'ಮಾಸ್ಟರ್' ಟ್ವಿಟ್ಟರ್ ವಿಮರ್ಶೆ; ಫಸ್ಟ್ ಡೇ ಫಸ್ಟ್ ಶೋ ನೋಡಿ ಪ್ರೇಕ್ಷಕರು ಹೇಳಿದ್ದೇನು?

ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷೆಯ ಮಾಸ್ಟರ್ ಸಿನಿಮಾ ಇಂದು ದೇಶದಾದ್ಯಂತ ರಿಲೀಸ್ ಆಗಿದೆ. ಕೊರೊನಾ ಲಾಕ್ ಡೌನ್ ಬಳಿಕ ರಿಲೀಸ್ ಆಗುತ್ತಿರುವ ಮೊದಲ ಸ್ಟಾರ್ ನಟನ ಸಿನಿಮಾ ಇದಾಗಿದೆ. ವರ್ಷದ ಪ್ರಾರಂಭದಲ್ಲಿ ಬರ್ತಿವ ಮಾಸ್ಟರ್ ಚಿತ್ರಕ್ಕೆ ಮೊದಲ ದಿನ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶವಿದ್ದರೂ ಅಭಿಮಾನಿಗಳು ಎರಡು ದಿನಗಳ ಮುಂಚಿತವಾಗಿಯೇ ಮುಗಿಬಿದ್ದು ಟಿಕೆಟ್ ಖರೀದಿಸಿ ಇಂದು ಬೆಳ್ಳಂಬೆಳಗ್ಗೆ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಸುಮಾರು 9 ತಿಂಗಳ ಬಳಿಕ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಸಿನಿಮಾ ಪ್ರಾರಂಭವಾಗುತ್ತಿದ್ದಂತೆ ಅಭಿಮಾನಿಗಳು ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನುಭವ ಹಂಚಿಕೊಳ್ಳುತ್ತಿದ್ದಾರೆ. ತೆರೆಮೇಲೆ ದಳಪತಿ ವಿಜಯ್ ಮತ್ತು ವಿಜಯ್ ಸೇತುಪತಿ ನೋಡಿ ಸಂಭ್ರಮಿಸುತ್ತಿದ್ದಾರೆ. ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಬಂದ ಮಾಸ್ಟರ್ ಸಿನಿಮಾ ನೋಡಿ ಪ್ರೇಕ್ಷಕರು ಹೇಳಿದ್ದೇನು? ಟ್ವಿಟ್ಟರ್ ನಲ್ಲಿ ಬಂದ ವಿಮರ್ಶೆ ಹೇಗಿದೆ? ಮುಂದೆ ಓದಿ...

ವಿಜಯ್ ವರ್ಸಸ್ ವಿಜಯ್ ಕಾಂಬಿನೇಶನ್ ಅದ್ಭುತ

ವಿಜಯ್ ವರ್ಸಸ್ ವಿಜಯ್ ಕಾಂಬಿನೇಶನ್ ಅದ್ಭುತ

ಮಾಸ್ಟರ್ ಸಿನಿಮಾದ ವಿಮರ್ಶೆ ಒಂದು ವಾಕ್ಯದಲ್ಲಿ ಹೇಳಬೇಕೆಂದರೆ ಅದ್ಭುತವಾಗಿದೆ. ಮಾಸ್ಟರ್ ಸಿನಿಮಾ ರೋಲರ್ ಕೋಸ್ಟರ್ ರೈಡ್. ವಿಜಯ್ ಮತ್ತು ವಿಜಯ್ ಸೇತುಪತಿ ಅದ್ಭುತ. ಅತ್ಯುತ್ತಮವಾದ ಹಿನ್ನಲೆ ಸಂಗೀತ' ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿ ವಿಮರ್ಶೆ ತಿಳಿಸಿದ್ದಾರೆ.

ಸಾಧಾರಣವಾಗಿದೆ ಸಿನಿಮಾ

ಸಾಧಾರಣವಾಗಿದೆ ಸಿನಿಮಾ

ಮಾಸ್ಟರ್ ಸಿನಿಮಾ ಸಾಮಾನ್ಯವಾಗಿದೆ. ತುಂಬಾ ನಿರಾಸೆ ಮೂಡಿಸಿದ ಸಿನಿಮಾ. ದಳಪತಿ ವಿಜಯ್ ಮತ್ತು ವಿಜಯ್ ಸೇತುಪತಿ ಹಾಗೂ ಹಿನ್ನಲೆ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್. ಮೊದಲ ಭಾಗ ಉತ್ತಮವಾಗಿದೆ. ಎರಡನೇ ಭಾಗ ಬೋರಿಂಗ್ ಆಗಿದೆ. ಸ್ಕ್ರೀನ್ ಪ್ಲೇ ಲ್ಯಾಗ್ ಆಗಿದೆ. ನಿರೂಪಣೆ ಮಂದಗತಿಯಾಗಿದೆ. ತುಂಬಾ ನಿಧಾನಗತಿಯ ಸಿನಿಮಾವಾಗಿದೆ' ಎಂದು ಹೇಳಿದ್ದಾರೆ.

ಮೊದಲ ಭಾಗ ಉತ್ತಮವಾಗಿದೆ

ಮೊದಲ ಭಾಗ ಉತ್ತಮವಾಗಿದೆ

ಮಾಸ್ಟರ್ ಸಿನಿಮಾದ ಮೊದಲ ಭಾಗ ಉತ್ತಮವಾಗಿದೆ. ವಿಷಯ ಕಡಿಮೆ ಇದೆ. ಆದರೆ ಮಂದಗತಿಯ ಸ್ಕ್ರೀನ್ ಪ್ಲೇ. ವಿಜಯ್ ಸೇತುಪತಿ ಅಭಿನಯ ಅದ್ಭುತ. ನಿರ್ದೇಶನ ಅದ್ಭುತವಾಗಿದೆ. ತುಂಬಾ ಮಂದಗತಿಯಲ್ಲಿ ಸಿನಿಮಾ ಸಾಗುತ್ತೆ. ಸಂಗೀತ ಅದ್ಭುತವಾಗಿದೆ. ಆದರೆ ಕೊನೆಯ 30-40 ನಿಮಿಷಾ ಬೋರಿಂಗ್ ಆಗಿದೆ' ಎಂದು ಮತ್ತೊಬ್ಬ ಅಭಿಮಾನಿ ಬರೆದುಕೊಡಿದ್ದಾರೆ.

Recommended Video

KGF ಮೀರಿಸಲಿದೆ ಸಲಾರ್ | Filmibeat Kannada
ಸಿನಿಮಾ ತುಂಬ ಆವರಿಸಿರುವ ವಿಜಯ ಸೇತುಪತಿ

ಸಿನಿಮಾ ತುಂಬ ಆವರಿಸಿರುವ ವಿಜಯ ಸೇತುಪತಿ

ಸಿನಿಮಾದ ಮೊದಲ ಭಾಗ ಉತ್ತಮವಾಗಿದೆ. ಆದರೆ ಎರಡನೇ ಭಾಗ ಸಾಧಾರಣವಾಗಿದೆ. ಚಿತ್ರದ ಹಿನ್ನಲೆ ಸಂಗೀತ ಅದ್ಭುತವಾಗಿದೆ. ಎಂದಿನಂತೆ ದಳಪತಿ ವಿಜಯ್ ಅಭಿನಯ ಅದ್ಭುತ. ವಿಲನ್ ಪಾತ್ರ ಉತ್ತುಂಗದಲ್ಲಿದೆ. ಲೋಕೇಶ್ ನಿರ್ದೇಶನ ಮತ್ತು ಸ್ಟೋರಿ ಉತ್ತಮವಾಗಿದೆ.

More from Filmibeat

English summary
Master Twitter Review; Fans show love on Thalapathy Vijay and Vijay Sethupathi. Mixed reaction from the audience to Master film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X