Max Twitter Review; 'ಕೈದಿ' ಥೀಮ್; ರೊಟೀನ್ ಸ್ಟೋರಿ, ಆದರೆ

ಥಿಯೇಟರ್‌ಗಳಲ್ಲಿ 'ಮ್ಯಾಕ್ಸ್' ಸೆಲೆಬ್ರೇಷನ್ ಶುರುವಾಗಿದೆ. ಅಭಿಮಾನಿಗಳು ದೊಡ್ಡಮಟ್ಟದಲ್ಲೇ ಚಿತ್ರವನ್ನು ಸ್ವಾಗತಿಸಿದ್ದಾರೆ. ಬೆಳ್ಳಂ ಬೆಳಗ್ಗೆ 6 ಗಂಟೆಗೆ ರಾಜ್ಯದ ಹಲವೆಡೆ ಸಿನಿಮಾ ಪ್ರದರ್ಶನ ಶುರುವಾಗಿದೆ. ಅಭಿಮಾನಿಗಳು ಮುಂಗಡ ಟಿಕೆಟ್ ಬುಕ್ ಮಾಡಿಕೊಂಡು ಸಿನಿಮಾ ನೋಡಿದ್ದಾರೆ. ಒಂದೇ ರಾತ್ರಿಯಲ್ಲಿ ನಡೆಯುವ 'ಮ್ಯಾಕ್ಸ್' ಕಥೆ ಹೇಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ತಮಿಳಿನ ವಿಜಯ್ ಕಾರ್ತಿಕೇಯನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಎರಡು ದಿನ ತಡವಾಗಿ ತೆಲುಗು ಹಾಗೂ ತಮಿಳಿನಲ್ಲಿ 'ಮ್ಯಾಕ್ಸ್' ಸಿನಿಮಾ ತೆರೆಗೆ ಬರ್ತಿದೆ. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ನಲ್ಲೇ ಕನ್ನಡದ ಮಟ್ಟಿಗೆ ಸಿನಿಮಾ ಹೊಸ ದಾಖಲೆ ಬರೆದಿತ್ತು. ಬಾಕ್ಸಾಫೀಸ್‌ನಲ್ಲಿ ಕೂಡ ಸಿನಿಮಾ ದೊಡ್ಡದಾಗಿ ಸದ್ದು ಮಾಡುವ ನಿರೀಕ್ಷೆಯಿದೆ.

Max Twitter Review  Fans hail Kichcha Sudeep s screen presence and screenplay

ಈಗಾಗಲೇ ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರೆಗ್ಯುಲರ್ ಸಿನಿಮಾ.. ಆದ್ರೆ

'ಮ್ಯಾಕ್ಸ್‌' ಸಿಂಪ್ಲಿ ಸೂಪರ್ ಹಿಟ್, ರೆಗ್ಯುಲರ್ ಸಿನಿಮಾ. ಆದರೆ ಸುದೀಪ್ ತಮ್ಮ ನಟನೆಯಿಂದ ಅದ್ಭುತ ಸಿನಿಮಾ ಆಗುವಂತೆ ಮಾಡಿದ್ದಾರೆ. ತಮಿಳಿನ 'ಕೈದಿ' ರೀತಿಯ ಸ್ಕ್ರೀನ್‌ಪ್ಲೇ. ಬಿಜಿಎಂ ಚಿತ್ರದ ಪ್ಲಸ್ ಪಾಯಿಂಟ್. ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಟ್ವಿಸ್ಟ್‌ಗಳು ತೃಪ್ತಿ ಕೊಡ್ತು. ಆದರೆ ಲಾಂಗ್‌ ಪೇಸ್ ಹಾಗೂ ಕೆಲ ಸನ್ನಿವೇಶಗಳು ಕನೆಕ್ಟ್ ಆಗಲ್ಲ ಎಂದು ನೆಟ್ಟಿಗೊಬ್ಬರು ಬರೆದುಕೊಂಡಿದ್ದಾರೆ.

ಪ್ರೀಕ್ವೆಲ್ ಲೀಡ್ ಕೊಡಬಹುದಿತ್ತು

ಎಕ್ಸಲೆಂಟ್ ಸ್ಕ್ರೀನ್‌ಪ್ಲೇ. ಹಾಟು ಮಾಮ ಸಾಂಗ್ ಸಖತ್ ಇದೆ. ಇಡೀ ಚಿತ್ರವನ್ನು ಸುದೀಪ್ ಹೊತ್ತು ಸಾಗಿದ್ದಾರೆ. ಭರ್ಜರಿ ಇಂಟರ್‌ವಲ್, ಸೆಕೆಂಡ್ ಹಾಫ್ ಮಾಸ್ ಆಕ್ಷನ್. 'ಮ್ಯಾಕ್ಸ್' ಪಾತ್ರಕ್ಕೆ ಕ್ಲೈಮ್ಯಾಕ್ಸ್‌ನಲ್ಲಿ ಪ್ರೀಕ್ವೆಲ್ ಲೀಡ್ ಕೊಡಬಹುದಿತ್ತು. ಓವರ್‌ಆಲ್ ಬ್ಲಾಕ್‌ಬಸ್ಟರ್ ಸಿನಿಮಾ ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೊಟೀನ್ ಸ್ಟೋರಿ

ಸುದೀಪ್ ಒನ್‌ಮ್ಯಾನ್ ಶೋ. ಬೆಂಕಿ ಆಕ್ಟಿಂಗ್. ಆದರೆ ರೊಟೀನ್ ಸ್ಟೋರಿ. ಓವರ್‌ಆಲ್ ಒಳ್ಳೆ ಸಿನಿಮಾ ಎಂದು ಮತ್ತೊಬ್ಬರು ಹೇಳಿದ್ದಾರೆ. ಸಿನಿಮಾ ಶುರುವಾದ ದಿನದಿಂದ ಸಾಕಷ್ಟು ಅಡೆತಡೆ, ನೆಗೆಟಿವಿಟಿ, ಪ್ರಮೋಷನ್ ಸರಿಯಾಗಿ ಇರಲಿಲ್ಲ. ಎಲ್ಲವನ್ನು ಮೀರಿ ಸಿನಿಮಾ ಬ್ಲಾಕ್‌ಬಸ್ಟರ್ ಆಗಿದೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ನಿರ್ದೇಶನ ಚಿಂದಿ

ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಬ್ಲಾಕ್‌ಬಸ್ಟರ್. ಸುದೀಪ್ ಸ್ಕ್ರೀನ್‌ ಪ್ರಸೆನ್ಸ್ ಸೂಪರ್, ನಿರ್ದೇಶನ ಚಿಂದಿ. ವಿಜಯ್ ಕಾರ್ತಿಕೇಯನ್ ಅವರು ನಿರ್ದೇಶಿಸಿರುವ ಮೊದಲ ಸಿನಿಮಾ ಅನ್ನಿಸಲ್ಲ. ಕಂಪ್ಲೀಟ್ ಸಿನಿಮ್ಯಾಟಿಕ್ ಎಕ್ಸ್‌ಪಿಯರೆನ್ಸ್. ಚಿತ್ರಮಂದಿರಲ್ಲೇ ಸಿನಿಮಾ ನೋಡಿ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ನೆಕ್ಸ್ಟ್ ಲೆವೆಲ್ ಮೂವಿ

ಮುಂದಿನ ಸಿನಿಮಾ ಅಭಿಮಾನಿಗಳಿಗಾಗಿ ಮಾಡ್ತೀನಿ ಅಂತ ಸುದೀಪ್ ಎರಡೂವರೆ ವರ್ಷದ ಹಿಂದೆ ಹೇಳಿದ್ದರು. ಇವತ್ತು ಅದನ್ನು ಸಾಬೀತು ಮಾಡಿದ್ದಾರೆ. 2024ರ ವರ್ಷ ಸುದೀಪ್ ಅಭಿಮಾನಿಗಳದ್ದು. ನೆಕ್ಸ್ಟ್ ಲೆವೆಲ್ ಮೂವಿ ಗುರೂ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಸೆಕೆಂಡ್ ಆಫ್ ಆವರೇಜ್

ಒಂದೇ ರಾತ್ರಿಯಲ್ಲಿ ನಡೆಯುವ ಕಥೆ ಬಹಳ ಎಂಗೇಜಿಂಗ್ ಆಗಿದೆ. ಫಸ್ಟ್ ಹಾಫ್ ನಿರೂಪಣೆ, ಸುದೀಪ್ ಸ್ಕ್ರೀನ್ ಪ್ರಸೆನ್ಸ್ ಬೆಂಕಿ. ಫಸ್ಟ್ ಹಾಫ್ ಗುಡ್, ಸೆಕೆಂಡ್ ಆಫ್ ಆವರೇಜ್. ಖಡಕ್ ಬಿಜಿಎಂ, ಸುದೀಪ್ ಮಾಸ್ ಅವತಾರ ಸೂಪರ್ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

'ಮ್ಯಾಕ್ಸ್' ಬ್ಲಾಕ್‌ಬಸ್ಟರ್

ರಾಜಮೌಳಿ, ಕೆ. ಎಸ್ ರವಿಕುಮಾರ್ ಬಳಿಕ ಸುದೀಪ್ ಅವರ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಂಡವರು ವಿಜಯ್ ಕಾರ್ತಿಕೇಯನ್. 'ಮ್ಯಾಕ್ಸ್' ಬ್ಲಾಕ್‌ಬಸ್ಟರ್ ಎಂದು ಮಗದೊಬ್ಬರು ಟ್ವೀಟ್ ಮಾಡಿ ತಿಳಿಸಿದ್ದಾರೆ.

More from Filmibeat

English summary
Max the movie twitter Review; what netizens say about the Sudeep's Action drama starrer;
Read more about: sudeep max review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X