಜುನ್ ನಿರ್ದೇಶಿಸಿದ್ದ ಅದ್ದೂರಿ ಚಿತ್ರದ ಮೂಲಕ ಅದ್ದೂರಿಯಾಗಿ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದ ನಟ ಧ್ರುವ ಸರ್ಜಾ ಇದೀಗ ಮತ್ತೊಮ್ಮೆ ಅರ್ಜುನ್ ಜತೆ ಮಾರ್ಟಿನ್ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ. ಮೊದಲ ಚಿತ್ರದಲ್ಲಿ ಪಕ್ಕಾ ಲವ್ ಸ್ಟೋರಿ ಮಾಡಿದ್ದ ಈ ಜೋಡಿ ಈ ಬಾರಿ ಭರ್ಜರಿ ಆಕ್ಷನ್ ಚಿತ್ರವನ್ನು ಕಟ್ಟಿದೆ. ಪ್ರತಿ ಪೋಸ್ಟ್‌ನಲ್ಲಿಯೂ ಭಾರತದ ಅತಿದೊಡ್ಡ ಆಕ್ಷನ್ ಸಾಗಾ ಎಂದು ಬರೆದುಕೊಳ್ಳುತ್ತಿರುವ ಮಾರ್ಟಿನ್ ಚಿತ್ರತಂಡದ ಮೇಲೆ ಸಾಮಾನ್ಯವಾಗಿ ನಿರೀಕ್ಷೆ ಹುಟ್ಟುಕೊಂಡಿತ್ತು.

ಇನ್ನು ದೊಡ್ಡ ಮಟ್ಟದಲ್ಲಿ ಚಿತ್ರದ ಚಿತ್ರೀಕರಣ ನಡೆದಿದ್ದು, ನಿರ್ಮಾಪಕ ಉದಯ್ ಕೆ ಮೆಹ್ತಾ ರಿಚ್ ಆಗಿ ಚಿತ್ರವನ್ನು ನಿರ್ಮಿಸಿದ್ದಾರೆ ಹಾಗೂ ಚಿತ್ರದ ಕ್ಲೈಮ್ಯಾಕ್ಸ್‌ಗಾಗಿಯೇ 52 ದಿನಗಳ ಕಾಲ ಚಿತ್ರೀಕರಣ ಮಾಡಿದ್ದ ಚಿತ್ರತಂಡ ಸಿನಿ ರಸಿಕರ ಹುಬ್ಬೇರುವಂತೆ ಮಾಡಿತ್ತು. ಹೀಗೆ ಹೆಚ್ಚೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಿರುವ ಮಾರ್ಟಿನ್ ಸಿನಿಮಾ ನಿರೀಕ್ಷೆಯನ್ನು ಮುಟ್ಟಲಿದೆಯಾ, ಚಿತ್ರತಂಡ ಹೇಳಿಕೊಳ್ಳುವ ರೇಂಜಿಗೆ ಚಿತ್ರ ಇರಲಿದೆಯಾ ಎಂಬ ಪ್ರಶ್ನೆಗಳೂ ಸಹ ಎದ್ದಿದ್ದವು.

ಇನ್ನು ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆ ದಿನಾಂಕವನ್ನು ಘೋಷಿಸಿದಾಗ ಟೀಸರ್ ಯಾವ ಮಟ್ಟದಲ್ಲಿರಲಿದೆ, ಟೀಸರ್ ನೋಡಿದರೆ ಚಿತ್ರ ಯಾವ ರೇಂಜಿಗೆ ಮೂಡಿ ಬಂದಿರಬಹುದು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ ಎಂಬ ಕುತೂಹಲ ಸಿನಿ ರಸಿಕರ ಪಾಲಿನಲ್ಲಿತ್ತು. ಅದರಂತೆ ಇಂದು ( ಫೆಬ್ರವರಿ 23 ) ಮಾರ್ಟಿನ್ ಚಿತ್ರದ ಟೀಸರ್ ಸಂಜೆ 5.55ಕ್ಕೆ ಲಹರಿ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ.

ಇದಕ್ಕೂ ಮುನ್ನ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರದಲ್ಲಿ ಚಿತ್ರದ ಟೀಸರ್ ಅನ್ನು ಬಿಡುಗಡೆಗೊಳಿಸಲಾಗಿದೆ. ಎಲ್ಲಾ ಐದು ಭಾಷೆಗಳಲ್ಲೂ ಟೀಸರ್ ಪ್ರದರ್ಶನಗೊಂಡಿದ್ದು, ಈ ಟೀಸರ್ ವೀಕ್ಷಿಸಲು ಸಿನಿ ರಸಿಕರು ಟಿಕೆಟ್ ಬುಕ್ ಮಾಡಿಕೊಂಡು ಬಂದಿದ್ದರು. ಇನ್ನು ಟೀಸರ್ ವೀಕ್ಷಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಟೀಸರ್ ಹೇಗಿದೆ ಎಂಬುದನ್ನು ಸಿನಿ ರಸಿಕರು ಟ್ವಿಟರ್‌ನಲ್ಲಿ ಈ ಕೆಳಕಂಡಂತೆ ಟ್ವೀಟ್ ಮಾಡುವ ಮೂಲಕ ಬರೆದುಕೊಂಡಿದ್ದಾರೆ.

ಮತ್ತೊಂದು ಕೆಜಿಎಫ್

ಮತ್ತೊಂದು ಕೆಜಿಎಫ್

ಮಾರ್ಟಿನ್ ಚಿತ್ರದ ಟೀಸರ್ ವೀಕ್ಷಿಸಿದ ಸಿನಿ ರಸಿಕನೋರ್ವ ಮಾರ್ಟಿನ್ ತಮಾಷೆನೇ ಅಲ್ಲ, ಮುಂದಿನ ಕೆಜಿಎಫ್ ಎಂದು ಬರೆದುಕೊಂಡಿದ್ದಾರೆ. ಇನ್ನು ಯುಟ್ಯೂಬ್‌ನಲ್ಲಿ ಈ ಚಿತ್ರದ ಟೀಸರ್‌ನ ಥಿಯೇಟರ್‌ ರೆಕಾರ್ಡೆಡ್ ವಿಡಿಯೊ ವೀಕ್ಷಿಸಿರುವ ಹಲವಾರು ಹಿಂದಿ ಸಿನಿ ರಸಿಕರು ಇದೇ ರೀತಿಯ ಕಾಮೆಂಟ್ ಮಾಡುತ್ತಿದ್ದು, ಇದು ಮತ್ತೊಂದು ಕೆಜಿಎಫ್ ತರಹ ಇದೆ ಎಂದು ಬರೆದುಕೊಂಡಿದ್ದಾರೆ.

ಟೀಸರ್ ಮೆಚ್ಚಿಕೊಂಡ ಅಪ್ಪು ಫ್ಯಾನ್

ಟೀಸರ್ ಮೆಚ್ಚಿಕೊಂಡ ಅಪ್ಪು ಫ್ಯಾನ್

ಇನ್ನು ಟೀಸರ್ ವೀಕ್ಷಿಸಿದ ಪವರ್ ಸ್ಟಾರ್‌ ಪುನೀತ್ ರಾಜ್‌ಕುಮಾರ್ ಅಭಿಮಾನಿಯೋರ್ವ ಟೀಸರ್ ಪ್ರದರ್ಶನದ ವೇಳೆ ಪುನೀತ್ ಹಾಗೂ ಚಿರಂಜೀವಿ ಸರ್ಜಾಗೆ ಟ್ರಿಬ್ಯೂಟ್ ಸಲ್ಲಿಸಿದ ವಿಡಿಯೊ ಹಂಚಿಕೊಂಡು ಚಿತ್ರತಂಡದ ಈ ಕೆಲಸಕ್ಕೆ ಧನ್ಯವಾದ ಅರ್ಪಿಸಿದ್ದಾರೆ ಹಾಗೂ ಟೀಸರ್‌ನ ಕ್ವಾಲಿಟಿ ಹಾಗೂ ಸೆಟ್‌ಗಳ ಕುರಿತು ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿರುವ ಇವರು ಧ್ರುವ ಸರ್ಜಾ ಮಾಸ್ ಅಪಿಯರೆನ್ಸ್‌ಗೆ ಫಿದಾ ಆಗಿದ್ದಾರೆ.

ನಿರೀಕ್ಷೆ ಡಬಲ್ ಆಯಿತು

ನಿರೀಕ್ಷೆ ಡಬಲ್ ಆಯಿತು

ಟೀಸರ್ ಕುರಿತು ಟ್ವೀಟ್ ಮಾಡಿರುವ ಮತ್ತೋರ್ವ ಸಿನಿ ರಸಿಕ ಟೀಸರ್‌ನಲ್ಲಿ ಬರುವ 'ಯು ಥಿಂಕ್ ಯು ಆರ್ ಸ್ಟ್ರಾಂಗ್.. ಅಂಡ್ ಈ ನೋ ಈ ಆಮ್ ಸ್ಟ್ರಾಂಗ್" ಡೈಲಾಗ್ ಅನ್ನು ಟ್ವೀಟ್ ಮಾಡಿದ್ದು, ಟೀಸರ್ ನೋಡಿದ ಬಳಿಕ ಚಿತ್ರದ ಮೇಲಿನ ನಿರೀಕ್ಷೆ ಡಬಲ್ ಆಯಿತು, ಇದು ನಿಜವಾಗಿಯೂ ಎಪಿ ಅರ್ಜುನ್ ಸಿನಿಮಾನಾ ಎಂದು ಬರೆದುಕೊಂಡಿದ್ದಾರೆ.

ಪಾಕ್ ಜೈಲಿನಲ್ಲಿ ಇಂಡಿಯನ್ ಕ್ರಿಮಿನಲ್?

ಪಾಕ್ ಜೈಲಿನಲ್ಲಿ ಇಂಡಿಯನ್ ಕ್ರಿಮಿನಲ್?

ಮತ್ತೋರ್ವ ಸಿನಿ ರಸಿಕ ಟೀಸರ್‌ನ ಹೈಲೈಟ್ ಬಗ್ಗೆಯೇ ಗೊಂದಲ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಜೈಲಿನಲ್ಲಿ ಭಾರತದ ಕ್ರಿಮಿನಲ್ ಎಂದು ಪ್ರಶ್ನೆ ಹಾಕುವ ಮೂಲಕ ತಮ್ಮಲ್ಲಿನ ಗೊಂದಲವನ್ನು ಹೊರಹಾಕಿದ್ದಾರೆ. ಹೌದು, ಟೀಸರ್‌ನ ಆರಂಭದಲ್ಲಿಯೇ ನಾಯಕ ಧ್ರುವ ಸರ್ಜಾ ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿರುತ್ತಾರೆ. ಈ ಅಂಶ ಗೊಂದಲದ ಜತೆಗೆ ಚಿತ್ರದ ಕಥೆ ಯಾವ ಮಟ್ಟದ್ದಿರಬಹುದು ಎಂಬ ಕುತೂಹಲವನ್ನೂ ಸಹ ಹೆಚ್ಚಿಸಿದೆ.

More from Filmibeat

English summary
Martin teaser twitter review: Audience hailed the quality and concept of the teaser. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X